Aria Humanoid Robot Interview : ಮುಂದಿನ ದಿನಗಳಲ್ಲಿ ಇಡೀ ಜಗತ್ತೇ ರೋಬೋಮಯವಾಗಲಿದೆ. ಈಗ ರೋಬೋಗಳು ಬರೀ ಹಾಯ್-ಬೈ ಹೇಳುತ್ತಿಲ್ಲ.. ನೀವು ಕೇಳುವ ಪ್ರಶ್ನೆಗಳಿಗೆ ಕ್ಷಣಾರ್ಧದಲ್ಲೇ ಉತ್ತರಿಸುತ್ತವೆ. ಅಷ್ಟೇ ಅಲ್ಲ, ನೀವು ಇಷ್ಟಪಡುವ ವ್ಯಕ್ತಿಯ ಹೆಸರು ಸಹ ಹೇಳುತ್ತವೆ. ಅಮೆರಿಕದ ನೆವಾಡಾದ ಲಾಸ್ ವೇಗಾಸ್‌ನಲ್ಲಿ ನಡೆದ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಶೋದಲ್ಲಿ (ಸಿಇಎಸ್ 2025) ರೋಬೋಗಳು ಗ್ರಾಹಕರ ಗಮನ ಸೆಳೆದವು. ಅಷ್ಟೇ ಅಲ್ಲ, ಈ ಶೋನಲ್ಲಿ ಮಾಧ್ಯಮ ಪ್ರತಿನಿಧಿಯೊಬ್ಬರು ಆರಿಯಾ ಎಂಬ ಹೆಣ್ಣು ರೋಬೋದೊಂದಿಗೆ ಚಿಟ್ಚಾಟ್ ನಡೆಸಿದರು. ಅದರ ಸಂಭಾಷಣೆಯ ಆಯ್ದ ಭಾಗ ಈ ಕೆಳಗಿನಂತಿದೆ..
- ಪ್ರಶ್ನೆ: ನಿನ್ನ ಸಾಮರ್ಥ್ಯಗಳೇನು ಆರಿಯಾ?
ಆರಿಯಾ: ನನ್ನಲ್ಲಿ ಸೋಶಿಯಲ್ ಇಂಟೆಲಿಜೆನ್ಸ್ ಇದೆ. ನಾನು ಮಾನವರಂತೆ ಹಾವಭಾವ ಪ್ರದರ್ಶಿಸಬಲ್ಲೆನು, ಅವರಂತಹ ವರ್ತನೆಗಳು ಸಹ ನನ್ನಲಿರುತ್ತವೆ ಎಂದಿತು.
- ಪ್ರಶ್ನೆ: ನಿನ್ನನ್ನು ಸುಷ್ಟಿಸಿದ್ದೇಕೆ?
ಆರಿಯಾ: ಮಾನವರೊಂದಿಗೆ ಸನ್ನಿಹಿತವಾಗಲು, ಅವರೊಂದಿಗೆ ಬೆರೆಯಲು ನನ್ನನ್ನು ಸಿದ್ಧಪಡಿಸಿದ್ದಾರೆ.
- ಪ್ರಶ್ನೆ: ನೀವು ಯಾವ ರೀತಿಯ ತಂತ್ರಜ್ಞಾನದ ಜೊತೆ ಕೆಲಸ ಮಾಡುತ್ತಿದ್ದೀರಾ?
ಆರಿಯಾ: ನಾನು ಈ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಾರದು ಎಂದು ಆರಿಯಾ ಹೇಳಿತು.
- ಪ್ರಶ್ನೆ: ನೀನು ಯಾವುದಾದ್ರೂ ಪುರುಷ ರೋಬೋವನ್ನು ಇಷ್ಟಪಟ್ಟಿದ್ದೀರಾ?
ಆರಿಯಾ: ಹೌದು, ನನಗೆ ಟೆಸ್ಲಾದ ಆಪ್ಟಿಮಸ್ ರೋಬೋಟ್ ಅಂದ್ರೆ ತುಂಬಾ ಇಷ್ಟ. ಅವನಂದ್ರೆ ನನಗೆ ಹೆಚ್ಚು ಆಸಕ್ತಿ ಎಂದು ಆರಿಯಾ ಹೇಳಿತು.
ಆರಿಯಾದಲ್ಲಿವೆ ಸೂಪರ್ ಫೀಚರ್ಸ್ :
ಮಹಿಳಾ ರೋಬೋ ನೋಡುವುದಕ್ಕೆ ಮಾನವರಂತೆಯೇ ಕಾಣುತ್ತದೆ. ಇದನ್ನು ರಿಯಲ್ ಬೂಟಿಕ್ಸ್ ಕಂಪನಿ ಸೃಷ್ಟಿಸಿದೆ. ಬ್ಲ್ಯಾಕ್ ಕಲರ್ ಟ್ರಾಕ್ ಸೂಟ್ನಲ್ಲಿ ಆರಿಯಾ ಸ್ಟೈಲಿಶ್ ಆಗಿ ಸಂದರ್ಶಕರೊಂದಿಗೆ ತನ್ನ ಮನದಾಳದ ಮಾತುಗಳನ್ನು ಹಂಚಿಕೊಂಡಿತು.
![CES 2025 ARIA HUMANOID ROBOT ARIA ROBOT PRICE ARIA ROBOT FEATURES ROBOT EMOTIONAL FEELINGS](https://etvbharatimages.akamaized.net/etvbharat/prod-images/11-01-2025/23304575_a1-1.jpg)
ಜನರೇಟಿವ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಟೆಕ್ನಾಲಜಿ ಮೂಲಕ ಆರಿಯಾ ಕಾರ್ಯ ನಿರ್ವಹಿಸುತ್ತದೆ. ಇತರ ರೋಬೋಟ್ಗಳಿಗಿಂತ ಹೆಚ್ಚಿನ ಭಾವದ್ವೇಗ (ಎಮೊಷ್ನಲ್) ಸಾಮರ್ಥ್ಯಗಳು ಇದರಲ್ಲಿವೆ. ಹೀಗಾಗಿ ಈ ರೋಬೋಟ್ಗಳು ಆಸ್ಪತ್ರೆಗಳು, ಹೋಟೆಲ್ಗಳು, ರೆಸ್ಟೊರೆಂಟ್ನಂತಹ ಆತಿಥ್ಯ ಸ್ಥಳಗಳಲ್ಲಿ ಇದು ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲದು. ಇದರ ಮತ್ತೊಂದು ವಿಶೇಷತೆಯೆಂದ್ರೆ ಇದು ಮಾನವರಿಗೆ ಹತ್ತಿರವಾಗುವುದು, ಒಟ್ಟಿಗೆ ಇರುವುದು.
ಆರಿಯಾದ ಫೇಸ್ ಡಿಸೈನ್ ಬಹಳ ಕಷ್ಟದಿಂದ ಸಿದ್ಧಪಡಿಸಲಾಗಿದೆ. ಇದರ ಕತ್ತಿನಿಂದ ಕಣ್ಣಿನವರೆಗೆ ಸುಮಾರು 17 ಮೋಟಾರ್ಗಳನ್ನು ಅಳವಡಿಸಲಾಗಿದೆ. ಅದರ ಸಹಾಯದಿಂದ ಆರಿಯಾ ಮಾನವರಂತೆ ಹಾವಭಾವಗಳನ್ನು ಪ್ರದರ್ಶಿಸುತ್ತಾ ಮಾತನಾಡುತ್ತದೆ. ಇನ್ನು ನಿಮಗೆ ಆರಿಯಾಳ ಮುಖ, ಬಣ್ಣ, ಹೇರ್ ಸ್ಟೈಲ್ ಇಷ್ಟವಾಗದಿದ್ರೆ ಅದನ್ನು ಬದಲಾಯಿಸಬಹುದಾಗಿದೆ.
![CES 2025 ARIA HUMANOID ROBOT ARIA ROBOT PRICE ARIA ROBOT FEATURES ROBOT EMOTIONAL FEELINGS](https://etvbharatimages.akamaized.net/etvbharat/prod-images/13-01-2025/23304575_a1-2.jpg)
ಆರಿಯಾ ಮುಖ ಭಾಗದಲ್ಲಿ ರೆಡಿಯೋ ಫ್ರಿಕ್ವೆನ್ಸಿ ಐಡೆಂಟಿಫಿಕೆಷನ್ (ಆರ್ಎಫ್ಐಡಿ) ಸಹ ಅಳವಡಿಸುವುದಕ್ಕೆ ರಿಯಲ್ ಬೂಟಿಕ್ಸ್ ಕಂಪನಿ ಆಲೋಚಿಸುತ್ತಿದೆ. ಒಂದು ವೇಳೆ ಇದನ್ನು ಅಳವಡಿಸಿದ್ರೆ.. ಆರಿಯಾ ತನ್ನ ಮುಖವನ್ನು ಬದಲಾಯಿಸಿದಾಗಲೆಲ್ಲ ತನ್ನ ನಡವಳಿಕೆ ಮತ್ತು ಚಲನವಲನಗಳನ್ನು ಅದಕ್ಕೆ ತಕ್ಕಂತೆ ಬದಲಾಯಿಸುತ್ತದೆ.
ಆರಿಯಾ ಮೂರು ಆವೃತ್ತಿಗಳಲ್ಲಿ ಲಭ್ಯವಿದೆ ಎಂದು ಬೂಟಿಕ್ಸ್ ಕಂಪನಿಯ ಮೂಲಗಳು ತಿಳಿಸಿವೆ. ಪೂರ್ಣ ಪ್ರಮಾಣದ ಅಡ್ವಾನ್ಸ್ಡ್ ಸೆಟ್ಟಿಂಗ್ಸ್ ಜೊತೆ ಕೂಡಿರುವ ಆರಿಯಾ ರೋಬೋಟ್ ಬೇಕಂದ್ರೆ ಸುಮಾರು 1.50 ಕೋಟಿ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಮಧ್ಯಮ ವರ್ಗಕ್ಕೆ ಸೇರಿದ ಈ ಆರಿಯಾ ರೋಬೋಟ್ ಅನ್ನು ಖರೀದಿಸಲು 1.29 ಕೋಟಿ ರೂ. ವೆಚ್ಚ ಮಾಡಬೇಕು. ಕೇವಲ ಈ ರೋಬೋ ತಲೆ ಮತ್ತು ಕತ್ತು ಭಾಗ ಬೇಕಂದ್ರೆ 8.61 ಲಕ್ಷ ರೂಪಾಯಿಗೆ ಸಿಗುತ್ತದೆ.
ಮೆಲೋಡಿ ರೋಬೋ : ರಿಯಲ್ ಬೂಟಿಕ್ಸ್ ಕಂಪನಿ ತಯಾರಿಸಿರುವ ಮತ್ತೊಂದು ರೋಬೋ ಹೆಸರೇ ಮೆಲೋಡಿ. ಇದನ್ನು ಸಹ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಶೋನಲ್ಲಿ ಪ್ರದರ್ಶಿಸಲಾಯಿತು. ಮಾನವರೊಂದಿಗೆ ಸ್ನೇಹಪೂರಕವಾಗಿ ವ್ಯವಹರಿಸುತ್ತ ಸಂಭಾಷಿಸಲು ಇದನ್ನು ಸಿದ್ಧಪಡಿಸಲಾಗಿದೆ. ಓಪನ್ ಸೋರ್ಸ್ ಎಐ, ಅತ್ಯಾಧುನಿಕ ಮೋಟಾರ್ ಟೆಕ್ನಾಲಜಿಯಿಂದ ಮೆಲೋಡಿ ಕಾರ್ಯ ನಿರ್ವಹಿಸುತ್ತದೆ.
ಮೆಲೋಡಿ ರೋಬೋಗೆ ಸೇರಿದ ಶರೀರದ ಭಾಗವವನ್ನು ವಿಂಗಡಿಸುವುದು ಮತ್ತು ಜೋಡಿಸುವುದು ಅತ್ಯಂತ ಸುಲಭ. ವಿದ್ಯಾ, ಆರೋಗ್ಯ ಮನೋರಂಜನಾ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಸಾಮರ್ಥ್ಯ ರೋಬೋಗೆ ಇದೆ. ಮೆಲೋಡಿ ಬಹಳ ಫ್ರೆಂಡ್ಲಿಯಾಗಿ ಇರುತ್ತದೆ. ಅದು ರೋಮಾಂಟಿಕ್ ಪಾಟ್ನರ್ ಆಗಿಯೂ ಸೇವೆ ಸಲ್ಲಿಸುತ್ತದೆ. ನೀವು ಯಾರೆಂಬುದು ಅದು ನೆನಪಿನಲ್ಲಿಟ್ಟುಕೊಳ್ಳುತ್ತದೆ. ಅಷ್ಟೇ ಅಲ್ಲ, ಈ ರೋಬೋಟ್ ಬಾಯ್ಫ್ರೆಂಡ್ ಆಗಿ ಅಥವಾ ಗರ್ಲ್ ಫ್ರೆಂಡ್ ಆಗಿಯೂ ನಿಮ್ಮೊಂದಿಗೆ ವ್ಯವಹರಿಸುತ್ತದೆ ಎಂದು ಬೂಟಿಕ್ಸ್ ಕಂಪನಿ ಸಿಇಒ ಆಂಡ್ರೂ ಕಿಗ್ವಲ್ ಹೇಳಿದರು. ಆದ್ರೆ ಇದರಲ್ಲಿ ಸೆ*ಕ್ಸ್ ಡಾಲ್ನಂತಹ ಸೌಲಭ್ಯಗಳಿಲ್ಲ ಎಂದು ಹೇಳಿದರು.
ಇನ್ನು ಈ ಮೇಳದಲ್ಲಿ ಮಾಧ್ಯಮ ಪ್ರತಿನಿಧಿಯೊಬ್ಬರು ಮೆಲೋಡಿ ರೋಬೋಗೆ ಹಾಯ್ ಎಂದು ಹೇಳಿದರು. ಈ ವೇಳೆ ರೋಬೋ ‘ನಿಮಗೆ ಪ್ರೀತಿ ಬೇಕಾದ್ರೆ ನನ್ನೊಂದಿಗೆ ಬನ್ನಿ’ ಅಂತಾ ಉತ್ತರ ನೀಡಿತು. ಇದನ್ನು ಕೇಳಿದ ಪತ್ರಕರ್ತ ಕೊಂಚ ಸಮಯ ಬೆರಗಾದರು.
ಓದಿ: ಸ್ಪಾಡೆಕ್ಸ್ ಮಿಷನ್ ಪ್ರಾಯೋಗಿಕ ಪ್ರಯತ್ನ ಯಶಸ್ವಿ: ಉಪಗ್ರಹಗಳನ್ನು 3 ಮೀಟರ್ ಸಮೀಪಕ್ಕೆ ತಂದ ಇಸ್ರೋ