ಕರ್ನಾಟಕ

karnataka

ETV Bharat / technology

ಮತ್ತೆ ಭೂಮಿಗೆ ಮರಳಿದೆ 104 ಉಪಗ್ರಹಗಳನ್ನು ಹೊತ್ತು ವಿಶ್ವ ದಾಖಲೆ ಮಾಡಿದ್ದ ರಾಕೆಟ್​ನ ಮೇಲಿನ ಭಾಗ! - PS4 ENTERS EARTH

PS4 Enters Earth: ಪಿಎಸ್ 4 ಭೂಮಿಗೆ ವಾಪಸ್​ ಆಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹೇಳಿದೆ. 2017 ರಲ್ಲಿ ಈ ರಾಕೆಟ್ ಮೂಲಕ ದಾಖಲೆಯ 104 ಉಪಗ್ರಹಗಳನ್ನು ಉಡಾವಣೆ ಮಾಡಲಾಗಿತ್ತು.

ISRO 104 SATELLITES LAUNCHED  PSLV 37 ROCKET UPPER STAGE  INDIAN SPACE RESEARCH ORGANISATION  NORTH ATLANTIC OCEAN
ಮತ್ತೆ ಭೂಮಿಗೆ ಮರಳಿದೆ 104 ಉಪಗ್ರಹಗಳನ್ನು ಹೊತ್ತು ವಿಶ್ವ ದಾಖಲೆ ಮಾಡಿದ್ದ ರಾಕೆಟ್​ನ ಮೇಲಿನ ಭಾಗ (X/ISRO)

By ETV Bharat Tech Team

Published : Oct 9, 2024, 9:33 AM IST

PS4 Enters Earth:ಏಳು ವರ್ಷಗಳ ಹಿಂದೆ ದಾಖಲೆಯ 104 ಉಪಗ್ರಹಗಳನ್ನು ಉಡಾವಣೆ ಮಾಡಿದ PSLV-37 ರಾಕೆಟ್‌ನ ಮೇಲಿನ ಹಂತ ಅಥವಾ PS4 ಭೂಮಿಗೆ ಪುನಃ ಪ್ರವೇಶಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಪ್ರಕಟಿಸಿದೆ.

2017ರಲ್ಲಿ ಇತಿಹಾಸ ಸೃಷ್ಟಿ: ಒಂದಾನೊಂದು ಕಾಲದಲ್ಲಿ ಎತ್ತಿನ ಗಾಡಿಯಲ್ಲಿ ಉಪಗ್ರಹಗಳನ್ನು ಹೊತ್ತೊಯ್ದು ಗಗನಕ್ಕೆ ಹಾರಿಸಿದ್ದ ಇಸ್ರೋ ಏಕಕಾಲಕ್ಕೆ 104 ಉಪಗ್ರಹಗಳನ್ನು ಉಡಾವಣೆ ಮಾಡಿ ವಿಶ್ವ ದಾಖಲೆ ಮಾಡಿ, ವಾವ್ಹ್​ ಎನ್ನುವಷ್ಟು ಪ್ರಶಂಸೆಗೆ ಪಾತ್ರವಾಗಿತ್ತು. 2017ರಲ್ಲಿ ಭಾರತೀಯ ವಿಜ್ಞಾನಿಗಳು ಈ ಪವಾಡವನ್ನು ನನಸಾಗಿಸಿದ್ದಲ್ಲದೇ ವಿಶ್ವದಾಖಲೆ ಬರೆದಿದ್ದರು. ಭಾರತದ ಈ ಸಾಧನೆಗೆ ಅತ್ಯುತ್ತಮ ಬಾಹ್ಯಾಕಾಶ ಸಂಸ್ಥೆ ಎನಿಸಿರುವ ನಾಸಾ ಕೂಡ ಬೆಚ್ಚಿ ಬಿದ್ದಿತ್ತು. PSLV-C37 ತನ್ನ 39 ನೇ ಹಾರಾಟದಲ್ಲಿ, ಅಮೆರಿಕದ ಗರಿಷ್ಠ 96 ಉಪಗ್ರಹಗಳನ್ನು ಒಳಗೊಂಡಂತೆ 104 ಉಪಗ್ರಹಗಳನ್ನು ಹೊತ್ತೊಯ್ದು ಸಾಧನೆ ಮಾಡಿತ್ತು.

ಈಗ ಇದಕ್ಕೆ ಸಂಬಂಧಿಸಿದಂತೆ ಉಪಗ್ರಹಗಳ ನಿಯೋಜಿಸಿದ ನಂತರ ಮೇಲಿನ ಹಂತವನ್ನು (ಪಿಎಸ್ 4) ಸರಿಸುಮಾರು 470 x 494 ಕಿಮೀ ಗಾತ್ರದ ಕಕ್ಷೆಯಲ್ಲಿ ಸುತ್ತುತ್ತಿತ್ತು. ನಂತರ ಅದನ್ನು ಪ್ರತಿದಿನ ಟ್ರ್ಯಾಕ್ ಮಾಡಲಾಗುತ್ತಿತ್ತು. ವರ್ಷದಿಂದ ವರ್ಷಕ್ಕೆ ಅದರ ಕಕ್ಷೆಯ ಎತ್ತರವು ಕ್ರಮೇಣ ಕಡಿಮೆಯಾಗುತ್ತಿತ್ತು ಎಂದು ಇಸ್ರೋ ಹೇಳಿದೆ.

ಭೂಮಿಗೆ ಮರಳಿದ ಪಿಎಸ್​4:ಈ ವರ್ಷದ ಸೆಪ್ಟೆಂಬರ್‌ನಿಂದ IS4OM (ISRO System for Safe and Sustained Space Operations Management) ತನ್ನ ದಿನನಿತ್ಯದ ಚಟುವಟಿಕೆಗಳ ಭಾಗವಾಗಿ ನಿಯಮಿತ ಆನ್ - ಕಕ್ಷೆಯ ಮೇಲ್ವಿಚಾರಣೆ ನಡೆಸುತ್ತಿತ್ತು. ಅಕ್ಟೋಬರ್ ಮೊದಲ ವಾರದಲ್ಲಿ ಈ ಯಂತ್ರ ಅಂದರೆ ಪಿಎಸ್​​ 4 ಭೂಮಿಗೆ ಮರು-ಪ್ರವೇಶಿಸಿದೆ. ಅಕ್ಟೋಬರ್ 6, 2024 ರಂದು ಈ ಭಾಗವು ಅಂತಿಮವಾಗಿ ಸುಮಾರು 8 ವರ್ಷಗಳ ನಂತರ ಭೂಮಿಗೆ ಮರಳಿದೆ. ರಾಕೆಟ್‌ನ ಮೇಲಿನ ಭಾಗ PS4 ನೇರವಾಗಿ ಉತ್ತರ ಅಟ್ಲಾಂಟಿಕ್ ಸಾಗರಕ್ಕೆ ಬಿದ್ದಿತು. ಪಿಎಸ್​4 ಪತನದ ಸಮಯದಲ್ಲಿ ಉಂಟಾಗುವ ಹಾನಿಯಿಂದ ರಕ್ಷಿಸಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ. ಈ ರಾಕೆಟ್ ಉಡಾವಣೆಯಾದ ಅರ್ಧ ಗಂಟೆಯೊಳಗೆ ಎಲ್ಲ ಉಪಗ್ರಹಗಳನ್ನು ತಮ್ಮ ಕಕ್ಷೆಯಲ್ಲಿ ನಿಯೋಜಿಸಿತ್ತು.

PSLV-C37 ಮಿಷನ್‌ನಲ್ಲಿ ಒಟ್ಟು 104 ಉಪಗ್ರಹಗಳನ್ನು ಉಡಾವಣೆ ಮಾಡಲಾಗಿತ್ತು. ಮೊದಲನೆಯದು ಕಾರ್ಟೊಸ್ಯಾಟ್-2ಡಿ. ಇದನ್ನು ಭಾರತೀಯ ಸೇನೆಯು ಅಘೋಷಿತವಾಗಿ ಬಳಸುತ್ತದೆ. ಸರ್ಜಿಕಲ್ ಮತ್ತು ವೈಮಾನಿಕ ದಾಳಿಗಳಲ್ಲಿ ಇದರ ಸಹಾಯವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ಕಾರ್ಟೊಸ್ಯಾಟ್ ಸರಣಿಯ ಉಪಗ್ರಹಗಳನ್ನು ಸಾಮಾನ್ಯವಾಗಿ ಕಾರ್ಟೋಗ್ರಫಿಗೆ ಅಂದರೆ ನಕ್ಷೆ ತಯಾರಿಕೆಗೆ ಬಳಸಲಾಗುತ್ತದೆ. ಆದರೆ ಅವುಗಳನ್ನು ಕಣ್ಗಾವಲು, ಬೇಹುಗಾರಿಕೆ ಇತ್ಯಾದಿಗಳಿಗೆ ಬಳಸಬಹುದು. ಇದಲ್ಲದೇ ಇನ್ನೂ 103 ಉಪಗ್ರಹಗಳು ಉಡಾವಣೆ ಮಾಡಲಾಗಿದೆ. ಅವುಗಳು INS-1A, INS-1B, AL-Farabi 1, BGUSAT, DIDO-2, Nayif-1, PEASS, 88 Flock-3p Satallies ಮತ್ತು 9 Lemur-2 ಉಪಗ್ರಹಗಳೆಂದು ಹೆಸರಿಸಲಾಗಿದೆ.

ಓದಿ:ಮಿಲ್ಟನ್ ಚಂಡಮಾರುತಕ್ಕೆ ನಲುಗಿದ ಬಾಹ್ಯಾಕಾಶ ಸಂಸ್ಥೆ : NASA-SpaceX ಯುರೋಪಾ ಕ್ಲಿಪ್ಪರ್ ಕಾರ್ಯಾಚರಣೆ ವಿಳಂಬ

ABOUT THE AUTHOR

...view details