ನವದೆಹಲಿ: ಭಾರತವು ಪ್ರಸಕ್ತ ಮತ್ತು ಮುಂದಿನ ಹಣಕಾಸು ವರ್ಷದಲ್ಲಿ ಅಂದರೆ 24-25 ಹಾಗೂ 25-26ನೇ ಆರ್ಥಿಕ ವರ್ಷದಲ್ಲಿ ಶೇಕಡಾ 6.5 ರಷ್ಟು ನೈಜ ಜಿಡಿಪಿ ಬೆಳವಣಿಗೆ ಸಾಧಿಸುವ ನಿರೀಕ್ಷೆ ಇದೆ ಎಂದು ವರದಿಯೊಂದು ಹೇಳಿದೆ. ಇದು ಚೇತರಿಸಿಕೊಳ್ಳುವ ಆರ್ಥಿಕತೆಯ ನಡುವೆ ನಿರೀಕ್ಷೆಗೆ ಅನುಗುಣವಾಗಿ ಬೆಳವಣಿಗೆ ಕಾಣುತ್ತಿದೆ ಎಂದು ಬುಧವಾರ ಬಿಡುಗಡೆಯಾದ ವರದಿಯಲ್ಲಿ ಹೇಳಲಾಗಿದೆ.
ಇತ್ತೀಚಿನ 'EY ಎಕಾನಮಿ ವಾಚ್ ಡಿಸೆಂಬರ್ 2024' 2025ನೇ ಆರ್ಥಿಕ ವರ್ಷದ ಮೊದಲ ಎರಡು ತ್ರೈಮಾಸಿಕಗಳ ನೈಜ GDP ಬೆಳವಣಿಗೆಯನ್ನು ಕ್ರಮವಾಗಿ ಶೇ 6.7ರಷ್ಟು ಮತ್ತು ಶೇ 5.4ರಷ್ಟು ಇದೆ ಎಂದು ಅಂದಾಜಿಸಿದೆ. ಮೂರನೇ ತ್ರೈಮಾಸಿಕ ಹಾಗೂ ನಾಲ್ಕನೇ ತ್ರೈಮಾಸಿಕ 2025ಕ್ಕಾಗಿ RBI ಪರಿಷ್ಕೃತ ಬೆಳವಣಿಗೆಯ ಅಂದಾಜಿನೊಂದಿಗೆ ಶೇ 6.8 ಮತ್ತು ಶೇ 7.2 ಎಂದು ಅಂದಾಜು ಮಾಡಿದ್ದು, 2025ನೇ ಸಾಲಿನ ನೈಜ GDP ಬೆಳವಣಿಗೆಯನ್ನು ಶೇ 6.6 ಎಂದು ಹೇಳಿದೆ.
ಆದಾಗ್ಯೂ ಭಾರತದ ಸರ್ಕಾರದ ಹೂಡಿಕೆ ವೆಚ್ಚದಲ್ಲಿನ ತಿರುವು ಕಡಿಮೆಯಾಗಿದ್ದರೆ, ಮೂರನೇ ತ್ರೈಮಾಸಿಕದ ಬೆಳವಣಿಗೆಯು 6.5 ಶೇಕಡಾ ಅಥವಾ ಅದಕ್ಕಿಂತ ಕಡಿಮೆ ಇರಬಹುದು ಎಂದು ವರದಿ ಉಲ್ಲೇಖಿಸಿದೆ. ಹಿಂದಿನ ತ್ರೈಮಾಸಿಕದಲ್ಲಿ ಶೇಕಡಾ 6.7 ರಷ್ಟಿದ್ದ ನೈಜ GDP ಬೆಳವಣಿಗೆಯು ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ (Q2 FY25) ಶೇಕಡಾ 5.4 ಕ್ಕೆ ಇಳಿಕೆ ಕಂಡಿದೆ. ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಲಭ್ಯವಿರುವ ಹೆಚ್ಚಿನ ಆವರ್ತನ ಡೇಟಾವು ಭಾರತೀಯ ಆರ್ಥಿಕತೆಯ ಬೆಳವಣಿಗೆಯ ಆ ವೇಗದ ಬಗ್ಗೆ ಮಿಶ್ರ ಚಿತ್ರಣವನ್ನು ನೀಡಿದೆ.
ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ ಬಿಡುಗಡೆ ಮಾಡಿದ ಅಂಕಿ- ಅಂಶಗಳ ಪ್ರಕಾರ, ಮೋಟಾರು ವಾಹನಗಳ ಚಿಲ್ಲರೆ ಮಾರಾಟವು ನವೆಂಬರ್‌ನಲ್ಲಿ 11.2 ಶೇಕಡಾ ಎರಡಂಕಿಯ ಬೆಳವಣಿಗೆ ತೋರಿಸಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ದ್ವಿಚಕ್ರ ವಾಹನಗಳು ಮತ್ತು ಟ್ರಾಕ್ಟರುಗಳ ಚಿಲ್ಲರೆ ಮಾರಾಟವು ನವೆಂಬರ್ 2024 ರಲ್ಲಿ ಕ್ರಮವಾಗಿ 15.8 ಶೇಕಡಾ ಮತ್ತು 29.9 ಶೇಕಡಾ ದೃಢವಾದ ಬೆಳವಣಿಗೆಯನ್ನು ತೋರಿಸಿದೆ ಎಂದು EY ವರದಿ ಹೇಳಿದೆ.
CPI ಹಣದುಬ್ಬರ: CPI ಹಣದುಬ್ಬರವು ನವೆಂಬರ್‌ನಲ್ಲಿ 5.5 ಶೇಕಡಾಕ್ಕೆ ಕಡಿಮೆಯಾಗಿದೆ, ಅಕ್ಟೋಬರ್‌ನಲ್ಲಿ 6.2 ಶೇಕಡಾದಿಂದ ತರಕಾರಿ ಬೆಲೆಗಳಲ್ಲಿ ಇಳಿಕೆ ಕಂಡು ಬಂದಿದೆ. ಆದರೆ ಕೋರ್ CPI ಹಣದುಬ್ಬರವು ಸತತ ಎರಡನೇ ತಿಂಗಳಿಗೆ 3.7 ಶೇಕಡಾದಲ್ಲಿ ಸ್ಥಿರವಾಗಿದೆ. ಡಬ್ಲ್ಯುಪಿಐ ಹಣದುಬ್ಬರವು ಅಕ್ಟೋಬರ್‌ನಲ್ಲಿ ಶೇಕಡಾ 2.4 ರಿಂದ ನವೆಂಬರ್‌ನಲ್ಲಿ ಶೇಕಡಾ 1.9 ಕ್ಕೆ ಬಂದು ನಿಂತಿದೆ.
EY ಇಂಡಿಯಾದ ಮುಖ್ಯ ನೀತಿ ಸಲಹೆಗಾರರಾದ DK ಶ್ರೀವಾಸ್ತವ ಅವರ ಪ್ರಕಾರ, ಮಧ್ಯಮಾವಧಿಯಲ್ಲಿ ಭಾರತದ ನೈಜ GDP ಬೆಳವಣಿಗೆಯ ನಿರೀಕ್ಷೆಗಳನ್ನು ಪ್ರತಿ ವರ್ಷಕ್ಕೆ 6.5 ಪ್ರತಿಶತದಲ್ಲಿ ಇರಿಸಬಹುದು. ಪ್ರಸ್ತುತ ಹಣಕಾಸು ವರ್ಷದ ಉಳಿದ ಭಾಗದಲ್ಲಿ ಸರ್ಕಾರವು ತನ್ನ ಬಂಡವಾಳ ವೆಚ್ಚದ ಬೆಳವಣಿಗೆಯನ್ನು ವೇಗಗೊಳಿಸಿದರೆ ಆರ್ಥಿಕ ಚೇತರಿಕೆಗೆ ವೇಗ ಸಿಗಬಹುದು ಎಂದಿದ್ದಾರೆ.
ಇದನ್ನು ಓದಿ: ಸೆಕೆಂಡ್ ಹ್ಯಾಂಡ್ ಎಲೆಕ್ಟ್ರಿಕ್ ವಾಹನಗಳ ಮೇಲಿನ ಜಿಎಸ್‌ಟಿ ಹೆಚ್ಚಳ, ಎಷ್ಟು ಗೊತ್ತಾ?
ಬ್ಯೂಟಿಫುಲ್ ಕೋಳಿಗಳ ಸಾಕಾಣಿಕೆ ಗೊತ್ತೇ? ಇವುಗಳ ಬೆಲೆ ಕೇಳಿದರೆ ದಂಗಾಗುವಿರಿ!