ETV Bharat / bharat

'ಹಿಂದುತ್ವದ ವರ್ಚಸ್ಸಿಗೆ ಧಕ್ಕೆ ತರಲು ಪಿತೂರಿ': ಮಹಾಕುಂಭ ಕಾಲ್ತುಳಿತದ ಬಗ್ಗೆ ಬಾಗೇಶ್ವರ್ ಬಾಬಾ ಆರೋಪ - MAHA KUMBH STAMPEDE

ಮಹಾ ಕುಂಭಮೇಳ ದುರಂತದ ಹಿಂದೆ ಪಿತೂರಿ ನಡೆದಿರುವ ಶಂಕೆಯಿದೆ ಎಂದು ಧೀರೇಂದ್ರ ಶಾಸ್ತ್ರಿ ಹೇಳಿದ್ದಾರೆ.

ಬಾಗೇಶ್ವರ್ ಬಾಬಾ
ಬಾಗೇಶ್ವರ ಧಾಮ್ ಪ್ರಧಾನ ಅರ್ಚಕ ಬಾಗೇಶ್ವರ್ ಬಾಬಾ (IANS)
author img

By ETV Bharat Karnataka Team

Published : Jan 31, 2025, 1:15 PM IST

ನವದೆಹಲಿ: ಮಹಾ ಕುಂಭಮೇಳ ದುರಂತವು ಹಿಂದುತ್ವದ ವರ್ಚಸ್ಸಿಗೆ ಧಕ್ಕೆ ತರುವ ಯೋಜಿತ ಮತ್ತು ಪ್ರಾಯೋಜಿತ ಪಿತೂರಿಯಾಗಿದೆ ಎಂದು ಬಾಗೇಶ್ವರ ಧಾಮ್ ಪ್ರಧಾನ ಅರ್ಚಕ ಧೀರೇಂದ್ರ ಶಾಸ್ತ್ರಿ ಶುಕ್ರವಾರ ಹೇಳಿದ್ದಾರೆ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಾತನಾಡಿದ ಅವರು, ಈ ಘಟನೆ ದುರಂತಮಯ, ಹೃದಯ ವಿದ್ರಾವಕ ಮತ್ತು ಊಹಿಸಲಾಗದ್ದು ಎಂದರು.

30 ಜನರು ಸಾವನ್ನಪ್ಪಿ, 60ಕ್ಕೂ ಹೆಚ್ಚು ಜನರು ಗಾಯಗೊಂಡ ಕಾಲ್ತುಳಿತದ ಘಟನೆ ನಡೆಯಲು ಜನದಟ್ಟಣೆಯೂ ಒಂದು ಕಾರಣವಾಗಿದೆ ಎಂದ ಅವರು, ಇದರ ಹಿಂದೆ ಹಿಂದುತ್ವದ ಇಮೇಜ್​ಗೆ ಹಾನಿಯುಂಟು ಮಾಡುವ ದೊಡ್ಡ ಪಿತೂರಿಯೂ ಇದೆ ಎಂದು ದೂರಿದರು.

ಘಟನೆಗೆ ಧೀರೇಂದ್ರ ಶಾಸ್ತ್ರಿ ಕಾರಣ - ಆರೋಪ: ಪ್ರಯಾಗ್‌ರಾಜ್​ನಲ್ಲಿ ನಡೆದ ಕಾಲ್ತುಳಿತದ ಘಟನೆಗೆ ಬಾಬಾ ಬಾಗೇಶ್ವರ ಧೀರೇಂದ್ರ ಶಾಸ್ತ್ರಿಯೇ ಕಾರಣ ಎಂದು ಉತ್ತರ ಪ್ರದೇಶದ ನಾಗಿನಾ ಲೋಕಸಭಾ ಸಂಸದ ಮತ್ತು ಆಜಾದ್ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಚಂದ್ರಶೇಖರ್ ಆಜಾದ್ ಆರೋಪಿಸಿದ್ದಾರೆ. ಧೀರೇಂದ್ರ ಶಾಸ್ತ್ರಿ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮೌನಿ ಅಮಾವಾಸ್ಯೆಯಂದು ಅಮೃತ ವರ್ಷ ಸಮಯದಲ್ಲಿ ಇಲ್ಲಿಗೆ ಬಾರದ ಭಕ್ತಾದಿಗಳು ದೇಶದ್ರೋಹಿಗಳು ಎಂದು ಬಾಗೇಶ್ವರ್ ಬಾಬಾ ಹೇಳಿದ್ದರು ಹಾಗೂ ಈ ಹೇಳಿಕೆಯ ನಂತರ ಅಲ್ಲಿಗೆ ಅಪಾರ ಸಂಖ್ಯೆಯ ಭಕ್ತಾದಿಗಳು ಹೋಗಿದ್ದರಿಂದಲೇ ಜನದಟ್ಟಣೆ ಉಂಟಾಯಿತು ಎಂದು ಪ್ರತಿಪಾದಿಸಿರುವ ಆಜಾದ್, ಈ ಘಟನೆಗೆ ಕಾರಣರಾದ ಧೀರೇಂದ್ರ ಶಾಸ್ತ್ರಿಯನ್ನು ಜೈಲಿಗಟ್ಟಬೇಕು ಎಂದು ಆಗ್ರಹಿಸಿದ್ದಾರೆ.

ಭಕ್ತರ ಸುರಕ್ಷತೆಗಾಗಿ ಕಠಿಣ ಕ್ರಮ ಜಾರಿ: ಮಹಾ ಕುಂಭಮೇಳದಲ್ಲಿ ಕಾಲ್ತುಳಿತದಲ್ಲಿ ಕನಿಷ್ಠ 30 ಜನರು ಸಾವನ್ನಪ್ಪಿದ ಒಂದು ದಿನದ ನಂತರ, ಉತ್ತರ ಪ್ರದೇಶ ಸರ್ಕಾರ ಗುರುವಾರ ಜನಸಂದಣಿ ನಿರ್ವಹಣೆ ಮತ್ತು ಭಕ್ತರ ಸುರಕ್ಷತೆಗಾಗಿ ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ. ಹೊಸ ನಿಯಮಗಳ ಪ್ರಕಾರ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ವಿಐಪಿ ಪಾಸ್​ಗಳನ್ನು ರದ್ದುಗೊಳಿಸಲಾಗಿದೆ, ಭದ್ರತಾ ನಿಯೋಜನೆಯನ್ನು ಹೆಚ್ಚಿಸಲಾಗಿದೆ ಮತ್ತು ಮೇಳ ನಗರವನ್ನು ಸಂಪರ್ಕಿಸುವ ಪಾಂಟೂನ್ ಸೇತುವೆಗಳ ಮೇಲಿನ ಅನಗತ್ಯ ನಿರ್ಬಂಧಗಳನ್ನು ಕೊನೆಗೊಳಿಸಲಾಗಿದೆ.

ಬಸಂತ್ ಪಂಚಮಿಯಂದು ಮುಂದಿನ ಅಮೃತ ಸ್ನಾನ ಮುಗಿಯುವ ಒಂದು ದಿನದ ನಂತರದವರೆಗೆ ಅಂದರೆ ಫೆಬ್ರವರಿ 4 ರವರೆಗೆ ಮಹಾ ಕುಂಭ ಪ್ರದೇಶವು ವಾಹನ ರಹಿತ ವಲಯವಾಗಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮೊದಲು ಸೂಕ್ತ ಪಾಸ್ ಹೊಂದಿರುವ ವಾಹನಗಳಿಗೆ ಮಹಾ ಕುಂಭ ಸ್ಥಳದಲ್ಲಿ ಸ್ಥಾಪಿಸಲಾದ ವಿವಿಧ ಶಿಬಿರಗಳವರೆಗೆ ಪ್ರಯಾಣಿಸಲು ಅವಕಾಶವಿತ್ತು. ಆದರೆ ಈಗ ಫೆಬ್ರವರಿ 4 ರವರೆಗೆ ಪ್ರಯಾಗ್ ರಾಜ್​ನ ಹೊರಗಿನಿಂದ ಬರುವ ನಾಲ್ಕು ಚಕ್ರದ ವಾಹನಗಳು ಮತ್ತು ಬಸ್ಸುಗಳ ಪ್ರವೇಶವನ್ನು ಸರ್ಕಾರ ನಿಷೇಧಿಸಿದೆ ಎಂದು ಅವರು ಹೇಳಿದರು.

ಕಿರಿದಾದ ದ್ವಾರದಿಂದ ಸಮಸ್ಯೆ: ಸಂಗಮಕ್ಕೆ ಹೋಗುವ ದ್ವಾರ ತೀರಾ ಕಿರಿದಾಗಿದ್ದರಿಂದ ಹಾಗೂ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಕಾಲ್ತುಳಿತದ ಘಟನೆ ನಡೆಯಲು ಕಾರಣವಾಯಿತು ಎಂದು ಬುಧವಾರದ ದುರಂತಕ್ಕೆ ಸಾಕ್ಷಿಯಾದ ಜನ ತಿಳಿಸಿದ್ದಾರೆ.

"ಸುಮಾರು ಒಂದು ಗಂಟೆ ಕಾಲ ಆ ಜನಸಮೂಹದಲ್ಲಿ ನಿಂತವರ ಉಸಿರುಗಟ್ಟಲಾರಂಭಿಸಿದ್ದರಿಂದ ಇತರ ಮಾರ್ಗಗಳ ಬ್ಯಾರಿಕೇಡ್​ಗಳನ್ನು ತೆಗೆಯುವಂತೆ ಜನರು ಪೊಲೀಸರಿಗೆ ಹೇಳುತ್ತಿದ್ದರು. ನಮಗೆ ಉಸಿರಾಡಲು ಸಹ ಸಾಧ್ಯವಾಗಲಿಲ್ಲ" ಎಂದು ತನ್ನ ಆರು ಸದಸ್ಯರ ಕುಟುಂಬದೊಂದಿಗೆ ಗುಂಪಿನಲ್ಲಿದ್ದ ಜಗ್ವಂತಿ ದೇವಿ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ಇದನ್ನೂ ಓದಿ: ಮಹಾಕುಂಭಮೇಳ: ಕಾಲ್ತುಳಿತದಲ್ಲಿ ಬಿಹಾರದ 10 ಮಹಿಳಾ ಭಕ್ತರು ಮೃತ, ಹಲವರು ಇನ್ನೂ ನಾಪತ್ತೆ - MAHA KUMBH STAMPEDE

ETV Bharat Logo

Copyright © 2025 Ushodaya Enterprises Pvt. Ltd., All Rights Reserved.