ಮೇಷ: ಈ ರಾಶಿಯಲ್ಲಿ ಹುಟ್ಟಿದವರಿಗೆ ಈ ವಾರವು ಅನುಕೂಲಕರವಾಗಿದೆ. ನಿಮ್ಮ ಆರೋಗ್ಯದ ಕುರಿತು ಹೇಳುವುದಾದರೆ, ನಿಮ್ಮ ದೈಹಿಕ ಕ್ಷಮತೆ ಚೆನ್ನಾಗಿರಲಿದೆ. ಆದರೆ ವಾತಾವರಣದಲ್ಲಿ ಬದಲಾವಣೆ ಉಂಟಾಗುವ ಕಾರಣ ಕೆಮ್ಮು ಮತ್ತು ಶೀತದಂತಹ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ. ನಿಮ್ಮ ಹಣಕಾಸಿನ ವಿಚಾರ ಬಂದಾಗ, ನೀವು ಜಮೀನಿನಲ್ಲಿ ಹೆಚ್ಚುವರಿ ಹಣ ಹೂಡಿಕೆ ಮಾಡುವುದನ್ನು ಪರಿಗಣಿಸುತ್ತಿದ್ದರೆ, ವಾರಾಂತ್ಯದ ದಿನಗಳು ಇದಕ್ಕೆ ಸೂಕ್ತ. ಈ ವಾರವು ವ್ಯವಹಾರಿಕ ಚಟುವಟಿಕೆಗಳಿಗೆ ಅನುಕೂಲಕರ. ಉದ್ಯೋಗದಲ್ಲಿರುವವರು ಕೆಲಸದ ಸ್ಥಳದಲ್ಲಿ ಯಾವುದೇ ಅನಗತ್ಯ ವಿಚಾರಕ್ಕೆ ಕೈ ಹಾಕದಿದ್ದರೆ ಒಳ್ಳೆಯದು. ಪ್ರಣಯ ಸಂಬಂಧವನ್ನು ಹೊಂದಿರುವ ವ್ಯಕ್ತಿಗಳು ತಮ್ಮ ಸಂಗಾತಿಯೊಂದಿಗೆ ಮಾತುಕತೆ ನಡೆಸುವಾಗ ತಮ್ಮ ಮಾತಿನ ಮೇಲೆ ಹಿಡಿತ ಇರಿಸಿಕೊಳ್ಳುವುದು ಒಳ್ಳೆಯದು. ಏಕೆಂದರೆ ಇದರಿಂದಾಗಿ ಸಂಘರ್ಷ ಉಂಟಾಗಬಹುದು. ವೈವಾಹಿಕ ಸಂಬಂಧದಲ್ಲಿ ವಿವಾದ ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಸಂಗಾತಿಯೊಂದಿಗೆ ಸಮನ್ವಯ ಸಾಧಿಸಲು ಯತ್ನಿಸಿ.
ವೃಷಭ: ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ. ಈ ವಾರದಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳು ಬಗೆಹರಿಯಲಿವೆ. ಯಾವುದೇ ದೌರ್ಬಲ್ಯ ನಿಮ್ಮನ್ನು ಕಾಡುತ್ತಿದ್ದರೆ, ವೈದ್ಯರ ಸಲಹೆ ಪಡೆಯಿರಿ. ನಿಮ್ಮ ವ್ಯವಹಾರವನ್ನು ಬೆಳೆಸುವುದಕ್ಕಾಗಿ ನೀವು ಸಾಕಷ್ಟು ಶ್ರಮ ಪಡಬೇಕು. ಉದ್ಯೋಗದಲ್ಲಿರುವವರು ಕೆಲಸವನ್ನು ಬದಲಾಯಿಸಲು ಯತ್ನಿಸುತ್ತಿದ್ದರೆ, ಈ ವಾರವು ನಿಮಗೆ ಅನುಕೂಲಕರವಾಗಿದೆ. ನೀವು ಕಾರನ್ನು ಖರೀದಿಸಲು ಅಥವಾ ನಿಮ್ಮ ಮನೆಯ ನವೀಕರಣಕ್ಕೆ ಯೋಚಿಸುತ್ತಿದ್ದರೆ, ಈ ವಾರವು ನಿಮಗೆ ಅನುಕೂಲಕರವಾಗಿದೆ. ನೀವು ಸಾಕಷ್ಟು ಹಣ ಖರ್ಚು ಮಾಡಲಿದ್ದೀರಿ. ಪ್ರಣಯ ಸಂಬಂಧದ ಕುರಿತು ಹೇಳುವುದಾದರೆ, ಯಾವುದೇ ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು. ವೈವಾಹಿಕ ಸಂಬಂಧದಲ್ಲಿಯೂ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶವನ್ನು ಪಡೆಯಲಿದ್ದಾರೆ.
ಮಿಥುನ: ಈ ರಾಶಿಯವರಿಗೆ ಈ ವಾರದಲ್ಲಿ ಒಳ್ಳೆಯ ಫಲ ದೊರೆಯಲಿದೆ. ನಿಮ್ಮ ಆರೋಗ್ಯದ ಕುರಿತು ಹೇಳುವುದಾದರೆ, ನಿರಂತರವಾಗಿ ಕಾಡುವ ಕಾಯಿಲೆಯನ್ನು ನೀವು ನಿಭಾಯಿಸಬೇಕಾದೀತು. ಇದು ನಿಮ್ಮ ಚಿಂತೆಗೆ ಕಾರಣವಾಗಬಹುದು. ನಿಮ್ಮ ಹಣಕಾಸಿಗೆ ಸಂಬಂಧಿಸಿದಂತೆ ಹೇಳುವುದಾದರೆ, ನಿಮಗಾಗಿ ಮತ್ತು ಮನೆಗೆ ವಸ್ತುಗಳನ್ನು ಖರೀದಿಸುವುದಕ್ಕಾಗಿ ನೀವು ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾದೀತು. ನಿಮ್ಮ ವ್ಯವಹಾರವು ಯಶಸ್ಸಿನ ಹಾದಿಯಲ್ಲಿ ಸಾಗಲಿದೆ. ಆದರೆ ಅದನ್ನು ಇನ್ನಷ್ಟು ಯಶಸ್ಸಿನತ್ತ ಕೊಂಡೊಯ್ಯಲು ಸಾಕಷ್ಟು ಪ್ರಯತ್ನದ ಅಗತ್ಯವಿದೆ. ಉದ್ಯೋಗದಲ್ಲಿರುವವರು ಕೆಲಸವನ್ನು ಬದಲಾಯಿಸಲು ಯತ್ನಿಸುವುದಾದರೆ, ಅವರು ಅನುಕೂಲಕರ ಅವಕಾಶಗಳನ್ನು ಪಡೆಯಲಿದ್ದಾರೆ. ನಿಮ್ಮ ಪ್ರೇಮ ಸಂಬಂಧದ ಕುರಿತು ಹೇಳುವುದಾದರೆ, ಅವಿವಾಹಿತರ ಬದುಕಿಗೆ ಹಳೆಯ ಸಂಗಾತಿಯು ಮರಳಿ ಬರಬಹುದು. ಇದರಿಂದಾಗಿ ನಿಮಗೆ ಸಾಕಷ್ಟು ಸಂತಸ ಲಭಿಸಲಿದೆ. ನಿಮ್ಮ ವೈವಾಹಿಕ ಬದುಕಿನ ಕುರಿತು ಹೇಳುವುದಾದಲ್ಲಿ, ನಿಮ್ಮ ಜೀವನ ಸಂಗಾತಿಯೊಂದಿಗೆ ಹೊರಗೆ ಹೋಗಬಹುದು. ನೀವು ಸ್ಪರ್ಧೆಗಳಿಗೆ ಸಿದ್ಧತೆ ನಡೆಸುತ್ತಿದ್ದರೆ ಯಶಸ್ಸು ಪಡೆಯಬಹುದು.
ಕರ್ಕಾಟಕ: ಈ ರಾಶಿಯವರಿಗೆ ಈ ವಾರದಲ್ಲಿ ಒಳ್ಳೆಯ ಫಲ ದೊರೆಯಲಿದೆ. ನಿಮ್ಮ ಆರೋಗ್ಯದ ಕುರಿತು ಹೇಳುವುದಾದಲ್ಲಿ, ದೃಷ್ಟಿಗೆ ಸಂಬಂಧಿಸಿದ ಯಾವುದಾದರೂ ಸಮಸ್ಯೆಯು ಈ ವಾರದಲ್ಲಿ ನಿಮಗೆ ಸಮಸ್ಯೆಯನ್ನುಂಟು ಮಾಡಬಹುದು. ನೀವು ನಿರ್ಲಕ್ಷ್ಯ ತೋರದೆ ಇದ್ದಲ್ಲಿ, ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಸಮಯವು ಅನುಕೂಲಕರವಾಗಿದೆ. ಉದ್ಯೋಗದಲ್ಲಿರುವವರಿಗೆ ತಮ್ಮ ಹುದ್ದೆಯಲ್ಲಿ ಬಡ್ತಿ ದೊರೆಯಬಹುದು. ಆದರೆ ಕೆಲಸ ಅಥವಾ ವ್ಯವಹಾರದಲ್ಲಿ ಯಾವುದೇ ರೀತಿಯ ದರ್ಪವನ್ನು ತೋರಬೇಡಿ. ಸಾಲವನ್ನು ಪಡೆಯಲು ಈ ವಾರವು ಅನುಕೂಲಕರ. ಸುಲಭ ರೀತಿಯಲ್ಲಿ ಸಾಲ ಸಿಗಲಿದೆ. ಕಲಿಕೆ ಮತ್ತು ಶಿಕ್ಷಣದಲ್ಲಿ ಸಾಕಷ್ಟು ಪ್ರಯತ್ನ ಪಡಬೇಕಾದೀತು. ಅನಗತ್ಯ ಗೆಳೆಯರೊಂದಿಗೆ ನೀವು ಸಮಯವನ್ನು ಕಳೆಯಬಹುದು. ಹೀಗಾಗಿ ನೀವು ನಂತರ ಪರಿತಪಿಸಬಹುದು. ಸಂಬಂಧದ ಕುರಿತು ಹೇಳುವುದಾದರೆ, ಈ ರಾಶಿಯವರು ತಮ್ಮ ಸಂಗಾತಿಯೊಂದಿಗೆ ಚೆನ್ನಾಗಿ ಸಮಯ ಕಳೆಯಲಿದ್ದಾರೆ.
ಸಿಂಹ: ಈ ರಾಶಿಯವರಿಗೆ ಈ ವಾರದಲ್ಲಿ ಒಳ್ಳೆಯ ಫಲ ದೊರೆಯಲಿದೆ. ನಿಮ್ಮ ಆರೋಗ್ಯದ ಕುರಿತು ಹೇಳುವುದಾದರೆ, ನಿಮ್ಮನ್ನು ದೀರ್ಘ ಕಾಲದಿಂದ ಕಾಡುವ ಕಾಯಿಲೆಯನ್ನು ನೀವು ನಿರ್ಲಕ್ಷಿಸಿದರೆ ಸಮಸ್ಯೆ ಎದುರಾಗಬಹುದು. ನಿಮ್ಮ ವ್ಯವಹಾರದ ಕುರಿತು ಹೇಳುವುದಾದರೆ ಸಮಯವು ಚೆನ್ನಾಗಿದೆ. ಹೊಸ ವ್ಯವಹಾರದಲ್ಲಿ ಲಾಭ ದೊರೆಯಲಿದೆ. ಉದ್ಯೋಗದಲ್ಲಿರುವವರಿಗೆ ಬಡ್ತಿ ದೊರೆಯಲಿದೆ. ಆದರೆ ಯಾರೊಂದಿಗೂ ಜಗಳವಾಡಬೇಡಿ. ನೀವು ಯಾವುದಾದರೂ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿದ್ದರೆ ಇದನ್ನು ಸಕಾಲದಲ್ಲಿ ಮಾಡಿರಿ. ಇಲ್ಲದಿದ್ದರೆ ಕೊನೆಯ ಕ್ಷಣದಲ್ಲಿ ನೀವು ಸಮಸ್ಯೆ ಎದುರಿಸಬಹುದು. ಪ್ರೇಮ ಸಂಬಂಧದ ಕುರಿತು ಚರ್ಚಿಸುದಾದರೆ, ಕೋಪಗೊಂಡು ದೂರಗೊಂಡ ನಿಮ್ಮ ಸಂಗಾತಿಯು ನಿಮ್ಮತ್ತ ವಾಪಾಸ್ ಬರಬಹುದು. ನಿಮ್ಮ ಮಾತುಗಳ ಪ್ರಭಾವದ ಕಾರಣ ವೈವಾಹಿಕ ಬದುಕಿನಲ್ಲಿ ಸ್ವಲ್ಪ ಕಹಿತನ ಕಾಣಿಸಿಕೊಳ್ಳಬಹುದು.
ಕನ್ಯಾ: ಈ ರಾಶಿಯವರಿಗೆ ಈ ವಾರದಲ್ಲಿ ಒಳ್ಳೆಯ ಫಲ ದೊರೆಯಲಿದೆ. ನಿಮ್ಮ ಆರೋಗ್ಯದ ಕುರಿತು ಹೇಳುವುದಾದರೆ, ಹಳೆಯ ಕಾಯಿಲೆಯು ಮರುಕಳಿಸುವ ಸಾಧ್ಯತೆ ಇದೆ. ಆದರೆ ಕಾಲ ಕಳೆದಂತೆ ಇದು ವಾಸಿಯಾಗಲಿದೆ. ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿದಂತೆ ನೀವು ಮಾಡುವ ಕಠಿಣ ಶ್ರಮಕ್ಕೆ ತಕ್ಕುದಾದ ಫಲ ದೊರೆಯಲಿದೆ. ಉದ್ಯೋಗದಲ್ಲಿರುವವರಿಗೆ ಈ ವಾರವು ಒಳ್ಳೆಯದು. ನೀವು ಬದಲಾವಣೆಯನ್ನು ನಿರೀಕ್ಷಿಸುತ್ತಿದ್ದರೆ, ಈ ಬದಲಾವಣೆಯು ಉತ್ತಮ ಅವಕಾಶಗಳನ್ನು ತಂದು ಕೊಡಬಹುದು. ಹಣಕಾಸಿಗೆ ಸಂಬಂಧಿಸಿದಂತೆ ಈ ಸಮಯವು ಅನುಕೂಲಕರ. ಸಾಲವನ್ನು ಪಡೆದುಕೊಳ್ಳಲು ಅಥವಾ ನೀಡಲು ನೀವು ಯೋಚಿಸುತ್ತಿದ್ದರೆ, ಸಮಯವು ಅಷ್ಟೊಂದು ಚೆನ್ನಾಗಿಲ್ಲ. ಪ್ರೇಮ ಸಂಬಂಧಕ್ಕೆ ಸಮಯವು ಚೆನ್ನಾಗಿದೆ. ನೀವು ನಿಮ್ಮ ಪ್ರೇಮ ಸಂಗಾತಿಯ ಜೊತೆಗೆ ವೈವಾಹಿಕ ಸಂಬಂಧಕ್ಕೆ ಕಾಲಿಡಬಹುದು. ನಿಮ್ಮ ವೈವಾಹಿಕ ಬದುಕಿನಲ್ಲಿ ಒಂದಷ್ಟು ಸಮಸ್ಯೆಗಳು ಕಂಡುಬರಬಹುದು. ನಿಮ್ಮ ಜೀವನ ಸಂಗಾತಿಯ ಆರೋಗ್ಯದ ಕುರಿತು ಗಮನ ಹರಿಸಿ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರು ಹೊಸ ಡೀಲು ಪಡೆಯಬಹುದು. ವಿದೇಶದಲ್ಲಿ ನಿಮ್ಮ ವ್ಯವಹಾರವನ್ನು ವಿಸ್ತರಿಸುವಲ್ಲಿ ನೀವು ಯಶಸ್ವಿಯಾಗಲಿದ್ದೀರಿ.
ತುಲಾ: ಈ ರಾಶಿಯವರಿಗೆ ಈ ವಾರದಲ್ಲಿ ಒಳ್ಳೆಯ ಫಲ ದೊರೆಯಲಿದೆ. ನಿಮ್ಮ ಆರೋಗ್ಯದ ಕುರಿತು ಹೇಳುವುದಾದರೆ, ನಿಮ್ಮ ಶಕ್ತಿಯ ಮಟ್ಟವು ಚೆನ್ನಾಗಿರಲಿದೆ. ಆದರೆ ಯಾವುದಾದರೂ ಕಾಯಿಲೆಯ ಕಾರಣ ಖಿನ್ನತೆಯು ನಿಮ್ಮನ್ನು ಕಾಡಬಹುದು. ನಿಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಬೆಳಗ್ಗಿನ ನಡಿಗೆಯಲ್ಲಿ ತೊಡಗಿಸಿಕೊಳ್ಳಿ ಮತ್ತು ಯೋಗಾಭ್ಯಾಸ ಮಾಡಿ. ದೀರ್ಘಕಾಲೀನ ಕಾಯಿಲೆಯನ್ನು ನಿಭಾಯಿಸುವುದರಿಂದ ಅದು ಹೆಚ್ಚು ಉಲ್ಬಣವಾಗದಂತೆ ನೀವು ನೋಡಿಕೊಳ್ಳಲಿದ್ದೀರಿ. ಯೋಗ ಮತ್ತು ನಡಿಗೆಗೆ ಸಮಯವನ್ನು ಮೀಸಲಿಡುವುದು ಒಳ್ಳೆಯದು. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳು ತಮ್ಮ ಉದ್ಯಮಕ್ಕೆ ಸಂಬಂಧಿಸಿದಂತೆ ಯಾವುದೇ ಹೊಸ ಕಾರ್ಯಕ್ಕೆ ಕೈ ಹಾಕಬಾರದು. ಇಲ್ಲದಿದ್ದರೆ ಅವರಿಗೆ ನಷ್ಟ ಉಂಟಾಗಬಹುದು. ಉದ್ಯೋಗದಲ್ಲಿರುವ ಕೆಲಸದ ವಾತಾವರಣದಲ್ಲಿ ಬದಲಾವಣೆ ಉಂಟಾಗುವುದರಿಂದ ಅವರಿಗೆ ಸಮಸ್ಯೆ ಎದುರಾಗಬಹುದು. ಪ್ರಣಯ ಸಂಬಂಧಕ್ಕೆ ಕುರಿತಂತೆ, ಈ ವಾರವು ಅವರ ಪಾಲಿಗೆ ಅನುಕೂಲಕರವಾಗಿದೆ. ನಿಮ್ಮ ಜೀವನ ಸಂಗಾತಿಯ ಜೊತೆಗೆ ನೀವು ಎಲ್ಲಾದರೂ ಹೋಗಬಹುದು. ವೈವಾಹಿಕ ಬದುಕಿನಲ್ಲಿ ತಪ್ಪು ಗ್ರಹಿಕೆಯ ಕಾರಣ ಕೆಲವೊಂದು ಸಮಸ್ಯೆಗಳು ಎದುರಾಗಬಹುದು.
ವೃಶ್ಚಿಕ: ಈ ವಾರವು ನಿಮ್ಮ ಪಾಲಿಗೆ ಸ್ವಲ್ಪ ಸವಾಲಿನಿಂದ ಕೂಡಿದೆ. ಹೀಗಾಗಿ ಈ ಸಮಯದಲ್ಲಿ ನೀವು ಎಚ್ಚರಿಕೆಯಿಂದ ಇರಬೇಕು. ನಿಮ್ಮ ಆರೋಗ್ಯವು ಅಷ್ಟೊಂದು ಚೆನ್ನಾಗಿರದು. ನಿಮ್ಮ ಯೋಗಕ್ಷೇಮದ ವಿಚಾರದಲ್ಲಿ ಈ ವಾರವು ಅನುಕೂಲಕರವಾಗಿಲ್ಲ. ದೀರ್ಘ ಕಾಲದಿಂದ ಕಾಡುತ್ತಿರುವ ಕಾಯಿಲೆಯು ಮರುಕಳಿಸುವ ಸಾಧ್ಯತೆ ಇದೆ. ಉದ್ಯಮಿಗಳ ಪಾಲಿಗೆ ಈ ವಾರವು ಅನುಕೂಲಕರವಾಗಿದೆ. ಉದ್ಯೋಗದಲ್ಲಿರುವವರಿಗೆ ಸಾಕಷ್ಟು ಅನುಕೂಲತೆಗಳು ದೊರೆಯಲಿದ್ದು, ಅವರು ತಮ್ಮ ಕೆಲಸದಲ್ಲಿ ಪ್ರಗತಿ ಸಾಧಿಸಲಿದ್ದಾರೆ. ಪ್ರೇಮ ಸಂಬಂಧದಲ್ಲಿ ಸವಾಲಿನ ಕ್ಷಣಗಳು ಎದುರಾಗಬಹುದು. ಹೀಗಾಗಿ ನಿಮ್ಮ ಸಂಗಾತಿಯನ್ನು ಕರುಣೆಯಿಂದ ನೋಡಿಕೊಳ್ಳುವುದು ಒಳ್ಳೆಯದು. ವೈವಾಹಿಕ ಬದುಕಿನಲ್ಲಿಯೂ ಭಿನ್ನಾಭಿಪ್ರಾಯಗಳ ಕಾರಣ ಶಾಂತಿ ಕದಡುವ ಸಾಧ್ಯತೆ ಇದೆ. ನಿಮ್ಮ ಜೀವನ ಸಂಗಾತಿಯು ನಿಮ್ಮ ಕುರಿತು ಅಸಮಾಧಾನ ವ್ಯಕ್ತಪಡಿಸಬಹುದು. ಜಂಜಾಟದಿಂದ ಕೂಡಿದ ನಿಮ್ಮ ದಿನಚರಿಯ ನಡುವೆಯೂ ಒಂದಷ್ಟು ಸಮಯವನ್ನು ನಿಮ್ಮ ಮಕ್ಕಳಿಗಾಗಿ ಮೀಸಲಿಡಿ ಮತ್ತು ಅವರನ್ನು ಎಲ್ಲಾದರೂ ತಿರುಗಾಟಕ್ಕೆ ಕರೆದುಕೊಂಡು ಹೋಗಿರಿ. ವ್ಯವಹಾರದಲ್ಲಿ ಹೂಡಿಕೆ ಮಾಡಲು ಇದು ಸಕಾಲ.
ಧನು: ಧನು ರಾಶಿಯವರಿಗೆ ಈ ವಾರವು ಒಳ್ಳೆಯದು. ನಿಮ್ಮ ಆರೋಗ್ಯದ ಕುರಿತು ಹೇಳುವುದಾದರೆ, ನಿಮಗೆ ಯಾವುದೇ ದೈಹಿಕ ಸಮಸ್ಯೆ ಎದುರಾಗದು. ನಿಮಗೆ ಯಾವುದೇ ರೀತಿಯ ಸಮಸ್ಯೆ ಎದುರಾಗದು. ಹೊರಗಿನ ಆಹಾರವನ್ನು ಸೇವಿಸಬೇಡಿ. ವ್ಯವಹಾರ ನಡೆಸಲು ಈ ಸಮಯ ಅನುಕೂಲಕರ. ನೀವು ಹೊಸ ಕಾಮಗಾರಿಯನ್ನು ಪಡೆಯಲಿದ್ದು, ವ್ಯವಹಾರವನ್ನು ಚೆನ್ನಾಗಿ ನಡೆಸಲಿದ್ದೀರಿ. ಉದ್ಯೋಗದಲ್ಲಿರುವ ಜನರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು ಹಾಗೂ ಕಚೇರಿಯ ರಾಜಕೀಯದಿಂದ ದೂರ ಉಳಿಯಬೇಕು. ಆರ್ಥಿಕ ಸ್ಥಿತಿಯು ಚೆನ್ನಾಗಿರಲಿದೆ. ಆದರೆ ಹಣಕಾಸಿನ ವಿಚಾರದಲ್ಲಿ ನಿಮ್ಮ ಹಿರಿಯರ ಸಲಹೆಯನ್ನು ತೆಗೆದುಕೊಳ್ಳಿ. ಪ್ರೇಮಿಗಳಿಗೆ ಇದು ಸಕಾಲ. ನಿಮ್ಮ ಪ್ರೇಮಿಯೊಂದಿಗೆ ಕುಳಿತು ಮಾತನಾಡಿ ಅವರನ್ನು ಅರಿತುಕೊಳ್ಳಲು ಯತ್ನಿಸಿ. ಆಗ ಮಾತ್ರವೇ ಸಂಬಂಧವು ಬೆಳೆಯುತ್ತದೆ. ಇಲ್ಲದಿದ್ದಲ್ಲಿ ಅಂತರ ಮೂಡಬಹುದು. ವೈವಾಹಿಕ ಸಂಬಂಧವು ಚೆನ್ನಾಗಿರಲಿದೆ. ನಿಮ್ಮ ಜೀವನ ಸಂಗಾತಿಯ ಜೊತೆಗೆ ಸಾಕಷ್ಟು ಸಮಯವನ್ನು ಅನ್ಯೋನ್ಯತೆಯಿಂದ ಕಳೆಯಲಿದ್ದೀರಿ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವವರು ಯಶಸ್ಸನ್ನು ಗಳಿಸಲಿದ್ದಾರೆ.
ಮಕರ: ಈ ವಾರದಲ್ಲಿ ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ನರ ಸಂಬಂಧಿ ಸಮಸ್ಯೆಗಳು ಅಥವಾ ಕಾಲಿನ ನೋವು ನಿಮ್ಮನ್ನು ಕಾಡಬಹುದು. ಕೆಲಸದಿಂದ ನೀವು ವಿರಾಮವನ್ನು ತೆಗೆದುಕೊಳ್ಳುವುದು ಒಳ್ಳೆಯದು. ಇಲ್ಲದಿದ್ದರೆ ಪರಿಸ್ಥಿತಿ ಹದಗೆಡುವ ಸಾಧ್ಯತೆ ಇದೆ. ವ್ಯವಹಾರ ನಡೆಸುವಾಗ ಜನರು ತಮ್ಮ ಅಹಂ ಅನ್ನು ಬದಿಗಿರಿಸಿ ತಾಳ್ಮೆಯಿಂದ ದುಡಿಯಬೇಕು. ಈಗ ನೀವು ಎಲ್ಲಿದ್ದೀರೋ ಅಲ್ಲೇ ನಿಮ್ಮ ಕೆಲಸವನ್ನು ಮುಂದುವರಿಸಿ. ಉದ್ಯೋಗ ಬದಲಾಯಿಸಲು ಇದು ಸಕಾಲವಲ್ಲ. ನಿಮ್ಮ ಗೆಳೆಯರೊಂದಿಗೆ ಅನಗತ್ಯವಾಗಿ ಸಮಯ ಹಾಳು ಮಾಡುವ ಬದಲಿಗೆ ನಿಮ್ಮ ಶಿಕ್ಷಣಕ್ಕೆ ಒತ್ತು ನೀಡಿರಿ. ಮನೆ ಖರೀದಿಸಲು ಅಥವಾ ಸಾಲವನ್ನು ಪಡೆಯಲು ಇದು ಸೂಕ್ತ ಸಮಯವಲ್ಲ. ಹೀಗಾಗಿ ನೀವು ಸ್ವಲ್ಪ ಕಾಲ ಕಾಯುವುದು ಒಳ್ಳೆಯದು. ನಿಮ್ಮ ಬಿಡುವಿಲ್ಲದ ಕೆಲಸದ ಕಾರಣ ನಿಮ್ಮ ವೈಯಕ್ತಿಕ ಸಂಬಂಧಕ್ಕೆ ಸಮಯವನ್ನು ಮೀಸಲಿಡಲು ನಿಮಗೆ ಸಾಧ್ಯವಾಗದು. ನಿಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವುದಕ್ಕಾಗಿ ನಿಮ್ಮ ಸಂಗಾತಿಯೊಂದಿಗೆ ಸಾಕಷ್ಟು ಸಮಯವನ್ನು ನೀವು ಕಳೆಯಬೇಕು.
ಕುಂಭ: ಈ ವಾರದಲ್ಲಿ ನಿಮ್ಮ ಆರೋಗ್ಯದ ಕುರಿತು ಹೇಳುವುದಾದರೆ, ದೀರ್ಘಕಾಲಿನ ಸಮಸ್ಯೆಯು ನಿಮ್ಮನ್ನು ಕಾಡುವ ಸಾಧ್ಯತೆ ಇದೆ. ಹೀಗಾಗಿ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯುವುದು ಒಳ್ಳೆಯದು. ಯಾವುದೇ ರೀತಿಯಲ್ಲಿ ಅಜಾಗರೂಕತೆಯಿಂದ ವರ್ತಿಸಬೇಡಿ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ಅವಧಿಯು ಸವಾಲಿನಿಂದ ಕೂಡಿರಲಿದೆ. ನಿಮ್ಮ ವ್ಯವಹಾರದಲ್ಲಿ ಲಾಭವನ್ನು ಗಳಿಸಲು ನಿಮಗೆ ಕಷ್ಟಕರವಾದೀತು. ಇದರ ಪರಿಣಾಮವಾಗಿ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಹಿನ್ನಡೆ ಉಂಟಾಗಬಹುದು. ಉದ್ಯೋಗದಲ್ಲಿ ತೊಡಗಿಸಿಕೊಂಡಿರುವವರಿಗೂ ಸಹ ತಮ್ಮ ಶ್ರಮಕ್ಕೆ ತಕ್ಕುದಾದ ಫಲ ದೊರೆಯದು. ಈ ಕಾರಣಕ್ಕಾಗಿ ನೀವು ಹೊಸ ಕೆಲಸದ ಹುಡುಕಾಟದಲ್ಲಿ ತೊಡಗಬಹುದು. ನಿಮ್ಮ ಆರ್ಥಿಕ ಸ್ಥಿತಿಯು ಅನುಕೂಲಕರವಾಗಿದೆ. ನಿಮ್ಮ ಕುಟುಂಬದ ಸದಸ್ಯರೊಂದಿಗೆ ಸಮಯವನ್ನು ಕಳೆಯಲು ನಿಮಗೆ ಅವಕಾಶ ಲಭಿಸಲಿದೆ. ನಿಮ್ಮ ಪ್ರಣಯ ಸಂಬಂಧವು ಚೆನ್ನಾಗಿರಲಿದೆ. ಆದರೆ ತಪ್ಪು ಗ್ರಹಿಕೆಯ ಕಾರಣ ಸಮಸ್ಯೆಗಳು ಉಂಟಾಗಬಹುದು. ಸಕಾಲದಲ್ಲಿ ಗೊಂದಲವನ್ನು ದೂರ ಮಾಡಲು ಯತ್ನಿಸಿ. ವಿವಿಧ ಕಾರಣಗಳಿಂದಾಗಿ ವೈವಾಹಿಕ ಬದುಕಿನಲ್ಲಿ ಕಹಿತನ ಕಾಣಿಸಿಕೊಳ್ಳಬಹುದು. ಸಮಸ್ಯೆಯನ್ನು ಸಕಾಲದಲ್ಲಿ ಬಗೆಹರಿಸಲು ಯತ್ನಿಸಿ. ಇಲ್ಲದಿದ್ದರೆ ಸಂಘರ್ಷವು ತೀವ್ರಗೊಳ್ಳಬಹುದು.
ಮೀನ: ಈ ರಾಶಿಯವರ ಪಾಲಿಗೆ ಈ ವಾರ ಅನುಕೂಲಕರವಾಗಿದೆ. ನಿಮ್ಮ ಆರೋಗ್ಯದ ಕುರಿತು ಹೇಳುವುದಾದರೆ ನೀವು ಈ ವಾರದಲ್ಲಿ ಸಕ್ರಿಯವಾಗಿ ಇರಲಿದ್ದೀರಿ. ಆದರೆ ನೀವು ಜಾಗರೂಕತೆಯಿಂದ ವಾಹನ ಚಲಾಯಿಸಬೇಕು. ಏಕೆಂದರೆ ನೀವು ಅಪಘಾತಕ್ಕೆ ಒಳಗಾಗುವ ಸಾಧ್ಯತೆ ಇದೆ. ನಿಮ್ಮ ವ್ಯವಹಾರ ಮತ್ತು ಕೆಲಸದಲ್ಲಿ ಪ್ರಗತಿ ಉಂಟಾಲಿದ್ದು, ನೀವು ಸಂಪೂರ್ಣವಾಗಿ ತೊಡಗಿಸಿಕೊಳ್ಳಲಿದ್ದೀರಿ. ನೀವು ಕೆಲಸವನ್ನು ಬದಲಾಯಿಸದಿದ್ದರೆ ಒಳ್ಳೆಯದು. ಈ ವಾರದಲ್ಲಿ ಹೆಚ್ಚಿನ ಹಣವನ್ನು ಖರ್ಚು ಮಾಡಬೇಡಿ. ಹೊಸ ಕಾರನ್ನು ಖರೀದಿಸಲು ಮೊದಲು ನಿಮ್ಮ ಮುಂದಿರುವ ವಿವಿಧ ಆಯ್ಕೆಗಳನ್ನು ಎಚ್ಚರಿಕೆಯಿಂದ ಪರಿಗಣಿಸಿ. ವೈಯಕ್ತಿಕ ಬದುಕಿನಲ್ಲಿ ಮೂರನೇ ವ್ಯಕ್ತಿಯು ಬಿರುಕನ್ನು ಉಂಟು ಮಾಡಲು ಯತ್ನಿಸಿದರೆ, ನಿಮ್ಮ ಸಂಬಂಧವನ್ನು ಉಳಿಸಿಕೊಳ್ಳುವುದಕ್ಕಾಗಿ ನಿಮ್ಮ ಸಂಗಾತಿಯನ್ನು ನಂಬಿರಿ. ವೈವಾಹಿಕ ಬದುಕು ಚೆನ್ನಾಗಿರಲಿದೆ. ನಿಮ್ಮ ಜೀವನ ಸಂಗಾತಿಗಾಗಿ ಏನಾದರೂ ಒಳ್ಳೆಯದನ್ನು ನೀವು ಮಾಡಲಿದ್ದೀರಿ. ನಿಮ್ಮ ಜೀವನ ಸಂಗಾತಿಯೊಂದಿಗೆ ಹೊರ ಹೋಗಿ ಒಟ್ಟಿಗೆ ಕುಳಿತು ಏನಾದರೂ ಹೊಸ ಆರ್ಥಿಕ ಯೋಜನೆಯನ್ನು ರೂಪಿಸಲಿದ್ದೀರಿ.