ETV Bharat / state

ಬ್ಯಾಂಕ್​ಗಳಿಗೆ ಸುರಕ್ಷತಾ ಕ್ರಮದ ಬಗ್ಗೆ ಪೊಲೀಸ್ ಕಮೀಷನರ್ ಅನುಪಮ್​ ಅಗರ್ವಾಲ್ ಸಲಹೆ - SECURITY MEASURES IN BANKS

ಬ್ಯಾಂಕ್‌ಗಳು, ಎಟಿಎಂಗಳು, ಸಹಕಾರಿ ಸಂಘಗಳು, ಕೋ-ಅಪರೇಟಿವ್ ಸೊಸೈಟಿಗಳು, ಜುವೆಲ್ಲರಿ ಅಂಗಡಿಗಳು ಸೇರಿದಂತೆ ಬೇರೆಬೇರೆ ಹಣಕಾಸು ವಹಿವಾಟುಗಳಿರುವ, ಚಿನ್ನ ಸಂಗ್ರಹಿಸುವ ಸಂಸ್ಥೆಗಳಲ್ಲಿ ಸೂಕ್ತ ಭದ್ರತೆ, ಸುರಕ್ಷತೆ ಕೈಗೊಳ್ಳುವ ಕುರಿತು ಪೊಲೀಸ್​ ಕಮಿಷನರ್​ ಸಲಹೆ ನೀಡಿದರು.

Police Commissioner Anupam Agarwal advises banks on security measures
ಬ್ಯಾಂಕ್​ಗಳಿಗೆ ಸುರಕ್ಷತಾ ಕ್ರಮದ ಬಗ್ಗೆ ಪೊಲೀಸ್ ಕಮೀಷನರ್ ಅನುಪಮ್​ ಅಗರ್ವಾಲ್ ಸಲಹೆ (ETV Bharat)
author img

By ETV Bharat Karnataka Team

Published : Feb 5, 2025, 9:36 PM IST

ಮಂಗಳೂರು: ಜನವರಿ 17ರಂದು ಮಂಗಳೂರಿನ ಕೆ.ಸಿ.ರೋಡ್​ನಲ್ಲಿರುವ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್​ನಲ್ಲಿ ನಡೆದ ದರೋಡೆ ಪ್ರಕರಣದ ಹಿನ್ನೆಲೆಯಲ್ಲಿ ಇಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್​ ಅಗರ್ವಾಲ್​ ಅವರು ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ಸುರಕ್ಷತಾ ಕ್ರಮದ ಬಗ್ಗೆ ಸಲಹೆ ನೀಡಿದರು.

ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರೀಕೃತ ಬ್ಯಾಂಕ್‌ಗಳು, ಖಾಸಗಿ ಬ್ಯಾಂಕ್‌ಗಳು, ಕೋ-ಅಪರೇಟಿವ್ ಸೊಸೈಟಿ ಬ್ಯಾಂಕ್‌ಗಳು, ಇತರ ಬ್ಯಾಂಕ್‌ಗಳು, ಎಟಿಎಂಗಳು, ಸಹಕಾರಿ ಸಂಘಗಳು, ಕೋ-ಅಪರೇಟಿವ್ ಸೊಸೈಟಿಗಳು, ಪೈನಾನ್ಸ್ ಕಂಪೆನಿಗಳು, ಮೈಕ್ರೋ ಪೈನಾನ್ಸ್ ಕಂಪೆನಿಗಳು, ಜುವೆಲ್ಲರಿ ಅಂಗಡಿಗಳು, ಚಿನ್ನದ ಗಿರವಿ ಅಂಗಡಿಗಳು ಹೀಗೆ ಬೇರೆಬೇರೆ ಹಣಕಾಸು ವಹಿವಾಟುಗಳಿರುವ ಹಾಗೂ ಚಿನ್ನವನ್ನು ಸಂಗ್ರಹಿಸುವ ಸಂಸ್ಥೆಗಳಲ್ಲಿ ಸೂಕ್ತ ಭದ್ರತೆ ಹಾಗೂ ಸುರಕ್ಷತೆಯನ್ನು ಕೈಗೊಳ್ಳುವ ಕುರಿತಂತೆ ಪ್ರತಿ ಸಂಸ್ಥೆಗಳ ಮುಖ್ಯಸ್ಥರನ್ನು ಒಟ್ಟುಗೂಡಿಸಿ ಫೆ.3 ರಿಂದ ಫೆ. 5ವರೆಗೆ ಸಭೆ ಆಯೋಜಿಸಲಾಗಿತ್ತು.

ಸಭೆಯಲ್ಲಿ ವಿವಿಧ ಸಂಸ್ಥೆಗಳ 723 ಪ್ರತಿನಿಧಿಗಳು ಭಾಗವಹಿಸಿದ್ದು, ಸಭೆಯಲ್ಲಿ ಸಂಸ್ಥೆಯವರು ನಿರ್ವಹಿಸಬೇಕಾಗಿರುವ ಹೈ ರೆಸಲ್ಯೂಷನ್ ಕ್ಯಾಮೆರಾ, Collapsible gate, Burglary Alarm panic switches, Sensor doors & Sensor lockers, ಹಾಗೂ ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿಗೆ ಬ್ಯಾಂಕ್ ಸುರಕ್ಷತೆಯ ಬಗ್ಗೆ ತರಬೇತಿ ಸೇರಿದಂತೆ ಇತರ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.

Commissioner's meeting with bank officials and staff
ಬ್ಯಾಂಕ್​ ಅಧಿಕಾರಿಗಳು, ಸಿಬ್ಬಂದಿ ಜೊತೆ ಕಮಿಷನರ್​ ಸಭೆ (ETV Bharat)

ದರೋಡೆ, ಕಳ್ಳತನ ಅಪರಾಧವನ್ನು ತಡೆಗಟ್ಟಲು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಜಾಗೃತಿ ಮತ್ತು ಸೂಕ್ತ ಸೂಚನೆ, ಆರ್​ಬಿಐ ಮಾರ್ಗಸೂಚಿಯಂತೆ ಅತ್ಯಾಧುನಿಕ ಭದ್ರತಾ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸಲಹೆ ಮತ್ತು ಸೂಚನೆ ನೀಡಿದರು. ಅಪಾಯ ಮತ್ತು ತುರ್ತು ಸಂದರ್ಭದಲ್ಲ್ಲಿ ಸಹಾಯವಾಣಿ 112ಕ್ಕೆ ಕರೆ ಮಾಡುವಂತೆ, ಕರೆ ಮಾಡಿದ ಕೆಲವೇ ನಿಮಿಷಗಳಲ್ಲಿ ಹೊಯ್ಸಳ ಪೊಲೀಸರು ಕೃತ್ಯ ನಡೆದ ಸ್ಥಳಗಳಿಗೆ ತಲುಪಿ ತುರ್ತು ಕ್ರಮವನ್ನು ಕೈಗೊಳ್ಳುತ್ತಾರೆ ಎಂದು ಮನವರಿಕೆ ಮಾಡಿಕೊಲಾಯಿತು.

ಕೆಲವು ಸಂಸ್ಥೆಗಳು ಸೂಕ್ತ ಸುರಕ್ಷತೆ ಹಾಗೂ ಭದ್ರತೆಗಾಗಿ ಅತ್ಯಾಧುನಿಕ ಸೆಕ್ಯೂರಿಟಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು, ಅವರುಗಳನ್ನು ಪ್ರಶಂಶಿಸಿ ಇತರೆ ಸಂಸ್ಥೆಗಳಲ್ಲಿಯೂ ಸಹ ಅದೇ ರೀತಿ ಸೆಕ್ಯೂರಿಟಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸೂಚಿಸಲಾಗಿದೆ.

ಎಲ್ಲಾ ಠಾಣಾಧಿಕಾರಿಗಳು ಈಗಾಗಲೇ ಎಲ್ಲಾ ಸಂಸ್ಥೆಗಳಿಗೆ ಭೇಟಿ ನೀಡಿ ಸಂಬಂಧಪಟ್ಟ ವ್ಯಕ್ತಿಗಳೊಂದಿಗೆ ಭದ್ರತೆಯ ಬಗ್ಗೆ ಚರ್ಚಿಸಿ ಪರಿಶೀಲಿಸಿ ಸುರಕ್ಷತಾ ಕ್ರಮದ ಬಗ್ಗೆ ಸೂಕ್ತ ಸಲಹೆಯನ್ನು ನೀಡಿದ್ದಾರೆ. ಅಲ್ಲದೇ ಸೈಬರ್ ಅಪರಾಧಗಳನ್ನು ತಡೆಗಟ್ಟಲು ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಸೂಚಿಸಿದ್ದು, ತಮ್ಮ ಗ್ರಾಹಕರು ಅಪರಿಚಿತರಿಂದ ಸೈಬರ್ ವಂಚನೆಗೊಳಗಾದಲ್ಲಿ ಕೂಡಲೇ ಸೈಬರ್ ಕ್ರೈಂ ಸಹಾಯವಾಣಿ 1930 ನಂಬ್ರಕ್ಕೆ ಕರೆಮಾಡಲು ತಿಳುವಳಿಕೆ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಮೈಕ್ರೋ ಫೈನಾನ್ಸ್ ಸಂಸ್ಥೆಯವರಿಗೆ ಸಹ ಸೂಚನೆ ನೀಡಿ ಗ್ರಾಹಕರಿಗೆ ಸಾಲ ವಸೂಲಿ ನೆಪದಲ್ಲಿ ಯಾವುದೇ ಮಾನಸಿಕ ಕಿರುಕುಳ ಮತ್ತು ತೊಂದರೆ ಕೊಡದಂತೆ ಸೂಚಿಸಲಾಗಿದೆ. ಎಲ್ಲಾ ಕ್ರಮಗಳನ್ನು ಸೂಕ್ತ ರೀತಿಯಲ್ಲಿ ಅನುಸರಿಸಬೇಕೆಂದು ತಿಳುವಳಿಕೆ ನೀಡಲಾಗಿದೆ. ತಪ್ಪಿದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಬ್ಯಾಂಕ್ ಗ್ರಾಹಕರ ಸೋಗಿನಲ್ಲಿ ಹಣ ದೋಚುತ್ತಿದ್ದ ಇಬ್ಬರು ಆರೋಪಿಗಳ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.