ETV Bharat / technology

ಕ್ಯಾನ್ಸರ್ ಚಿಕಿತ್ಸೆಗೆ ಕಡಿಮೆ ಅಡ್ಡ ಪರಿಣಾಮದ ಹೈಡ್ರೋಜೆಲ್ ಚುಚ್ಚುಮದ್ದು ಆವಿಷ್ಕಾರ: ಗುವಾಹಟಿ ಐಐಟಿ ಸಾಧನೆ - CANCER THERAPY

ಕ್ಯಾನ್ಸರ್ ಚಿಕಿತ್ಸೆಗಾಗಿ ಹೊಸ ಪರಿಣಾಮಕಾರಿ ವಿಧಾನವೊಂದನ್ನು ಗುವಾಹಟಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯ ಸಂಶೋಧಕರು ಆವಿಷ್ಕರಿಸಿದ್ದಾರೆ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ (IANS)
author img

By PTI

Published : Jan 2, 2025, 3:53 PM IST

ನವದೆಹಲಿ: ಕ್ಯಾನ್ಸರ್ ಚಿಕಿತ್ಸೆಗಾಗಿ ಇಂಜೆಕ್ಷನ್ ರೂಪದಲ್ಲಿ ದೇಹದೊಳಕ್ಕೆ ಸೇರಿಸಬಹುದಾದ ಸುಧಾರಿತ ಹೈಡ್ರೋಜೆಲ್ ಔಷಧವೊಂದನ್ನು ಗುವಾಹಟಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯ ಸಂಶೋಧಕರು ಆವಿಷ್ಕರಿಸಿದ್ದಾರೆ. ಸಾಂಪ್ರದಾಯಿಕ ಕ್ಯಾನ್ಸರ್ ನಿವಾರಕ ಔಷಧಗಳಿಗೆ ಹೋಲಿಸಿದರೆ ಇದರ ಅಡ್ಡ ಪರಿಣಾಮಗಳು ಕಡಿಮೆ ಎಂದು ಅವರು ಹೇಳಿದ್ದಾರೆ.

ಕೋಲ್ಕತ್ತಾದ ಬೋಸ್ ಇನ್ಸ್ಟಿಟ್ಯೂಟ್ ಸಹಯೋಗದೊಂದಿಗೆ ನಡೆಸಲಾದ ಸಂಶೋಧನಾ ವರದಿಯು ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿಯ ಜರ್ನಲ್ 'ಮೆಟೀರಿಯಲ್ಸ್ ಹೊರೈಜನ್ಸ್' ನಲ್ಲಿ ಪ್ರಕಟವಾಗಿದೆ.

ಹೊಸ ಆವಿಷ್ಕಾರದ ಕುರಿತು ಮಾತನಾಡಿದ ಐಐಟಿ-ಗುವಾಹಟಿಯ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ದೇಬಪ್ರತಿಮ್ ದಾಸ್, ವಿಶ್ವಾದ್ಯಂತ ಲಕ್ಷಾಂತರ ಜನ ಕ್ಯಾನ್ಸರ್​ನಿಂದ ಬಾಧಿತರಾಗಿದ್ದಾರೆ. ಆದರೆ ಪ್ರಸ್ತುತ ಕೀಮೋಥೆರಪಿ ಮತ್ತು ಶಸ್ತ್ರಚಿಕಿತ್ಸೆಯಂಥ ಚಿಕಿತ್ಸಾ ವಿಧಾನಗಳು ಸೀಮಿತ ಪರಿಣಾಮಗಳನ್ನು ಹೊಂದಿವೆ ಎಂದು ಹೇಳಿದರು.

ಆಂತರಿಕ ಅಂಗಗಳಲ್ಲಿನ ಗೆಡ್ಡೆಗಳನ್ನು ತೆಗೆಯುವುದು ಕ್ಲಿಷ್ಟಕರ: "ಕ್ಯಾನ್ಸರ್​ ಗೆಡ್ಡೆಗಳನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕುವುದು ಕೆಲವೊಮ್ಮೆ ಕಾರ್ಯಸಾಧ್ಯವಾಗಿರುವುದಿಲ್ಲ. ವಿಶೇಷವಾಗಿ ಆಂತರಿಕ ಅಂಗಗಳಲ್ಲಿನ ಗೆಡ್ಡೆಗಳನ್ನು ತೆಗೆಯುವುದು ಕ್ಲಿಷ್ಟಕರ. ಇನ್ನು ಕೀಮೋಥೆರಪಿಯ ವ್ಯವಸ್ಥಿತ ವಿಧಾನವು ಕ್ಯಾನ್ಸರ್ ಕೋಶಗಳು ಮಾತ್ರವಲ್ಲದೆ ಆರೋಗ್ಯಕರ ಕೋಶಗಳ ಮೇಲೆಯೂ ಪರಿಣಾಮ ಬೀರುವ ಮೂಲಕ ಹಾನಿಕಾರಕ ಅಡ್ಡಪರಿಣಾಮಗಳಿಗೆ ಕಾರಣವಾಗುತ್ತದೆ. ಗೆಡ್ಡೆಯ ಸ್ಥಳಕ್ಕೆ ನಿಖರವಾಗಿ ಔಷಧಗಳನ್ನು ತಲುಪಿಸುವಂಥ ಹೈಡ್ರೋಜೆಲ್ ವಿನ್ಯಾಸಗೊಳಿಸುವ ಮೂಲಕ ನಾವು ಈ ಸವಾಲುಗಳನ್ನು ಪರಿಹರಿಸಿದ್ದೇವೆ" ಎಂದು ದಾಸ್ ಹೇಳಿದರು.

ಹೈಡ್ರೋಜೆಲ್ ವಿನ್ಯಾಸದ ಮೂಲಕ ಸವಾಲುಗಳಿಗೆ ಪರಿಹಾರ: ಹೈಡ್ರೋಜೆಲ್​ಗಳು ನೀರು ಆಧಾರಿತ, ಮೂರು ಆಯಾಮದ ಪಾಲಿಮರ್ ನೆಟ್ ವರ್ಕ್ ಗಳಾಗಿವೆ. ಇದು ದ್ರವಗಳನ್ನು ಹೀರಿಕೊಳ್ಳುವ ಮತ್ತು ಉಳಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ಅವುಗಳ ವಿಶಿಷ್ಟ ರಚನೆಯು ಜೀವಂತ ಅಂಗಾಂಶಗಳಂತೆಯೇ ಇರುತ್ತದೆ. ಹೀಗಾಗಿ ಇವು ಬಯೋಮೆಡಿಕಲ್ ಉದ್ದೇಶದ ಬಳಕೆಗಾಗಿ ಸೂಕ್ತವಾಗಿವೆ. ಹೊಸದಾಗಿ ಅಭಿವೃದ್ಧಿಪಡಿಸಿದ ಈ ಹೈಡ್ರೋಜೆಲ್ ಕ್ಯಾನ್ಸರ್ - ವಿರೋಧಿ ಔಷಧಗಳಿಗೆ ಸ್ಥಿರ ಸಂಗ್ರಹಾಗಾರವಾಗಿ ಕೆಲಸ ಮಾಡುತ್ತದೆ ಮತ್ತು ಔಷಧಗಳನ್ನು ನಿಯಂತ್ರಿತ ರೀತಿಯಲ್ಲಿ ಬಿಡುಗಡೆ ಮಾಡುತ್ತದೆ ಹಾಗೂ ಗೆಡ್ಡೆಯ ಸೂಕ್ಷ್ಮ ಪರಿಸರದಲ್ಲಿನ ನಿರ್ದಿಷ್ಟ ಪರಿಸ್ಥಿತಿಗಳಿಗೆ ಪ್ರತಿಕ್ರಿಯಿಸುತ್ತದೆ.

ಹೈಡ್ರೋಜೆಲ್ ಜೈವಿಕ ದ್ರವಗಳಲ್ಲಿ ಕರಗದಂತೆ ವಿನ್ಯಾಸ: ಪ್ರೋಟೀನ್​ಗಳ ಜೈವಿಕ ಹೊಂದಾಣಿಕೆ ಮತ್ತು ಜೈವಿಕ ವಿಘಟನೀಯ ಬಿಲ್ಡಿಂಗ್ ಬ್ಲಾಕ್​ಗಳನ್ನು ಒಳಗೊಂಡಿರುವ ಅಲ್ಟ್ರಾ-ಶಾರ್ಟ್ ಪೆಪ್ಟೈಡ್​ಗಳಿಂದ ಕೂಡಿದ ಹೈಡ್ರೋಜೆಲ್ ಅನ್ನು ಜೈವಿಕ ದ್ರವಗಳಲ್ಲಿ ಕರಗದಂತೆ ವಿನ್ಯಾಸಗೊಳಿಸಲಾಗಿದೆ. ಇದು ಚುಚ್ಚುಮದ್ದು ನೀಡಿದ ಸ್ಥಳದಲ್ಲಿಯೇ ಉಳಿಯುತ್ತದೆ ಎಂದು ಖಚಿತಪಡಿಸುತ್ತದೆ. ಇದು ಗೆಡ್ಡೆಯ ಜೀವಕೋಶಗಳಲ್ಲಿ ಹೇರಳವಾಗಿರುವ ಅಣುವಾದ ಗ್ಲುಟಾಥಿಯೋನ್ (ಜಿಎಸ್ಎಚ್) ಮಟ್ಟಗಳಿಗೆ ಪ್ರತಿಕ್ರಿಯಿಸುತ್ತದೆ. ಜಿಎಸ್ಎಚ್ ಮಟ್ಟ ಹೆಚ್ಚಾದಾಗ ಹೈಡ್ರೋಜೆಲ್ ನೇರವಾಗಿ ಗೆಡ್ಡೆಗೆ ನಿಯಂತ್ರಿತ ಔಷಧ ಬಿಡುಗಡೆಯನ್ನು ಪ್ರಚೋದಿಸುತ್ತದೆ. ಆರೋಗ್ಯಕರ ಅಂಗಾಂಶಗಳ ಮೇಲಾಗುವ ಪರಿಣಾಮವನ್ನು ಮತ್ತು ವ್ಯವಸ್ಥಿತ ಅಡ್ಡಪರಿಣಾಮಗಳನ್ನು ಕಡಿಮೆ ಮಾಡುತ್ತದೆ.

"ಒಂದೇ ಡೋಸ್​ನಿಂದ ಗರಿಷ್ಠ ಪ್ರಮಾಣದಲ್ಲಿ ಗೆಡ್ಡೆಯ ಗಾತ್ರ ಕಡಿಮೆ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಅಧ್ಯಯನಗಳು ನಡೆಯುತ್ತಿವೆ. ಇದಲ್ಲದೆ, ನಾವು ಇತರ ರೀತಿಯ ಗೆಡ್ಡೆಗಳನ್ನು ಸಹ ಪರಿಶೀಲನೆ ಮಾಡುತ್ತಿದ್ದೇವೆ. ಎಲ್ಲಾ ಅಧ್ಯಯನಗಳು ಪೂರ್ಣಗೊಂಡ ನಂತರ, ಕ್ಲಿನಿಕಲ್ ಪ್ರಯೋಗಕ್ಕಾಗಿ ಅರ್ಜಿ ಸಲ್ಲಿಸಲಿದ್ದೇವೆ" ಎಂದು ದಾಸ್ ಹೇಳಿದರು.

ಇದನ್ನೂ ಓದಿ : ಉತ್ತಮ ಆರೋಗ್ಯಕ್ಕಾಗಿ ದಿನಕ್ಕೆ ಎಷ್ಟು ನೀರು ಕುಡಿಯಬೇಕು ಗೊತ್ತೇ? - HOW MANY LITRES OF WATER PER DAY

ETV Bharat Logo

Copyright © 2025 Ushodaya Enterprises Pvt. Ltd., All Rights Reserved.