ETV Bharat / technology

ಆಪಲ್​ ಪ್ರಿಯರಿಗೆ ಗುಡ್ ನ್ಯೂಸ್; ಐಫೋನ್​ 16 ಸೀರಿಸ್​ ಮೇಲೆ ಆಫರ್‌ಗಳ ಸುರಿಮಳೆ! - DISCOUNTS ON IPHONE 16 SERIES

Discounts on iPhone 16 Series: ಆಪಲ್ ತನ್ನ ಪ್ರಮುಖ ಸ್ಮಾರ್ಟ್‌ಫೋನ್‌ಗಳಲ್ಲಿ ಮುಂಬರುವ ನಾಲ್ಕು ದಿನಗಳವರೆಗೆ ಬಂಪರ್​ ಆಫರ್​ ನೀಡುತ್ತಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ..

IPHONE 16 DISCOUNT IN CHINA  IPHONE 16 PRO MAX DISCOUNT  DISCOUNTS ON IPHONE 16 SERIES  APPLE DISCOUNT OFFERS
ಆಪಲ್​ ಪ್ರಿಯರಿಗೆ ಗುಡ್ ನ್ಯೂಸ್ (Photo Credit- Apple)
author img

By ETV Bharat Tech Team

Published : Jan 4, 2025, 7:49 AM IST

Discounts on iPhone 16 Series: ಐಫೋನ್ ಪ್ರಿಯರಿಗೆ ಸಿಹಿ ಸುದ್ದಿಯೊಂದಿದೆ. ಟೆಕ್ ದೈತ್ಯ ಆಪಲ್ ತನ್ನ ಇತ್ತೀಚಿನ 'ಐಫೋನ್ 16' ಸೀರಿಸ್​ ಮೇಲೆ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ. ಈ ಆಫರ್​ನಲ್ಲಿ, 'ಐಫೋನ್​ 16', 'ಐಫೋನ್​ 16 ಪ್ಲಸ್​', 'ಐಫೋನ್​ 16 ಪ್ರೊ', 'ಐಫೋನ್​ 16 ಪ್ರೊ ಮ್ಯಾಕ್ಸ್​'ನಂತಹ ಮಾದರಿಗಳಲ್ಲಿ ಗರಿಷ್ಠ ರೂ. 5,861 ರಿಯಾಯಿತಿ ಪಡೆಯಬಹುದು.

ಎಲ್ಲಿ ಈ ಆಫರ್? ಅಮೆರಿಕದ ಆ್ಯಪಲ್ ಕಂಪನಿ ಚೀನಾದಲ್ಲಿ ಈ ಆಫರ್​ಗಳನ್ನು ಪ್ರಕಟಿಸಿದೆ. ಈ ಕೊಡುಗೆಯ ಭಾಗವಾಗಿ ಇದು ತನ್ನ ಇತ್ತೀಚಿನ ಐಫೋನ್‌ಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ. ಆಪಲ್ ಚೀನಾದಲ್ಲಿ ಹುವಾವೇಯಂತಹ ದೇಶಿಯ ಬ್ರಾಂಡ್‌ಗಳಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದೆ. ಈ ಕಾರಣಕ್ಕಾಗಿ ಕಂಪನಿಯು ಈ ಕೊಡುಗೆಗಳನ್ನು ಚೀನಾದಲ್ಲಿ ಮಾತ್ರ ನೀಡುತ್ತಿದೆ. ಇದು ಐಫೋನ್‌ಗಳಲ್ಲಿ 500 ಯುವಾನ್ ($68.50 ಅಥವಾ ಅಂದಾಜು 5,861 ರೂ.) ವರೆಗಿನ ರಿಯಾಯಿತಿಗಳನ್ನು ಒಳಗೊಂಡಿದೆ.

ಚೀನಾದಲ್ಲಿ ಐಫೋನ್‌ಗಳ ಮೇಲೆ ಆಫರ್​ಗಳೋ ಆಫರ್​ : ಆಪಲ್‌ನ ವೆಬ್‌ಸೈಟ್ ಪ್ರಕಾರ.. ಗ್ರಾಹಕರು ಆಯ್ದ ಪೇಮೆಂಟ್​ ಪ್ರಕ್ರಿಯೆಯ ಮೂಲಕ ಈ ಕೊಡುಗೆಗಳನ್ನು ಪಡೆಯಬಹುದು. ಇತ್ತೀಚಿನ ಐಫೋನ್ ಮಾದರಿಗಳಲ್ಲಿ ಅವರು 500 ಯುವಾನ್‌ಗಳವರೆಗೆ ರಿಯಾಯಿತಿಗಳನ್ನು ಪಡೆಯಬಹುದು. ಕಂಪನಿಯು 'ಐಫೋನ್​ 16 ಪ್ರೊ' ಮತ್ತು 'ಐಫೋನ್​ 16 ಪ್ರೊ ಮ್ಯಾಕ್ಸ್​' ಮೇಲೆ 500 ಯುವಾನ್‌ಗಳ ರಿಯಾಯಿತಿಯನ್ನು ನೀಡುತ್ತಿದೆ. 'ಐಫೋನ್​ 16' ಮತ್ತು 'ಐಫೋನ್​ 16 ಪ್ಲಸ್​' ಮಾದರಿಗಳನ್ನು ಖರೀದಿಸುವ ಗ್ರಾಹಕರು 400 ಯುವಾನ್ (ಸುಮಾರು ರೂ. 4,690) ರಿಯಾಯಿತಿಯನ್ನು ಪಡೆಯಬಹುದು. ಆದರೆ ಈ ರಿಯಾಯಿತಿಗಳು ಸೀಮಿತ ಅವಧಿಗೆ ಮಾತ್ರ ಲಭ್ಯವಿರುತ್ತವೆ. ಈ ಸೇಲ್ ಜನವರಿ 4 ರಿಂದ ಪ್ರಾರಂಭವಾಗಲಿದ್ದು, 7ರ ವರೆಗೆ ಅಂದ್ರೆ ಇಂದಿನಿಂದ ನಾಲ್ಕು ದಿನಗಳವರೆಗೆ ಮುಂದುವರಿಯುತ್ತದೆ.

ಚೀನಾದ ಟಾಪ್-5 ಲಿಸ್ಟ್​ನಲ್ಲಿ ಆಪಲ್: ಕಳೆದ ವರ್ಷ ಕಳೆದ ತ್ರೈಮಾಸಿಕದಲ್ಲಿ ಆಪಲ್ ಮತ್ತೊಮ್ಮೆ ಚೀನಾ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್ ತಯಾರಕರ ಟಾಪ್-5 ಪಟ್ಟಿಗೆ ಸೇರಿಕೊಂಡಿತ್ತು. ಇಂಟರ್ನ್ಯಾಷನಲ್ ಡೇಟಾ ಕಾರ್ಪೊರೇಷನ್ (IDC) ಒದಗಿಸಿದ ಮಾಹಿತಿಯ ಪ್ರಕಾರ, ಆಪಲ್ 2024ರ ಕೊನೆಯ ತ್ರೈಮಾಸಿಕದಲ್ಲಿ ಶೇ. 15.6ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿರುವ ಚೀನಿ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೆ ಇದು 2023ರ ಮೂರನೇ ತ್ರೈಮಾಸಿಕದಲ್ಲಿ ಆಪಲ್‌ನ ಪಾಲಿಗಿಂತ ಕಡಿಮೆಯಾಗಿದೆ. 2023 ರ ಮೂರನೇ ತ್ರೈಮಾಸಿಕದಲ್ಲಿ Apple ನ ಮಾರುಕಟ್ಟೆ ಪಾಲು ಶೇ. 16.1 ರಷ್ಟು ಆಗಿದೆ.

2024 ರ ಕೊನೆಯ ತ್ರೈಮಾಸಿಕದಲ್ಲಿ, ವಿವೋ ಚೀನಿ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಶೇ. 18.6 ರಷ್ಟು ಹೆಚ್ಚಿನ ಪಾಲನ್ನು ಹೊಂದುವ ಮೂಲಕ ಅಗ್ರಸ್ಥಾನದಲ್ಲಿದೆ. ಶೇ.15.6 ಮಾರುಕಟ್ಟೆ ಪಾಲನ್ನು ಹೊಂದಿರುವ ಆಪಲ್​ ಎರಡನೇ ಸ್ಥಾನದಲ್ಲಿದೆ ಮತ್ತು ಶೇ. 15.3 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿರುವ Huawei ಮೂರನೇ ಸ್ಥಾನದಲ್ಲಿದೆ. Xiaomi (ಶೇ. 14.8 ರಷ್ಟು) ನಾಲ್ಕನೇ ಸ್ಥಾನದಲ್ಲಿದೆ ಮತ್ತು Honor (ಶೇ. 14.6 ರಷ್ಟು) ಐದನೇ ಸ್ಥಾನದಲ್ಲಿದೆ. ಇವುಗಳನ್ನು ಹೊರತುಪಡಿಸಿ, ಚೀನಾದಲ್ಲಿ ಇತರ ಬ್ರಾಂಡ್‌ಗಳ ಒಟ್ಟು ಮಾರುಕಟ್ಟೆ ಪಾಲು ಶೇ. 21.1 ರಷ್ಟು ಆಗಿದೆ.

ನೀವು ಈ ಡೇಟಾವನ್ನು ನೋಡಿದರೆ ಈ ಟಾಪ್-5 ಸ್ಮಾರ್ಟ್‌ಫೋನ್ ಕಂಪನಿಗಳಲ್ಲಿ ಆಪಲ್ ಮಾತ್ರ ಹೊರ ದೇಶದ ಕಂಪನಿಯಾಗಿದ್ದು, ಉಳಿದೆಲ್ಲವೂ ಚೈನೀಸ್ ಬ್ರಾಂಡ್‌ಗಳು. ಇದರರ್ಥ ಆಪಲ್ ಚೀನಾದಲ್ಲಿ ಕೇವಲ ಒಂದು ಕಂಪನಿಯೊಂದಿಗೆ ಸ್ಪರ್ಧಿಸುತ್ತಿಲ್ಲ. ಆದರೆ ಅನೇಕ ಪ್ರಮುಖ ದೇಶಿಯ ಸ್ಮಾರ್ಟ್‌ಫೋನ್ ತಯಾರಕರೊಂದಿಗೆ ಸ್ಪರ್ಧಿಸುತ್ತಿದೆ. ಇದರೊಂದಿಗೆ, ಆಪಲ್ ಮಾರುಕಟ್ಟೆಯಲ್ಲಿ ಪ್ರಬಲ ಸ್ಪರ್ಧೆಯನ್ನು ನೀಡಲು ಪ್ರಯತ್ನಿಸುತ್ತಿದೆ. ಇದರ ಭಾಗವಾಗಿ ಚೀನಾದಲ್ಲಿ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಲು, ಆಪಲ್​ ಈ 4 ದಿನಗಳ ಆಫರ್​ ಪ್ರಾರಂಭಿಸಿದೆ.

Huawei ನಿಂದ ರಿಯಾಯಿತಿಗಳು: ಆಪಲ್ ಜೊತೆಗೆ ಚೀನಾದ ದೇಶಿಯ ಕಂಪನಿಗಳು ಸಹ ಕೊಡುಗೆಗಳನ್ನು ನೀಡುವಲ್ಲಿ ಹಿಂದೆ ಸರಿಯುತ್ತಿಲ್ಲ. ಚೀನಾದ ಅತಿದೊಡ್ಡ ಸ್ಮಾರ್ಟ್‌ಫೋನ್ ತಯಾರಕರಲ್ಲಿ ಒಂದಾದ Huawei ಕೂಡ ಆಪಲ್‌ನೊಂದಿಗೆ ಸ್ಪರ್ಧಿಸಲು ಸಂಪೂರ್ಣವಾಗಿ ಸಿದ್ಧವಾಗಿದೆ. Huawei ತನ್ನ ಉನ್ನತ-ಮಟ್ಟದ ಮೊಬೈಲ್ ಸಾಧನಗಳ ಬೆಲೆಯನ್ನು ಶೇ. 20 ರಷ್ಟು ಕಡಿತಗೊಳಿಸಿದೆ.

2020 ರಲ್ಲಿ ಅಮೆರಿಕ ಇದನ್ನು ನಿಷೇಧಿಸುವ ಮೊದಲು.. Huawei ವಿಶ್ವದ ಅತಿದೊಡ್ಡ ಸ್ಮಾರ್ಟ್‌ಫೋನ್ ತಯಾರಕ ಬ್ರ್ಯಾಂಡ್‌ಗಳಲ್ಲಿ ಒಂದಾಗಿತ್ತು. ಆದರೆ ಕಂಪನಿಯು ಇನ್ನೂ ತನ್ನ ದೇಶಿಯ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿದೆ. Huawei ಕೆಲವು ತಿಂಗಳ ಹಿಂದೆ 'Huawei Mate XT' ಹೆಸರಿನ 10-ಇಂಚಿನ ಸ್ಕ್ರೀನ್​ನ ಟ್ರೈ-ಫೋಲ್ಡ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿತು. ಸೆಪ್ಟೆಂಬರ್‌ನಲ್ಲಿ Apple ತನ್ನ 'iPhone 16 ಸೀರಿಸ್​' ಬಿಡುಗಡೆ ಮಾಡಿದ ಕೆಲವು ಗಂಟೆಗಳ ನಂತರ Huawei ಈ ಟ್ರೈ-ಫೋಲ್ಡ್ ಸ್ಮಾರ್ಟ್‌ಫೋನ್ ಅನ್ನು ಬೆಳಕಿಗೆ ತಂದಿತು. ಇದು ವಿಶ್ವದ ಮೊದಲ ಟ್ರೈ-ಫೋಲ್ಡಬಲ್ ಸ್ಮಾರ್ಟ್‌ಫೋನ್ ಆಗಿದೆ.

ಓದಿ: ಕಿಯಾ ಸಿರೋಸ್ ಬುಕ್ಕಿಂಗ್​ ಆರಂಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.