Easy Bread Gulab Jamun Recipe: ಗುಲಾಬ್ ಜಾಮೂನ್ ಅಂದ್ರೆ ಸಾಕು ಎಲ್ಲರೂ ಇಷ್ಟ ಸೇವಿಸುವ ಸಿಹಿತಿಂಡಿಯಾಗಿದೆ. ಈ ಜಾಮೂನ್ ರೆಡಿ ಮಾಡಲು ಹೆಚ್ಚಿನ ಸಮಯ ಮತ್ತು ಶ್ರಮ ಬೇಕಾಗುತ್ತದೆ ಎಂದು ಹಲವು ಜನರು ಭಾವಿಸುತ್ತಾರೆ. ಆದರೆ, ನಾವು ತಿಳಿಸಿದಂತೆ ನೀವು ಜಾಮೂನ್ ಸಿದ್ಧಪಡಿಸಲು ಯಾವುದೇ ಹಿಟ್ಟಿನ ಅಗತ್ಯವಿಲ್ಲದೆ ಸುಲಭವಾಗಿ ಮಾಡಬಹುದು.
ನೀವು ಮನೆಯಲ್ಲಿ ಉಳಿದ ಬ್ರೆಡ್ನಿಂದ ಗುಲಾಬ್ ಜಾಮೂನ್ ರೆಡಿ ಮಾಡಬಹುದು. ಇದು ಸಾಮಾನ್ಯ ಜಾಮೂನ್ಗಿಂತಲೂ ಸಖತ್ ರುಚಿಯಾಗಿರುತ್ತದೆ. ಹಾಗಾದರೆ, ತಡ ಮಾಡದೆ ಬ್ರೆಡ್ನಿಂದ ಗುಲಾಬ್ ಜಾಮೂನ್ ಮಾಡುವುದು ಹೇಗೆ ಅನ್ನೋದನ್ನು ಕಲಿಯೋಣ.

ಬ್ರೆಡ್ ಗುಲಾಬ್ ಜಾಮೂನ್ಗೆ ಅಗತ್ಯವಿರುವ ಪದಾರ್ಥಗಳೇನು ?
- ಬಿಳಿ ಬ್ರೆಡ್ - ನಾಲ್ಕು ಪೀಸ್ಗಳು
- ಕಾಲು ಕಪ್ (1/4) - ಹಾಲು
- ಒಂದು ಕಪ್ - ಸಕ್ಕರೆ
- ಅರ್ಧ ಟೀಸ್ಪೂನ್ - ಏಲಕ್ಕಿ ಪುಡಿ
- ಕೆಲವು ಕೇಸರಿ ಎಳೆಗಳು
- ರೋಸ್ ವಾಟರ್ - ಕೆಲವು ಹನಿಗಳು
- ಒಂದೂವರೆ ಕಪ್ - ನೀರು
- ಹುರಿಯಲು ಬೇಕಾದಷ್ಟು ಎಣ್ಣೆ
ಬ್ರೆಡ್ ಗುಲಾಬ್ ಜಾಮೂನ್ ಸಿದ್ಧಪಡಿಸುವ ವಿಧಾನ

- ಮೊದಲು ಬ್ರೆಡ್ ಪೀಸ್ಗಳನ್ನು ತೆಗೆದುಕೊಂಡು ಅಂಚುಗಳನ್ನು ಕತ್ತರಿಸಿ, ಮಧ್ಯದಲ್ಲಿ ಸಣ್ಣ ತುಂಡುಗಳಾಗಿ ಕತ್ತರಿಸಬೇಕು.
- ಬಳಿಕ ಇವುಗಳನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಕುದಿಸಿ ತಣ್ಣಗಾದ ಹಾಲನ್ನು ಅದರೊಳಗೆ ಸುರಿಯಬೇಕಾಗುತ್ತದೆ. ಮತ್ತು ನಿಮ್ಮ ಕೈಗಳಿಂದ ಚೆನ್ನಾಗಿ ಮಿಶ್ರಣ ಮಾಡಬೇಕಾಗುತ್ತದೆ.
- ಈ ಮಿಶ್ರಣವನ್ನು ನಿಧಾನವಾಗಿ ಕಲಸಿಕೊಳ್ಳಬೇಕಾಗುತ್ತದೆ. ಹಿಟ್ಟನ್ನು ತಯಾರಿಸಬೇಕಾಗುತ್ತದೆ (ತುಂಬಾ ಗಟ್ಟಿಯಾಗಿದ್ದರೆ, ಸ್ವಲ್ಪ ಹೆಚ್ಚು ಹಾಲು ಸೇರಿಸಬಹುದು).
- ಬಳಿಕ ನಿಮ್ಮ ಕೈಯಲ್ಲಿ ಒಂದು ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಅದರಿಂದ ಸಣ್ಣ ಉಂಡೆಗಳನ್ನು ಮಾಡಿಕೊಳ್ಳಿ. ಎಲ್ಲಾ ಮಿಶ್ರಣದಿಂದ ಇದೇ ರೀತಿ ಚಿಕ್ಕ ಉಂಡೆಗಳನ್ನು ಮಾಡಿ ಇಟ್ಟುಕೊಳ್ಳಿ.
- ಒಲೆ ಆನ್ ಮಾಡಿ ಹಾಗೂ ಒಂದು ಪಾತ್ರೆ ಇಡಬೇಕಾಗುತ್ತದೆ. ನೀರು ಹಾಗೂ ಸಕ್ಕರೆ ಸೇರಿಸಬೇಕಾಗುತ್ತದೆ. ಇದೇ ವೇಳೆಯಲ್ಲಿ ಚಮಚದಿಂದ ಸರಿಯಾಗಿ ಬೆರೆಸಿ.
- ಸಕ್ಕರೆ ಕರಗಿದ ನಂತರ, ಕೇಸರಿ ದಳಗಳು, ಏಲಕ್ಕಿ ಹಾಗೂ ಗುಲಾಬಿ ಸಾರ ಸೇರಿಸಿ ಮತ್ತೆ ಮಿಶ್ರಣ ಮಾಡಿಕೊಳ್ಳಬೇಕಾಗುತ್ತದೆ.
- ಮೂರು ನಿಮಿಷ ಕುದಿಸಿದ ಬಳಿಕ, ಒಲೆ ಆಫ್ ಮಾಡಿ ಪಕ್ಕಕ್ಕೆ ಇಡಬೇಕಾಗುತ್ತದೆ.
- ಬಳಿಕ ಇನ್ನೊಂದು ಬಾಣಲೆಗೆ ಎಣ್ಣೆ ಸುರಿಯಿರಿ, ಅದನ್ನು ಬಿಸಿ ಮಾಡಿ, ಹಿಂದೆ ತಯಾರಿಸಿದ ಎಲ್ಲಾ ಚಿಕ್ಕ ಉಂಡೆಗಳನ್ನು ಸೇರಿಸಿ.
- ಬೆಂಕಿಯ ಉರಿಯನ್ನು ಮಧ್ಯಮದಲ್ಲಿ ಇರಿಸಿ ಹಾಗೂ ಬ್ರೆಡ್ ತುಂಡುಗಳನ್ನು ಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ.
- ಬಳಿಕ ಎಣ್ಣೆಯಲ್ಲಿ ಫ್ರೈ ಮಾಡಿದ ಉಂಡೆಗಳನ್ನು ತಣ್ಣಗಾಗಿರುವಂತಹ ಸಕ್ಕರೆ ಪಾಕದಲ್ಲಿ ಮುಳುಗಿಸಿ ಇಡಬೇಕು.
- ಇವೆಲ್ಲವನ್ನೂ ಒಟ್ಟಿಗೆ ಬೆರೆಸಿ ಸಕ್ಕರೆ ಪಾಕದಲ್ಲಿ ಸುಮಾರು 30 ನಿಮಿಷಗಳ ಕಾಲ ನೆನೆಸಿಡಿ.
- 30 ನಿಮಿಷಗಳ ಬಳಿಕ ಸೇವನೆ ಮಾಡಬಹುದು. ಇಲ್ಲವೇ ಡಬ್ಬದಲ್ಲಿ ತೆಗೆದಿಡಬೇಕಾಗುತ್ತದೆ. ನಿಮಗೆ ಬೇಕು ಎನಿಸಿದಾಗ ಬ್ರೆಡ್ ಗುಲಾಬ್ ಜಾಮೂನ್ ಸೇವಿಸಬಹುದು.