ಮುಂಬೈ (ಮಹಾರಾಷ್ಟ್ರ) : ಸಿಡಿಲ ಮರಿ ಅಭಿಷೇಕ್ ಶರ್ಮಾರ ಅಬ್ಬರದ ಬ್ಯಾಟಿಂಗ್ನಿಂದಾಗಿ ಇಂಗ್ಲೆಂಡ್ ವಿರುದ್ಧದ ಐದನೇ ಮತ್ತು ಕೊನೆಯ ಟಿ20 ಪಂದ್ಯದಲ್ಲಿ ಭಾರತ ತಂಡ 150 ರನ್ಗಳಿಂದ ಗೆಲುವು ಸಾಧಿಸಿತು. ಇದರಿಂದ ಸರಣಿಯನ್ನು 4-1 ರಲ್ಲಿ ತನ್ನದಾಗಿಸಿಕೊಂಡಿತು.
ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಅಭಿಷೇಕ್ ಶರ್ಮಾರ ಶತಕದ ನೆರವಿನಿಂದ 9 ವಿಕೆಟ್ಗೆ 247 ರನ್ ಬೃಹತ್ ಮೊತ್ತ ದಾಖಲಿಸಿತು. ಇದಕ್ಕುತ್ತರವಾಗಿ ಆಂಗ್ಲ ಪಡೆಯು ಬ್ಯಾಟಿಂಗ್ ವೈಫಲ್ಯದಿಂದ 10.3 ಓವರ್ಗಳಲ್ಲಿ 97 ರನ್ಗೆ ಸರ್ವಪತನ ಕಂಡು ಹೀನಾಯ ಸೋಲೊಪ್ಪಿಕೊಂಡಿತು.
𝙏𝙝𝙖𝙩 𝙒𝙞𝙣𝙣𝙞𝙣𝙜 𝙁𝙚𝙚𝙡𝙞𝙣𝙜! 🏆
— BCCI (@BCCI) February 2, 2025
Congratulations to the Suryakumar Yadav-led #TeamIndia on the T20I series win! 👏 👏#INDvENG | @IDFCFIRSTBank | @surya_14kumar pic.twitter.com/QvgUH8iClq
ಅಭಿಷೇಕ್ ಆಟಕ್ಕೆ ಇಂಗ್ಲೆಂಡ್ ತತ್ತರ : ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನೆರೆದಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಅಭಿಷೇಕ್ ಶರ್ಮಾ ರಸದೌತಣ ಉಣಬಡಿಸಿದರು. ಕ್ರೀಡಾಂಗಣದ ಮೂಲೆಮೂಲೆಗೂ ಚೆಂಡನ್ನು ಬಡಿದಟ್ಟಿದ ಎಡಗೈ ಬ್ಯಾಟರ್ ದಾಖಲೆಯ ಶತಕ ಬಾರಿಸಿದರು. 54 ಎಸೆತಗಳಲ್ಲಿ 135 ರನ್ ಗಳಿಸಿದರು. ಇದರಲ್ಲಿ 13 ಭರ್ಜರಿ ಸಿಕ್ಸರ್, 7 ಬೌಂಡರಿಗಳಿದ್ದವು.
ಅಭಿಷೇಕ್ ಆಟಕ್ಕೆ ಇಂಗ್ಲೆಂಡ್ ತಂಡದ ಆರೂ ಬೌಲರ್ಗಳು ದಂಡಿಸಿಕೊಂಡರು. ಅದರಲ್ಲೂ ಜೋಫ್ರಾ ಆರ್ಚರ್ 4 ಓವರ್ಗಳಲ್ಲಿ 55 ರನ್ ಚಚ್ಚಿಸಿಕೊಂಡು ದುಬಾರಿಯಾದರು. ಪ್ರತಿ ಬೌಲರ್ನ ಓವರ್ನಲ್ಲಿ ಕನಿಷ್ಠ ಒಂದು ಬೌಂಡರಿ, ಸಿಕ್ಸರ್ ಬಾರಿಸಿದರು. ಬೌಲಿಂಗ್ನಲ್ಲೂ ಮಿಂಚಿದ ಯುವ ಕ್ರಿಕೆಟಿಗ 2 ವಿಕೆಟ್ ಕಿತ್ತು ತಾನೊಬ್ಬ ಆಲ್ರೌಂಡರ್ ಎಂಬುದನ್ನು ಸಾಬೀತುಪಡಿಸಿದರು.
An impressive way to wrap up the series 🤩#TeamIndia win the 5th and final T20I by 150 runs and win the series by 4-1 👌
— BCCI (@BCCI) February 2, 2025
Scoreboard ▶️ https://t.co/B13UlBNLvn#INDvENG | @IDFCFIRSTBank pic.twitter.com/aHyOY0REbX
ಅಭಿಷೇಕ್ ದಾಖಲೆಗಳು : ಅಭಿಷೇಕ್ ಶರ್ಮಾ ಬಾರಿಸಿದ 135 ರನ್ ಟಿ20 ಕ್ರಿಕೆಟ್ನಲ್ಲಿ ಭಾರತೀಯ ಆಟಗಾರನ ಅತ್ಯಧಿಕ ಮೊತ್ತವಾಗಿದೆ. 37 ಎಸೆತಗಳಲ್ಲಿ ನೂರರ ಗಡಿ ದಾಟುವ ಮೂಲಕ ಎರಡನೇ ವೇಗದ ಶತಕ ಬಾರಿಸಿದ ಎರಡನೇ ಆಟಗಾರ ಎನಿಸಿಕೊಂಡರು. ರೋಹಿತ್ ಶರ್ಮಾ 35 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಒಂದೇ ಇನಿಂಗ್ಸ್ನಲ್ಲಿ ಅತ್ಯಧಿಕ ಅಂದರೆ 13 ಸಿಕ್ಸರ್ ಬಾರಿಸಿದ ಮೊದಲ ಆಟಗಾರ ಖ್ಯಾತಿಗೆ ಪಾತ್ರರಾದರು.
For ending the series with an impressive 14 wickets, Varun Chakravarthy is the Player of the Series 👏
— BCCI (@BCCI) February 2, 2025
Scoreboard ▶️ https://t.co/B13UlBNLvn#TeamIndia | #INDvENG | @IDFCFIRSTBank | @chakaravarthy29 pic.twitter.com/Pxs2liDEv1
ಬಸವಳಿದ ಇಂಗ್ಲೆಂಡ್ ಬ್ಯಾಟರ್ಸ್ : 247 ರನ್ಗಳ ಬೃಹತ್ ಮೊತ್ತ ಕಂಡ ಇಂಗ್ಲೆಂಡ್ ಆಟಗಾರರ ಬ್ಯಾಟಿಂಗ್ ಬಸವಳಿದಿತ್ತು. ಫಿಲಿಫ್ ಸಾಲ್ಟ್ 55 ರನ್ ಗಳಿಸಿದರೆ, ಉಳಿದ 9 ಆಟಗಾರರು 42 ರನ್ ಗಳಿಸಿದರು. ಇದರಿಂದ ತಂಡ 11 ಓವರ್ಗಳಲ್ಲಿಯೇ ಗಂಟುಮೂಟೆ ಕಟ್ಟಿತು.
14 ತಿಂಗಳ ಬಳಿಕ ಶಮಿಗೆ ವಿಕೆಟ್ : ಗಾಯಗೊಂಡು 14 ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಿದ ಮೊಹಮ್ಮದ್ ಶಮಿ ತಮ್ಮ ಹಳೆಯ ಗತ್ತು ತೋರಿಸಿದರು. 2.3 ಓವರ್ ಬೌಲ್ ಮಾಡಿದ ಶಮಿ ಮೂರು ವಿಕೆಟ್ ಗಳಿಸಿದರು. ವರುಣ್ ಚಕ್ರವರ್ತಿ, ಶಿವಂ ದುಬೆ, ಅಭಿಷೇಕ್ ಶರ್ಮಾ ತಲಾ 2 ವಿಕೆಟ್ ಕಿತ್ತರು.
ಇದನ್ನೂ ಓದಿ: 6,6,6,6,6,6! ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ಗೆ ಹಲವು ದಾಖಲೆ ಉಡೀಸ್!