ETV Bharat / state

ಸ್ಮಾರ್ಟ್ ಕೃಷಿಗೆ ಬಂದಿದೆ 'ಕೈರೋ' ಡಿವೈಸ್: ಈ ಉಪಕರಣದ ಅನುಕೂಲಗಳೇನು? - INVEST KARNATAKA 2025

'ಕೈರೋ' ಎಂಬ ಸೌರ ವಿದ್ಯುತ್ ಚಾಲಿತ ಯಂತ್ರಾಂಶ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಎಲ್ಲರ ಗಮನ ಸೆಳೆಯಿತು‌. ಈ ಕುರಿತು 'ಈಟಿವಿ ಭಾರತ್​' ಪ್ರತಿನಿಧಿ ಮುನೇಗೌಡ ಎಂ. ಅವರ ವರದಿ.

KAIRO DEVICE
ಕೈರೋ ಡಿವೈಸ್ (ETV Bharat)
author img

By ETV Bharat Karnataka Team

Published : Feb 14, 2025, 10:58 PM IST

ಬೆಂಗಳೂರು: ಬೆಳೆಗಳಿಗೆ ತಗುಲಬಹುದಾದ ರೋಗದ ಬಗ್ಗೆ ಮತ್ತು 14 ದಿನಗಳ ಹವಾಮಾನ ಮುನ್ಸೂಚನೆ ಮಾಹಿತಿ ನೀಡುವ 'ಕೈರೋ' ಎಂಬ ಸೌರ ವಿದ್ಯುತ್ ಚಾಲಿತ ಯಂತ್ರಾಂಶ (ಡಿವೈಸ್) ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಎಲ್ಲರ ಗಮನ ಸೆಳೆಯಿತು‌.

ಬೆಂಗಳೂರು ಮೂಲದ ಫೈಲೋ ಕಂಪನಿ ಅಭಿವೃದ್ಧಿಪಡಿಸಿದ 'ಕೈರೋ' ಸ್ಮಾರ್ಟ್ ಬೇಸಾಯಕ್ಕೆ ಪ್ರೋತ್ಸಾಹಿಸುತ್ತಿದೆ. ಈ ಸ್ಮಾರ್ಟ್ ಬೇಸಾಯದಿಂದ ಅಧಿಕ ಇಳುವರಿಯೂ ಬರುತ್ತದೆ. ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕಂಪನಿಯ ತಯಾರಿಕಾ ಘಟಕ ಉತ್ತರಪ್ರದೇಶದ ಗುರುಗಾಂವ್‌ನಲ್ಲಿದೆ. ಸೌರಶಕ್ತಿ ಬಳಸುವ ಸ್ವಯಂಚಾಲಿತ ಡಿವೈಸ್‌ ಕ್ರಮೇಣ ರೈತರ ಗಮನಸೆಳೆಯುತ್ತಿದೆ.

'ಕೈರೋ' ಡಿವೈಸ್ (ETV Bharat)

ಕೈರೋ ಉಪಕರಣದಿಂದಾಗುವ ಅನುಕೂಲವೇನು?: ತೋಟಗಳಲ್ಲಿ ಕೈರೋ ಉಪಕರಣ ಅಳವಡಿಸಿದರೆ ಒಂದು ಕಿ.ಮೀ. ಸುತ್ತಳತೆಯಲ್ಲಿ ನಿರ್ದಿಷ್ಟ ಬೆಳೆ, ಮಣ್ಣು ಕುರಿತು ನಿರಂತರ ಮೇಲ್ವಿಚಾರಣೆ ಮಾಡುತ್ತದೆ. ರಸಗೊಬ್ಬರ ಅಥವಾ ಕ್ರಿಮಿನಾಶಕ ಎಷ್ಟು ಬಳಸಬೇಕು, ಯಾವಾಗ ಸಿಂಪಡಿಸಬೇಕು. ಪ್ರಮಾಣದ ನಿಖರತೆ ತಿಳಿಸಿಕೊಡುತ್ತದೆ.ಒಂದು ವಾರದ ಮುನ್ನವೇ ನಿರ್ದಿಷ್ಟ ರೋಗಗಳ ಬಗ್ಗೆ ಎಚ್ಚರಿಕೆ, 14 ದಿನಗಳ ಹವಾಮಾನ ಮುನ್ಸೂಚನೆ ನೀಡುತ್ತದೆ. ನೀರಾವರಿ, ರಸಗೊಬ್ಬರ, ರೋಗ/ಕೀಟಗಳ ಹತೋಟಿ ಕ್ರಮದ ವೇಳಾಪಟ್ಟಿಯನ್ನು ನಿರ್ವಹಿಸಿ ರೈತರಿಗೆ ಆಸರೆಯಾಗಿ ನಿಲ್ಲುವ ಸಾಧನವಾಗಿದೆ.

Nero Device
ನೀರೋ ಡಿವೈಸ್ (ETV Bharat)

ಹವಾಮಾನ ಮುನ್ಸೂಚನೆ, ನೀರಾವರಿ, ರಸಗೊಬ್ಬರ, ರೋಗ/ಕೀಟಗಳ ಹತೋಟಿ ಕ್ರಮದ ವೇಳಾಪಟ್ಟಿ ನಿರ್ವಹಿಸಿ ರೈತರಿಗೆ ಆಸರೆಯಾಗಿ ನಿಲ್ಲುತ್ತದೆ. ಗಾಳಿಯ ವೇಗ, ಮಳೆಯ ಮಾಪಕ, ಎಲೆಯ ತೇವಾಂಶ, ಬೆಳಕಿನ ತೀವ್ರತೆ, ಗಾಳಿಯ ದಿಕ್ಕು, ಒತ್ತಡ, ಎಲೆ ಹಾಗೂ ಮಣ್ಣಿನ ತೇವಾಂಶ, ತಾಪಮಾನದ ಸಾಂದ್ರಕ ವಿಭಾಗಗಳನ್ನು ನೀರೋ ಡಿವೈಸ್ ಒಳಗೊಂಡಿದೆ. ಉತ್ಪಾದನಾ ವೆಚ್ಚ ಕಸಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಿದೆ.

"ಈ ಡಿವೈಸ್‌ನ ಮೊತ್ತ 40 ಸಾವಿರ ರೂ.ಗಳಾಗಿದ್ದರೂ ತೋಟಗಾರಿಕೆ ಇಲಾಖೆಯು ಶೇ.50ರಷ್ಟು ಸಹಾಯಧನ ಸೌಲಭ್ಯ ಒದಗಿಸುತ್ತದೆ. ಇನ್ನು ನೀರೋ ಡಿವೈಸ್​ನ ಬೆಲೆ 23 ಸಾವಿರ ರೂ. ಆಗುತ್ತದೆ. ಇದಕ್ಕೆ ಸಬ್ಸಿಡಿ ಸಿಗುವುದಿಲ್ಲ. ಎರಡು ವರ್ಷಗಳ ತನಕ ಖಾತರಿ, ಕಂಪನಿ ಪ್ರತಿನಿಧಿಗಳಿಂದ ಉಚಿತ ನಿರ್ವಹಣೆ, ರಿಪೇರಿ ನಂತರ ಡಿವೈಸ್ ನವೀಕರಣಕ್ಕೆ 6 ಸಾವಿರ ರೂ. ನೀರೋಗೆ 2 ಸಾವಿರ ರೂ. ಪಾವತಿಸಬೇಕಾಗುತ್ತದೆ" ಎಂದು ಕಂಪನಿ ಪ್ರತಿನಿಧಿ, ಕೀಟಶಾಸ್ತ್ರ ತಜ್ಞ ಡಾ.ಜಯರಾಮ್ 'ಈಟಿವಿ ಭಾರತ್'ಗೆ ತಿಳಿಸಿದರು.

KAIRO DEVICE
ಕೈರೋ ಡಿವೈಸ್ (ETV Bharat)

"ಡಿವೈಸ್ ಪೂರ್ಣ ಮೊಬೈಲ್ ಆ್ಯಪ್ ಮೂಲಕ ನಿರ್ವಹಿಸಬಹುದಾಗಿದೆ. ಖರೀದಿಸಿದ ರೈತರಿಗೆ ತರಬೇತಿ, ಪ್ರತಿ ವಾರಕ್ಕೊಮ್ಮೆ ಆನ್‌ಲೈನ್ ತರಬೇತಿ ಹಾಗೂ ಕಂಪನಿ ಪ್ರತಿನಿಧಿ ಆಗಾಗ ಕ್ಷೇತ್ರ ಕಾರ್ಯ ನಡೆಸಿ ರೈತರಿಗೆ ನೆರವಾಗುತ್ತಾರೆ. ಕರ್ನಾಟಕದ ಕೋಲಾರ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ದೊಡ್ಡಬಳ್ಳಾಪುರ, ಬಿಜಾಪುರ ಸೇರಿದಂತೆ ಹಲವು ಕಡೆ 800-1000 ಡಿವೈಸ್‌ಗಳು ಮಾರಾಟವಾಗಿದೆ. ಉತ್ತಮ ಪ್ರತಿಕ್ರಿಯೆಯೂ ಬಂದಿದೆ. ಅಲ್ಲದೆ, ದೇಶದ ಬೇರೆ, ಬೇರೆ ರಾಜ್ಯಗಳ ರೈತರಿಗೆ 15 ಸಾವಿರ ಡಿವೈಸ್‌ಗಳು ಮಾರಾಟವಾಗಿವೆ. ರೈತರು www.fyllo.in ಅಥವಾ contact@fyllo.in (9380761064, 8088913726) ಸಂಪರ್ಕಿಸಬಹುದು" ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಹೂಡಿಕೆದಾರರ ಸಮಾವೇಶಕ್ಕೆ ತೆರೆ: 2030ರ ವೇಳೆಗೆ ರೈಲು ಮಾರ್ಗಗಳ ಸಂಪೂರ್ಣ ವಿದ್ಯುದೀಕರಣ- ಸೋಮಣ್ಣ

ಇದನ್ನೂ ಓದಿ: ರಾಜ್ಯದಲ್ಲಿ ₹6.23 ಲಕ್ಷ ಕೋಟಿ ಹೂಡಿಕೆ ಒಪ್ಪಂದಕ್ಕೆ ಸಹಿ, ಈ ವಲಯದ್ದೇ ಸಿಂಹಪಾಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.