ETV Bharat / state

ಶೂರತ್ವದಿಂದ ದೈವತ್ವಕ್ಕೇರಿದ ಕ್ರಾಂತಿವೀರ: ಹುಟ್ಟೂರು ಸಂಗೊಳ್ಳಿಯಲ್ಲಿದೆ ವೀರಗುಡಿ; ನಿತ್ಯವೂ ರಾಯಣ್ಣನಿಗೆ ವಿಶೇಷ ಪೂಜೆ - SANGOLLI RAYANNA TEMPLE

ಸಂಗೊಳ್ಳಿ ರಾಯಣ್ಣನಿಗೋಸ್ಕರ ಅವರ ಹುಟ್ಟೂರಿನಲ್ಲಿ ಒಂದು ಗುಡಿಯನ್ನೇ ನಿರ್ಮಿಸಲಾಗಿದೆ. ಇಲ್ಲಿ ಪ್ರತಿದಿನವೂ ಪೂಜೆ-ಪುನಸ್ಕಾರಗಳು ನಡೆಯುತ್ತಿವೆ. ಈ ಕುರಿತು 'ಈಟಿವಿ ಭಾರತ್' ಪ್ರತಿನಿಧಿ ಸಿದ್ದನಗೌಡ ಪಾಟೀಲ್ ಅವರ ವಿಶೇಷ ವರದಿ.

special-worship-to-rayanna-in-sangolli-at-belagavi
ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಪೂಜೆ (ETV Bharat)
author img

By ETV Bharat Karnataka Team

Published : Jan 13, 2025, 7:40 AM IST

Updated : Jan 13, 2025, 10:54 AM IST

ಬೆಳಗಾವಿ: ಸ್ವಾಮಿನಿಷ್ಠೆ, ಶೌರ್ಯ, ಪರಾಕ್ರಮ, ಕ್ರಾಂತಿಗೆ ಮತ್ತೊಂದು ಹೆಸರೇ ಸಂಗೊಳ್ಳಿ ರಾಯಣ್ಣ. ಬ್ರಿಟಿಷರ ನಿದ್ದೆಗೆಡಿಸಿದ್ದ ಈ ಕ್ರಾಂತಿವೀರನ ಸಾಹಸಗಾಥೆ ಬಲುರೋಚಕ. ಶೂರ-ಧೀರನಾಗಿದ್ದ ರಾಯಣ್ಣ ಈಗ ದೇವರ ಸ್ವರೂಪ‌ ಪಡೆದಿದ್ದಾರೆ. ನಿತ್ಯವೂ ಇಲ್ಲಿ ಪೂಜೆ ನಡೆಯುತ್ತದೆ.

ಅನೇಕ ವೀರಾಧಿವೀರರ ಸ್ಮರಣೆಗೋಸ್ಕರ ವೀರಗಲ್ಲು ಸ್ಥಾಪಿಸಿದ್ದನ್ನು ನೋಡಬಹುದು. ಆದರೆ, ಸೂರ್ಯ ಮುಳುಗದ ಸಾಮ್ರಾಜ್ಯ ಎಂದೇ ಸೊಕ್ಕಿನಿಂದ ಮೆರೆಯುತ್ತಿದ್ದ ಬ್ರಿಟಿಷರು ಕನಸಿನಲ್ಲೂ ಕನವರಿಸುವಂತೆ ಮಾಡಿದ್ದ ದಿಟ್ಟ ಸಂಗೊಳ್ಳಿ ರಾಯಣ್ಣನಿಗೋಸ್ಕರ ಅವರ ಹುಟ್ಟೂರಿನಲ್ಲಿ ಒಂದು ಗುಡಿಯನ್ನೇ ನಿರ್ಮಿಸಲಾಗಿದೆ. ಅದಕ್ಕೆ ಜನ ರಾಯಣ್ಣನ ಗುಡಿ, ವೀರಗುಡಿ ಅಂತಾ ಕರೆಯುತ್ತಾರೆ. ಪ್ರತಿದಿನವೂ ಇಲ್ಲಿ ಪೂಜೆ -ಪುನಸ್ಕಾರಗಳು ನೆರವೇರುತ್ತಿವೆ. ಇಲ್ಲಿ ಸಾವಿರಾರು ಭಕ್ತರು ರಾಯಣ್ಣನ ದರ್ಶನ ಪಡೆಯುತ್ತಿರುವುದು ವಿಶೇಷ.

ಇತಿಹಾಸಕಾರರಾದ ಬಸವರಾಜ ಕಮತ ಅವರು ಮಾತನಾಡಿದರು (ETV Bharat)

ಈ ಬಗ್ಗೆ ಈಟಿವಿ ಭಾರತ್ ಜೊತೆಗೆ ಇತಿಹಾಸಕಾರ ಬಸವರಾಜ ಕಮತ ಅವರು ಮಾತನಾಡಿ,"ಗಲ್ಲಿಗೇರಿದ ಬಳಿಕ‌ ರಾಯಣ್ಣನ‌ ಉಸಿರು ಸದಾಕಾಲ ಜೀವಂತ ಇಡುವ ಉದ್ದೇಶದಿಂದ ಅವನ‌ ಜೀವದ ಗೆಳೆಯ ಬಿಚ್ಚುಗತ್ತಿ ಚನ್ನಬಸಪ್ಪ ಸ್ಮರಣೀಯ ಕಾರ್ಯ ಮಾಡಿದರು. ಗಲ್ಲಿಗೇರಿದ ಸ್ಥಳ ನಂದಗಡದಲ್ಲಿ ರಾಯಣ್ಣನ ಹೆಸರಲ್ಲಿ ಒಂದು‌ ಆಲದ ಮರ ನೆಟ್ಟಿದ್ದರು. ಅದು ಈಗಲೂ ರಾಯಣ್ಣನ ಇತಿಹಾಸ ಸಾರುತ್ತಿದೆ. ಅದೇ ರೀತಿ ಈಗ ಮಲಪ್ರಭಾ ನದಿಯಲ್ಲಿ ಮುಳುಗಡೆಯಾಗಿರುವ ಸಂಗೊಳ್ಳಿಯಲ್ಲಿ ರಾಯಣ್ಣ ಕುಳಿತುಕೊಳ್ಳುತ್ತಿದ್ದ ಕಟ್ಟೆಗೆ ಅವರ ಹೆಸರನಿಟ್ಟು, ಗರಡಿ ಮನೆಯಲ್ಲಿ ರಾಯಣ್ಣ ಬಳಸುತ್ತಿದ್ದ ಗದೆಗಳು, ಶಕ್ತಿಗಲ್ಲಿಗೆ ಪೂಜೆ ಸಲ್ಲಿಸಿ, ಪುಣ್ಯತಿಥಿ ನೆರವೇರಿಸಿದ್ದರು" ಎಂದು ತಿಳಿಸಿದರು.

''ಪ್ರತಿನಿತ್ಯವೂ ರಾಯಣ್ಣನಿಗೆ ಪೂಜೆ ಸಲ್ಲಬೇಕು ಎಂದು ಗ್ರಾಮಸ್ಥರಲ್ಲಿ ಬಿಚ್ಚುಗತ್ತಿ ಚನ್ನಬಸಪ್ಪ ಮನದಟ್ಟು ಮಾಡಿದ್ದರು. ಇದರಿಂದ ಪ್ರೇರಣೆ ಪಡೆದ ಗ್ರಾಮದ ಡೊಳ್ಳಿನ ಮನೆತನದವರು ಮತ್ತು ಗ್ರಾಮಸ್ಥರು ಕಲ್ಲಿನ ಮೇಲೆ ರಾಯಣ್ಣನ ಮೂರ್ತಿ‌ ಕೆತ್ತಿಸಿ, ವೀರಗುಡಿ ನಿರ್ಮಿಸುತ್ತಾರೆ. ಜೊತೆಗೆ ಎರಡೂ‌ ಗದೆಗಳನ್ನು ನಿಲ್ಲಿಸಿ ಪೂಜಿಸಲು ಆರಂಭಿಸುತ್ತಾರೆ.‌ ಓರ್ವ ವೀರನ ನೆನಪಿಗೋಸ್ಕರ ವೀರಗಲ್ಲು ನೆಡುವುದು, ಶಾಸನ ಬರೆಸುವುದು ಸಾಮಾನ್ಯ. ಆದರೆ, ಓರ್ವ ಸ್ವಾತಂತ್ರ್ಯ ಹೋರಾಟಗಾರನ ಹೆಸರಲ್ಲಿ ವೀರಗುಡಿ ನಿರ್ಮಿಸಿದ್ದು ಭಾರತದ ಚರಿತ್ರೆಯಲ್ಲೆ ಅಪರೂಪ'' ಎಂದು ಹೇಳಿದರು.

Statue of Sangolli Rayanna
ಸಂಗೊಳ್ಳಿ ರಾಯಣ್ಣನ ಪ್ರತಿಮೆ (ETV Bharat)

ಅರ್ಚಕರಾದ ಬಸಪ್ಪ ರಾಯಪ್ಪ ಡೊಳ್ಳಿನ ಮಾತನಾಡಿ, "ನಮ್ಮ ಪೂರ್ವಜರ ಕಾಲದಿಂದಲೂ ನಿತ್ಯವೂ ರಾಯಣ್ಣನಿಗೆ ಪೂಜೆ ಸಲ್ಲಿಸುತ್ತಿದ್ದೇವೆ. ಮೊದಲು ಹಳೆ ಊರಲ್ಲಿ ಗುಡಿ ಇತ್ತು. ಬಳಿಕ ಹೊಸ ಊರಲ್ಲಿ ಕಟ್ಟಿದ್ದೆವು. ಈಗ ಪ್ರಾಧಿಕಾರದಿಂದ ಹೊಸದಾಗಿ ಗುಡಿ ನಿರ್ಮಿಸಲಾಗಿದೆ. ಪ್ರತಿ ವರ್ಷ ದವದ ಹುಣ್ಣಿಮೆ ದಿನ ಜಾತ್ರೆ ಆಗುತ್ತದೆ. ಪ್ರತಿ ಅಮಾವಾಸ್ಯೆ, ಹುಣ್ಣಿಮೆಯಲ್ಲಿ ವಿಶೇಷ ಪೂಜೆ, ಅಭಿಷೇಕ ಮಾಡುತ್ತೇವೆ.‌ ಆದರೆ, ರಾಯಣ್ಣನ ಸಮಾಧಿ ಹುಟ್ಟೂರು ಸಂಗೊಳ್ಳಿಯಲ್ಲಿ ಆಗದೇ ನಂದಗಡದಲ್ಲಿ ಆಗಿದ್ದಕ್ಕೆ ನಮಗೆಲ್ಲಾ ನೋವಿದೆ" ಎಂದು ತಿಳಿಸಿದರು.

ಸಂಗೊಳ್ಳಿ ರಾಯಣ್ಣ ಜನಿಸಿದ್ದು 1796 ಆಗಸ್ಟ್ 15, ಗಲ್ಲಿಗೇರಿದ್ದು 1831 ಜನವರಿ‌ 26. ಈ ಎರಡೂ ದಿನಾಂಕಗಳು ಭಾರತ ದೇಶದ ಪಾಲಿಗೆ ಪ್ರಮುಖ ಸ್ಥಾನ ಪಡೆದಿವೆ. ಆಗಸ್ಟ್ 15 ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೆ, ಜನವರಿ 26 ನಮ್ಮ ದೇಶ ಗಣರಾಜ್ಯವಾದ ದಿನ ಆಗಿರುವುದು ಕಾಕತಾಳೀಯ. ವೀರರಾಣಿ ಚನ್ನಮ್ಮಾಜಿ ಬಲಗೈ ಬಂಟನಾಗಿದ್ದ ರಾಯಣ್ಣ ಆಂಗ್ಲರ ವಿರುದ್ಧ ತೊಡೆತಟ್ಟಿದ್ದರು. ಆದರೆ, ನಮ್ಮವರ ಕುತಂತ್ರದಿಂದ ಬ್ರಿಟಿಷರಿಗೆ ಸೆರೆಸಿಕ್ಕ ರಾಯಣ್ಣ ಗಲ್ಲಿಗೇರಿದ್ದನ್ನು ಯಾರೂ ಮರೆತಿಲ್ಲ.

special-worship-to-rayanna-in-sangolli-at-belagavi
ಸಂಗೊಳ್ಳಿ ರಾಯಣ್ಣನ ದೇವಸ್ಥಾನದಲ್ಲಿ ಜನರು (ETV Bharat)

ಆ ಕ್ರಾಂತಿವೀರನ ಸಾಹಸಗಾಥೆ ಇಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಸರ್ಕಾರ ಜ.12 ಮತ್ತು 13ರಂದು ಸಂಗೊಳ್ಳಿ ರಾಯಣ್ಣ ಉತ್ಸವ ಆಯೋಜಿಸುತ್ತಿದೆ. ಇನ್ನು ಉತ್ಸವ ಹಿನ್ನೆಲೆಯಲ್ಲಿ ರಾಯಣ್ಣನಿಗೆ ಉತ್ತತ್ತಿ ಮಾಲೆ ಹಾಕಿ, ವಿಶೇಷ ಪೂಜೆ ಸಲ್ಲಿಸಲಾಗಿದೆ. ಬಹಳಷ್ಟು ಸಂಖ್ಯೆಯಲ್ಲಿ ಜನರು ಆಗಮಿಸಿ ರಾಯಣ್ಣನ ದರ್ಶನ ಪಡೆಯುತ್ತಿದ್ದಾರೆ. ವೀರಗುಡಿ ಆವರಣದಲ್ಲಿ ಸ್ಮಾರಕ ಭವನ, ರಾಯಣ್ಣ ಪ್ರತಿಮೆ ಮತ್ತು ಉದ್ಯಾನವನ್ನು ಕಾಣಬಹುದಾಗಿದೆ.

special-worship-to-rayanna
ಸಂಗೊಳ್ಳಿ ರಾಯಣ್ಣನ ಪ್ರತಿಮೆ (ETV Bharat)

"ತಾಯಿ ಮತ್ತು ತಾಯ್ನಾಡು ಸ್ವರ್ಗಕ್ಕೆ ಸಮಾನ. ತಾಯಿ-ತಾಯ್ನಾಡಿಗಾಗಿ ಬಲಿದಾನಗೈದ ವ್ಯಕ್ತಿ ದೇವರಿಗೆ ಸಮಾನ. ಹಾಗಾಗಿ, ರಾಯಣ್ಣನನ್ನು ಮಾನವತ್ವ, ಶೂರತ್ವದಿಂದ ದೈವತ್ವಕ್ಕೆ ಏರಿಸಿ ನಿತ್ಯವೂ ಪೂಜಿಸುತ್ತಿದ್ದೇವೆ" ಎಂದು ಇತಿಹಾಸಕಾರ ಬಸವರಾಜ ಕಮತ ಹೇಳಿದರು.

ಇದನ್ನೂ ಓದಿ: ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ಅದ್ಧೂರಿ ಚಾಲನೆ: ಮೆರವಣಿಗೆಗೆ ಮೆರುಗು ನೀಡಿದ ಕಲಾತಂಡಗಳು - SANGOLLI RAYANNA UTSAV

Last Updated : Jan 13, 2025, 10:54 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.