ETV Bharat / state

ಶಾಲೆಯ ಅಡುಗೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್​ಗೆ ಬೆಂಕಿ, 150 ಮಕ್ಕಳು ಅಪಾಯದಿಂದ ಪಾರು - FIRE ACCIDENT

ಗ್ಯಾಸ್ ಸಿಲಿಂಡರ್​ಗೆ ಬೆಂಕಿ ಹೊತ್ತಿಕೊಂಡು ಆಹಾರ ಸಾಮಗ್ರಿ ಸುಟ್ಟು ಕರಕಲಾಗಿದೆ.

FIRE ON GAS CYLINDER IN GOVERNMENT HIGHER PRIMARY SCHOOL
ಗ್ಯಾಸ್ ಸಿಲಿಂಡರ್​ಗೆ ಬೆಂಕಿ (ETV Bharat)
author img

By ETV Bharat Karnataka Team

Published : Feb 4, 2025, 10:53 PM IST

ಗಂಗಾವತಿ: ಕಾರಟಗಿಯ ರಾಮನಗರ ಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟದ ಅಡುಗೆ ಮನೆಯಲ್ಲಿ ಮಂಗಳವಾರ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಎರಡು ಗ್ಯಾಸ್ ಸಿಲಿಂಡರ್‌ಗಳಿಗೆ ವ್ಯಾಪಿಸಿತ್ತು. ಕೂಡಲೇ ಸಮಯ ಪ್ರಜ್ಞೆ ಮೆರೆದ ಶಿಕ್ಷಕರು ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.

ಅಡುಗೆಗೆ ಮೊದಲು ಒಂದು ಗ್ಯಾಸ್ ಸಿಲಿಂಡರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದರ ಪಕ್ಕದಲ್ಲೇ ಮತ್ತೊಂದು ಗ್ಯಾಸ್ ಸಿಲಿಂಡರ್ ಇಡಲಾಗಿತ್ತು. ಹೀಗಾಗಿ, ಎರಡೂ ಸಿಲಿಂಡರ್​ಗಳಿಗೂ ಬೆಂಕಿ ಹಬ್ಬಿದೆ.

Fire On Gas Cylinder In Government Higher Primary School
ಗ್ಯಾಸ್ ಸಿಲಿಂಡರ್​ಗೆ ಬೆಂಕಿ (ETV Bharat)

ಕೂಡಲೇ ಶಿಕ್ಷಕರು ಶಾಲೆಯಲ್ಲಿದ್ದ ಸುಮಾರು 150ಕ್ಕೂ ಹೆಚ್ಚು ಮಕ್ಕಳನ್ನು ಹೊರ ಕರೆತಂದು ಸುರಕ್ಷಿತ ಪ್ರದೇಶಕ್ಕೆ ಕಳಿಸಿದ್ದಾರೆ. ಬಳಿಕ ಬೆಂಕಿ ನಂದಿಸಲು ಶಿಕ್ಷಕರು, ಸಿಬ್ಬಂದಿ ಯತ್ನಿಸಿದ್ದಾರೆ. ಬೆಂಕಿ ನಿಯಂತ್ರಕ್ಕೆ ಬಾರದ ಹಿನ್ನೆಲೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ.

ಮೊಟ್ಟೆ ಬೇಯಿಸುವಾಗ ಘಟನೆ: ಮಕ್ಕಳಿಗೆ ಮೊಟ್ಟೆ ಬೇಯಿಸಲು ಸಿಲಿಂಡರ್ ಆನ್ ಮಾಡಿದ ವೇಳೆ ಈ ಅನಾಹುತ ಸಂಭವಿಸಿದೆ ಎಂದು ಗೊತ್ತಾಗಿದೆ. ಮೊದಲಿಗೆ ಮೊಟ್ಟೆ ಬೇಯಿಸಲು ಒಂದು ಸಿಲಿಂಡರ್ ಸಂಪರ್ಕ ಇರುವ ಒಲೆಗೆ ಬೆಂಕಿ ನೀಡಲಾಗಿದೆ. ಆ ನಂತರ ಅದರ ಪಕ್ಕದಲ್ಲಿರುವ ಮತ್ತೊಂದು ಒಲೆಯ ಮೇಲೆ ಸಾರು ಮಾಡಲು ಸಿಲಿಂಡರ್ ಆನ್ ಮಾಡಲಾಗಿದೆ. ಈ ವೇಳೆ ರೆಗ್ಯೂಲೇಟರ್​ನಲ್ಲಿ ದೋಷ ಕಾಣಿಸಿಕೊಂಡು ಗ್ಯಾಸ್ ಲೀಕ್ ಆಗಿದೆ.

ಅಡುಗೆ ಕೋಣೆಯಲ್ಲಿದ್ದ ಅನೇಕ ಆಹಾರ ಸಾಮಗ್ರಿ, ಧವಸ-ಧಾನ್ಯ ಸುಟ್ಟು ಕರಕಲಾಗಿವೆ. ಶಾಲಾ ಹಾಗೂ ಅಡುಗೆ ಸಿಬ್ಬಂದಿ ಹರಸಾಹಸಪಟ್ಟರೂ, ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ಸುದ್ದಿ ಹರಡುತ್ತಿದ್ದಂತೆ ಶಾಲೆಯ ಅಕ್ಕಪಕ್ಕದಲ್ಲಿದ್ದ ನಿವಾಸಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಅಗ್ನಿಶಾಮಕ ದಳದ ಕಚೇರಿ ಶಾಲೆಗೆ ಹತ್ತಿರವಿದ್ದ ಹಿನ್ನೆಲೆಯಲ್ಲಿ ಮಾಹಿತಿ ತಿಳಿಯುತ್ತಿದ್ದಂತೆ ಸಿಬ್ಬಂದಿ ಸ್ಥಳಕ್ಕಾಗಮಿಸಿ ನಂದಿಸಿದ್ದಾರೆ. ಎರಡು ಸಿಲಿಂಡರ್​ಗಳು ಬೆಂಕಿಗೆ ಆಹುತಿಯಾಗಿದ್ದು, ಮಿಕ್ಕ ಮೂರು ಸಿಲಿಂಡರ್​ಗಳು ಬೆಂಕಿ ತಗುಲಿ ಸುಟ್ಟಿವೆ. ಡ್ಯಾಮೇಜ್ ಆಗಿರುವ ಸಿಲಿಂಡರ್ ಬಳಸಿದರೆ ಮತ್ತೆ ಅಪಾಯ ಸಂಭವಿಸಬಹುದು ಎಂಬ ಕಾರಣಕ್ಕೆ ಜನವಸತಿರಹಿತ ಪ್ರದೇಶಕ್ಕೆ ಒಯ್ದು ಅನಿಲ್ ಹೊರಕ್ಕೆ ಬಿಡಲಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಇವಿ ಬೈಕ್ ಶೋ ರೂಮ್​ನಲ್ಲಿ ಬೆಂಕಿ: 30ಕ್ಕೂ ಹೆಚ್ಚು ಬೈಕ್​ಗಳು ಆಹುತಿ - FIRE AT ELECTRICAL BIKE SHOWROOM

ETV Bharat Logo

Copyright © 2025 Ushodaya Enterprises Pvt. Ltd., All Rights Reserved.