ETV Bharat / bharat

ರಾಮಲಲ್ಲಾ ಪ್ರತಿಷ್ಠಾಪನೆಗೆ ವರ್ಷದ ಸಂಭ್ರಮ: ಭರದಿಂದ ಸಾಗಿವೆ ಸಿದ್ಧತೆಗಳು - RAM TEMPLE ANNIVERSARY

ರಾಮಲಲ್ಲಾನ ಪ್ರತಿಷ್ಠಾಪನೆ ಮಾಡಿ ವರ್ಷ ತುಂಬುವ ಹಿನ್ನೆಲೆಯಲ್ಲಿ ವರ್ಷಾಚರಣೆಗೆ ಭರದ ಸಿದ್ಧತೆಗಳು ನಡೆಯುತ್ತಿವೆ.

ram-temple-anniversary-pratishtha-dwadashi-program-will-be-celebrated-on-january-11-in-ayodhya
ಅಯೋಧ್ಯೆ ರಾಮ ಮಂದಿರ (ಐಎಎನ್​ಎಸ್​​)
author img

By ETV Bharat Karnataka Team

Published : Jan 3, 2025, 5:35 PM IST

ಅಯೋಧ್ಯೆ, ಉತ್ತರಪ್ರದೇಶ: ಇಲ್ಲಿನ ರಾಮ ಮಂದಿರದಲ್ಲಿ ಬಾಲ ರಾಮನ ಪ್ರತಿಷ್ಠಾಪನೆಯಾಗಿ ಜನವರಿ 11ಕ್ಕೆ ಒಂದು ವರ್ಷವಾಗಲಿದ್ದು, ಮೊದಲ ವರ್ಷದ ಆಚರಣೆಗೆ ಈಗಾಗಲೇ ಸಿದ್ಧತೆಗಳು ಭರದಿಂದ ಸಾಗಿದೆ. ಶ್ರೀ ರಾಮ್​ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ ಇದಕ್ಕಾಗಿ ಪ್ರತಿಷ್ಠಾನ ದ್ವಾದಶಿ ಮೂರು ದಿನದ ವಾರ್ಷಿಕ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿದೆ.

ಈ ನಿಟ್ಟಿನಲ್ಲಿ ಗುರುವಾರ ರಾಮ ಮಂದಿರ ಟ್ರಸ್ಟ್​ ಮತ್ತು ಆಡಳಿತಾತ್ಮಕ ಅಧಿಕಾರಿಗಳು ಸ್ಥಳದ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಭದ್ರತಾ ಅಧಿಕಾರಿಗಳು ಮತ್ತು ಕಾರ್ಯಕ್ರಮ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ನ ಡಾ ಅನಿಲ್​ ಮಿಶ್ರಾ, ವಿಭಾಗೀಯ ಆಯುಕ್ತ ಗೌರವ್​ ದಯಾಲ್​, ಐಜಿ ಪ್ರವೀಣ್​ ಕುಮಾರ್​, ಜಿಲ್ಲಾ ಮ್ಯಾಜಿಸ್ಟ್ರೇಟ್​ ಚಂದ್ರ ವಿಜಯ್​ ಸಿಂಗ್​, ಮುನ್ಸಿಪಲ್​ ಕಮಿಷನರ್​ ಸಂತೋಷ್​ ಶರ್ಮಾ, ಎಸ್​ಎಸ್​ಪಿ ರಾಜ್​ಕರಣ್​ ನ್ಯಾಯ್ಯರ್​​, ಎಸ್​ಪಿ ಭದ್ರತಾ ಸಂಕರ್ಣ ಬ್ರಹ್ಮಚಾರಿ ದುಬೆ ಮತ್ತು ಇತರರು ಸಭೆಯಲ್ಲಿ ಭಾಗಿಯಾಗಿದ್ದರು.

ವಿಭಾಗೀಯ ಆಯುಕ್ತರಾದ ಗೌರವ್​ ದಯಾಳ್​ ಮಾತನಾಡಿ, ಪ್ರಾಣ ಪ್ರತಿಷ್ಠಾಪನೆ ವಾರ್ಷಿಕ ಆಚರಣೆ ಹಿನ್ನೆಲೆ ಜನವರಿ 11, 12, 13ರಂದು ಕಾರ್ಯಕ್ರಮ ಆಯೋಜಿಸಲಾಗಿದೆ. ಟ್ರಸ್ಟ್​ನಿಂದ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಅಂಗದ್​ ತಿಲ್​ ದಲ್ಲಿಅನೇಕ ಸಾಂಸ್ಕೃತಿಕ ಮತ್ತು ಕಥಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದೇಗುಲದ ಆವರಣದಲ್ಲಿ ರಾಗ್​ ಸೇವಾ ಉತ್ಸವ್​ ಕಾರ್ಯಕ್ರಮಗಳು ನಡೆಯಲಿದ್ದು, ರಾಮಯಣದ ಮರುಸೃಷ್ಟಿ ಮಾಡಲು ಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಅನೇಕ ಅತಿಥಿಗಳಿಗೆ ಆಹ್ವಾನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ, ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಮಾನ್ಯ ಜನರಿಗೂ ಅವಕಾಶ ನೀಡಲಾಗಿದೆ. ಸಮಾರಂಭದಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು, ತಳಮಟ್ಟದಿಂದ ಸಿದ್ಧತೆ ನಡೆಸಲಾಗಿದೆ. ಅನೇಕ ಸಂತರು ಹಾಗೂ ಅಯೋಧ್ಯೆ ನಿವಾಸಿಗಳು ಭಾಗಿಯಾಗಲಿದ್ದಾರೆ. ಜನವರಿ 1ರಂದು ಹೊಸ ವರ್ಷದ ಹಿನ್ನೆಲೆಯಲ್ಲಿ ಅಂದಾಜು 2 ಲಕ್ಷ ಜನರು ರಾಮ ಮಂದಿರಕ್ಕೆ ಭೇಟಿ ನೀಡಿದ್ದು, 2 ಲಕ್ಷ ಭಕ್ತರು ಹನುಮನ್​ ಗರ್ಹಿಗೆ ಹಾಗೂ 10 ಲಕ್ಷ ಜನರು ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ಈ ಭಕ್ತರ ಸಂಖ್ಯೆ ಭವಿಷ್ಯದಲ್ಲಿ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

ಮಹಾ ಕುಂಭ ಮತ್ತು ಪ್ರಾಣ ಪ್ರತಿಷ್ಠಾನದ ವಾರ್ಷಿಕ ಸಂಭ್ರಮಾಚರಣೆಗೆ ಬರುವ ಭಕ್ತರ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಾಗುವ ಹಿನ್ನೆಲೆ ಎಲ್ಲಾ ರೀತಿಯ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಯಾವುದೇ ರೀತಿಯ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆ.

ರಾಮ ಮಂದಿರ್​ ಟ್ರಸ್ಟ್​ನ ಉಸ್ತುವಾರಿ ಗೋಪಾಲ್​ ಜಿ ರಾವ್​ ಮಾತನಾಡಿ, ಅಂಗದ್​ ತಿಲಾ ಕಾರ್ಯಕ್ರಮ ಮಧ್ಯಾಹ್ನ 2 ರಿಂದ 8ರವರೆಗೆ ಸಾಗಲಿದೆ. ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದು, ಮೊದಲ ದಿನದ ವಾರ್ಷಿಕ ಕಾರ್ಯಕ್ರಮದ ಉದ್ಘಾಟನೆಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಆಗಮಿಸಲಿದ್ದಾರೆ.

ಇದನ್ನೂ ಓದಿ: ಶಬರಿಮಲೆ ದೇವಸ್ಥಾನ: 41 ದಿನದಲ್ಲಿ 32 ಲಕ್ಷ ಭಕ್ತರ ಭೇಟಿ, ದಾಖಲೆಯ 297 ಕೋಟಿ ಆದಾಯ ಸಂಗ್ರಹ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.