ನವದೆಹಲಿ: ಭಾರತದ ಮೂರು ಪ್ರಮುಖ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸಾ ಸ್ಥಳದ ಸೋಂಕು (Surgical Site Infection-SSI) ದರ ಅನೇಕ ಹೆಚ್ಚಿನ ಆದಾಯದ ದೇಶಗಳಿಗಿಂತ ಹೆಚ್ಚಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಅಧ್ಯಯನ ಬಹಿರಂಗಪಡಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಶಸ್ತ್ರಚಿಕಿತ್ಸಾ ಸ್ಥಳದ ಸೋಂಕುಗಳು ಶಸ್ತ್ರಚಿಕಿತ್ಸೆ ಮಾಡುವ ಸಮಯದಲ್ಲಿ ದೇಹವನ್ನು ಪ್ರವೇಶಿಸುವ ಬ್ಯಾಕ್ಟೀರಿಯಾಗಳಿಂದ ಉಂಟಾಗುತ್ತವೆ. ಇದರಿಂದ ಪ್ರತಿವರ್ಷ ಲಕ್ಷಾಂತರ ರೋಗಿಗಳ ಜೀವಕ್ಕೆ ಅಪಾಯ ಉಂಟಾಗುತ್ತದೆ. ಆ್ಯಂಟಿಬಯೋಟಿಕ್ ಪ್ರತಿರೋಧದ ಹರಡುವಿಕೆಗೆ ಕಾರಣವಾಗುತ್ತದೆ. ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ, ಶಸ್ತ್ರಚಿಕಿತ್ಸೆಗೆ ಒಳಗಾಗುವ ರೋಗಿಗಳಲ್ಲಿ ಶೇಕಡಾ 11ರಷ್ಟು ಜನರು ಸೋಂಕಿಗೆ ಒಳಗಾಗಿದ್ದಾರೆ ಎಂದು ಡಬ್ಲ್ಯೂಎಚ್‌ಒ ತಿಳಿಸಿದೆ.
ಐಸಿಎಂಆರ್ ಸಂಶೋಧನೆ: ಐಸಿಎಂಆರ್ ಅಧ್ಯಯನದಲ್ಲಿ ಮೂರು ಆಸ್ಪತ್ರೆಗಳಲ್ಲಿನ 3,020 ರೋಗಿಗಳ ಪರೀಕ್ಷೆ ನಡೆಸಲಾಗಿದೆ. ಇಲ್ಲೆಲ್ಲಾ ಶಸ್ತ್ರಚಿಕಿತ್ಸಾ ಸ್ಥಳದ ಸೋಂಕು ಹೆಚ್ಚು ಇರುವುದು ಕಂಡುಬಂದಿದೆ. ಇದು ಆರೋಗ್ಯ-ಸಂಬಂಧಿತ ಸೋಂಕುಗಳಾಗಿವೆ. ಅಂಗಚ್ಛೇದನ, ತೆರೆದ ಕಡಿತ ಆಂತರಿಕ ಸ್ಥಿರೀಕರಣ ಶಸ್ತ್ರಚಿಕಿತ್ಸೆ (Open reduction and internal fixation- ORIF), ಅಥವಾ ಮುಚ್ಚಿದ ಕಡಿತ ಆಂತರಿಕ ಸ್ಥಿರೀಕರಣ (CRIF- Closed reduction-internal fixation) ಶಸ್ತ್ರಚಿಕಿತ್ಸೆಯೊಂದಿಗೆ ನಡೆಸಲಾದ ಡಿಬ್ರಿಡ್ಮೆಂಟ್ ಶಸ್ತ್ರಚಿಕಿತ್ಸೆಯು ಶೇ. 54.2ರಷ್ಟು ಅತ್ಯಧಿಕ ಎಸ್ಎಸ್ಐ ದರವನ್ನು ಹೊಂದಿದೆ.
ಎಸ್ಎಸ್ಐ ಗಮನಾರ್ಹವಾದ ಅನಾರೋಗ್ಯಕ್ಕೆ ಕಾರಣವಾಗುತ್ತವೆ. ಇದು ಹೆಚ್ಚುವರಿ ಆರೋಗ್ಯ ವೆಚ್ಚಗಳಿಗೆ ಹಾಗೂ ಆಸ್ಪತ್ರೆಯ ವಾಸ್ತವ್ಯದ ಅವಧಿಯನ್ನು ಹೆಚ್ಚಿಸಲು ಕೂಡ ಕಾರಣವಾಗುತ್ತದೆ. ಕಡಿಮೆ ಹಾಗೂ ಮಧ್ಯಮ ಆದಾಯದ ದೇಶಗಳಿಂದ ರೋಗಿಗಳ ಡಿಸ್ಚಾರ್ಜ್ ನಂತರದ ಎಸ್ಎಸ್ಐ ಕುರಿತು ಡೇಟಾ ಕೊರತೆಯಿದೆ. ಭಾರತದಲ್ಲಿ ಡಿಸ್ಚಾರ್ಜ್ ನಂತರದ ಅವಧಿಯನ್ನು ಒಳಗೊಂಡಿರುವ ಎಸ್ಎಸ್ಐಗಳ ಯಾವುದೇ ಕಣ್ಗಾವಲು ಅಥವಾ ನಿಗಾವಹಿಸುವ ವ್ಯವಸ್ಥೆ ಅಸ್ತಿತ್ವದಲ್ಲಿಲ್ಲ. ಆದ್ದರಿಂದ, ಆಸ್ಪತ್ರೆಯಲ್ಲಿ ಉಳಿಯುವಾಗ ಮತ್ತು ಡಿಸ್ಚಾರ್ಜ್ ನಂತರ ಸಂಭವಿಸುವ ಎಸ್ಎಸ್ಐಗಳಿಗೆ ಸಂಬಂಧಿಸಿದ ಅಪಾಯದ ಅಂಶಗಳನ್ನು ಗುರುತಿಸಲು ಹಾಗೂ ಅನುಪಾತವನ್ನು ಅಂದಾಜು ಮಾಡಲು ನಾವು ಬಹುಕೇಂದ್ರಿತ ವಿಶ್ಲೇಷಣೆ ಕುರಿತು ಪ್ರಸ್ತಾಪಿಸಿದ್ದೇವೆ ಎಂದು ಅಧ್ಯಯನ ತಿಳಿಸಿದೆ.
ಜೈ ಪ್ರಕಾಶ್ ನಾರಾಯಣ್ ಅಪೆಕ್ಸ್ ಟ್ರಾಮಾ ಸೆಂಟರ್ (JPNATC), ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ (KMC) ಮತ್ತು ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಯಲ್ಲಿ (TMH) ನಿರೀಕ್ಷಿತ ಬಹುಕೇಂದ್ರಿತ ಸ್ವಷ್ಟವಾದ ಅಧ್ಯಯನ ನಡೆಸಲಾಗಿದೆ. ಅನೇಕ ಹೆಚ್ಚಿನ ಆದಾಯದ ದೇಶಗಳಿಗೆ ಹೋಲಿಸಿದರೆ ಭಾರತದ ಮೂರು ಆಸ್ಪತ್ರೆಗಳಲ್ಲಿ ಎಸ್ಎಸ್ಐ ದರ ಹೆಚ್ಚಾಗಿದೆ. ಇದು ಇದು ಸಾಮಾನ್ಯವಾಗಿ ಶೇಕಡಾ 1.2 ಮತ್ತು 5.2 ರ ನಡುವೆ ಬದಲಾಗುತ್ತದೆ ಎಂದು ಅಧ್ಯಯನ ತೋರ್ಪಡಿಸಿದೆ.
"ನಮ್ಮ ಅಧ್ಯಯನದಲ್ಲಿ ಈ ಪ್ರಮಾಣ ಗುಜರಾತ್‌ನಲ್ಲಿ ವರದಿಯಾದ ಪ್ರಮಾಣಕ್ಕಿಂತ (ಶೇಕಡಾ 8.95) ಕಡಿಮೆ ಮತ್ತು ಭಾರತದ ಡೆಹ್ರಾಡೂನ್‌ನಲ್ಲಿ (ಶೇಕಡಾ 5), ಇರಾನ್ (ಶೇಕಡಾ 17.4), ಈಜಿಪ್ಟ್ (ಶೇಕಡಾ 17) ಮತ್ತು ಪಾಕಿಸ್ತಾನ (ಶೇಕಡಾ 7.3) ಗಿಂತ ಹೆಚ್ಚಾಗಿದೆ" ಎಂದು ಸಂಶೋಧಕರೊಬ್ಬರು ಬಹಿರಂಗಪಡಿಸಿದ್ದಾರೆ.
ಡಿಸ್ಚಾರ್ಜ್ ನಂತರದ ಕಣ್ಗಾವಲು: ತಮ್ಮ ಅಧ್ಯಯನವು ಭಾರತದ ಮೊದಲ ಬಹುಕೇಂದ್ರಿತ ವ್ಯವಸ್ಥಿತ ಕಣ್ಗಾವಲು ಇರಿಸುವ ಪ್ರಯತ್ನವಾಗಿದೆ. ಇದು ವಿವಿಧ ಸಾಂಪ್ರದಾಯಿಕ ಶಸ್ತ್ರಚಿಕಿತ್ಸಾ ವಿಧಾನಗಳಿಗೆ ಒಳಗಾದ ನಂತರ ಆರು ತಿಂಗಳ ಕಾಲ ರೋಗಿಗಳನ್ನು ಮೇಲ್ವಿಚಾರಣೆ ಮಾಡಲಾಗಿದೆ. 3,090 ರೋಗಿಗಳಲ್ಲಿ ಒಟ್ಟು 161 ಜನರು ಶಸ್ತ್ರಚಿಕಿತ್ಸಾ ಸ್ಥಳದ ಸೋಂಕಿಗೆ(ಎಸ್ಎಸ್ಐ) ಒಳಗಾಗಿದ್ದಾರೆ. ಇದರ ಪರಿಣಾಮವಾಗಿ ಶೇ. 5.2ದಷ್ಟು ರೋಗಿಗಳು ಎಸ್ಎಸ್ಐಗೆ ಒಳಗಾಗುವ ಸಾಧ್ಯತೆ ಹೆಚ್ಚು. ಶುದ್ಧ, ಕಲುಷಿತ ಗಾಯದ ವರ್ಗ ಮತ್ತು 120 ನಿಮಿಷಗಳಿಗಿಂತ ಹೆಚ್ಚು ಕಾಲ ನಡೆಯುವ ಶಸ್ತ್ರಚಿಕಿತ್ಸೆಗಳು ಎಸ್ಎಸ್ಐನ ಹೆಚ್ಚಿನ ಅಪಾಯಕ್ಕೆ ಕಾರಣವಾಗುತ್ತದೆ.
ಎಸ್ಎಸ್ಐಗಳಿಗೆ ಒಗಾಗುವ ರೋಗಿಗಳು ದೀರ್ಘಕಾಲದವರೆಗೆ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ. ಡಿಸ್ಚಾರ್ಜ್ ನಂತರದ ಕಣ್ಗಾವಲು ವಹಿಸಿದರೆ, ಶೇ. 66 ಪ್ರತಿಶತ SSI ಪ್ರಕರಣಗಳನ್ನು ಪತ್ತೆಹಚ್ಚಲು ಸಹಾಯ ಮಾಡಿದೆ. ಸಂಯೋಜಿತ ಶಸ್ತ್ರಚಿಕಿತ್ಸೆಗಳು ರೋಗಿಗಳಲ್ಲಿ ಎಸ್ಎಸ್ಐಗಳ ಅಪಾಯವನ್ನು ಹೆಚ್ಚಿಸುತ್ತವೆ. ಆದ್ದರಿಂದ ಡಿಸ್ಚಾರ್ಜ್ ನಂತರದ ಕಣ್ಗಾವಲು ಶೇ.50ದಷ್ಟು ಎಸ್ಎಸ್ಐ ರೋಗಿಗಳನ್ನು ಪತ್ತೆಹಚ್ಚುವಲ್ಲಿ ಸಹಾಯ ಮಾಡಿದೆ ಎಂದು ಅಧ್ಯಯನವು ಬಹಿರಂಗಪಡಿಸಿದೆ.
ಇದನ್ನೂ ಓದಿ: 6-6-6 ವಾಕಿಂಗ್ ರೂಲ್ಸ್ ಬಗ್ಗೆ ಗೊತ್ತೇ? ಈ ನಿಯಮ ಪಾಲಿಸಿದರೆ ಹಲವು ಆರೋಗ್ಯ ಸಮಸ್ಯೆಗಳು ಮಾಯ: ಅಧ್ಯಯನ