ಒಂದೇ ಕ್ಷೇತ್ರದಲ್ಲಿ ಕೆಲಸ ಮಾಡುವ ಅದೆಷ್ಟೋ ಮಂದಿ ಅದೇ ಕ್ಷೇತ್ರದವರನ್ನು ಪ್ರೀತಿಸಿ ಮದುವೆಯಾದ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಚಿತ್ರರಂಗ ಕೂಡಾ ಇದರಿಂದ ಹೊರತೇನಲ್ಲ. ಪ್ರೀತಿಸಿ ಮದುವೆಯಾಗಿ ಯಶಸ್ವಿ ದಾಂಪತ್ಯ ಜೀವನ ನಡೆಸುತ್ತಿರುವ ದಂಪತಿಗಳು ಚಂದನವನದಲ್ಲಿದ್ದಾರೆ. ಅದರಂತೆ, 2023ರಲ್ಲಿ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಅದ್ಧೂರಿಯಾಗಿ ಹಸೆಮಣೆ ಏರಿದ್ದರು.
ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಬೇಡಿಕೆ ಹೊಂದಿರುವ ಕಲಾವಿದರು. ಮದುವೆ ಬಳಿಕ ಗುಡ್ ನ್ಯೂಸ್ ಯಾವಾಗ? ಎಂದು ಒಂದಿಷ್ಟು ಅಭಿಮಾನಿಗಳು ಕೇಳುತ್ತಿದ್ದರು. 2023ರ ದೀಪಾವಳಿಯ ಶುಭ ಸಂದರ್ಭ ಯಶಸ್ವಿ ದಂಪತಿ ತಾವು ತಂದೆ-ತಾಯಿ ಆಗುತ್ತಿರುವ ಶುಭ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಶೀಘ್ರದಲ್ಲೇ ಮಗು ಜನಿಸುವ ಲಕ್ಷಣಗಳಿವೆ. ಈ ಹೊತ್ತಲ್ಲಿ ಬೇಬಿಬಂಪ್ ಫೋಟೋಶೂಟ್ ಹಂಚಿಕೊಳ್ಳುವ ಮೂಲಕ ಫೇಮಸ್ ಸೆಲೆಬ್ರಿಟಿ ಕಪಲ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಬ್ಲ್ಯೂ ಔಟ್ಫಿಟ್ ಧರಿಸಿ ಬೇಬಿಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಸಖತ್ ಮಾಡರ್ನ್ ಆಗಿ ಕಾಣಿಸಿಕೊಂಡಿದ್ದು, ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರೋದು ದಂಪತಿಯ ಮೊಗದಲ್ಲಿ ಕಾಣಿಸಿಕೊಂಡಿದೆ. ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಸುಂದರ ಫೋಟೋಗಳನ್ನು ಹಂಚಿಕೊಂಡಿರುವ ದಂಪತಿ, ''ಹ್ಯಾಪಿ 2025'' ಎಂದು ಬರೆದುಕೊಂಡಿದ್ದಾರೆ.
ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ್ದು ಹೀಗೆ : ನವೆಂಬರ್ 1ರಂದು ದ್ವೀಪ ರಾಷ್ಟ್ರ ಮಾಲ್ಡೀವ್ಸ್ನಲ್ಲಿ ಕಳೆದ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದ ನಟಿ ಹರಿಪ್ರಿಯಾ, ''ಪ್ರೀತಿಯ ಕನ್ನಡ ಮನಸ್ಸುಗಳಿಗೆ ಕರ್ನಾಟಕ ರಾಜ್ಯೋತ್ಸವದ ಹಾಗೂ ದೀಪಾವಳಿಯ ಶುಭಾಶಯಗಳು. ಈ ಶುಭ ದಿನದಂದು ನಿಮ್ಮೆಲ್ಲರೊಡನೆ ಶುಭಸುದ್ದಿಯೊಂದನ್ನು ಹಂಚಿಕೊಳ್ಳುವಾಸೆ ನಮ್ಮದು. ನಿಮ್ಮಲ್ಲಿ ಬಹುತೇಕರು ಊಹಿಸಿದ್ದು ಸರಿಯೇ. ಹೌದು, ನಾವು ನಮ್ಮ 'ಕುಡಿ'ಗಾಗಿ ಎದುರು ನೋಡುತ್ತಿದ್ದೇವೆ. ನಿಮ್ಮೆಲ್ಲರ ಹಾರೈಕೆ - ಆಶೀರ್ವಾದಗಳ ನಿರೀಕ್ಷೆಯಲ್ಲಿ..'' ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ: 'ಒಂದು ಮಳೆಬಿಲ್ಲು'.. ಸೇರಿ ಹಿಟ್ ಸಾಂಗ್ಸ್ ಕೊಟ್ಟ ಗಾಯಕ ಅರ್ಮಾನ್ ಮಲಿಕ್ ಮದುವೆ: ಡ್ರೀಮಿ ವೆಡ್ಡಿಂಗ್ ಫೋಟೋಗಳಿಲ್ಲಿವೆ
ಪ್ರೀತಿಯಲ್ಲಿದ್ದ ಹರಿಪ್ರಿಯಾ ವಸಿಷ್ಠ ಸಿಂಹ ಎಲ್ಲೂ ತಮ್ಮ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಇವರ ಪ್ರೇಮಪುರಾಣದ ಬಗ್ಗೆ ವದಂತಿಯೂ ಹರಡಲಿಲ್ಲ. ಮದುವೆ ದಿನಾಂಕ ಸಮೀಪಿಸುತ್ತಿದ್ದಂತೆ ತಮ್ಮ ಪ್ರೇಮ್ ಕಹಾನಿಯನ್ನು ಬಹಿರಂಗಪಡಿಸಿದ್ದರು. 2023ರ ಜನವರಿ 26ರಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಅದ್ಧೂರಿಯಾಗಿ, ಸಾಂಪ್ರದಾಯಿಕವಾಗಿ ಮದುವೆ ಆಗಿದ್ದರು. ಈ ಸಮಾರಂಭಕ್ಕೆ ಜೋಡಿಯ ಆಪ್ತರು ಹಾಗೂ ಕುಟುಂಬಸ್ಥರು ಸಾಕ್ಷಿಯಾಗಿದ್ದರು. ಇದೀಗ ಪೋಷಕರಾಗುತ್ತಿರುವ ಖುಷಿಯಲ್ಲಿದ್ದು, ಹೆಚ್ಚಿನ ಸಂಖ್ಯೆಯ ಫ್ಯಾನ್ಸ್ ವಿಶಸ್ ತಿಳಿಸಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ಗೆ ಎಂಟ್ರಿ ಕೊಟ್ಟ ಧನರಾಜ್ ಕೂಡುಕುಟುಂಬದ 30 ಮಂದಿ; ಕರಾವಳಿಯ ಪಿಲಿನಲಿಕೆ ಜೋರು