ವಾಷಿಂಗ್ಟನ್ ಡಿಸಿ(ಅಮೆರಿಕ): ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾದ ಡೊನಾಲ್ಡ್ ಟ್ರಂಪ್ ಅವರು ಲ್ಯಾಟಿನ್ ಅಮೆರಿಕದ ವಿಶೇಷ ರಾಯಭಾರಿ ಜೊತೆಗೆ ಪೋರ್ಚುಗಲ್ ಮತ್ತು ಮಾಲ್ಟಾಕ್ಕೆ ಹೊಸ ಅಮೆರಿಕದ ರಾಯಭಾರಿಗಳು ಸೇರಿದಂತೆ ತಮ್ಮ ಟ್ರಂಪ್ 2.0 ಆಡಳಿತಕ್ಕಾಗಿ ಹಲವಾರು ಪ್ರಮುಖ ನಾಮನಿರ್ದೇಶನಗಳನ್ನು ಘೋಷಿಸಿದ್ದಾರೆ.
ಬುಧವಾರ ಮಾಹಿತಿ ಹಂಚಿಕೊಂಡ ಟ್ರಂಪ್: ಅವರ ಸಾಮಾಜಿಕ ಜಾಲತಾಣ ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್‌ಗಳ ಮೂಲಕ ಪ್ರಕಟಣೆಗಳನ್ನು ಮಾಡಲಾಗಿದೆ. ಬುಧವಾರದ ಹಂಚಿಕೊಂಡ ಪೋಸ್ಟ್‌ನಲ್ಲಿ ಟ್ರಂಪ್, "ಜಾನ್ ಆರಿಗೊ ಅವರು ಪೋರ್ಚುಗಲ್‌ಗೆ ಮುಂದಿನ ಯುನೈಟೆಡ್ ಸ್ಟೇಟ್ಸ್ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಾರೆ" ಎಂದು ಹೇಳಿದ್ದಾರೆ.
ಜಾನ್ ಹೊಗಳಿದ ಡೊನಾಲ್ಡ್: ಜಾನ್ ಆರಿಗೊ ಅವರನ್ನು ಹೊಗಳಿರುವ ಟ್ರಂಪ್, "ಜಾನ್ ಆಟೋಮೋಟಿವ್ ಉದ್ಯಮದಲ್ಲಿ ಅತ್ಯಂತ ಯಶಸ್ವಿ ಉದ್ಯಮಿ ಮತ್ತು ಚಾಂಪಿಯನ್ ಗಾಲ್ಫ್ ಆಟಗಾರ. ಮೂವತ್ತು ವರ್ಷಗಳಿಂದ ಅವರು ವೆಸ್ಟ್ ಪಾಮ್ ಬೀಚ್‌ನಲ್ಲಿ ವ್ಯವಹಾರದಲ್ಲಿ ಉತ್ತಮ ನಾಯಕರಾಗಿದ್ದಾರೆ, ಎಲ್ಲರಿಂದಲೂ ಗೌರವಿಸಲ್ಪಟ್ಟಿದ್ದಾರೆ. ಜಾನ್ ಅವರು ನಮ್ಮ ದೇಶಕ್ಕಾಗಿ ಯಾರೂ ನಂಬಲಾಗದ ಮಟ್ಟದಲ್ಲಿ ಕೆಲಸವನ್ನು ಮಾಡುತ್ತಾರೆ. ಹಾಗೇ ಯಾವಾಗಲೂ ಅಮೇರಿಕಾವನ್ನು ಮೊದಲ ಸ್ಥಾನದಲ್ಲಿರಿಸುತ್ತಾರೆ ಎಂಬ ನಂಬಿಕೆ ಇದೆ" ಎಂದಿದ್ದಾರೆ.
ಜಾನ್ ಆರಿಗೊ ಪ್ರಸ್ತುತ ಆಟೋ ಗ್ರೂಪ್ನ ಉಪಾಧ್ಯಕ್ಷರಾಗಿದ್ದಾರೆ. ಇದು ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಅಲ್ಲಿ ಟ್ರಂಪ್ ಆಗಾಗ್ಗೆ ತನ್ನ Mar-a-Lago ರೆಸಾರ್ಟ್‌ನಲ್ಲಿ ಸಭೆಗಳನ್ನು ಆಯೋಜಿಸುತ್ತಾರೆ" ಎಂದು ಅಮೆರಿಕದ ಮಾಧ್ಯಮ ಸಂಸ್ಥೆ ತಿಳಿಸಿದೆ.
ಸೋಮರ್ಸ್ ಫರ್ಕಾಸ್ ಮಾಲ್ಟಾಕ್ಕೆ ಯುಎಸ್ ರಾಯಭಾರಿ: ಮತ್ತೊಂದು ಪೋಸ್ಟ್‌ನಲ್ಲಿ, ಡೊನಾಲ್ಡ್ ಟ್ರಂಪ್ ಸೋಮರ್ಸ್ ಫರ್ಕಾಸ್ ಅವರನ್ನು ಮಾಲ್ಟಾಕ್ಕೆ ಯುಎಸ್ ರಾಯಭಾರಿ ಎಂದು ಘೋಷಿಸಿದರು. "ಸೋಮರ್ಸ್ ಫರ್ಕಾಸ್ ಅವರು ಮಾಲ್ಟಾ ಗಣರಾಜ್ಯಕ್ಕೆ ಮುಂದಿನ ಯುನೈಟೆಡ್ ಸ್ಟೇಟ್ಸ್ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಾರೆ ಎಂದು ಘೋಷಿಸಲು ನನಗೆ ಸಂತಸವಾಗಿದೆ" ಎಂದು ಅವರು ಹಂಚಿಕೊಂಡಿದ್ದಾರೆ.
"ಸೋಮರ್ಸ್ ಮಾಡೆಲ್, ಲೋಕೋಪಕಾರಿ, ಸಾಕ್ಷ್ಯಚಿತ್ರ ನಿರ್ಮಾಪಕಿ ಮತ್ತು ಅತ್ಯಂತ ಯಶಸ್ವಿ ಉದ್ಯಮಿ. ಅವರು ಹಿಂದೆ ಶ್ವೇತಭವನದ ಫೆಲೋಶಿಪ್‌ಗಳ ನನ್ನ ಅಧ್ಯಕ್ಷರ ಆಯೋಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಮತ್ತು ಅಮೆರಿಕನ್ ಸೊಸೈಟಿ ಸೇರಿದಂತೆ ಚಾರಿಟಿಗಾಗಿ ಮಿಲಿಯನ್ ಡಾಲರ್‌ಗಳನ್ನು ಸಂಗ್ರಹಿಸಿದ್ದಾರೆ. ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ತಡೆಗಟ್ಟಲು, ಆಲ್ಝೈಮರ್ಸ್ ಅಸೋಸಿಯೇಟ್, ಲೈಟ್ಹೌಸ್ ಗಿಲ್ಡ್, ನ್ಯೂಯಾರ್ಕ್ ವುಮೆನ್ಸ್ ಫೌಂಡೇಶನ್ ಮತ್ತು ನ್ಯೂಯಾರ್ಕ್ ಸಿಟಿ ಪೋಲೀಸ್ ಫೌಂಡೇಶನ್‌ನ ಟ್ರಸ್ಟಿಯಾಗಿ ಆಕೆ ಯಾವಾಗಲೂ ಕಾನೂನನ್ನು ಬೆಂಬಲಿಸಿದ್ದಾರೆ" ಎಂದಿದ್ದಾರೆ.
ಇದನ್ನೂ ಓದಿ: ಎಲೋನ್ ಮಸ್ಕ್ ಅಮೆರಿಕದ ಅಧ್ಯಕ್ಷರಾಗಬಹುದೇ?: ಡೊನಾಲ್ಡ್ ಟ್ರಂಪ್ ಉತ್ತರವೇನು ಗೊತ್ತಾ?