ETV Bharat / sports

6,6,6,6,4,4,4.. ರಿಚಾ ಸ್ಫೋಟಕ ಬ್ಯಾಟಿಂಗ್​; RCB ಗೆಲುವಿನ ಶುಭಾರಂಭ - RCB VS GG HIGHLIGHT

RCB vs GG Highlight: ಗುಜರಾತ್​ ಜೈಂಟ್ಸ್​ ವಿರುದ್ಧ ನಡೆದಿದ್ದ WPL 2025ರ ಮೊದಲ ಪಂದ್ಯದಲ್ಲಿ RCB ಗೆದ್ದು ಶುಭಾರಂಭ ಮಾಡಿದೆ.

WPL 2025 RCB vs GG Highlight  RCB vs GG Richa Ghosh  RCB ellyse perry  RCB vs GG WPL Highlight
GT Women vs RCB Women ((Source : WPL 'X' Post))
author img

By ETV Bharat Sports Team

Published : Feb 15, 2025, 9:22 AM IST

RCB vs GG Highlight: ಮಹಿಳಾ ಪ್ರೀಮಿಯರ್​ ಲೀಗ್ (WPL 2025)​ 3ನೇ ಆವೃತ್ತಿ ಶುಕ್ರವಾರ ಪ್ರಾರಂಭವಾಗಿದೆ. 2024ರಲ್ಲಿ ಚಾಂಪಿಯನ್​ ಆಗಿದ್ದ RCB ಉದ್ಘಾಟನ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್​ (GG)​ ವಿರುದ್ಧ ಕಾಳಗಕ್ಕೆ ಇಳಿದಿತ್ತು.

ವಡೋದರದ ಕೋಟುಂಬಿ ಮೈದಾನದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಆರ್​ಸಿಬಿ ಬೃಹತ್​ ಮೊತ್ತವನ್ನು ಬೆನ್ನಟ್ಟಿ ಯಶಸ್ವಿಯಾಗಿ ಗೆಲುವು ಸಾಧಿಸಿದೆ. ಇದರೊಂದಿಗೆ 3ನೇ ಆವೃತ್ತಿಯಲ್ಲಿ ಮಂಧಾನ ಪಡೆ ಶುಭಾರಂಭ ಮಾಡಿದೆ.

ಗುಜರಾತ್​ ಜೈಂಟ್ಸ್​: ಉಭಯ ತಂಡಗಳ ನುಡವಿನ ಈ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ್ದ ಗುಜರಾತ್​ ಜೈಂಟ್ಸ್​ ಭರ್ಜರಿ ಬ್ಯಾಟಿಂಗ್​ ಮಾಡಿತ್ತು. ನಾಯಕಿ ಆಶ್ಲೆಗ್​ ಗಾರ್ಡನರ್​ ಮತ್ತು ವಿಕೆಟ್​ ಕೀಪರ್​ ಬೆಥ್​ ಮೂನಿ ಸ್ಪೋಟಕ ಪ್ರದರ್ಶನ ನೀಡಿದರು.

ಆರಂಭಿಕರಾಗಿ ಬ್ಯಾಟಿಂಗ್​​​ಗೆ ಬಂದ ಮೂನಿ 42 ಸೆತಗಳಲ್ಲಿ 8 ಬೌಂಡರಿ ಸಹಾಯದಿಂದ 56 ರನ್ ಚಚ್ಚಿ ಅರ್ಧಶತಕ ಪೂರ್ಣಗೊಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ನಾಯಕಿ ಆಶ್ಲೇಗ್​ ಗಾರ್ಡನರ್​ 37 ಎಸೆತಗಳಲ್ಲಿ 3 ಬೌಂಡರಿ, 8 ಸಿಕ್ಸರ್​ ಸಿಡಿಸಿ 79 ರನ್​ ಕಲೆ ಹಾಕಿದರು. ಈ ಇಬ್ಬರ ಸ್ಫೋಟಕ ಬ್ಯಾಟಿಂಗ್​ ನಿಂದಾಗಿಗೆ ಗುಜರಾತ್​ ಮಹಿಳಾ ತಂಡ 5 ವಿಕೆಟ್​ ನಷ್ಟಕ್ಕೆ 201 ರನ್​ ಗಳಿಸಿತು.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು: ಈ ಬೃಹತ್​ ಗುರಿ ಭೇದಿಸಲು ಮುಂದಾದ ಆರ್​ಸಿಬಿಗೆ ಆರಂಭಿಕ ಹಿನ್ನಡೆ ಆಯ್ತು. ಓನರ್​ ಆಗಿ ಬ್ಯಾಟಿಂಗ್​ ಗೆ ಬಂದ ನಾಯಕಿ ಸ್ಮೃತಿ ಮಂಧಾನ 9ರನ್​, ವ್ಯಾಟ್​ ಹೊಡ್ಜ್​ 4ರನ್​ ಗೆ ತಮ್ಮ ಇನ್ನಿಂಗ್ಸ್​ ಮುಗಿಸಿದರು. ಬಳಿಕ ಬ್ಯಾಟಿಂಗ್​ ಚಾರ್ಜ್ ತೆಗದುಕೊಂಡ ಎಲ್ಲಿಸ್​ ಪೆರಿ 6 ಬೌಂಡರಿ, 2 ಸಿಕ್ಸರ್​ ನೆರವಿನಿಂದ 57 ರನ್​ ಚಚ್ಚಿ ನಿರ್ಗಮಿಸಿದರು.

ರಿಚಾ ಘೋಷ್​ ಸ್ಫೋಟಕ ಬ್ಯಾಟಿಂಗ್​: ಎಲ್ಲಿಸ್ ಪೆರಿ ನಿರ್ಗಮಿಸಿದ ಬಳಿಕ ಸಿಡಿದೆದ್ದ ರಿಚಾ ಘೋಷ್​ ಗುಜರಾತ್​ ಬೌಲರ್ ಗಳನ್ನು ಹಿಗ್ಗಾಮುಗ್ಗ ದಂಡಿಸಿದರು. ಕನಿಕಾ ಅಹುಜಾ ಅವರೊಂದಿಗೆ ಸೇರಿ ಅಜೇಯ ಇನ್ನಿಂಗ್ಸ್​ ಆಡಿ ವೇಗವಾಗಿ ಅರ್ಧಶತಕ ಪೂರ್ಣಗೊಳಿಸಿದರು. ಕೇವಲ 27 ಎಸೆಗಳಲ್ಲಿ 64 ರನ್​ ಚಚ್ಚಿದರು. ಇದರಲ್ಲಿ 7 ಬೌಂಡರಿ, 4 ಸಿಕ್ಸರ್​ ಗಳು ಸೇರಿದವು. ಇದರೊಂದಿಗೆ ಗೆಲುವಿನ ನಗಾರಿಯನ್ನು ಬಾರಿಸಿದರು.

ವೇಗದ ಅರ್ಧಶತಕ: ಆರಂಭದಿಂದಲೆ ಭರ್ಜರಿ ಬ್ಯಾಟ್​ ಬೀಸಿದ ರಿಚಾ ಕೇವಲ 23 ಎಸೆತಗಳಲ್ಲಿ 50 ರನ್​ ಪೂರ್ಣಗೊಳಿಸಿದರು. ಇದರೊಂದಿಗೆ ಮಹಿಳಾ ಪ್ರೀಮಿಯರ್​ ಲೀಗ್​ನಲ್ಲಿ ವೇಗಾವಗಿ ಅರ್ಧಶತಕ ಸಿಡಿಸಿದ 5 ಆಟಗಾರ್ತಿ ಎಂಬ ದಾಖಲೆ ಬರೆದಿದ್ದಾರೆ.

ರೇಣುಕಾ ಸಿಂಗ್​ ಭರ್ಜರಿ ಬೌಲಿಂಗ್​: ಆರ್​ಸಿಬಿ ಪರ ರೇಣುಕಾ ಸಿಂಗ್​ ಉತ್ತಮ ಬೌಲಿಂಗ್​ ಮಾಡಿದರು ಇವರು 4 ಓವರ್​ಗಳಲ್ಲಿ 25 ರನ್​ ನೀಡಿ 2 ವಿಕೆಟ್​ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಉಳಿದಂತೆ ಕನಿಕಾ ಅಹುಜಾ ವೆರ್​ಹ್ಯಾಮ್​, ಪ್ರೇಮಾ ರಾವತ್​ ತಲಾ ಒಂದು ವಿಕೆಟ್​ ಪಡೆದು ಮಿಂಚಿದರು.

ಇದನ್ನೂ ಓದಿ: ವಿರಾಟ್​ ಕೊಹ್ಲಿ ದಾಖಲೆ ಮುರಿದು ನಂಬರ್​ 1 ಸ್ಥಾನಕ್ಕೇರಿದ ಬಾಬರ್​ ಅಜಮ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.