ETV Bharat / international

ಮೂರು ಬಸ್​​​​​​​​​​​ಗಳಲ್ಲಿ​ ಸರಣಿ ಸ್ಫೋಟ: ಉಗ್ರರ ಕೃತ್ಯದ ಶಂಕೆ, ವ್ಯಗ್ರಗೊಂಡ ಇಸ್ರೇಲ್​ - THREE BUS EXPLOSION IN ISRAEL

ಮಾರ್ಗ ಸಂಚಾರ ಮುಗಿಸಿ ನಿಲ್ಲಿಸಲಾಗಿದ್ದ ಬಸ್​ ಸ್ಪೋಟಗೊಂಡಿದ್ದು, ಬಸ್​ನಲ್ಲಿ ಸ್ಪೋಟಕಗಳು ಕಂಡು ಬಂದಿದೆ. ಅದೃಷ್ಟವಶಾತ್​ ಯಾವುದೇ ಹಾನಿಯಾಗಿಲ್ಲ.

three-bus-explosions-rock-central-israel-in-suspected-terror-attack-no-casualties
ಇಸ್ರೇಲ್​ ಬಸ್​ ಅನಾಹುತ (ಐಎಎನ್​ಎಸ್​)
author img

By ETV Bharat Karnataka Team

Published : Feb 21, 2025, 10:31 AM IST

ಬ್ಯಾಟ್​ ಯಾಮ್: ಹಮಾಸ್​ ಜೊತೆ ಕದನ ವಿರಾಮ ಒಪ್ಪಂದ ನಡೆಸಿರುವ ಇಸ್ರೇಲ್​ನಲ್ಲಿ ಮತ್ತೊಂದು ವಿಧ್ವಂಸಕ ಕೃತ್ಯ ವರದಿಯಾಗಿದೆ. ರಸ್ತೆ ಬದಿ ನಿಂತಿದ್ದ ಮೂರು ಬಸ್​ಗಳು ಸರಣಿ ಸ್ಫೋಟಕ್ಕೆ ಒಳಗಾಗಿದ್ದು, ಇದೊಂದು ಉಗ್ರಗಾಮಿ ಕೃತ್ಯ ಎಂದು ಶಂಕಿಸಲಾಗಿದೆ. ಅದೃಷ್ಟವಶಾತ್​, ಯಾವುದೇ ಹಾನಿಯಾಗಿಲ್ಲ.

ಒಂದೂವರೆ ವರ್ಷಗಳ ಕಾಲ ನಡೆದ ಯುದ್ದದ ಬಳಿಕ ಕದನ ವಿರಾಮಕ್ಕೆ ಹಮಾಸ್​, ಇಸ್ರೇಲ್​ ಒಪ್ಪಿದ್ದು, ಇದರ ಭಾಗವಾಗಿ ಹಸ್ತಾಂತರ ಪ್ರಕ್ರಿಯೆ ಕೂಡ ಮುಂದುವರೆದಿದೆ. ನಿನ್ನೆಯಷ್ಟೇ ಮಗು ಸೇರಿದಂತೆ ನಾಲ್ವರ ಮೃತ ಶರೀರವನ್ನು ಹಮಾಸ್​ ಇಸ್ರೇಲ್​ಗೆ ಹಸ್ತಾಂತರಿಸಿದ್ದು, ಈ ದುಃಖದಲ್ಲಿದ್ದ ಇಸ್ರೇಲಿನಲ್ಲಿ ಈ ದುರ್ಘಟನೆ ನಡೆದಿದೆ.

ಸ್ಫೋಟಗೊಂಡ ಎರಡು ಬಸ್​ನಲ್ಲಿ ಸ್ಫೋಟಕಗಳು ಕಂಡು ಬಂದಿವೆ. ಆದರೆ, ಇವು ಸ್ಪೋಟಗೊಂಡಿಲ್ಲ. ಈ ವೇಳೆ ಐದು ಬಾಂಬ್​ಗಳು ಪತ್ತೆಯಾಗಿದ್ದು, ಅವೆಲ್ಲ ಒಂದೇ ರೀತಿಯಲ್ಲಿದ್ದು, ಇದಕ್ಕೆ ಟೈಮರ್​ ಅಳವಡಿಕೆ ಮಾಡಲಾಗಿದೆ. ಇವುಗಳನ್ನು ನಿಷ್ಕ್ರಿಯ ಮಾಡಲಾಗಿದೆ ಎಂದು ಪೊಲೀಸ್ ವಕ್ತಾರ ಅಸಿ ಅಹರೋನಿ ಚಾನೆಲ್ 13 ಟಿವಿಗೆ ತಿಳಿಸಿದ್ದಾರೆ.

ಟೆಲ್ ಅವೀವ್‌ನ ಹೊರವಲಯದ ಬ್ಯಾಟ್ ಯಾಮ್‌ನ ಪಾರ್ಕಿಂಗ್ ಸ್ಥಳದಲ್ಲಿ ಈ ಅನಾಹುತ ಸಂಭವಿಸಿದೆ. ಈ ವೇಳೆ ಸುಟ್ಟುಹೋದ ಮೆಟಲ್​ ಶೆಲ್​ಗಳು ಲಭ್ಯವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಅದೃಷ್ಟವಶಾತ್​ ಯಾವುದೇ ಅನಾಹುತವಾಗಿಲ್ಲ. ಬಸ್​ಗಳು ಸಂಚಾರ ಮುಗಿಸಿ ಇಲ್ಲಿ ನಿಂತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ನಗರದ ಮೇಯರ್ ಟ್ಜ್ವಿಕಾ ಬ್ರೋಟ್ ತಿಳಿಸಿದ್ದಾರೆ.

ಸ್ಫೋಟದ ಬೆನ್ನಲ್ಲೇ ಬಸ್​ ಕಂಪನಿ ತನ್ನ ಇತರ ಬಸ್​ಗಳ ತಪಾಸಣೆ ನಡೆಸಿ, ಸಂಚಾರ ಮುಂದುವರೆಸುವಂತೆ ತಿಳಿಸಿದೆ. ಘಟನೆ ಮಾಹಿತಿ ಪಡೆದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಚೇರಿ, ಮಿಲಿಟರಿ ಕಾರ್ಯದರ್ಶಿಗಳಿಂದ ಘಟನೆ ಕುರಿತು ಮಾಹಿತಿ ಪಡೆಯುತ್ತಿದ್ದು, ಈ ಕುರಿತು ಆಂತರಿಕ ಭದ್ರತಾ ಸಂಸ್ಥೆ ಶಿನ್​ ಬೆಟ್​ ತನಿಖೆಗೆ ಮುಂದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಓರ್ವನ ಕೃತ್ಯವೇ ಅಥವಾ ಅನೇಕರ ಸೇರಿ ಎಸಗಿರುವ ಕೃತ್ಯವೇ ಎಂಬುದನ್ನು ನಾವು ಪತ್ತೆ ಮಾಡಬೇಕಿದೆ. ಇಲ್ಲಿಗೆ ಬಳಕೆಯಾದ ಸ್ಪೋಟಕಗಳು ವೆಸ್ಟ್​ ಬ್ಯಾಂಕ್​ಗೆ ಬಳಕೆಯಾದ ಸ್ಪೋಟಕವಾಗಿದೆ ಎಂದು ಪೊಲೀಸ್ ವಕ್ತಾರ ಹೈಮ್ ಸರ್ಗ್ರೋಫ್ ತಿಳಿಸಿದ್ದಾರೆ. 2023 ಅಕ್ಟೋಬರ್​ 7ರಂದು ಹಮಾಸ್​ ಇಸ್ರೇಲ್ ಮೇಲೆ ಯುದ್ದ ಆರಂಭಿಸಿದಾಗಿನಿಂದ ಇಸ್ರೇಲ್​ ಮಿಲಿಟರಿ ವೆಸ್ಟ್​ ಬ್ಯಾಂಕ್​ ಮೇಲೆ ಪದೇ ಪದೇ ದಾಳಿ ನಡೆಸಿದೆ. (ಎಪಿ)

ಇದನ್ನೂ ಓದಿ: FBI ನಿರ್ದೇಶಕರಾಗಿ ಭಾರತೀಯ ಮೂಲದ ಕಾಶ ಪಟೇಲ್​ ಆಯ್ಕೆ: ಇದೇ ಮೊದಲು!

ಇದನ್ನೂ ಓದಿ: ಮಹಿಳೆ, ಮಕ್ಕಳು ಸೇರಿ ನಾಲ್ವರು ಇಸ್ರೇಲಿಗರ ಶವ ಹಸ್ತಾಂತರಿಸಿದ ಹಮಾಸ್​ ಉಗ್ರರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.