ETV Bharat / state

ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್​ ಸೋಲು : ಸಚಿವ ಕೆ.ರಾಜಣ್ಣ ಪ್ರತಿಕ್ರಿಯೆ ಹೀಗಿದೆ - RAJANNA ANGER AGAINST HIGH COMMAND

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮತ ವಿಭಜನೆಯಿಂದ ಬಿಜೆಪಿ ಗೆದ್ದಿದೆ ಅಷ್ಟೇ ಎಂದು ಸಚಿವ ಕೆ.ರಾಜಣ್ಣ ಹೈಕಮಾಂಡ್​ ವಿರುದ್ಧ ವಾಗ್ದಾಳಿ ನಡೆಸಿದರು.

Minister K. Rajanna
ಸಚಿವ ಕೆ.ರಾಜಣ್ಣ (ETV Bharat)
author img

By ETV Bharat Karnataka Team

Published : Feb 9, 2025, 11:09 PM IST

ದಾವಣಗೆರೆ: "ಏನೇ ಇದ್ರು ತಪ್ಪನ್ನೇ ಮುಂದಿಟ್ಟುಕೊಂಡು ಶತ್ರುವನ್ನು ಬಲಿಷ್ಠ ಮಾಡಬಾರದು. ಈಗ ದೆಹಲಿಯಲ್ಲಿ ಆಗಿದೆ, ಹಿಂದೆ ಹರಿಯಾಣದಲ್ಲಿ ಆಗಿದೆ. ಇಬ್ಬರಿಗೂ ಜಂಬ ಇದೆ. ಈಗೋಯಿಸಮ್ ಇದೆ, ಹೀಗಾಗಿ ಸೋಲಾಗಿದೆ" ಎಂದು ಹೈಕಮಾಂಡ್ ವಿರುದ್ಧ ಸಚಿವ ಕೆ. ರಾಜಣ್ಣ ವಾಗ್ದಾಳಿ ನಡೆಸಿದರು.

ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ಮಾತನಾಡಿದ ಅವರು, "‌ರಾಷ್ಟ್ರ ರಾಜಕಾರಣ ಅರಿತು ಶತ್ರುವನ್ನು ಸೋಲಿಸಬೇಕು. ಜಾತ್ಯಾತೀತರು ಒಂದಾಗಬೇಕು, ಜಾತಿಯನ್ನು ಸೋಲಿಸಬೇಕು. ಮತ ವಿಭಜನೆಯಿಂದ ಬಿಜೆಪಿ ಗೆದ್ದಿದೆ. ಇಲ್ಲಿ ರಾಜಕೀಯ ಜಂಜಾಟ ಇದೆ. ನಮ್ಮವರೇ ದ್ವೇಷ ಸಾಧಿಸಿಕೊಂಡು ಶತ್ರುವನ್ನು ಬಲಿಷ್ಠ ಮಾಡಿದ್ದಾರೆ" ಎಂದು ಹೇಳಿದರು.‌

ಸಚಿವ ಕೆ.ರಾಜಣ್ಣ (ETV Bharat)

ಸಿಎಂ ಬದಲಾವಣೆ ಕುರಿತು ಮಾತನಾಡಿ, "ಯಾರ್ ಸಿಎಂ ಆದ್ರು ಏನೇ ಆದ್ರು ತೀರ್ಮಾನ ಅಂತಿಮ ಹೈಕಮಾಂಡ್​ನದ್ದಾಗಿದೆ. ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲ ಬದ್ಧರಿದ್ದೇವೆ. ಧ್ವನಿ ಇಲ್ಲದ ಸಮುದಾಯಗಳಿಗೆ ಅರಿವು, ಅಧಿಕಾರ ಹಂಚಿಕೆ, ಸಮುದಾಯ ಬಲಿಷ್ಠ ಮಾಡುವುದು ಎಸ್ಸಿ ಎಸ್ಟಿ ಸಮಾವೇಶದ ಉದ್ದೇಶ. ಕಾಂಗ್ರೆಸ್ ನೇತೃತ್ವದಲ್ಲಿ ಎಸ್ಸಿ ಎಸ್ಟಿ ಸಮಾವೇಶ ಮಾಡುತ್ತಿದ್ದೇವೆ. ರಾಜಕೀಯ ವಂಚಿತ ಸಮುದಾಯಗಳಿಗೆ ಅನುಕೂಲ ಮಾಡುವ ಉದ್ದೇಶ ಅಂದುಕೊಂಡಿದ್ದೇವೆ. ಹಾಗಾಗಿ ಸಮಾವೇಶ ಮಾಡೇ ಮಾಡುತ್ತೇವೆ. ಮಾರ್ಚ್​ 7ನೇ ತಾರೀಕಿಗೆ ಬಜೆಟ್ ಮಂಡನೆ ಆಗಲಿದೆ. ಪೂರ್ಣ ಪ್ರಮಾಣದ ಬಜೆಟ್ ಇದಾಗಲಿದೆ. ಜನರಿಗೆ ಅನುಕೂಲ ಮತ್ತು ಒಳ್ಳೆಯ ಬಜೆಟ್ ಕೊಡುವುದರಲ್ಲಿ ಸಿದ್ದರಾಮಯ್ಯ ನಿಸ್ಸೀಮರು. ಎಲ್ಲ ಜನರ ವಿಶ್ವಾಸವನ್ನು ತೆಗೆದುಕೊಂಡು ಬಜೆಟ್ ರೂಪಿಸುತ್ತಾರೆ" ಎಂದರು.

ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತೆ- ಸಚಿವ ಶಿವರಾಜ್ ತಂಗಡಗಿ : "ಜನರಿಗೆ ಗೊತ್ತಿದೆ ಬಿಜೆಪಿಯವರು ದೇಶಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂಬುದು. ಬರೀ ಜಾತಿ ಧರ್ಮದ ಬಗ್ಗೆ ಮಾತನಾಡುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಸೂಕ್ತ ಬಹುಮತದೊಂದಿದೆ ಕಾಂಗ್ರೆಸ್ ದೇಶದಲ್ಲಿ ಅಧಿಕಾರಕ್ಕೆ ಬರುತ್ತದೆ. ರಾಹುಲ್ ಗಾಂಧಿ ಪ್ರಧಾನಿಯಾಗುತ್ತಾರೆ. ಇವಿಎಂ ಮಷಿನ್ ಬಗ್ಗೆ ನಮಗೆ ಈಗಲೂ ಅನುಮಾನ ಇದೆ. ದೇಶದ ಜನಕ್ಕೆ ಅನುಮಾನ ಬರಬಾರದು ಎಂದು ಅಲ್ಲಲ್ಲಿ ಗೆಲ್ಲಿಸುವ ಕೆಲಸ ಮಾಡುತ್ತಿದ್ದಾರೆ. ಅದು ಬಿಟ್ಟು ಉಳಿದ ಕಡೆ ಇವಿಎಂ ಮಷಿನ್​ನಲ್ಲಿ ಸಾಕಷ್ಟು ಅನುಮಾನ ಇದೆ. ಬಿಜೆಪಿಯವರದ್ದು ದೇಶದಲ್ಲಿ ಕೊಡುಗೆ ಏನಿದೆ. ಹಳೇ ರೋಡ್​ಗೆ ಟಾರ್ ಹಾಕುವ ಕೆಲಸ ಬಿಜೆಪಿ ಮಾಡುತ್ತಿದೆ ಅಷ್ಟೇ. ಹೇಳಿಕೊಳ್ಳುವ ಯಾವುದೇ ಅಭಿವೃದ್ಧಿ ಕೆಲಸಗಳಿಲ್ಲ" ಸಚಿವ ಶಿವರಾಜ್ ತಂಗಡಗಿ ಅಕ್ರೋಶ ವ್ಯಕ್ತಪಡಿಸಿದರು.

ಸಚಿವ ಶಿವರಾಜ್ ತಂಗಡಗಿ (ETV Bharat)

ಅವಕಾಶ ಮತ್ತು ಅವಶ್ಯಕತೆ ಬಿದ್ದಾಗ ದಲಿತ ಸಮಾವೇಶ, ಇದಕ್ಕೆ ಹೆಡ್ ಪರಮೇಶ್ವರ್ : ಅವಕಾಶ ಮತ್ತು ಅವಶ್ಯಕತೆ ಬಿದ್ದಾಗ ದಲಿತ ಸಮಾವೇಶ, ದಲಿತ ಸಮಾವೇಶದ ಹೆಡ್ ಪರಮೇಶ್ವರ್. ಸಮಾವೇಶ ಪರಮೇಶ್ವರ್ ನೇತೃತ್ವದಲ್ಲಿ ನಡೆಯಲಿದೆ.‌ ದಲಿತ ಸಮಾವೇಶ ಕುರಿತು ಪರಮೇಶ್ವರ್ ಬಳಿ ಕೇಳಿ ಅವರೇ ಅದರ ಹೆಡ್. ಅದರ ರೂಪುರೇಷೆ ಕುರಿತು ಪರಮೇಶ್ವರ್ ಬಳಿ ಕೇಳಿ" ಎಂದು ಸಚಿವ ಸತೀಶ್ ಜಾರಕಿಹೋಳಿ ತಿಳಿಸಿದರು.

ದಾವಣಗೆರೆಯಲ್ಲಿ ಕಾಂಗ್ರೆಸ್ ಸಭೆ ಸೇರಿದ ವಿಚಾರವಾಗಿ ಪ್ರತಿಕ್ರಿಯಿಸಿ, "ಸಭೆ ಸೇರಲೇಬಾರದಾ?" ಎಂದು ಕೇಳಿದರು.

ಸಚಿವ ಸತೀಶ್ ಜಾರಕಿಹೋಳಿ (ETV Bharat)

"ಇವಿಎಂ ಬಗ್ಗೆ ಸಾಕಷ್ಟು ಅನುಮಾನ ಇದೆ, ಅದರ ಕುರಿತು ಸಮಗ್ರ ಚರ್ಚೆ ಆಗಬೇಕಿದೆ. ಸಿದ್ದು ಕೊನೆ ಬಜೆಟ್ ಎಂದಿದ್ದು ಬಿಜೆಪಿ, ಬಿಜೆಪಿಯವರ ಬಳಿ ಅದನ್ನು ಕೇಳಿ. ಸಿಎಂ ಆಗಿ ಸಿದ್ದರಾಮಯ್ಯ ಅವರೇ ಇರ್ತಾರೆ" ಎಂದರು.

ಇದನ್ನೂ ಓದಿ:ಡಿಕೆಶಿ ಮೇಕೆದಾಟುಗೆ ಮೊದಲು ತಮಿಳುನಾಡು ಸರ್ಕಾರದ ಒಪ್ಪಿಗೆ ಪಡೆಯಲಿ: ಹೆಚ್​. ಡಿ. ಕುಮಾರಸ್ವಾಮಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.