ETV Bharat / state

ಬೆಂಗಳೂರಲ್ಲಿ 2500 ಮರ ಕಡಿಯಲು ಹೈಕೋರ್ಟ್ ಅನುಮತಿ - HC PERMITS TREES CUT

ಕಮಾಂಡ್ ಆಸ್ಪತ್ರೆ ನಿರ್ಮಾಣಕ್ಕೆ 580 ಮತ್ತು ಉಪನಗರ ರೈಲು ಯೋಜನೆಗೆ 1988 ಮರಗಳನ್ನು ಕಡಿಯಲು ಹೈಕೋರ್ಟ್ ಶನಿವಾರ ಅನುಮತಿ ನೀಡಿದೆ.

ಹೈಕೋರ್ಟ್, High Court, Tree cut down, ಮರ ಕಡಿತ
ಹೈಕೋರ್ಟ್ (ETV Bharat)
author img

By ETV Bharat Karnataka Team

Published : Feb 16, 2025, 8:12 AM IST

ಬೆಂಗಳೂರು: ಭಾರತೀಯ ವಾಯುಪಡೆಯ ಕಮಾಂಡ್ ಆಸ್ಪತ್ರೆಗೆ ಸೇರಿದ ಸ್ಥಳದಲ್ಲಿ ಹೊಸದಾಗಿ ಬಹುಮಹಡಿ ಮಾದರಿ ಆಸ್ಪತ್ರೆಯ ನಿರ್ಮಾಣಕ್ಕಾಗಿ ಹಾಗೂ ಬೆಂಗಳೂರು ಉಪನಗರ ರೈಲು ಯೋಜನೆ(ಬಿಎಸ್‌ಆರ್‌ಪಿ)ಗಾಗಿ ಸುಮಾರು 2,500 ಮರಗಳ ಕಡಿಯುವುದಕ್ಕಾಗಿ ಹೈಕೋರ್ಟ್ ಶನಿವಾರ ಅನುಮತಿ ನೀಡಿತು.

ಕರ್ನಾಟಕ ಮರ ಕಡಿತಲೆ ನಿಷೇಧ ಕಾಯಿದೆಯಲ್ಲಿ ಇರುವ ಹಲವು ನಿಯಮಗಳನ್ನು ಸೂಕ್ತ ರೀತಿಯಲ್ಲಿ ಅನುಸರಿಸಲು ನಿರ್ದೇಶನ ನೀಡುವಂತೆ ಕೋರಿ ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಮತ್ತು ದತ್ತಾತ್ರೇಯ ಟಿ ದೇವರು ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ಪೀಠ, ಕಮಾಂಡ್ ಆಸ್ಪತ್ರೆಗಾಗಿ ಮರ ತಜ್ಞರ ಸಮಿತಿ(ಟಿಇಸಿ)ಯ ಶಿಫಾರಸಿನ ಮೇರೆಗೆ 530 ಮರಗಳು ಮತ್ತು (ಬಿಎಸ್‌ಆರ್‌ಪಿ)ಗಾಗಿ ಅಂಬೇಡ್ಕರ್ ನಗರದಿಂದ ಮುದ್ದನಹಳ್ಳಿಯವರೆಗಿನ ಮಾರ್ಗದಲ್ಲಿ 1988 ಮರಗಳ ಕಡಿಯಲು ಅನುಮತಿಸಿತು.

ಕಮಾಂಡ್ ಆಸ್ಪತ್ರೆಗಾಗಿ 736 ಮರಗಳನ್ನು ಕಡಿಯಲು ಅನುಮತಿ ನೀಡುವಂತೆ ರಕ್ಷಣಾ ಎಸ್ಟೇಟ್ ಅಧಿಕಾರಿ ಅನುಮತಿ ಕೋರಿದ್ದರು. ಈ ಸಂಬಂಧ ಪರಿಶೀಲನೆ ನಡೆಸಿದ್ದ ಟಿಇಸಿ 530 ಮರಗಳ ಕಡಿಯಲು ಅನುಮತಿ ನೀಡಿದೆ. ಎಂಟು ಮರಗಳನ್ನು ಸ್ಥಳಾಂತರಕ್ಕೆ ಶಿಫಾರಸು ಮಾಡಿದ್ದು 211 ಮರಗಳ ಕಡಿಯಲು ಅನುಮತಿ ನೀಡಲು ನಿರಾಕರಿಸಿದೆ. ಟಿಇಸಿ ನೀಡಿದ ವರದಿಯಂತೆ ನ್ಯಾಯಪೀಠ ಆದೇಶಿಸಿದೆ.

ಕಮಾಂಡ್ ಆಸ್ಪತ್ರೆಗೆ 530 ಮರಗಳನ್ನು ಕಡಿಯುವುದಕ್ಕೆ ಪರ್ಯಾಯವಾಗಿ ಪ್ರತಿ ಮರಕ್ಕೂ 10ರಂತೆ ಅಂದರೆ 5,300 ಗಿಡಗಳನ್ನು ನೆಡಬೇಕಾಗಿದೆ. ವಾಯುಪಡೆ ಜಾಗಗಳಾದ ಜಾಲಹಳ್ಳಿ ಮತ್ತು ಯಲಹಂಕದಲ್ಲಿ ಈಗಾಗಲೇ ಗಿಡಗಳನ್ನು ನೆಟ್ಟಿದೆ. ಹೀಗಾಗಿ ಕಮಾಂಡ್ ಆಸ್ಪತ್ರೆಯ ಆವರಣದಲ್ಲಿ ಮರ ಕಡಿಯುವುದಕ್ಕೆ ಪರಿಹಾರವಾಗಿ ಪರ್ಯಾಯ ಸ್ಥಳಗಳಲ್ಲಿ ಅರಣ್ಯೀಕರಣ ಮಾಡುವುದಕ್ಕೆ ಮುಂದಾಗಿರುವುದರಿಂದ ಆ ಸ್ಥಳದಲ್ಲಿ ಮರ ಕಡಿಯಲು ಅನುಮತಿ ನೀಡಬಾರದು ಎಂಬ ಅರ್ಜಿದಾರರ ಮನವಿಯನ್ನು ನ್ಯಾಯಪೀಠ ತಳ್ಳಿ ಹಾಕಿದೆ.

ಬೆಂಗಳೂರು ಉಪನಗರ ರೈಲು ಯೋಜನೆಗೆ ಸಂಬಂಧಿಸಿದಂತೆ ಅಂಬೇಡ್ಕರ್ ನಗರದಿಂದ ಮುದ್ದನಹಳ್ಳಿಯ ಮಾರ್ಗದಲ್ಲಿ 2,227 ಮರಗಳನ್ನು ಕಡಿಯುವುದಕ್ಕಾಗಿ ಕರ್ನಾಟಕ ರೈಲ್ವೆ ಮೂಲಸೌಲಭ್ಯ ಅಭಿವೃದ್ಧಿ ಪ್ರಾಧಿಕಾರ (ಕೆ-ರೈಡ್) ಕೋರಿತ್ತು. ಆದರೆ, 1988 ಮರಗಳನ್ನು ಕಡಿಯಲು ಹಾಗೂ 239 ಮರಗಳನ್ನು ಸ್ಥಳಾಂತರ ಮಾಡಲು ಸಮಿತಿ ಶಿಫಾರಸು ನೀಡಿದ್ದು, ಅನುಮತಿ ನೀಡಲಾಗಿದೆ. ಅಲ್ಲದೆ ಕೆ-ರೈಡ್ ಕಡೆಯಿಂದ 580 ಮರಗಳನ್ನು ಅನುಮತಿ ಇಲ್ಲದೆ ಕಟಾವು ಮಾಡಿರುವುದರಿಂದ ಪರಿಹಾರವಾಗಿ 5 ಸಾವಿರ ಗಿಡಗಳನ್ನು ನೆಡಬೇಕು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಇದನ್ನೂ ಓದಿ: ಡೆಂಗ್ಯೂ ಹರಡಲು ಕಾರಣರಾಗುವವರಿಗೆ ಭಾರಿ ದಂಡ ವಿಧಿಸುವ ನಿಯಮ ಜಾರಿಗೆ ಹೈಕೋರ್ಟ್ ಆದೇಶ

ಇದನ್ನೂ ಓದಿ: ಜನನ ಪ್ರಮಾಣ ಪತ್ರದಲ್ಲಿನ ಹೆಸರು ಬದಲಾವಣೆ ಕುರಿತು ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ನಿರ್ದೇಶನ

ಇದನ್ನೂ ಓದಿ: ಮೆಗಾ ಕೃಷಿ ಮಾರುಕಟ್ಟೆ ನಿರ್ಮಾಣಕ್ಕೆ 272 ಎಕರೆ ಸ್ವಾಧೀನ: ಸರ್ಕಾರದ ಕ್ರಮ ಎತ್ತಿಹಿಡಿದ ಹೈಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.