ಮಧ್ಯರಾತ್ರಿ ಅಂಗಡಿಗೆ ನುಗ್ಗಿ ಲಕ್ಷಾಂತರ ಮೌಲ್ಯದ 54 ಮೊಬೈಲ್ ದೋಚಿದ ಕಳ್ಳರು- ಸಿಸಿಟಿವಿ ವಿಡಿಯೋ - MOBILE THEFT CASE
🎬 Watch Now: Feature Video
Published : Dec 16, 2024, 4:07 PM IST
ಬೆಂಗಳೂರು: ಶಿವಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಮೊಬೈಲ್ ಅಂಗಡಿಗೆ ನುಗ್ಗಿದ ಚೋರರು, 2 ಲಕ್ಷ ನಗದು ಹಾಗೂ 3 ಲಕ್ಷ ರೂ ಮೌಲ್ಯದ ವಿವಿಧ ಹೆಸರಾಂತ ಕಂಪನಿಗಳ 54 ಮೊಬೈಲ್ ಫೋನ್‌ಗಳನ್ನು ದೋಚಿದ್ದಾರೆ.
ಎಂ.ಕೆ.ಸ್ಟ್ರೀಟ್ನಲ್ಲಿರುವ ವಿಶ್ವಾಸ್ ಕಮ್ಯೂನಿಕೇಷನ್ ಹೆಸರಿನ ಅಂಗಡಿಯಲ್ಲಿ ಡಿಸೆಂಬರ್ 11ರ ಮಧ್ಯರಾತ್ರಿ ಕಳ್ಳತನ ನಡೆದಿದೆ. ಇಬ್ಬರು ಕಳ್ಳರ ಕೃತ್ಯ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅಂಗಡಿ ಮಾಲೀಕ ಅಬ್ದುಲ್ ಮನಾಫ್ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಶಿವಾಜಿನಗರ ಪೊಲೀಸರು ತಿಳಿಸಿದ್ದಾರೆ.
ಹಲವು ವರ್ಷಗಳಿಂದ ಮೊಬೈಲ್ ಮಾರಾಟ ಮಾಡುತ್ತಿದ್ದ ಮಳಿಗೆಗೆ ಕಳ್ಳರು ಶೆಟರ್ ಮುರಿದು ನುಗ್ಗಿದ್ದಾರೆ. ಮುಖಚಹರೆ ತಿಳಿಯದಂತೆ ತಲೆಗೆ ಟೋಪಿ, ಮುಖಕ್ಕೆ ಮಾಸ್ಕ್ ಹಾಗೂ ಕೈಗಳಿಗೆ ಗ್ಲೌಸ್ ಧರಿಸಿದ್ದರು. ಮೊಬೈಲ್ ಟಾರ್ಚ್ ಬಳಸಿ ಕಳ್ಳತನ ಮಾಡಿದ್ದಾರೆ. ಬ್ಯಾಗಿನಲ್ಲಿ ಮೊಬೈಲ್ಗಳನ್ನು ಹೊತ್ದೊಯ್ದಿರುವುದನ್ನು ಸಿಸಿಟಿವಿ ದೃಶ್ಯದಲ್ಲಿ ನೋಡಬಹುದು.
ಇದನ್ನೂ ಓದಿ : ಗಾಂಜಾ ಸೇವನೆಗೆ ಹಣ ಹೊಂದಿಸಲು ಮೊಬೈಲ್ ಕಳ್ಳತನ; ಖದೀಮ ಅರೆಸ್ಟ್ - Mobile Phone Thief Arrested - MOBILE PHONE THIEF ARRESTED