ETV Bharat / state

ಬಜೆಟ್ ಮಂಡನೆಯಲ್ಲಿ ದಾಖಲೆ ಸರದಾರ ಸಿದ್ದರಾಮಯ್ಯ: ಸಿಎಂ ಈವರೆಗೆ ಮಂಡಿಸಿದ 15 ಬಜೆಟ್​ಗಳ ಸ್ವಾರಸ್ಯಕರ ಅಂಶಗಳು ಇಲ್ಲಿವೆ? - SIDDARAMAIAH RECORD IN BUDGET

2023-24ರಲ್ಲಿ ಬಜೆಟ್ ಮಂಡನೆ ಮೂಲಕ ಸಿಎಂ ಸಿದ್ದರಾಮಯ್ಯ ಅವರು ರಾಮಕೃಷ್ಣ ಹೆಗಡೆಯವರ ಬಜೆಟ್ ಮಂಡನೆ ದಾಖಲೆಯನ್ನು ಮುರಿದಿದ್ದರು.

SIDDARAMAIAH RECORD IN BUDGET
ಸಿಎಂ ಸಿದ್ದರಾಮಯ್ಯ (ಸಂಗ್ರಹ ಚಿತ್ರ) (IANS)
author img

By ETV Bharat Karnataka Team

Published : Feb 11, 2025, 7:03 AM IST

ಬೆಂಗಳೂರು: ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿದ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾದ ಸಿದ್ದರಾಮಯ್ಯ ಅವರು ಇದೀಗ ತಮ್ಮ ದಾಖಲೆಯ 16ನೇ ಬಜೆಟ್ ಮಂಡನೆಗೆ ಭರದ ಸಿದ್ಧತೆ ನಡೆಸುತ್ತಿದ್ದಾರೆ. ಮಾರ್ಚ್​ನಲ್ಲಿ ಮಂಡಿಸಲಿರುವ 2025-26 ಸಾಲಿನ ಆಯವ್ಯಯಗೆ ಈಗಾಗಲೇ ಇಲಾಖಾವಾರು ಬಜೆಟ್ ಪೂರ್ವ ಸಿದ್ಧತಾ ಸಭೆಗಳನ್ನು ಆರಂಭಿಸಿದ್ದಾರೆ. ಬಜೆಟ್ ಮಂಡನೆಯಲ್ಲಿ ದಾಖಲೆ ಸೃಷ್ಟಿಸಿರುವ ಸಿಎಂ ಸಿದ್ದರಾಮಯ್ಯರ 15 ಆಯವ್ಯಯಗಳ ಸ್ವಾರಸ್ಯಕರ ಮಾಹಿತಿ ಇಲ್ಲಿದೆ.

ಸಿಎಂ ಸಿದ್ದರಾಮಯ್ಯ 2025-26 ಸಾಲಿನ ಬಜೆಟ್ ಮಂಡನೆಗೆ ತಯಾರಿ ನಡೆಸುತ್ತಿದ್ದಾರೆ. ಮಾರ್ಚ್​ನಲ್ಲಿ ನಡೆಯುವ ಬಜೆಟ್ ಅಧಿವೇಶನದಲ್ಲಿ ಮಂಡನೆಯಾಗಲಿರುವ ಸಿದ್ದರಾಮಯ್ಯರ ಬಜೆಟ್ 16ನೇಯದ್ದಾಗಿರಲಿದೆ. ಈಗಾಗಲೇ ರಾಜ್ಯದಲ್ಲಿ ಅತಿಹೆಚ್ಚು ಬಜೆಟ್ ಮಂಡಿಸಿರುವ ದಾಖಲೆಯನ್ನು ಸಿಎಂ ಸಿದ್ದರಾಮಯ್ಯ ಸೃಷ್ಟಿಸಿದ್ದಾರೆ. ಆ ಮೂಲಕ ರಾಜ್ಯದ ಇತಿಹಾಸದಲ್ಲಿ ಬಜೆಟ್ ಮಂಡನೆ ದಾಖಲೆಯನ್ನು ಬರೆದಿಟ್ಟಿದ್ದಾರೆ.

SIDDARAMAIAH RECORD IN BUDGET
ಬಜೆಟ್​ ಮಂಡನೆಯಲ್ಲಿ ಸಿಎಂ ಸಿದ್ದರಾಮಯ್ಯ (ಸಂಗ್ರಹ ಚಿತ್ರ) (IANS)

ಹೆಚ್.ಡಿ.ದೇವೇಗೌಡರು ಹಾಗೂ ಜೆ.ಹೆಚ್.ಪಟೇಲ್ ಆಡಳಿತದಲ್ಲಿ ಹಣಕಾಸು ಸಚಿವರಾಗಿದ್ದ ಸಿದ್ದರಾಮಯ್ಯ 1995 - 96ನೇ ಸಾಲಿನ ಮೊದಲ ಮುಂಗಡ ಪತ್ರ ಮಂಡಿಸಿದ್ದರು. ಬಳಿಕ 1996-97, 1997-98, 1998-99, 1999-2000, 2004-05, 2005-06ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದರು. ಬಳಿಕ ಸಿದ್ದರಾಮಯ್ಯ ಸಿಎಂ ಆಗಿ 2013-14, 2014-15, 2015-16, 2016-17, 2017-18, 2018-19, ಪ್ರಸಕ್ತ 2023-24, 2024-25 ನೇ ಸಾಲಿನಲ್ಲಿ ಬಜೆಟ್ ಮಂಡಿಸಿದ್ದಾರೆ. ಆ ಮೂಲಕ ಒಟ್ಟು 15 ಬಾರಿ ಬಜೆಟ್ ಮಂಡಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಬಜೆಟ್ ಮಂಡನೆಯಲ್ಲಿ ತಾವೇ ಅಗ್ರಗಣ್ಯ: ರಾಜ್ಯದ ಇತಿಹಾಸದಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿದ ಕೀರ್ತಿಗೆ ಪಾರ್ತರಾಗಿರುವವರು ಸಿಎಂ ಸಿದ್ದರಾಮಯ್ಯ. ಈಗಾಗಲೇ ಒಟ್ಟು 15 ಬಜೆಟ್ ಮಂಡನೆ ಮಾಡಿದ್ದಾರೆ. ಕೇವಲ ಹಣಕಾಸು ಸಚಿವರಾಗಿ ಸಿಎಂ ಸಿದ್ದರಾಮಯ್ಯ ಒಟ್ಟು 7 ಬಜೆಟ್ ಮಂಡನೆ ಮಾಡಿದ್ದರೆ, ಸಿಎಂ ಪಟ್ಟ ಅಲಂಕರಿಸಿದ ಬಳಿಕ ಈವರೆಗೆ 8 ಬಜೆಟ್ ಮಂಡನೆ ಮಾಡಿದ್ದಾರೆ‌. 2023-24ರಲ್ಲಿ ಬಜೆಟ್ ಮಂಡನೆ ಮೂಲಕ ಸಿಎಂ ಸಿದ್ದರಾಮಯ್ಯ ಅವರು ರಾಮಕೃಷ್ಣ ಹೆಗಡೆಯವರ ಬಜೆಟ್ ಮಂಡನೆ ದಾಖಲೆಯನ್ನು ಮುರಿದಿದ್ದರು.

ರಾಜ್ಯದಲ್ಲಿ ಎರಡನೇ ಅತಿ ಹೆಚ್ಚು ಬಜೆಟ್ ಮಂಡನೆ ಕೀರ್ತಿ ಯಾರಿಗಾದರು ಸಲ್ಲುತ್ತದೆ ಅಂದರೆ ಅದು ರಾಮಕೃಷ್ಣ ಹೆಗಡೆಯವರಿಗೆ. ಬರೋಬ್ಬರಿ 13 ಬಾರಿ ಬಜೆಟ್ ಮಂಡಿಸಿದ್ದಾರೆ. ಹಣಕಾಸು ಸಚಿವರಾಗಿ ರಾಮಕೃಷ್ಣ ಹೆಗಡೆ 6 ಆಯವ್ಯಯ ಕೊಟ್ಟಿದ್ದರು. ಬಳಿಕ ಮುಖ್ಯಮಂತ್ರಿಯಾಗಿ 1983-84ರಿಂದ 1988-89ರ ವರೆಗೆ 7 ಬಜೆಟ್ ಮಂಡಿಸುವ ಮೂಲಕ ಒಟ್ಟಾರೆ 13 ಬಜೆಟ್ ಮಂಡಿಸಿದ್ದರು. ಮೂರನೇ ಅತಿ ಹೆಚ್ಚು ಬಜೆಟ್ ಮಂಡಿಸಿದ ಸಾಧನೆ ಮಾಡಿದವರು ಬಿ.ಎಸ್.ಯಡಿಯೂರಪ್ಪ. ಯಡಿಯೂರಪ್ಪ ಒಟ್ಟು 8 ಬಜೆಟ್ ಮಂಡಿಸಿ ರಾಜ್ಯದಲ್ಲಿ ಮೂರನೇ ಅತಿ ಹೆಚ್ಚು ಬಾರಿ ಬಜೆಟ್ ಮಂಡನೆ ಮಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ. ತಮ್ಮ ಮೊದಲ ಬಜೆಟ್​ನಲ್ಲಿ 10,859 ಕೋಟಿ ಗಾತ್ರದ ಆಯವ್ಯಯ ಮಂಡಿಸಿದ ಸಿಎಂ ಸಿದ್ದರಾಮಯ್ಯ ತಮ್ಮ ಇತ್ತೀಚಿಗಿನ ಬಜೆಟ್ ಗಾತ್ರ 3,71,383 ಕೋಟಿ ರೂ.ಗೆ ತಲುಪಿದೆ.

15 ಬಜೆಟ್​​ನಲ್ಲಿ ಮಾಡಿದ ಒಟ್ಟು ಸಾಲ 3,75,358 ಕೋಟಿ!: ಸಿಎಂ ಸಿದ್ದರಾಮಯ್ಯ ಅವರು ತಾವು ಈವರೆಗೆ ಮಂಡಿಸಿದ 15 ಬಜೆಟ್​ಗಳಲ್ಲಿ ಅಂದಾಜು ಒಟ್ಟು 3,75,358 ಕೋಟಿ ರೂ. ಸಾಲ ಮಾಡಿದ್ದಾರೆ‌. ವಿಪಕ್ಷಗಳು ಆಗಾಗ್ಗೆ ಸಿಎಂ ಸಿದ್ದರಾಮಯ್ಯರನ್ನು ಅತಿ ಹೆಚ್ಚು ಸಾಲ ಮಾಡಿದ ಸಿಎಂ ಎಂದು ಟೀಕಿಸುತ್ತಾರೆ‌. ಗರಿಷ್ಟ ಮಟ್ಟದಲ್ಲಿ ಸಾಲ ಮಾಡಿ ರಾಜ್ಯದ ಜನರ ಮೇಲಿನ ಸಾಲದ ಹೊರೆಯನ್ನು ಹೆಚ್ಚಿಸಿದ್ದಾರೆ ಎಂದು ಆರೋಪಿಸುತ್ತಾರೆ. ಸಿಎಂ ಸಿದ್ದರಾಮಯ್ಯ ಮಂಡಿಸಿದ ತಮ್ಮ 15 ಬಜೆಟ್​ಗಳಲ್ಲಿ ಒಟ್ಟು 3.75 ಲಕ್ಷ ಕೋಟಿ ಸಾಲ ಮಾಡಿದ್ದಾರೆ.

SIDDARAMAIAH RECORD IN BUDGET
ಬಜೆಟ್​ ಮಂಡನೆಯ ಪೂರ್ವ ತಯಾರಿಯಲ್ಲಿ ಸಿಎಂ ಸಿದ್ದರಾಮಯ್ಯ (ಸಂಗ್ರಹ ಚಿತ್ರ) (IANS)

ಸಿಎಂ ಸಿದ್ದರಾಮಯ್ಯ ತಮ್ಮ ಮೊದಲ ಬಜೆಟ್ 1995-96ರಲ್ಲಿ 1,309 ಕೋಟಿ ಸಾಲ ಮಾಡುವುದಾಗಿ ಅಂದಾಜಿಸಿದ್ದರು. 2024-25 ಸಾಲಿನಲ್ಲಿ ಮಂಡಿಸಿದ ಬಜೆಟ್​ನಲ್ಲಿ ಅಂದಾಜು 1,05,246 ಕೋಟಿ ರೂ. ವಾರ್ಷಿಕ ಸಾಲ ಮಾಡುವುದಾಗಿ ಹೇಳಿದ್ದರು. ಅಂದರೆ ಅವರ ಈವರೆಗಿನ ಬಜೆಟ್ ಮಂಡನೆ ಅವಧಿಯಲ್ಲಿ ವಾರ್ಷಿಕ ಸಾವಿರ ಕೋಟಿ ರೂ. ಸಾಲದ ಮೊತ್ತದಿಂದ ವಾರ್ಷಿಕ ಲಕ್ಷ ಕೋಟಿಯ ಗಡಿಯನ್ನು ದಾಟಿದೆ. ಮಿತಿ ಮೀರುತ್ತಿರುವ ವೆಚ್ಚ ಹೆಚ್ಚಳ, ಬದ್ಧ ವೆಚ್ಚ, ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ಹಿನ್ನೆಲೆ ಸಾಲದ ಪ್ರಮಾಣ ಗಣನೀಯ ಏರಿಕೆ ಕಾಣುತ್ತಿದೆ.

ಸಿದ್ದು ಬಜೆಟ್​​ ನಲ್ಲಿ ಬಂಡವಾಳ ವೆಚ್ಚದ ಲೆಕ್ಕಾಚಾರ: ಸಿಎಂ ಸಿದ್ದರಾಮಯ್ಯ ತಮ್ಮ 15 ಬಜೆಟ್​ಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿನ ಬಂಡವಾಳ ವೆಚ್ಚಕ್ಕೆ ಗಣನೀಯ ಅನುದಾನವನ್ನು ನೀಡಿದ್ದಾರೆ. ತಮ್ಮ 15 ಬಜೆಟ್​ಗಳಲ್ಲಿ ಸಿಎಂ ಸಿದ್ದರಾಮಯ್ಯ ಬಂಡವಾಳ ವೆಚ್ಚಕ್ಕಾಗಿ ಈವರೆಗೆ ಅಂದಾಜು ಒಟ್ಟು 2,85,881 ಕೋಟಿ ರೂ. ಅನುದಾನ ನೀಡಿದ್ದಾರೆ. ತಮ್ಮ ಮೊದಲ ಬಜೆಟ್​ನಲ್ಲಿ ಸಿದ್ದರಾಮಯ್ಯ ಅವರು ಬಂಡವಾಳ ವೆಚ್ಚದ ರೂಪದಲ್ಲಿ 1,090 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದರು. ಅವರ ಕಳೆದ ಬಾರಿಯ ಬಜೆಟ್​ನಲ್ಲಿ ಅಂದಾಜು ಸುಮಾರು 55,877 ಕೋಟಿ ರೂ. ಬಂಡವಾಳ ವೆಚ್ಚಕ್ಕೆ ಮೀಸಲಿಟ್ಟಿದ್ದರು.

ಜನ ಕಲ್ಯಾಣ ಯೋಜನೆಗಳಿಗೆ ಹೆಚ್ಚಿನ ಒತ್ತು: ಸಿಎಂ ಸಿದ್ದರಾಮಯ್ಯ ಅವರು ತಮ್ಮ ಬಜೆಟ್​ನಲ್ಲಿ ಜನಕಲ್ಯಾಣ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡುತ್ತಾರೆ. ಬಡವರು, ರೈತರು, ದೀನ ದಲಿತರಿಗೆ ವಿವಿಧ ಕಲ್ಯಾಣ ಯೋಜನೆಗಳನ್ನು ಘೋಷಿಸಿದ್ದಾರೆ. ಅದರಲ್ಲಿ ಪ್ರಮುಖವಾಗಿ ಪಂಚ ಗ್ಯಾರಂಟಿ ಯೋಜನೆಗೆ ಈ ಬಾರಿಯ ಆಡಳಿತದಲ್ಲಿ ಒತ್ತು ಕೊಡುತ್ತಿದ್ದಾರೆ. ವಾರ್ಷಿಕ ಅಂದಾಜು 58,000 ಕೋಟಿ ರೂ. ಅನುದಾನವನ್ನು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕಾಗಿ ವ್ಯಯಿಸುತ್ತಿದ್ದಾರೆ.

ತಮ್ಮ ಹಿಂದಿನ ಬಜೆಟ್​ಗಳಲ್ಲಿ ಮುಖ್ಯವಾಗಿ ವಾರ್ಷಿಕ 4,300 ಕೋಟಿ ವೆಚ್ಚದ ಅನ್ನಭಾಗ್ಯ ಯೋಜನೆ, ವಿದ್ಯಾರ್ಥಿಗಳಿಗೆ ವಿದ್ಯಾಸಿರಿ, ಶಾಲಾ ಮಕ್ಕಳಿಗೆ ಕ್ಷೀರ ಭಾಗ್ಯ ಯೋಜನೆ, ಮುಸ್ಲಿಂ ಯುವತಿಯರಿಗೆ ಶಾದಿ ಭಾಗ್ಯ ಯೋಜನೆ, ಕೃಷಿ ಹೊಂಡ, ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ, ಪರಿಶಿಷ್ಟ ಪಂಗಡ ಉಪಯೋಜನೆ, ಪರಿಶಿಷ್ಟ ಪಂಗಡ ಉಪಯೋಜನೆ ಕಾಯ್ದೆ ಜಾರಿ ಸೇರಿ ಹಲವು ಜನಪ್ರಿಯ ಯೋಜನೆಗಳನ್ನು ತಮ್ಮ ಆಡಳಿತಾವಧಿಯಲ್ಲಿ ಜಾರಿ ಮಾಡಿದ್ದರು. ಆ ಮೂಲಕ ಜನ ಕಲ್ಯಾಣ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದರು.

ಸಿದ್ದರಾಮಯ್ಯ ಅವರ ಬಜೆಟ್ ಇತಿಹಾಸ:

1995-96- ಬಜೆಟ್ ಗಾತ್ರ 10,859 ಕೋಟಿ ರೂ.

  • ರಾಜಸ್ವ ಜಮೆ- 8879.97 ಕೋಟಿ ರೂ.
  • ರಾಜಸ್ವ ವೆಚ್ಚ- 9093.63 ಕೋಟಿ ರೂ.
  • ಬಂಡವಾಳ ವೆಚ್ಚ-1090.75 ಕೋಟಿ ರೂ.
  • ರಾಜಸ್ವ ಕೊರತೆ- 83 ಕೋಟಿ ರೂ.
  • ಸಾಲ-1,309 ಕೋಟಿ ರೂ.

1996-97- ಬಜೆಟ್ ಗಾತ್ರ 12,399 ಕೋಟಿ ರೂ.

  • ರಾಜಸ್ವ ಜಮೆ-10,503 ಕೋಟಿ ರೂ.
  • ರಾಜಸ್ವ ವೆಚ್ಚ- 10,638 ಕೋಟಿ ರೂ.
  • ಬಂಡವಾಳ ವೆಚ್ಚ- 1,128.63 ಕೋಟಿ ರೂ.
  • ರಾಜಸ್ವ ಕೊರತೆ- 132.21 ಕೋಟಿ ರೂ.
  • ಸಾಲ- 1,404.58 ಕೋಟಿ ರೂ.

1997-98- ಬಜೆಟ್ ಗಾತ್ರ 13,456.68 ಕೋಟಿ ರೂ.

  • ರಾಜಸ್ವ ಜಮೆ- 11,766 ಕೋಟಿ ರೂ.
  • ರಾಜಸ್ವ ವೆಚ್ಚ- 11,965.45 ಕೋಟಿ ರೂ.
  • ಬಂಡವಾಳ ವೆಚ್ಚ- 1,491.23 ಕೋಟಿ ರೂ.
  • ಆದಾಯ ಕೊರತೆ- 96.85 ಕೋಟಿ ರೂ.
  • ಸಾಲ- 1,610.52 ಕೋಟಿ ರೂ.

1998-99- ಬಜೆಟ್ ಗಾತ್ರ 15,579.74 ಕೋಟಿ ರೂ.

  • ರಾಜಸ್ವ ಜಮೆ- 12,979 ಕೋಟಿ ರೂ.
  • ರಾಜಸ್ವ ವೆಚ್ಚ- 13,360 ಕೋಟಿ ರೂ.
  • ಬಂಡವಾಳ ವೆಚ್ಚ- 2,219 ಕೋಟಿ ರೂ.
  • ರಾಜಸ್ವ ಕೊರತೆ- 196 ಕೋಟಿ ರೂ.
  • ಸಾಲ- 1,847 ಕೋಟಿ ರೂ.

1999-2000- ಬಜೆಟ್ ಗಾತ್ರ 17,818.63 ಕೋಟಿ ರೂ‌.

  • ರಾಜಸ್ವ ಜಮೆ- 13,991.78 ಕೋಟಿ ರೂ.
  • ರಾಜಸ್ವ ವೆಚ್ಚ- 15,390.97 ಕೋಟಿ ರೂ.
  • ಬಂಡವಾಳ ವೆಚ್ಚ- 2,427.66 ಕೋಟಿ ರೂ.
  • ಆದಾಯ ಕೊರತೆ- 71.27 ಕೋಟಿ ರೂ.
  • ಸಾಲ- 3,173 ಕೋಟಿ ರೂ.

2004-05- ಬಜೆಟ್ ಗಾತ್ರ 31,591.88 ಕೋಟಿ ರೂ.

  • ರಾಜಸ್ವ ಜಮೆ- 25,510 ಕೋಟಿ ರೂ.
  • ರಾಜಸ್ವ ವೆಚ್ಚ- 25,437 ಕೋಟಿ ರೂ.
  • ಬಂಡವಾಳ ವೆಚ್ಚ- 6,154 ಕೋಟಿ ರೂ.
  • ಉಳಿತಾಯ ಬಜೆಟ್- 72.83 ಕೋಟಿ ರೂ.
  • ಸಾಲ- 3,910 ಕೋಟಿ ರೂ.

2005-06- ಬಜೆಟ್ ಗಾತ್ರ 34,615.15 ಕೋಟಿ ರೂ.

  • ರಾಜಸ್ವ ಜಮೆ- 29,218 ಕೋಟಿ ರೂ.
  • ರಾಜಸ್ವ ವೆಚ್ಚ- 28,364 ಕೋಟಿ ರೂ.
  • ಬಂಡವಾಳ ವೆಚ್ಚ- 6,251 ಕೋಟಿ ರೂ.
  • ಉಳಿತಾಯ ಬಜೆಟ್- 854 ಕೋಟಿ ರೂ.
  • ಸಾಲ- 4,475 ಕೋಟಿ ರೂ.

2013-14- ಬಜೆಟ್ ಗಾತ್ರ 1,21,611 ಕೋಟಿ ರೂ.

  • ರಾಜಸ್ವ ಜಮೆ- 97,986 ಕೋಟಿ ರೂ.
  • ರಾಜಸ್ವ ವೆಚ್ಚ- 97,391 ಕೋಟಿ ರೂ.
  • ಬಂಡವಾಳ ವೆಚ್ಚ- 18,380 ಕೋಟಿ ರೂ.
  • ಉಳಿತಾಯ ಬಜೆಟ್- 596 ಕೋಟಿ ರೂ.
  • ಸಾಲ- 18,801 ಕೋಟಿ ರೂ.

2014-15- ಬಜೆಟ್ ಗಾತ್ರ 1,38,008 ಕೋಟಿ ರೂ.

  • ರಾಜಸ್ವ ಜಮೆ- 1,11,039 ಕೋಟಿ ರೂ.
  • ರಾಜಸ್ವ ವೆಚ್ಚ- 1,10,757 ಕೋಟಿ ರೂ.
  • ಬಂಡವಾಳ ವೆಚ್ಚ- 20,490 ಕೋಟಿ ರೂ.
  • ಉಳಿತಾಯ ಬಜೆಟ್- 281 ಕೋಟಿ ರೂ.
  • ಸಾಲ- 20,632 ಕೋಟಿ ರೂ.

2015-16- ಬಜೆಟ್ ಗಾತ್ರ 1,42,534 ಕೋಟಿ ರೂ.

  • ರಾಜಸ್ವ ಜಮೆ- 1,16,360 ಕೋಟಿ ರೂ.
  • ರಾಜಸ್ವ ವೆಚ್ಚ- 1,15,450 ಕೋಟಿ ರೂ.
  • ಬಂಡವಾಳ ವೆಚ್ಚ- 20,564 ಕೋಟಿ ರೂ.
  • ಉಳಿತಾಯ ಬಜೆಟ್- 911 ಕೋಟಿ ರೂ.
  • ಸಾಲ- 19,676 ಕೋಟಿ ರೂ.

2016-17- ಬಜೆಟ್ ಗಾತ್ರ 1,63,419 ಕೋಟಿ ರೂ.

  • ರಾಜಸ್ವ ಜಮೆ- 1,30,758 ಕೋಟಿ ರೂ.
  • ರಾಜಸ್ವ ವೆಚ್ಚ- 1,30,236 ಕೋಟಿ ರೂ.
  • ಬಂಡವಾಳ ವೆಚ್ಚ- 26,341 ಕೋಟಿ ರೂ.
  • ಉಳಿತಾಯ ಬಜೆಟ್- 522 ಕೋಟಿ ರೂ.
  • ಸಾಲ- 31,036 ಕೋಟಿ ರೂ.

2017-18- ಬಜೆಟ್ ಗಾತ್ರ 1,86,561 ಕೋಟಿ ರೂ.

  • ರಾಜಸ್ವ ಜಮೆ- 1,44,892 ಕೋಟಿ ರೂ.
  • ರಾಜಸ್ವ ವೆಚ್ಚ- 1,44,755 ಕೋಟಿ ರೂ.
  • ಬಂಡವಾಳ ವೆಚ್ಚ- 33,630 ಕೋಟಿ ರೂ.
  • ಉಳಿತಾಯ ಬಜೆಟ್- 137 ಕೋಟಿ ರೂ.
  • ಸಾಲ- 37,092 ಕೋಟಿ ರೂ.

2018-19- ಬಜೆಟ್ ಗಾತ್ರ 2,09,181 ಕೋಟಿ ರೂ.

  • ರಾಜಸ್ವ ಜಮೆ-1,62,765 ಕೋಟಿ ರೂ.
  • ರಾಜಸ್ವ ವೆಚ್ಚ- 1,62,637 ಕೋಟಿ ರೂ.
  • ಬಂಡವಾಳ ವೆಚ್ಚ- 35,458 ಕೋಟಿ ರೂ.
  • ಉಳಿತಾಯ ಬಜೆಟ್- 127 ಕೋಟಿ ರೂ.
  • ಸಾಲ- 39,328 ಕೋಟಿ ರೂ.

2023-24- ಬಜೆಟ್ ಗಾತ್ರ 3,27,747 ಕೋಟಿ ರೂ.

  • ರಾಜಸ್ವ ಜಮೆ- 2,38,410 ಕೋಟಿ ರೂ.
  • ರಾಜಸ್ವ ವೆಚ್ಚ- 2,50,933 ಕೋಟಿ ರೂ‌.
  • ಬಂಡವಾಳ ವೆಚ್ಚ- 54,374 ಕೋಟಿ ರೂ.
  • ಆದಾಯ ಕೊರತೆ- 12,523 ಕೋಟಿ ರೂ.
  • ಸಾಲ- 85,818 ಕೋಟಿ ರೂ.

2024-25- ಬಜೆಟ್ ಗಾತ್ರ 3,71,383 ಕೋಟಿ ರೂ‌.

  • ರಾಜಸ್ವ ಜಮೆ- 2,63,178 ಕೋಟಿ ರೂ.
  • ರಾಜಸ್ವ ವೆಚ್ಚ- 2,90,531 ಕೋಟಿ ರೂ.
  • ಬಂಡವಾಳ ವೆಚ್ಚ- 55,877 ಕೋಟಿ ರೂ.
  • ಆದಾಯ ಕೊರತೆ- 27,354 ಕೋಟಿ ರೂ.
  • ಸಾಲ- 1,05,246 ಕೋಟಿ ರೂ.

ಇದನ್ನೂ ಓದಿ: 25 ಕೋಟಿ ಜನ ಬಡತನದಿಂದ ಹೊರಕ್ಕೆ; SC, ST, OBC ವಿದ್ಯಾರ್ಥಿಗಳಿಗೆ ಮೆಡಿಕಲ್‌ ಸೀಟು ಹೆಚ್ಚಳ: ಲೋಕಸಭೆಯಲ್ಲಿ ಮೋದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.