ETV Bharat / health

ಊಟ ಮಾಡುವಾಗ ಮಕ್ಕಳಿಗೆ ಮೊಬೈಲ್​ ಫೋನ್ ಕೊಟ್ಟರೆ ಏನಾಗುತ್ತೆ ಗೊತ್ತೇ? ಸಂಶೋಧನೆ ಏನು ಹೇಳುತ್ತೆ? - KIDS USING PHONE WHILE EATING

Kids Using Phone While Eating: ಮಕ್ಕಳು ಊಟ ಮಾಡುವ ಸಮಯದಲ್ಲಿ ಫೋನ್ ಬಳಸುತ್ತಾರೆ. ತೂಕ ಹೆಚ್ಚಾಗುವುದರ ಜೊತೆಗೆ ಕೆಲವು ಸಮಸ್ಯೆಗಳು ಎದುರಾಗುತ್ತವೆ. ಊಟದ ವೇಳೆಯಲ್ಲಿ ಮಕ್ಕಳಿಗೆ ಮೊಬೈಲ್ ನೀಡದಂತೆ ತಜ್ಞರು ಸಲಹೆ ನೀಡುತ್ತಾರೆ.

IS IT OK TO USE PHONE WHILE EATING  USING PHONE WHEN EATING  WATCHING PHONE WHILE EATING  ಮೊಬೈಲ್​ ಫೋನ್ ಬಳಕೆ
ಸಾಂದರ್ಭಿಕ ಚಿತ್ರ (Getty Images)
author img

By ETV Bharat Health Team

Published : Jan 2, 2025, 5:22 PM IST

Kids Using Phone While Eating: ತಾಯಂದಿರು ತಮ್ಮ ಮಕ್ಕಳಿಗೆ ಊಟ ಮಾಡಿಸಲು ತುಂಬಾ ಕಷ್ಟಪಡುತ್ತಾರೆ. ಮಕ್ಕಳು ಆಹಾರ ಸೇವಿಸದೆ ಕುಟುಂಬದ ಸದಸ್ಯರನ್ನು ಮನೆಯ ಸುತ್ತಲೂ ಓಡುವಂತೆ ಮಾಡುತ್ತಾರೆ. ಮಕ್ಕಳು ಈ ಬದಲಾವಣೆಯನ್ನು ನಿಭಾಯಿಸಲು ಸಾಧ್ಯವಾಗದೆ ಅವರಿಗೆ ಫೋನ್ ಮತ್ತು ಟ್ಯಾಬ್‌ಗಳನ್ನು ನೀಡಿ, ಅವರಿಗೆ ಊಟ ಮಾಡಿಸುತ್ತಾರೆ. ಹೀಗೆ ಮಾಡುವುದರಿಂದ ಮಕ್ಕಳು ಚಿಕ್ಕಂದಿನಿಂದಲೇ ಗ್ಯಾಜೆಟ್​​ಗಳಿಗೆ ದಾಸರಾಗುತ್ತಾರೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ. ಮಕ್ಕಳು ಹೆಚ್ಚು ಹೊತ್ತು ಫೋನ್ ನೋಡುವುದರಿಂದ ಕಣ್ಣಿನ ಅಕ್ಷಿಪಟಲ ಸಮಸ್ಯೆ, ದೃಷ್ಟಿ ಕೊರತೆ, ನೈಸರ್ಗಿಕ ಬಣ್ಣಗಳನ್ನು ಗುರುತಿಸಲು ಅಸಮರ್ಥತೆ ಸೇರಿದಂತೆ ವಿವಿಧ ಸಮಸ್ಯೆಗಳು ಎದುರಾಗುತ್ತವೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

'ಭಾರತೀಯ ಜನಸಂಖ್ಯೆಯ ಮಾದರಿಯಲ್ಲಿ ಜೀವನದ ಗುಣಮಟ್ಟದ ಮೇಲೆ ಬಣ್ಣದ ದೃಷ್ಟಿ ಕೊರತೆಯ ಪರಿಣಾಮ' (Impact of color vision deficiency on the quality of life in a sample of Indian population) ಎಂಬ ಅಧ್ಯಯನದಲ್ಲಿ ಈ ವಿಷಯ ಬಹಿರಂಗವಾಗಿದೆ. ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಶಿವರಾಮ ಮಾಲೆ ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು. ಈ ಹಿನ್ನೆಲೆಯಲ್ಲಿ ವಿಧಾನ ಬದಲಾಗಬೇಕು ಎಂದು ತಜ್ಞರು ವಿವರಿಸುತ್ತಾರೆ. (ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ (National Library of Medicine) ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ)

  • ಇನ್ನು ಕೆಲವು ಮಕ್ಕಳು ತಮ್ಮ ಫೋನ್ ನೋಡುತ್ತಲೇ ಅಗತ್ಯಕ್ಕಿಂತ ಹೆಚ್ಚು ಆಹಾರವನ್ನು ಸೇವಿಸುತ್ತಾರೆ. ಇದರಿಂದಾಗಿ ಅವರು ಚಿಕ್ಕ ವಯಸ್ಸಿನಲ್ಲಿಯೇ ಬೊಜ್ಜು ಹೊಂದುತ್ತಾರೆ. ಭವಿಷ್ಯದಲ್ಲಿ ಅಧಿಕ ಕೊಲೆಸ್ಟ್ರಾಲ್ ಮಟ್ಟವು ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ಮಧುಮೇಹದಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಸಂಶೋಧಕರು ಎಚ್ಚರಿಕೆ ನೀಡುತ್ತಾರೆ.
  • ಮತ್ತು ಕೆಲವರು ಫೋನ್ ನೋಡುತ್ತಾ ತಮ್ಮ ಕುಟುಂಬ ಸದಸ್ಯರೊಂದಿಗೆ ಮಾತನಾಡಲು ಹಿಂಜರಿಯುತ್ತಾರೆ. ಇದರಿಂದ ಮಕ್ಕಳಲ್ಲಿ ಮಾತು, ಭಾಷೆ ಮತ್ತು ಸಾಮಾಜಿಕ ಭಾವನೆಗಳ ಬೆಳವಣಿಗೆಯಲ್ಲಿ ಸಮಸ್ಯೆ ಉಂಟಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
  • ಆದರೆ, ಅವರ ಬಳಿ ಫೋನ್ ಕಿತ್ತುಕೊಂಡರೂ ಹಾಗೂ ಟಿವಿ ನೋಡದಿದ್ದರೂ ಊಟ ಮಾಡುವುದಿಲ್ಲ ಎನ್ನುತ್ತಾರೆ ತಜ್ಞರು. ಅದಕ್ಕಾಗಿಯೇ ಗ್ಯಾಜೆಟ್‌ಗಳನ್ನು ಬಳಕೆಯನ್ನು ನಿಧಾನವಾಗಿ ಕಡಿಮೆ ಮಾಡಬೇಕು ಎಂದು ಸಂಶೋಧಕರು ಸೂಚಿಸುತ್ತಾರೆ.
  • ಇದಕ್ಕಾಗಿ ಮಕ್ಕಳಲ್ಲಿ ಏಕಕಾಲದಲ್ಲಿ ಕುಳಿತು ಊಟ ಮಾಡುವುದನ್ನು ರೂಢಿಸಬೇಕಾಗುತ್ತದೆ. ಊಟ ಮಾಡುವಾಗ ಮಕ್ಕಳು ದೊಡ್ಡವರೊಂದಿಗೆ ಮಾತನಾಡಲು ಪ್ರೋತ್ಸಾಹಿಸಬೇಕು. ಊಟ ಮಾಡುವಾಗ ಟಿವಿ, ಫೋನ್ ಮತ್ತು ಲ್ಯಾಪ್‌ಟಾಪ್ ನೋಡದಂತೆ ಕುಟುಂಬ ಸದಸ್ಯರಿಗೆ ಸೂಚಿಸಬೇಕು.
  • ಆದರೂ ಮಕ್ಕಳು ಊಟದ ಸಮಯದಲ್ಲಿ ಆಹಾರ ತಿನ್ನುವುದಿಲ್ಲ ಎನ್ನುವ ಕಾರಣಕ್ಕೆ ಅವರ ಮೇಲೆ ಕೋಪಗೊಂಡರೆ ಯಾವುದೇ ಪ್ರಯೋಜನವಿಲ್ಲ. ಅದಕ್ಕಾಗಿಯೇ ತಿನ್ನುವ ಮೊದಲು 5ರಿಂದ 10 ನಿಮಿಷಗಳ ಕಾಲ ಮೊಬೈಲ್​ ನೀಡಿ ನಂತರ ಅದನ್ನು ತೆಗೆದುಕೊಳ್ಳಿ ಎಂದು ತಜ್ಞರು ಸೂಚಿಸುತ್ತಾರೆ.
  • ವಿಶೇಷವಾಗಿ ಮಕ್ಕಳ ಹಸಿವಿನ ಅಗತ್ಯಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ. ಹೊಟ್ಟೆ ತುಂಬಿದ್ದರೆ ತಿನ್ನಲು ಒತ್ತಾಯಿಸಬೇಡಿ. ಕೆಲವರು ಗ್ಯಾಜೆಟ್​ಗಳನ್ನು ನೋಡುವ ಸಲುವಾಗಿಯೇ ತಮಗೆ ಇಷ್ಟವಿರಲಿ, ಇಲ್ಲದಿರಲಿ, ಆದರೂ ಮಕ್ಕಳು ಆಹಾರ ಸೇವಿಸುತ್ತಾರೆ. ಇದರಿಂದ ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ಕಾಡುತ್ತದೆ. ಅವರಿಗೆ ಹಸಿವು ಅನಿಸಿದಾಗ ಊಟ ಮಾಡಿಸಿ ಎನ್ನುತ್ತಾರೆ ತಜ್ಞರು.
  • ಮೊಬೈಲ್​ ನೋಡುತ್ತಾ ತಿನ್ನುವುದರಿಂದ ಮಕ್ಕಳು ಆಹಾರವನ್ನು ದೀರ್ಘಕಾಲ ಅಗಿಯದೆ ನುಂಗುತ್ತಾರೆ. ಇದರಿಂದ ಜೀರ್ಣಕ್ರಿಯೆ ಸಮಸ್ಯೆಗಳು ಉದ್ಭವಿಸುವುದಲ್ಲದೆ ಆಹಾರ ಪದಾರ್ಥಗಳಲ್ಲಿನ ಪೋಷಕಾಂಶಗಳು ಸರಿಯಾಗಿ ದೊರೆಯುವುದಿಲ್ಲ ಎನ್ನುತ್ತಾರೆ ತಜ್ಞರು.
  • ಮಕ್ಕಳಿಗೆ ಕಥೆಗಳನ್ನು ಹೇಳಲು ಅಥವಾ ಪುಸ್ತಕಗಳನ್ನು ಓದಲು ಪ್ರೇರೇಪಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.
  • ಏಳು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ದಿನಕ್ಕೆ ಎರಡು ಗಂಟೆಗಳಿಗಿಂತ ಕಡಿಮೆ ಸಮಯ ಹಾಗೂ ಏಳು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು 3 ಗಂಟೆಗಳ ಒಳಗೆ ಫೋನ್ ಮತ್ತು ಟಿವಿಗಳನ್ನು ವೀಕ್ಷಿಸಬಹುದು ಎಂದು ಸಂಶೋಧಕರು ಸೂಚನೆ ನೀಡುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ ವೀಕ್ಷಿಸಬಹುದು: https://pmc.ncbi.nlm.nih.gov/articles/PMC10391464/

ಓದುಗರಿಗೆ ವಿಶೇಷ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆ ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ಮಕ್ಕಳಲ್ಲಿ ಮೊಬೈಲ್​ ಫೋನ್‌ ವ್ಯಸನ: ಈ ಸಲಹೆಗಳನ್ನು ಪಾಲಿಸಿದರೆ ಮತ್ತೊಮ್ಮೆ ಫೋನ್​ ಮುಟ್ಟಲ್ಲ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.