ETV Bharat / sports

ಹಿಟ್​ಮ್ಯಾನ್​ ವೇಗದ ಶತಕ : ಇಂಗ್ಲೆಂಡ್​ ವಿರುದ್ಧ ಏಕದಿನ ಸರಣಿ ಗೆದ್ದ ಭಾರತ - IND VS ENG 2ND ODI

ಇಂಗ್ಲೆಂಡ್​ ವಿರುದ್ಧ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 4 ವಿಕೆಟ್​ಗಳಿಂದ ಗೆಲುವು ಸಾಧಿಸಿದೆ.

IND VS ENG 2ND ODI REPORT  INDIA VS ENGLAND ODI SERIES  IND VS ENG 2ND ODI ROHIT SHARMA  ROHIT SHARMA RECORDS
Team India Players (IANS)
author img

By ETV Bharat Sports Team

Published : Feb 9, 2025, 10:38 PM IST

Ind vs Eng 2nd ODI: ಇಂಗ್ಲೆಂಡ್​​ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 4 ವಿಕೆಟ್​ಗಳಿಂದ ಗೆಲುವು ಸಾಧಿಸಿದೆ. ಇದರೊಂದಿಗೆ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ವಶಪಡಿಸಿಕೊಂಡಿದೆ.

ಒಡಿಶಾದ ಬಾರಾಬತಿ ಮೈದಾನದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಇಂಗ್ಲೆಂಡ್​ ನೀಡಿದ್ದ 304 ರನ್​ಗಳ ಗುರಿಯನ್ನು ಬೆನ್ನತ್ತಿದ ಭಾರತ 33 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ನಗೆ ಬೀರಿತು. ತಂಡದ ಪರ ಬ್ಯಾಟಿಂಗ್​ಗೆ ಬಂದ ರೋಹಿತ್​ ಶರ್ಮಾ ಮತ್ತು ಶುಭಮನ್​ ಗಿಲ್​ ಆರಂಭದಿಂದಲೇ ಆಂಗ್ಲರನ್ನು ಬೆಂಡೆತ್ತಿದರು. ಈ ಇಬ್ಬರು ಉತ್ತಮ ಜೊತೆಯಾಟವಾಡಿ ತಂಡಕ್ಕೆ ಗೆಲುವಿನ ಬುನಾದಿ ಹಾಕಿದರು. ರೋಹಿತ್ ಶರ್ಮಾ ಶತಕ ಸಿಡಿಸಿದರೇ, ಶುಭಮನ್​ ಗಿಲ್​ ಅರ್ಧಶತ ಸಿಡಿಸಿ ಮಿಂಚಿದರು.

136 ರನ್​​ಗಳ ಜೊತೆಯಾಟ : ಆರಂಭಿಕ ಜೋಡಿಯಾದ ರೋಹಿತ್​ ಶರ್ಮಾ ಮತ್ತು ಶುಭಮನ್​ ಗಿಲ್​ 100 ಎಸೆತಗಳಲ್ಲಿ 136 ರನ್​ಗಳ ಜೊತೆಯಾಟ ಆಡಿದರು. ರೋಹಿತ್​ ಶರ್ಮಾ ತಮ್ಮ ಇನ್ನಿಂಗ್ಸ್​ನಲ್ಲಿ 119 ರನ್​ ಚಚ್ಚಿದರೆ, ಶುಭಮನ್​ ಗಿಲ್ 52 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್​​ ಸಹಾಯದಿಂದ 60ರನ್​ ಕಲೆಹಾಕಿದರು.

ರೋಹಿತ್​ ವಿಧ್ವಂಸಕ ಬ್ಯಾಟಿಂಗ್ ​: ಸತತ ಕಳಪೆ ಬ್ಯಾಟಿಂಗ್​ನಿಂದ ಕಂಗೆಟ್ಟಿದ್ದ ರೋಹಿತ್​ ಶರ್ಮಾ ಎರಡನೇ ಪಂದ್ಯದಲ್ಲಿ ಫಾರ್ಮ್​ಗೆ ಮರಳಿದ್ದಾರೆ. ಈ ಪಂದ್ಯದಲ್ಲಿ 30 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ರೋಹಿತ್​, 76 ಎಸೆತಗಳಲ್ಲಿ ಶತಕವನ್ನೂ ಬಾರಿಸಿದರು. ಒಟ್ಟಾರೆ 90 ಎಸೆತಗಳನ್ನು ಎದುರಿಸಿ 12 ಬೌಂಡರಿ ಮತ್ತು 7 ಸಿಕ್ಸರ್​ ಸಹಾಯದಿಂದ 119 ರನ್​ ಗಳಿಸಿದರು.

ಕೊಹ್ಲಿ ಮತ್ತೆ ಫ್ಲಾಪ್​ : ಒಂದೆಡೆ ರೋಹಿತ್ ಶರ್ಮಾ ಫಾರ್ಮ್​ಗೆ ಮರಳಿದರೆ ವಿರಾಟ್​ ಕೊಹ್ಲಿ ಮಾತ್ರ ಬ್ಯಾಟಿಂಗ್​ ದೌರ್ಬಲ್ಯ ಎದುರಿಸುತ್ತಿದ್ದಾರೆ. ಈ ಪಂದ್ಯದಲ್ಲಿ ಲಯಕ್ಕೆ ಮರಳಲಿದ್ದಾರೆ ಎಂದುಕೊಂಡಿದ್ದ ಫ್ಯಾನ್ಸ್​​ಗೆ ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ. 8 ಎಸೆತಗಳನ್ನು ಆಡಿ ಕೇವಲ 5 ರನ್​ ಗಳಿಸಿ ಪೆವಿಲಿಯನ್​ ಸೇರಿದ್ದಾರೆ.

ಜಡೇಜಾ ಬೌಲಿಂಗ್​ ಕಮಾಲ್ ​: ಮೊದಲ ಪಂದ್ಯದಲ್ಲಿ ಮೂರು ವಿಕೆಟ್​​ ಪಡೆದು ಮಿಂಚಿದ್ದ ಜಡೇಜಾ ಎರಡನೇ ಪಂದ್ಯದಲ್ಲೂ ತಮ್ಮ ಬೌಲಿಂಗ್​ ದಾಳಿ ಮುಂದುವರೆಸಿ ಆಂಗ್ಲರನ್ನು ಕಟ್ಟಿ ಹಾಕಿದರು. ಬೆನ್​ ಡೆಕೆಟ್​ (65), ರೂಟ್​ (69), ಜೇಮಿ ಓವರ್​ಟನ್​ (6) ಪ್ರಮುಖ ಬ್ಯಾಟರ್​ಗಳ ವಿಕೆಟ್​ ಪಡೆಯುವಲ್ಲಿ ಜಡ್ಡು ಯಶಸ್ವಿಯಾದರು.

85 ರನ್​ಗೆ 7 ವಿಕೆಟ್​ ಕಳೆದುಕೊಂಡ ಇಂಗ್ಲೆಂಡ್ ​: ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ್ದ ಆಂಗ್ಲ ಪಡೆ ಉತ್ತಮ ಆರಂಭ ಪಡೆದುಕೊಂಡಿತ್ತು. ಆರಂಭದಲ್ಲಿ ಇಂಗ್ಲೀಷರ ಬ್ಯಾಟಿಂಗ್​ ವೇಗ ಗಮನಿಸಿದರೆ 340+ ಸ್ಕೋರ್​ ಕಲೆಹಾಕಲಿದ್ದಾರೆ ಎಂದೇ ಅಂದಾಜಿಸಲಾಗಿತ್ತು. ಆದರೆ, ಬೆನ್​ ಡಕೆಟ್​ ಮತ್ತು ಜೋ ರೂಟ್​ ನಿರ್ಗಮನದ ನಂತರ ಕೇವಲ 85 ರನ್​ಗಳ ಅಂತರದಲ್ಲೇ ಇಂಗ್ಲೆಂಡ್​ ಅಂತಿಮ 7 ವಿಕೆಟ್​ಗಳನ್ನು ಕಳೆದುಕೊಂಡಿತು. ಇದರಿಂದಾಗಿ 304ರನ್​ಗಳಿಗೆ ತೃಪ್ತಿ ಪಟ್ಟಿತು.

ಮ್ಯಾನ್​ ಆಫ್​​ ದಿ ಮ್ಯಾಚ್ ​: ಪಂದ್ಯದಲ್ಲಿ ರೋಹಿತ್​ ಶರ್ಮಾ ಉತ್ತಮ ಪ್ರದರ್ಶನ ನೀಡಿದ್ದು ಮ್ಯಾನ್​ ಆಫ್​ ದಿ ಮ್ಯಾಚ್​ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ರೋಹಿತ್​ ಶರ್ಮಾ ಸ್ಫೋಟಕ ಬ್ಯಾಟಿಂಗ್​ಗೆ ಸಚಿನ್​, ದ್ರಾವಿಡ್​, ಗೇಲ್​ ದಾಖಲೆ ಉಡೀಸ್​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.