LIVE: ವಿಧಾನಸಭೆ ಕಲಾಪ; ಇಂದು ಬಾಣಂತಿಯರ ಸಾವು, ಅನುದಾನ ಕೊರತೆ ಬಗ್ಗೆ ಚರ್ಚೆ - ASSEMBLY SESSION

🎬 Watch Now: Feature Video

thumbnail

By ETV Bharat Karnataka Team

Published : 3 hours ago

ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ರಾಜ್ಯ ಚಳಿಗಾಲದ ಅಧಿವೇಶನದ 8ನೇ ಹಾಗೂ ಕೊನೆಯ ದಿನದ ವಿಧಾನಸಭೆಯ ಕಲಾಪ ನಡೆಯುತ್ತಿದೆ. ಸದನದಲ್ಲಿ ಇದುವರೆಗೆ ವಕ್ಫ್ ಆಸ್ತಿ ವಿಚಾರ, ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್​ ಸೇರಿದಂತೆ ಹಲವು ವಿಷಯಗಳು ಭಾರಿ ಗದ್ದಲ ಎಬ್ಬಿಸಿವೆ. ನಿನ್ನೆ (ಬುಧವಾರ) ಸ್ಪೀಕರ್ ಯು.ಟಿ.ಖಾದರ್ ಅವರು ಎರಡನೇ ಬಾರಿಗೆ ಮಧ್ಯರಾತ್ರಿವರೆಗೆ ಕಲಾಪ ನಡೆಸಿದ್ದರು. ಬೆಳಗ್ಗೆ 9.40 ರಿಂದ ಮಧ್ಯರಾತ್ರಿ 12.40ರ ವರೆಗೆ ಕಲಾಪ ನಡೆದಿತ್ತು. ಸತತ 15 ಗಂಟೆಗಳ ಕಾಲ ನಿರಂತರವಾಗಿ ಸದನ ನಡೆಸಿದ ಸ್ಪೀಕರ್ ಎಂಬ ಖ್ಯಾತಿಗೆ ಅವರು ಭಾಜನರಾಗಿದ್ದಾರೆ. ಮೊನ್ನೆ ಸೋಮವಾರ 14 ಗಂಟೆ ಕಾಲ ಕಲಾಪ ನಡೆಸಿದ್ದರು. ಇದೀಗ 15 ಗಂಟೆ ಕಾಲ ಸದನ ನಡೆಸಿ ದಾಖಲೆ ಮಾಡಿದ್ದಾರೆ.‌ ಮಧ್ಯಾಹ್ನದ ಭೋಜನಕ್ಕೂ ಬಿಡುವು ಕೊಡದೇ, ಮಧ್ಯರಾತ್ರಿ 12.40ವರೆಗೆ ನಿರಂತರ ಕಲಾಪ ನಡೆಸಿದ್ದರು. ವಿಧಾನಸಭೆಯಲ್ಲಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ ವಿಧೇಯಕವು ಅಂಗೀಕಾರಗೊಂಡಿತು. ಧ್ವನಿ ಮತದ ಮೂಲಕ ಹಲವು ತಿದ್ದಪಡಿಯೊಂದಿಗೆ ವಿಧೇಯಕವನ್ನು ಅಂಗೀಕರಿಸಲಾಯಿತು. ಇಂದು ಅನುದಾನದ ಕೊರತೆ ಬಗ್ಗೆ ಬಗ್ಗೆ ಸಿಎಂ ಉತ್ತರ ಕೊಡುತ್ತಾರೆ. ಅಲ್ಲದೆ, ಬಾಣಂತಿಯರ ಸಾವಿನ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ಉತ್ತರ ನೀಡಲಿದ್ದಾರೆ. ಇಂದಿನ ವಿಧಾನಸಭೆ ಕಲಾಪದ ನೇರಪ್ರಸಾರ ವೀಕ್ಷಿಸಿ.

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.