How to Make Chintapandu Charu: ಕೆಲವರಿಗೆ ಊಟದಲ್ಲಿ ಸಾರು ಅಥವಾ ರಸಂ ಇಲ್ಲದಿದ್ದರೆ ಅನ್ನ ಸೇವಿಸಲು ಮನಸ್ಸಾಗುವುದಿಲ್ಲ. ಟೊಮೆಟೊ ರಸಂ, ಶುಂಠಿ ರಸಂ, ಬೇಳೆ ಸಾಂಬಾರ್ ಹೀಗೆ ಯಾವುದಾದರೊಂದು ಊಟದಲ್ಲಿ ಇರಲೇ ಬೇಕು. ನೀವು ಯಾವಾಗಲೂ ಒಂದೇ ಸಾಂಬಾರ್, ರಸಂ ಸೇವಿಸಿದರೆ ಬೇಸರವಾಗುವುದು ಸಾಮಾನ್ಯ. ನೀವು ಒಮ್ಮೆ ಯಾದರೂ 'ಹುಣಿನೆಹಣ್ಣಿನ ರಸಂ ಟ್ರೈ ಮಾಡಿ ನೋಡಿ. ಮೈನಡುಗುವ ಚಳಿಯಲ್ಲಿ ಅನ್ನದ ಜೊತೆಗೆ ಬಿಸಿ ಬಿಸಿಯಾದ ರಸಂ ಸವಿದರೆ ಅದರ ರುಚಿಯೇ ಬೇರೆಯಾಗಿರುತ್ತದೆ.
ಈ ರಸಂ ತುಂಬಾ ರುಚಿಕರವಾಗಿರುತ್ತದೆ ಹಾಗೂ ನೀವು ಹೊಟ್ಟೆ ತುಂಬಾ ಊಟ ಮಾಡಲು ಸಾಧ್ಯವಾಗುತ್ತದೆ. ಈ ರೆಸಿಪಿಯನ್ನು ಸೈಡ್ ಡಿಶ್ ಆಗಿಯು ಆಯ್ಕೆ ಮಾಡಿಕೊಳ್ಳಬಹುದು. ಈ ರಸಂ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಸರಳವಾಗಿ ಹುಣಸೆಹಣ್ಣಿನ ರಸಂ ಮಾಡುವುದು ಹೇಗೆ? ಇದಕ್ಕೆ ಬೇಕಾಗುವ ಪದಾರ್ಥಗಳೇನು ಎಂಬುದನ್ನು ನೋಡೋಣ.
ಹುಣಸೆ ಹಣ್ಣಿನ ರಸಂ ರೆಡಿ ಮಾಡಲು ಬೇಕಾಗುವ ಪದಾರ್ಥಗಳು:
- ಹುಣಸೆಹಣ್ಣು - ದೊಡ್ಡ ನಿಂಬೆಹಣ್ಣಿನ ಗಾತ್ರ
- ಬೆಳ್ಳುಳ್ಳಿ ಎಸಳು - 5
- ಎಣ್ಣೆ - 2 ಟೀಸ್ಪೂನ್
- ಈರುಳ್ಳಿ - 2
- ಟೊಮೆಟೊ-2
- ಒಗ್ಗರಣೆಗೆ ಬೇಕಾಗುವ ಬೀಜಗಳು (ಕಡಲೆ ಬೇಳೆ, ಉದ್ದಿನ ಬೇಳೆ, ಸಾಸಿವೆ, ಜೀರಿಗೆ ಎಲ್ಲಾ ಸೇರಿ) - 2 ಟೀಸ್ಪೂನ್
- ಅರಿಶಿನ - ಅರ್ಧ ಟೀಚಮಚ
- ಖಾರದ ಪುಡಿ - ಚಮಚ
- ಉಪ್ಪು - ರುಚಿಗೆ ತಕ್ಕಷ್ಟು
- ನೀರು ಅಗತ್ಯಕ್ಕೆ ತಕ್ಕಷ್ಟು
- ಕರಿಬೇವಿನ ಎಲೆಗಳು - 2 ಚಿಗುರುಗಳು
- ಕೊತ್ತಂಬರಿ ಸೊಪ್ಪಿನ ಪುಡಿ - ಸ್ವಲ್ಪ
- ಹಸಿಮೆಣಸಿನಕಾಯಿ- 3
ಹುಣಸೆ ಹಣ್ಣಿನ ರಸಂ ತಯಾರಿಸುವ ವಿಧಾನ:
- ಹುಣಸೆ ಹಣ್ಣನ್ನು 15 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ. ಈ ಅವಧಿಯಲ್ಲಿ ರಸಂ ಮಾಡಲು ಬೇಕಾದ ಟೊಮೆಟೊ, ಹಸಿಮೆಣಸಿನಕಾಯಿ, ಈರುಳ್ಳಿಯನ್ನು ತೆಳುವಾಗಿ ಕತ್ತರಿಸಿ ಇಟ್ಟುಕೊಳ್ಳಿ.
- ನಂತರ ಹುಣಸೆ ಹಣ್ಣಿನ ರಸಂ ತಯಾರಿಸಲು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ. ರಸಂಗೆ ಸಾಕಷ್ಟು ನೀರು ಸೇರಿಸಿ.
- ನಂತರ ಹಸಿ ಮೆಣಸಿನಕಾಯಿ, ಈರುಳ್ಳಿ, ಟೊಮೆಟೊ ಚೂರುಗಳು ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ. ಉಪ್ಪು, ಮೆಣಸು ಮತ್ತು ಅರಿಶಿನವನ್ನು ಸಹ ಸೇರಿಸಿ.
- ಈಗ ನಿಮ್ಮ ಕೈಗಳಿಂದ ಟೊಮೆಟೊ ಮತ್ತು ಈರುಳ್ಳಿ ತುಂಡುಗಳನ್ನು ಮ್ಯಾಶ್ ಮಾಡಿ.
- ನಂತರ ಈ ಪಾತ್ರೆಯನ್ನು ಒಲೆಯ ಮೇಲೆ ಇಡಿ. 10 ನಿಮಿಷಗಳ ಕಾಲ ರಸಂ ಅನ್ನು ಕುದಿಸಿ.
- ನಂತರ ರಸಂಗೆ ರುಚಿಗೆ ಉಪ್ಪು ಮತ್ತು ಖಾರ ಸೂಕ್ತವಾಗಿದೆಯೇ ಎಂದು ಪರಿಶೀಲಿಸಿ. ಸಾಧ್ಯವಾದರೆ ರುಚಿಗೆ ತಕ್ಕಷ್ಟು ಮತ್ತಷ್ಟು ಸೇರಿಸಿ ಹಾಗೂ ಒಲೆ ಆಫ್ ಮಾಡಿ.
- ಈಗ ಇನ್ನೊಂದು ಪಾತ್ರೆಯನ್ನು ಒಲೆಯ ಮೇಲೆ ಇಡಿ. ಎಣ್ಣೆಯನ್ನು ಹಾಕಿ, ಮತ್ತು ಬಿಸಿ ಮಾಡಿ. ನಂತರ ಬೆಳ್ಳುಳ್ಳಿ ಎಸಳು ಹಾಕಿ ಹುರಿಯಿರಿ.
- ಜೊತೆಗೆ ಒಗ್ಗರಣೆಗೆ ಬೇಕಾಗುವ ಬೀಜಗಳು (ಕಡಲೆ ಬೇಳೆ, ಉದ್ದಿನ ಬೇಳೆ, ಸಾಸಿವೆ, ಜೀರಿಗೆ ಎಲ್ಲಾ ಸೇರಿ) ಹಾಕಿ ಹುರಿಯಿರಿ. ಜೊತೆಗೆ ಕರಿಮೆಣಸು ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಹುರಿಯಿರಿ. ಇದಕ್ಕೆ ಬೇಯಿಸಿದ ರಸಂ ಅನ್ನು ಸೇರಿಸಿ ಹಾಗೂ ಮಿಶ್ರಣ ಮಾಡಿ.
- ಹೀಗೆ ಸಿಂಪಲ್ ಆಗಿ ಮಾಡಿದರೆ ತುಂಬಾ ರುಚಿಕರವಾದ ಹುಣಸೆ ಹಣ್ಣಿನ ರಸಂ ಸಿದ್ಧವಾಗುತ್ತದೆ.
- ನಿಮಗೆ ಇಷ್ಟವಾದರೆ ಮನೆಯಲ್ಲಿ ಹುಣಸೆ ಹಣ್ಣಿನ ರಸಂ ಅನ್ನು ಈ ರೀತಿ ಮಾಡಿ ನೋಡಿ.