LIVE: ಮಾಧ್ಯಮ ಲೋಕದ ದಿಗ್ಗಜ ರಾಮೋಜಿ ರಾವ್ ಅಂತ್ಯಕ್ರಿಯೆ - Ramoji Rao Funeral
Published : Jun 9, 2024, 9:20 AM IST
|Updated : Jun 9, 2024, 11:45 AM IST
ರಾಮೋಜಿ ಫಿಲಂ ಸಿಟಿ: 'ಈನಾಡು' ಸಮೂಹದ ಅಧ್ಯಕ್ಷರಾದ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ರಾಮೋಜಿ ರಾವ್ (87) ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಇಂದು ರಾಮೋಜಿ ಫಿಲಂ ಸಿಟಿಯಲ್ಲಿ ನಡೆಯುತ್ತಿದೆ. ಜೂನ್ 8ರ ಶನಿವಾರ ಮುಂಜಾನೆ ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ರಾಮೋಜಿ ರಾವ್ ನಿಧನ ಹೊಂದಿದ್ದರು. ಸಾರ್ವಜನಿಕರು, ರಾಜಕೀಯ ಹಾಗೂ ಸಿನಿಮಾ ರಂಗದ ಗಣ್ಯರು, ರಾಮೋಜಿ ಸಮೂಹದ ಅಪಾರ ಉದ್ಯೋಗಿಗಳು ಹಾಗು ಅಭಿಮಾನಿಗಳು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ.ಮಾಧ್ಯಮ ಲೋಕದ ದಿಗ್ಗಜ ರಾಮೋಜಿ ಅವರ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಕ್ಷೇತ್ರಗಳ ಗಣ್ಯಾತಿಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ರಾಮೋಜಿ ರಾವ್ ನವೆಂಬರ್ 16, 1936ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪೆದಪರುಪುಡಿಯಲ್ಲಿ ಜನಿಸಿದ್ದರು. 1969ರಲ್ಲಿ 'ಅನ್ನದಾತ' ಪತ್ರಿಕೆ ಆರಂಭಿಸುವ ಮೂಲಕ ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಬಳಿಕ 'ಈನಾಡು' ದಿನಪತ್ರಿಕೆಯ ಮೂಲಕ ತೆಲುಗು ರಾಜ್ಯಗಳ ಪತ್ರಿಕಾ ಲೋಕದಲ್ಲಿ ಕ್ರಾಂತಿಯನ್ನೇ ಉಂಟುಮಾಡಿದ್ದರು. ಈಟಿವಿ, ಈಟಿವಿ ಭಾರತ, ಮಾರ್ಗದರ್ಶಿ ಚಿಟ್ಫಂಡ್, ರಾಮೋಜಿ ಫಿಲಂ ಸಿಟಿ ನಿರ್ಮಾಣ ಹಾಗೂ ಉಷಾಕಿರಣ್ ಮೂವೀಸ್ ಬ್ಯಾನರ್ ಸೇರಿದಂತೆ ಹತ್ತು ಹಲವು ಸಂಸ್ಥೆಗಳ ಮೂಲಕ ರಾಮೋಜಿ ರಾವ್ ಜನತೆಗೆ ಚಿರಪರಿಚಿತರು.
Last Updated : Jun 9, 2024, 11:45 AM IST