ETV Bharat / entertainment

ಸಂಧ್ಯಾ ಥಿಯೇಟರ್​ ಪ್ರಕರಣ: ನಟ ಅಲ್ಲು ಅರ್ಜುನ್​​ಗೆ ಜಾಮೀನು ಮಂಜೂರು - REGULAR BAIL TO ALLU ARJUN

ಅಲ್ಲು ಅರ್ಜುನ್​ಗೆ ನಾಂಪಲ್ಲಿ ನ್ಯಾಯಾಲಯ ಸಾಮಾನ್ಯ ಜಾಮೀನು ಮಂಜೂರು ಮಾಡಿದೆ. ಡಿಸೆಂಬರ್​ ಮೊದಲ ವಾರ ಹೈದರಾಬಾದ್​ನ ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಡಪಲ್ಲಿ ಪೊಲೀಸರು ನಟನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.

Regular Bail To Allu Arjun
ಅಲ್ಲು ಅರ್ಜುನ್​​ಗೆ ಜಾಮೀನು ಮಂಜೂರು (Photo: ETV Bharat)
author img

By ETV Bharat Entertainment Team

Published : Jan 3, 2025, 5:49 PM IST

'ಪುಷ್ಪ 2: ದಿ ರೂಲ್​​' ಚಿತ್ರದ ಪ್ರದರ್ಶನದ ವೇಳೆ ಸಂಧ್ಯಾ ಥಿಯೇಟರ್‌ನಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ದಕ್ಷಿಣ ಚಿತ್ರರಂಗದ ಖ್ಯಾತ ನಟ ಅಲ್ಲು ಅರ್ಜುನ್‌ ಅವರಿಗೆ ನಾಂಪಲ್ಲಿ ನ್ಯಾಯಾಲಯವು ಸಾಮಾನ್ಯ ಜಾಮೀನು (Regular Bail) ಮಂಜೂರು ಮಾಡಿದೆ. ಭಾರಿ ಜನಸಂದಣಿಯಿಂದಾಗಿ ಸಂಭವಿಸಿದ ಕಾಲ್ತುಳಿತದಲ್ಲಿ 35 ವರ್ಷದ ಮಹಿಳೆ ಸಾವನಪ್ಪಿ, ಅವರ ಮಗ ತೀವ್ರವಾಗಿ ಗಾಯಗೊಂಡಿದ್ದ. ಆತನಿಗೆ ಚಿಕಿತ್ಸೆ ಮುಂದುವರಿದಿದೆ.

ಈ ಹಿಂದೆ ತನ್ನ ತೀರ್ಪನ್ನು ಜನವರಿ 3ಕ್ಕೆ ಕಾಯ್ದಿರಿಸಿದ್ದ ನ್ಯಾಯಾಲಯ ಅಂತಿಮವಾಗಿ ಇಂದು ತನ್ನ ಆದೇಶ ಪ್ರಕಟಿಸಿದ್ದು, ನಟನಿಗೆ ರಿಲೀಫ್ ನೀಡಿದೆ. ಚಿಕ್ಕಡಪಲ್ಲಿ ಪೊಲೀಸರು ಜಾಮೀನು ಮನವಿಯನ್ನು ಬಲವಾಗಿ ವಿರೋಧಿಸಿದ್ದರು. ಕಾರ್ಯಕ್ರಮದ ಸುರಕ್ಷತಾ ಕ್ರಮಗಳನ್ನು ಪ್ರಶ್ನಿಸಿ ಕೌಂಟರ್​-ಅಫಿಡವಿಟ್ ಸಲ್ಲಿಸಿದ್ದರು. ಜನಸಂದಣಿ ನಿರ್ವಹಣೆಯಲ್ಲಿ ಲೋಪವಾಗಿದೆ ಎಂದು ಆರೋಪಿಸಿದ್ದರು.

ಅಲ್ಲು ಅರ್ಜುನ್ ಅವರ ಕಾನೂನು ತಂಡ ಈ ಮೇಲೆ ತಿಳಿಸಲಾದ ಆರೋಪಗಳನ್ನು ಎದುರಿಸಿತು. ನಟ ನೇರವಾಗಿ ಘಟನೆಯಲ್ಲಿ ಭಾಗಿಯಾಗಿಲ್ಲ ಮತ್ತು ಅವರ ವಿರುದ್ಧದ ಆರೋಪಗಳು ಬಿಎಸ್​​ಎನ್​​ ಸೆಕ್ಷನ್ 105ರ ಅಡಿ ಬರುವುದಿಲ್ಲ ಎಂದು ವಾದಿಸಿದರು. ಆದರೆ ತನಿಖೆಯೊಂದಿಗೆ ಅವರ ಸಹಕಾರ ಮತ್ತು ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಅವರು ಹೊಂದಿರುವ ಬದ್ಧತೆಯನ್ನು ಒತ್ತಿ ಹೇಳಿದರು. ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಲಯವು ನಟನಿಗೆ ರೆಗ್ಯುಲರ್​ ಬೇಲ್​ ಮಂಜೂರು ಮಾಡಿತು. ಕಸ್ಟಡಿ ಇಲ್ಲದೇ ತನಿಖೆ ಮುಂದುವರಿಸಬಹುದು ಎಂದು ಸೂಚಿಸಿತು.

ಇದನ್ನೂ ಓದಿ: ವಾರದ ದಿನಗಳಲ್ಲೂ ಉತ್ತಮ ಕಲೆಕ್ಷನ್​: ಈವರೆಗೆ ಸುದೀಪ್​ 'ಮ್ಯಾಕ್ಸ್​'​, ಉಪೇಂದ್ರ 'ಯುಐ' ಗಳಿಸಿದ್ದೆಷ್ಟು?

2024ರ ಡಿಸೆಂಬರ್​ 5ರಂದು ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ​ 'ಪುಷ್ಪ 2: ದಿ ರೂಲ್​' ಸಖತ್​ ಗ್ರ್ಯಾಂಡ್​ ಆಗಿ ಎಂಟ್ರಿ ಕೊಟ್ಟಿತು. ಡಿ.4ರ ರಾತ್ರಿ ಸ್ಪೆಷಲ್​ ಸ್ಕ್ರೀನಿಂಗ್​ ಆಯೋಜಿಸಲಾಗಿತ್ತು. ಈವೆಂಟ್​ಗೆ ಪತ್ನಿಯೊಟ್ಟಿಗೆ ಅಲ್ಲು ಅರ್ಜುನ್​ ಆಗಮಿಸಿದ್ದರು. ರಶ್ಮಿಕಾ ಕೂಡಾ ಜೊತೆಗಿದ್ದರು. ಹೆಚ್ಚಿನ ಸಂಖ್ಯೆಯ ಜನರು ಬಂದು ಸೇರಿದ್ದ ಹಿನ್ನೆಲೆ, ಕಾಲ್ತುಳಿತ ಸಂಭವಿಸಿತು. ಘಟನೆಯಲ್ಲಿ ರೇವತಿ ಎಂಬ ಮಹಿಳೆ ಸಾವನ್ನಪ್ಪಿದರೆ, ಅವರ 8 ವರ್ಷದ ಮಗ ಶ್ರೀ ತೇಜ್ ಗಂಭೀರವಾಗಿ ಗಾಯಗೊಂಡಿದ್ದ. ಚಿಕಿತ್ಸೆ ಮುಂದುವರಿದಿದ್ದು, ಚಿತ್ರತಂಡ ಮತ್ತು ಅಲ್ಲು ಅರ್ಜುನ್​ ಕುಟುಂಬ ಸಹಾಯ ಹಸ್ತ ಚಾಚಿದೆ.

ಇದನ್ನೂ ಓದಿ: ಟಾಕ್ಸಿಕ್​​​, ಕಾಂತಾರ 2, ಸಂಜು ವೆಡ್ಸ್ ಗೀತಾ 2..​​: 2025ರಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಚಿತ್ರಗಳಿವು

ಡಿಸೆಂಬರ್​ 25ರಂದು ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಅಲ್ಲು ಅರ್ಜುನ್ ಮತ್ತು ಪುಷ್ಪ 2 ಚಿತ್ರತಂಡ 2 ಕೋಟಿ ರೂ.ನ ಆರ್ಥಿಕ ನೆರವು ಘೋಷಿಸಿತ್ತು. ಇದರಲ್ಲಿ ಅಲ್ಲು ಅರ್ಜುನ್ ಅವರ 1 ಕೋಟಿ ರೂಪಾಯಿಯಾದರೆ, ಪುಷ್ಪ 2 ನಿರ್ಮಿಸಿರುವ ಮೈತ್ರಿ ಮೂವೀ ಮೇಕರ್ಸ್‌ನಿಂದ 50 ಲಕ್ಷ ರೂಪಯಿ ಹಾಗೂ ನಿರ್ದೇಶಕ ಸುಕುಮಾರ್ 50 ಲಕ್ಷ ರೂಪಾಯಿ ಕೊಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.