Watch.. ಹುಲಿರಾಯ ಬಂದ ದಾರಿ ಬಿಡಿ: ಸಫಾರಿ ವಾಹನದ ಮುಂದೆಯೇ ಹುಲಿ ಗಾಂಭೀರ್ಯದ ನಡಿಗೆ - TIGER WALK IN FRONT SAFARI VEHICLE
Published : Nov 22, 2024, 8:00 PM IST
ಚಾಮರಾಜನಗರ: ಹುಲಿಯೊಂದು ಸಫಾರಿಗರಿಗೆ ತೀರ ಸಮೀಪದಲ್ಲಿ ದರ್ಶನ ಕೊಟ್ಟು ರೋಮಾಂಚನಗೊಳಿಸಿರುವ ಘಟನೆ ಭಾರತದ ಜನಪ್ರಿಯ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾಗಿರುವ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಇತ್ತೀಚೆಗೆ ನಡೆದಿದೆ. ಬಂಡೀಪುರದ ಸಫಾರಿಯಲ್ಲಿ ಸಫಾರಿ ವಾಹನದ ಮುಂದೆಯೇ ಹುಲಿಯೊಂದು ಗಾಂಭೀರ್ಯದಿಂದ ಹೆಜ್ಜೆ ಹಾಕಿದೆ. ಜೊತೆಗೆ, ಯಾವುದೇ ಅಂಜಿಕೆ, ಅಳುಕಿಲ್ಲದೇ ತೀರಾ ಸಮೀಪವೇ ಕುಳಿತು ದರ್ಶನ ಕೊಡುವ ಮೂಲಕ ಪ್ರವಾಸಿಗರಿಗೆ ರಸದೌತಣ ನೀಡಿದೆ.
ಇನ್ನು, ಸಫಾರಿಗರು ಹುಲಿ ದರ್ಶನದ ವೇಳೆ ಸಾಕಷ್ಟು ಫೋಟೋಗಳನ್ನು ಸೆರೆ ಹಿಡಿದಿದ್ದು ಹುಲಿಯೂ ಕೂಡ ಒಳ್ಳೆಯ ಫೋಸ್ ಕೊಟ್ಟಿದೆ. ಹುಲಿಯು ಸಂಕೋಚದ ಪ್ರಾಣಿಯಾಗಿದ್ದು, ಮನುಷ್ಯರನ್ನು ಕಂಡರೆ ಮರೆಗೆ ಸರಿಯುತ್ತದೆ. ಇದರ ಜೊತೆಗೆ, ಕಾಡಲ್ಲಿ ಹುಲಿ ಕಾಣುವುದು ಅದೃಷ್ಟದ ಸಂಗತಿಯಾಗಿದೆ. ಇಂತಹುದರಲ್ಲಿ, ಹುಲಿ ಸಫಾರಿ ವಾಹನ ಸಮೀಪ ಬಂದು ದರ್ಶನ ಕೊಟ್ಟು, ಫೋಟೋಗೆ ಪೋಸ್ ಕೊಟ್ಟಿರುವುದು ಪ್ರವಾಸಿಗರ ಸಂತೋಷಕ್ಕೆ ಕಾರಣವಾಗಿದೆ.
ಇದನ್ನೂ ನೋಡಿ: ತ್ಯಾವರೆಕೊಪ್ಪ ಹುಲಿ - ಸಿಂಹಧಾಮಕ್ಕೆ ಕೇರಳದಿಂದ ಐದು ಹೊಸ ಅತಿಥಿಗಳ ಆಗಮನ : ಪ್ರಾಣಿ ಪ್ರಿಯರು ಫುಲ್ ಖುಷ್