India Vs England 5th T20: ಇಂಗ್ಲೆಂಡ್ ವಿರುದ್ಧ ನಡೆದ 5ನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಉತ್ತಮ ಸ್ಕೋರ್ ಕಲೆಹಾಕಿತು. ಅಭಿಶೇಕ್ ಶರ್ಮಾ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 247 ರನ್ಗಳ ಬೃಹತ್ ಮೊತ್ತ ಕಲೆ ಹಾಕಿತ್ತು.
ಇದಕ್ಕುತ್ತರವಾಗಿ ಆಂಗ್ಲರ ಪಡೆ ಕೇವಲ 97 ರನ್ ಗಳಿಗೆ ಸರ್ವಪತನ ಕಂಡಿತು. ಭಾರತದ ಬೌಲಿಂಗ್ ದಾಳಿಗೆ ಸಿಲುಕಿದ ಇಂಗ್ಲೀಷರು ಪೆವಿಲಿಯನ್ ಪರೆಡ್ ಮಾಡಿದರು. ತಂಡದ ಪರ ಫಿಲ್ ಸಾಲ್ಟ್ ಒಬ್ಬರೆ ಅರ್ಧಶತಕ ಸಿಡಿಸಿದರು.
ಶಮಿ 3 ವಿಕೆಟ್: ಈ ಟಿ20 ಸರಣಿ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಿರುವ ಶಮಿ 5ನೇ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದರು. 3 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ವರುಣ್ ಚಕ್ರವರ್ತಿ, ಶಿವಂ ದುಬೆ, ಅಭಿಷೇಕ್ ಶರ್ಮಾ, ತಲಾ ವಿಕೆಟ್ ಪಡೆದರು.
An impressive way to wrap up the series 🤩#TeamIndia win the 5th and final T20I by 150 runs and win the series by 4-1 👌
— BCCI (@BCCI) February 2, 2025
Scoreboard ▶️ https://t.co/B13UlBNLvn#INDvENG | @IDFCFIRSTBank pic.twitter.com/aHyOY0REbX
ದಾಖಲೆ ಬರೆದ ಅಭಿಷೇಕ್ ಶರ್ಮಾ: ಈ ಪಂದ್ಯದಲ್ಲಿ ಆರಂಭಿಕರಾಗಿ ಬ್ಯಾಟಿಂಗ್ ಬಂದ ಅಭಿಷೇಕ್ ಇಂಗ್ಲೀಷ್ ಬೌಲರ್ಗಳಿಗೆ ಬೆವರಿಳಿಸಿದರು. ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ 37 ಎಸೆತಗಳಲ್ಲೆ ಶತಕ ಸಿಡಿಸಿ ದಾಖಲೆ ಬರೆದರು.
ತಮ್ಮ ಇನ್ನಿಂಗ್ಸ್ನಲ್ಲಿ 54 ಎಸೆತಗಳನ್ನು ಆಡಿ 135 ರನ್ ಚಚ್ಚಿದರು. ಇದರೊಂದಿಗೆ ಟಿ20ಯಲ್ಲಿ ಅತೀ ಹೆಚ್ಚು ರನ್ ಭಾರಿಸಿದ ಮೊದಲ ಭಾರತೀಯ ಬ್ಯಾಟರ್ ದಾಖಲೆ ಬರೆದರು.
ಸಿಕ್ಸರ್ನಲ್ಲೂ ದಾಖಲೆ: ವಿಧ್ವಂಸಕ ಬ್ಯಾಟಿಂಗ್ ಮೂಲಕ ಅಬ್ಬರಿಸಿದ ಅಭಿಶೇಕ್ ಶರ್ಮಾ ತಮ್ಮ ಇನ್ನಿಂಗ್ಸ್ನಲ್ಲಿ ಬರೋಬ್ಬರಿ 13 ಸಿಕ್ಸರ್ ಸಿಡಿಸಿದರು. ಟಿ20 ಪಂದ್ಯದಲ್ಲಿ ಅತೀ ಹೆಚ್ಚು ಸಿಕ್ಸರ್ ಭಾರಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ದಾಖಲೆ ಬರೆದರು.
ಹಳೆ ಸೇಡು ತೀರಿಸಿಕೊಂಡ ಭಾರತ: ವಾಂಖೆಡೆ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ 150 ರನ್ಗಳಿಂದ ಗೆಲುವು ಸಾಧಿಸಿದ ಭಾರತ ಆಂಗ್ಲರ ವಿರುದ್ದ 13 ವರ್ಷದ ಹಳೆ ಸೇಡನ್ನು ತೀರಿಸಿಕೊಂಡಿತು. ಈ ಹಿಂದೆ 2012ರಲ್ಲಿ ಇದೇ ಮೈದಾನದಲ್ಲಿ ಭಾರತ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಇಂಗ್ಲೆಂಡ್ 6 ವಿಕೆಟ್ ಗಳಿಂದ ಗೆಲುವು ಸಾಧಿಸಿತ್ತು.