ಅಮರಾವತಿ (ಆಂಧ್ರಪ್ರದೇಶ) : ಸಾಂಪ್ರದಾಯಿಕ ಟೈಲರಿಂಗ್‌ಗೆ ವಿಶಿಷ್ಟ ತಿರುವು ನೀಡಿರುವ ಸ್ಥಳೀಯ ಉದ್ಯಮಿಯೊಬ್ಬರು ಗ್ರಾಹಕರನ್ನು ನೇರವಾಗಿ ತಲುಪಲು ಮೊಬೈಲ್ ಟೈಲರಿಂಗ್ ಉಪಾಯ ಮಾಡಿದ್ದಾರೆ.
ಕೃಷ್ಣಾ ಜಿಲ್ಲೆಯ ಪೆನಮಲೂರು ಮಂಡಲದ ವನುಕೂರು ನಿವಾಸಿ ಶೇಖ್ ಅಲಿಶಾ ಅವರು ಒಂದೇ ಸ್ಥಳದಲ್ಲಿ ಟೈಲರಿಂಗ್ ಸೇವೆಗಳಿಗೆ ಬೇಡಿಕೆಯ ಕೊರತೆಯನ್ನು ಗಮನಿಸಿದ್ದಾರೆ. ನಂತರ ತಮ್ಮ ಟಿವಿಎಸ್ ದ್ವಿಚಕ್ರ ವಾಹನವನ್ನು ಮೊಬೈಲ್ ಹೊಲಿಗೆ ಯಂತ್ರವನ್ನಾಗಿ ಬದಲಾಯಿಸಿದ್ದಾರೆ. ಇದರಿಂದಾಗಿ ತಮ್ಮ ಸೇವೆಯ ಅಗತ್ಯ ಇರುವ ಜನರನ್ನ ನೇರವಾಗಿ ತಲುಪಲು ಮುಂದಾಗಿದ್ದಾರೆ.
ಪ್ರತಿದಿನವೂ ಅಲಿಶಾ ಅವರು ಪೆನಮಲೂರು ಮಂಡಲದಾದ್ಯಂತ ಸಂಚರಿಸುತ್ತಾರೆ. ವಿವಿಧ ಹಳ್ಳಿಗಳಿಗೆ ತೆರಳಿ ಗ್ರಾಹಕರಿಗೆ ಬಟ್ಟೆಯನ್ನ ಹೊಲಿದುಕೊಡುತ್ತಿದ್ದಾರೆ. ಹಲವಾರು ವರ್ಷಗಳಿಂದ ಅವಶ್ಯ ಇರುವ ಕಡೆ ಬಟ್ಟೆ ಹೊಲಿಯುತ್ತಾ ಬದುಕು ಸಾಗಿಸುತ್ತಿದ್ದಾರೆ. ಅವರ ಸೇವೆಯ ಅಗತ್ಯ ಇರುವ ಜನರು ಅವರಿಗೆ ಕರೆ ಮಾಡುತ್ತಾರೆ. ನಂತರ ಅಲಿಶಾ ಅವರು ಟೈಲರಿಂಗ್ ಅವಶ್ಯಕತೆ ಪೂರೈಸಲು ಅಲ್ಲಿಗೆ ತಕ್ಷಣವೇ ತೆರಳುತ್ತಾರೆ.
ಮಚಲಿಪಟ್ಟಣಂ - ವಿಜಯವಾಡ ಬಂದರು ರಸ್ತೆಯ ಉದ್ದಕ್ಕೂ ತನ್ನ ಯಂತ್ರದಲ್ಲಿ ಅಲಿಶಾ ಅವರು ಬಟ್ಟೆಯನ್ನ ಹೊಲಿಯುತ್ತಾರೆ. ಅಗತ್ಯ ಸೇವೆಯನ್ನು ಒದಗಿಸುವ ಅವರ ನಿರ್ಣಯ ಮತ್ತು ನವೀನ ವಿಧಾನ ಇದರಿಂದ ತಿಳಿದು ಬರುತ್ತದೆ.
ಇದನ್ನೂ ಓದಿ : ಗ್ರಾ.ಪಂ ಅಧ್ಯಕ್ಷನಾದ್ರು ಮೂಲ ವೃತ್ತಿ ಕಡೆಗಣಿಸದ ಲೇಡೀಸ್ ಟೈಲರ್: ಜನರಿಂದ ಮೆಚ್ಚುಗೆ - M anand doing Tailoring Career