ETV Bharat / state

ವೀರಸೌಧಕ್ಕೆ ಜನರ ದಂಡು: ಗಾಂಧೀಜಿ ಬೆಳಗಾವಿಗೆ ಬಂದಿದ್ದು ನಮ್ಮ ಅದೃಷ್ಟ! - BELAGAVI CONGRESS SESSION

ವೀರಸೌಧದ ಕಡೆ ಬರುತ್ತಿರುವ ಜನತೆ ಗಾಂಧೀಜಿ ಮೂರ್ತಿ, ಹೃದಯಕುಂಜ, ಡಿಜಿಟಲ್ ಫೋಟೋ ಗ್ಯಾಲರಿ, ಕಾಂಗ್ರೆಸ್ ಬಾವಿ ನೋಡಿ ಸಂತಸಗೊಂಡಿದ್ದು, ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.

CONGRESS SESSION CENTENARY  CONGRESS  BELAGAVI  ವೀರಸೌಧ
ವೀರಸೌಧಕ್ಕೆ ಜನರ ದಂಡು (ETV Bharat)
author img

By ETV Bharat Karnataka Team

Published : 12 hours ago

Updated : 11 hours ago

ಬೆಳಗಾವಿ: 39ನೇ ಕಾಂಗ್ರೆಸ್​​​ ಅಧಿವೇಶನಕ್ಕೆ ಸಾಕ್ಷಿಯಾಗಿದ್ದ "ವೀರಸೌಧ" ಕಡೆಗೆ ಜನರ ದಂಡೇ ಹರಿದು ಬರುತ್ತಿದೆ. ಸಿಂಗಾರಗೊಂಡಿರುವ ಸೌಧ, ಗಾಂಧೀಜಿ ಡಿಜಿಟಲ್​ ಫೋಟೋಗಳನ್ನು ಕಣ್ತುಂಬಿಕೊಂಡು ಪುಳಕಿತರಾಗುತ್ತಿದ್ದಾರೆ. ವೀರಸೌಧ ನೋಡುಗರನ್ನು ನೂರು ವರ್ಷಗಳ ಹಿಂದೆ ಕರೆದುಕೊಂಡು ಹೋಗುವಂತೆ ಭಾಸವಾಗುತ್ತಿದ್ದು, ಕುಂದಾನಗರಿ ಮಂದಿ ಹೆಮ್ಮೆ ಪಡುತ್ತಿದ್ದಾರೆ.

ಹೌದು, ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್​ ಅಧಿವೇಶನ ಸ್ಥಳ "ವೀರಸೌಧ" ಈಗ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಸಾರುತ್ತಿದೆ. ಶತಮಾನೋತ್ಸವ ಹಿನ್ನೆಲೆಯಲ್ಲಿ ಸೌಧ ಸುಣ್ಣ, ಬಣ್ಣಗಳಿಂದ ನವೀಕರಣಗೊಂಡಿದ್ದು, ಆಧುನಿಕ ತಂತ್ರಜ್ಞಾನದಿಂದ ರೂಪಗೊಂಡಿರುವ ಗಾಂಧೀಜಿ, ಬೆಳಗಾವಿ ಅಧಿವೇಶನ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಅಪರೂಪದ ಫೋಟೋಗಳು ಎಲ್ಲರನ್ನೂ ಆಕರ್ಷಿಸುತ್ತಿವೆ. ಬಾಪೂಜಿ ಬಾಲ್ಯದಿಂದ ಹಿಡಿದು ಎಲ್ಲ ಹಂತದ ವರೆಗಿನ ಫೋಟೋಗಳು ಇಲ್ಲಿವೆ.‌

ವೀರಸೌಧಕ್ಕೆ ಜನರ ದಂಡು: ಗಾಂಧೀಜಿ ಬೆಳಗಾವಿಗೆ ಬಂದಿದ್ದು ನಮ್ಮ ಅದೃಷ್ಟ (ETV Bharat)

ಶತಮಾನೋತ್ಸವಕ್ಕೆ ಕ್ಷಣಗಣನೆ: ನಾಳೆ ಶತಮಾನೋತ್ಸವ ಕಾರ್ಯಕ್ರಮಕ್ಕೆ ಕ್ಷಣಗಣನೇ ಶುರುವಾಗಿದೆ. ನಿನ್ನೆ ಮಂಗಳವಾರ ರಾತ್ರಿ ಜನ ವೀರಸೌಧದ ಕಡೆ ಮುಖ ಮಾಡಿದ್ದು, ಮಕ್ಕಳು ಸೇರಿ ಕುಟುಂಬ ಸಮೇತರಾಗಿ ಆಗಮಿಸುತ್ತಿದ್ದಾರೆ. ಗಾಂಧೀಜಿ ಮೂರ್ತಿ, ಹೃದಯಕುಂಜ, ಡಿಜಿಟಲ್ ಫೋಟೋ ಗ್ಯಾಲರಿ, ಕಾಂಗ್ರೆಸ್ ಬಾವಿ ನೋಡಿ ಆಶ್ಚರ್ಯ ಚಕಿತರಾಗುತ್ತಿದ್ದಾರೆ. ಅಲ್ಲದೇ ತಮ್ಮ ಮೊಬೈಲಿನಲ್ಲಿ ಇವುಗಳನ್ನು ಸೆರೆ ಹಿಡಿದು, ಸೆಲ್ಪಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿರುವುದು ವಿಶೇಷವಾಗಿದೆ.

ಇಡೀ ವೀರಸೌಧ ಆವರಣ ವಿದ್ಯುತ್​ ದೀಪಗಳಿಂದ ಝಗಮಗಿಸುತ್ತಿದೆ. 1924 ರಲ್ಲಿ 39ನೇ ಅಧಿವೇಶನಕ್ಕೆ ಸಾಕ್ಷಿಯಾಗಿದ್ದ ನೆಲ ಈಗ ಶತಮಾನೋತ್ಸವಕ್ಕೆ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ.

ಏನಿದು ಹೃದಯಕುಂಜ..?: ಈಟಿವಿ ಭಾರತ ಜೊತೆಗೆ ಮಾತನಾಡಿದ ಗಾಂಧಿ ಪ್ರೇಮಿ ನೇತಾಜಿ ಗಾಂಧಿ, "ಹೃದಯಕುಂಜ ಎಂದರೆ ಗಾಂಧೀಜಿ ಅವರ ಪರ್ಸನಲ್ ರೂಮ್. ಇದರ ಮೂಲರೂಪ ಗುಜರಾತ ರಾಜ್ಯದ ಸಾಬರಮತಿ ಆಶ್ರಮದಲ್ಲಿದೆ. ಅಧಿವೇಶನದ ಶತಮಾನೋತ್ಸವ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಅದನ್ನು ಮರುಸೃಷ್ಟಿಸಿದ್ದೇವೆ. ಗಾಂಧೀಜಿ ಕುಳಿತು ಬರೆಯುತ್ತಿರುವ ಭಂಗಿಯಲ್ಲಿರುವ ಪ್ರತಿಮೆ ಇದೆ. ಮುಂದೆ ಬರೆಯಲು ಟೇಬಲ್​, ಭಗವದ್ಗೀತೆ ಪುಸ್ತಕ, ಪಕ್ಕದಲ್ಲಿ ಕೋಲು, ಮುಂದೆ ಪಾದರಕ್ಷೆಗಳು, ಚರಕ ಕೂಡ ಇವೆ. ಹಿಂದೆ ಸಾಬರಮತಿಗೆ ಯಾರೇ ಬಂದರೂ ಹೃದಯಕುಂಜದಲ್ಲೆ ಕುಳಿತು ಗಾಂಧೀಜಿ ಅವರ ಜೊತೆಗೆ ಸ್ವಾತಂತ್ರ್ಯ ಹೋರಾಟದ ಮಾತುಕತೆ ನಡೆಸುತ್ತಿದ್ದರು" ಎಂದು ವಿವರಿಸಿದರು.

ರಾಣಿ ಅಗಸಿಮನಿ ಮಾತನಾಡಿ, "1924ರಲ್ಲಿ ಗಾಂಧೀಜಿ ಬೆಳಗಾವಿಗೆ ಬಂದಿದ್ದರು. ಕಾಂಗ್ರೆಸ್​ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ಇದು ಬೆಳಗಾವಿಗರಿಗೆ ತುಂಬಾ ಹೆಮ್ಮೆಯ ಸಂಗತಿ. ವೀರಸೌಧ ಬಹಳ ಸುಂದರವಾಗಿ ಅಲಂಕೃತವಾಗಿದೆ. ಗಾಂಧೀಜಿ ಫೋಟೋಗಳನ್ನು ನೋಡಿ ಇತಿಹಾಸ ಕಣ್ಮುಂದೆ ಬಂದಿತು" ಎಂದು ಹೇಳಿದರು.

ನಿಜಕ್ಕೂ ನಾವು ಅದೃಷ್ಟವಂತರು: ರೋಸನಾ ಕುದಳೆ ಎಂಬುವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, "ಗಾಂಧೀಜಿ ಅವರು ಅಧ್ಯಕ್ಷತೆ ವಹಿಸಿದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಣ್ತುಂಬಿಕೊಳ್ಳುತ್ತಿರುವುದು ನಿಜಕ್ಕೂ ನಾವು ಅದೃಷ್ಟವಂತರು. ವೀರಸೌಧದಲ್ಲಿನ ಫೋಟೋಗಳನ್ನು ನೋಡಿ ಅಂದಿನ ಸ್ವಾತಂತ್ರ್ಯ ಹೋರಾಟ, ಅಧಿವೇಶನಕ್ಕೆ ನಮ್ಮನ್ನು ಕೊಂಡೊಯ್ಯುವಂತಿವೆ. ನಮ್ಮ ಪತಿ, ಮಕ್ಕಳೊಂದಿಗೆ ಸೌಧಕ್ಕೆ ಇದೇ ಮೊದಲ ಬಾರಿ ಬಂದಿದ್ದೇವೆ ತುಂಬಾ ಖುಷಿ ಆಗುತ್ತಿದೆ. ಗಾಂಧೀಜಿ ಇನ್ನು ಜೀವಂತ ಇದ್ದಾರೆ, ಮುಂದೆಯೂ ನಮ್ಮ ಜೊತೆಗೆ ಇರುತ್ತಾರೆ" ಎಂದರು.

ಐತಿಹಾಸಿಕ ಅಧಿವೇಶನ ನಡೆದಿತ್ತು ಅಂತಾನೇ ಗೊತ್ತಿರಲಿಲ್ಲ: "ನಾನು ಬೆಳಗಾವಿ ಅವರೇ. ಇಲ್ಲಿ ಸುಮಾರು ಸಾರಿ ಬಂದಿದ್ದೇವೆ. ಆದರೆ, ಈ ರೀತಿ ಒಂದು ಐತಿಹಾಸಿಕ ಕಾರ್ಯಕ್ರಮ ಆಗಿತ್ತು ಅಂತಾನೇ ನಮಗೆ ಗೊತ್ತಿರಲಿಲ್ಲ.‌ ಈಗ ಸರ್ಕಾರ ಶತಮಾನೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ನಮಗೆಲ್ಲಾ ಇದರ ಮಹತ್ವ ತಿಳಿಯುತ್ತಿದೆ. ಗಾಂಧೀಜಿ ಅವರನ್ನು ಇಡೀ ಜಗತ್ತು ಗೌರವಿಸುತ್ತದೆ. ಹಾಗಾಗಿ, ಇಂದಿನ‌ ಯುವಕರು ನಾವೆಲ್ಲಾ ಅವರ ಸತ್ಯ, ಅಹಿಂಸೆ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಭವ್ಯ ಭಾರತದ ಒಳ್ಳೆಯ ಪ್ರಜೆಗಳಾಗಬೇಕಿದೆ ಎನ್ನುತ್ತಾರೆ" ತೇಜಸ್ ಕಾಂಬಳೆ.

ನಮಗೆಲ್ಲಾ ಹೆಮ್ಮೆಯ ಸಂಗತಿ: ನ್ಯಾಯವಾದಿ ಅಬ್ದುಲ್ ಗಣಿ ಅಥಣಿ ಮಾತನಾಡಿ, "ಬೆಳಗಾವಿಯಲ್ಲಿ ಐತಿಹಾಸಿಕ ಕಾಂಗ್ರೆಸ್ ಅಧಿವೇಶನ ನಡೆದಿತ್ತು. ಅದರ ಅಧ್ಯಕ್ಷತೆ ಗಾಂಧೀಜಿ ವಹಿಸಿದ್ದರು ಎನ್ನುವುದು ನಮಗೆಲ್ಲಾ ಹೆಮ್ಮೆಯ ಸಂಗತಿ.‌ ವೀರಸೌಧಕ್ಕೆ ಬಂದಾಗ ನಮ್ಮಲ್ಲಿನ‌ ಅಭಿಮಾನ ಇನ್ನೂ ಹೆಚ್ಚಾಗುತ್ತಿದೆ. ಶತಮಾನೋತ್ಸದವ ಸವಿ ನೆನಪಿಗೋಸ್ಕರ ಗಾಂಧೀಜಿ ಹೆಸರಿನಲ್ಲಿ ಬೆಳಗಾವಿಯಲ್ಲಿ ಒಂದು ವಿಶ್ವವಿದ್ಯಾಲಯ ಸ್ಥಾಪಿಸಬೇಕು. ಇಲ್ಲ ಅವರ ಧರ್ಮಪತ್ನಿ ಕಸ್ತೂರಬಾ ಅವರ ಹೆಸರಲ್ಲಾದರೂ ಮಹಿಳಾ ವಿ.ವಿ. ಆರಂಭಿಸಿದರೆ ಹೆಚ್ಚು ಅರ್ಥಪೂರ್ಣ ಆಗುತ್ತದೆ" ಎಂದು ಅಭಿಪ್ರಾಯ ಪಟ್ಟರು.

ಇದನ್ನೂ ಓದಿ: ಬೆಳಗಾವಿ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವಕ್ಕೆ ಭರ್ಜರಿ ಸಿದ್ಧತೆ

Last Updated : 11 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.