ಪ್ರತಿದಿನ ಬೆಳಗ್ಗೆ ಜಿಮ್​ಗೆ ನುಗ್ಗುವ ಮುಸಿಯಾ - ಯುವಕರಿಗೆ ಆತಂಕ: ದೃಶ್ಯ ಸಿಸಿಟಿವಿಯಲ್ಲಿ ಸೆರೆ - LANGUR IN GYM

🎬 Watch Now: Feature Video

thumbnail

By ETV Bharat Karnataka Team

Published : Dec 22, 2024, 7:17 PM IST

ಧಾರವಾಡ: ಪ್ರತಿದಿನ ಬೆಳ್ಳಂ‌ಬೆಳಗ್ಗೆ ಜಿಮ್​ಗೆ ಬಂದು ವರ್ಕೌಟ್​ ಮಾಡುವ ಯುವಕರಿಗೆ ಮುಸಿಯಾವೊಂದು ಉಪಟಳ ನೀಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಧಾರವಾಡದ ಸೈದಾಪುರದ ಕಿಂಗ್‌ಡಂ ಜಿಮ್​ನಲ್ಲಿ ಮುಸಿಯಾ ಕಾಟಕ್ಕೆ ಯುವಕರು ಹೈರಾಣಾಗಿದ್ದಾರೆ.

ಪ್ರತಿನಿತ್ಯ ಬೆಳಗ್ಗೆ ಬರುವ ಜಿಮ್​ ಒಳಗೆ ಬರುವ ಮುಸಿಯಾ ತನ್ನ ಚೇಷ್ಟೆಯಿಂದ ವರ್ಕೌಟ್​ ಮಾಡುವವರಿಗೆ ತೊಂದರೆ ಕೊಡುತ್ತಿದೆ. ಸಿಸಿಟಿವಿ ವಿಡಿಯೋದಲ್ಲಿ, ಮುಸಿಯಾ ಜಿಮ್​ನ ಬಾಗಿಲನ್ನು ಸರಿಸಿ ಒಳ ಬಂದು, ಜಿಮ್​ನ ಸಲಕರಣೆಗಳ ಮೇಲೆ ತನ್ನ ಚೇಷ್ಟೆಗಳನ್ನು ತೋರಿಸುತ್ತದೆ. ಮುಸಿಯಾನನ್ನು ನೋಡಿದ ಕೂಡಲೇ ಯುವಕರು ಹೆದರಿ ಹೊರಗೆ ಓಡುತ್ತಾರೆ. ತನ್ನನ್ನು ಮುಟ್ಟಲು ಹಾಗೂ ಓಡಿಸಲು ಬರುವವರ ಮೇಲೆ ಮುಸಿಯಾ ಎರಗುತ್ತಿದೆ. ಯುವಕರು ಜಿಮ್ ಮಾಡುವಾಗ ಏಕಾಏಕಿ ಒಳಗಡೆ ಬಂದು ಜಿಮ್​ನ ಎಲ್ಲ ಕಡೆ ತಿರುಗಾಡುತ್ತಿದೆ.

ತನ್ನನ್ನು ಅಟ್ಟಾಡಿಸಿಕೊಂಡು ಬರುವ ಜಿಮ್ ಯುವಕರನ್ನು ಸಹ ಮುಸಿಯಾ ಅಟ್ಟಾಡಿಸಿಕೊಂಡು ಹೋಗುತ್ತದೆ. ಪ್ರತಿದಿನ ಮುಸಿಯಾನನ್ನು ಓಡಿಸಿ, ಯುವಕರು ವರ್ಕೌಟ್​ ಮಾಡಬೇಕಾಗಿದೆ. ಇದರಿಂದ ಜಿಮ್ ಮಾಲೀಕರು ಹಾಗೂ ತರಬೇತಿ ಪಡೆಯುವ ಯುವಕರು ಕಂಗಾಲಾಗಿದ್ದಾರೆ.

ಇದನ್ನೂ ಓದಿ: ಹಾವೇರಿ ಆಂಜನೇಯ ದೇವಸ್ಥಾನದ ಗರ್ಭಗುಡಿಯೊಳಗೆ ಮುಸಿಯಾ ಬಳಗ: ವಿಡಿಯೋ ವೈರಲ್​

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.