LIVE: ಇಸ್ರೋ ಪಿಎಸ್‌ಎಲ್‌ವಿ - ಸಿ60 ಉಡಾವಣೆ ನೇರಪ್ರಸಾರ - PSLV C60 LAUNCHING

🎬 Watch Now: Feature Video

thumbnail

By ETV Bharat Karnataka Team

Published : Dec 30, 2024, 10:02 PM IST

ಶ್ರೀಹರಿಕೋಟಾ: ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿ ಇರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿ - ಸಿ60 ಉಡಾವಣೆಯಾಗುತ್ತಿದೆ. ಇದರ ಕೌಂಡ್​ಡೌನ್​​ ಭಾನುವಾರ ರಾತ್ರಿ 8:58 ಕ್ಕೆ ಪ್ರಾರಂಭವಾಗಿತ್ತು. ಉಡಾವಣೆಯು ಇಂದು (ಸೋಮವಾರ) ರಾತ್ರಿ 10:00 ಕ್ಕೆ ಪ್ರಾರಂಭವಾಗಿದೆ. ಎಸ್‌ಎಲ್‌ವಿ - ಸಿ60 ಮುಖ್ಯವಾಗಿ ಸ್ಪಾಡೆಕ್ಸ್ ಉಪಗ್ರಹಗಳನ್ನು ಕಕ್ಷೆಗೆ ಉಡಾಯಿಸಲಿದೆ. ಇದರೊಂದಿಗೆ ಇನ್ನೂ 24 ಪೇಲೋಡ್‌ಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ವಿಜ್ಞಾನಿಗಳು ವ್ಯವಸ್ಥೆ ಮಾಡಿದ್ದಾರೆ. ವಿವಿಧ ಶೈಕ್ಷಣಿಕ ಸಂಸ್ಥೆಗಳು, ಸ್ಟಾರ್ಟಪ್‌ಗಳು ಮತ್ತು ಇಸ್ರೋ ಅಂಗಸಂಸ್ಥೆಗಳು ಸಿದ್ಧಪಡಿಸಿದ ಈ ಪೇಲೋಡ್‌ಗಳನ್ನು ವಿಜ್ಞಾನಿಗಳು ರಾಕೆಟ್‌ನ ನಾಲ್ಕನೇ ಹಂತದಲ್ಲಿ (ಮೇಲ್ಭಾಗ) ಅಳವಡಿಸಿದ್ದಾರೆ. PS4 - ಆರ್ಬಿಟಲ್ ಎಕ್ಸ್‌ಪರಿಮೆಂಟ್ ಮಾಡ್ಯೂಲ್ (POEM) ಆಗಿ ಕಾರ್ಯನಿರ್ವಹಿಸುವ ಈ ಭಾಗವು ಕೆಲವೇ ವಾರಗಳಲ್ಲಿ ಭೂಮಿಗೆ ಬೀಳಲಿದೆ. ಈ ನಿಗದಿತ ಅವಧಿಯೊಳಗೆ ಪೇಲೋಡ್‌ಗಳು ನಿರ್ದಿಷ್ಟ ಪ್ರಯೋಗಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ  ಇಸ್ರೋ ಅವುಗಳನ್ನು ವಿನ್ಯಾಸಗೊಳಿಸಿದೆ. ಬಾಹ್ಯಾಕಾಶ ಜಂಕ್‌ನ ಒಂದು ಭಾಗವನ್ನು ಬಳಸಿಕೊಂಡು ನಿರ್ದಿಷ್ಟ ಅವಧಿಯಲ್ಲಿ ಹೆಚ್ಚಿನ ಪ್ರಯೋಗಗಳನ್ನು ನಡೆಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಕಕ್ಷೆಯಲ್ಲಿ ಬಾಹ್ಯಾಕಾಶ ನೌಕೆಗಳ ಡಾಕಿಂಗ್ ಮತ್ತು ಅನ್‌ಡಾಕಿಂಗ್ ಪ್ರದರ್ಶಿಸಲು ಇಸ್ರೋ ಸಜ್ಜಾಗಿದೆ.

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.