iPhone SE 4: ಅಮೆರಿಕನ್ ಟೆಕ್ ಕಂಪನಿ ಆಪಲ್ ಮುಂದಿನ ಕೆಲವು ತಿಂಗಳುಗಳಲ್ಲಿ ಐಫೋನ್ SE 4 ಅನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಇದನ್ನು ಏಪ್ರಿಲ್ ವೇಳೆಗೆ ಪ್ರಾರಂಭಿಸಬಹುದು ಎಂದು ನಂಬಲಾಗಿದೆ. ಕಂಪನಿಯು ಮೂರು ವರ್ಷಗಳ ನಂತರ SE ಮಾದರಿಯನ್ನು ಪ್ರಾರಂಭಿಸಲಿದೆ. ಹೀಗಾಗಿ ಜನರು ಅದರ ನಿರೀಕ್ಷಿತ ಅಪ್ಡೇಟ್ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದಾರೆ. ಅದರ ಸಂಭವನೀಯ ವೈಶಿಷ್ಟ್ಯಗಳ ಬಗ್ಗೆ ಮಾಹಿತಿಯನ್ನು ಅನೇಕ ವರದಿಗಳಲ್ಲಿ ಬಹಿರಂಗಪಡಿಸಲಾಗಿದೆ. ಇದೀಗ ಇದರ ಅಂದಾಜು ಬೆಲೆಯೂ ವರದಿಯೊಂದರಲ್ಲಿ ಬಹಿರಂಗವಾಗಿದ್ದು, ನಿರೀಕ್ಷೆಯಷ್ಟು ದುಬಾರಿಯಾಗಿಲ್ಲ.
ಐಫೋನ್ SE 4 ವೈಶಿಷ್ಟ್ಯಗಳು : ಈ ಬಾರಿ ಕಂಪನಿಯು SE ಸೀರಿಸ್ನ ವಿನ್ಯಾಸದಲ್ಲಿ ಬದಲಾವಣೆಗಳನ್ನು ಮಾಡಲಿದೆ. ಐಫೋನ್ SE 4 ನ ವಿನ್ಯಾಸವು iPhone 14 ನಂತೆಯೇ ಇರುತ್ತದೆ ಮತ್ತು ಇದು 6.1 ಇಂಚಿನ OLED ಡಿಸ್ಪ್ಲೇಯನ್ನು ಹೊಂದಬಹುದು ಎಂದು ನಿರೀಕ್ಷಿಸಲಾಗಿದೆ. ಇದು ಐಫೋನ್ 15 ನಂತಹ 48MP ರಿಯರ್ ಸೆನ್ಸಾರ್ ಹೊಂದಿರುವ ಒಂದೇ ಕ್ಯಾಮರಾವನ್ನು ಹೊಂದಿರುತ್ತದೆ ಎಂಬ ಊಹಾಪೋಹಗಳಿವೆ. ಆಪಲ್ ಇದನ್ನು A18 ಚಿಪ್‌ನೊಂದಿಗೆ ಸಜ್ಜುಗೊಳಿಸುತ್ತದೆ ಮತ್ತು ಇದು 8GB RAM ನೊಂದಿಗೆ ಬರುತ್ತದೆ ಎಂದು ನಂಬಲಾಗಿದೆ. iPhone SE 4 ಆಪಲ್ ಇಂಟೆಲಿಜೆನ್ಸ್ ಅನ್ನು ಸಹ ಇದು ಸಪೋರ್ಟ್ ಮಾಡುತ್ತದೆ.
USB-C ಪೋರ್ಟ್ ಲಭ್ಯ : ಐಫೋನ್ 14 ಮತ್ತು ಪ್ರಸ್ತುತ SE ಸರಣಿಯಲ್ಲಿ ಚಾರ್ಜ್ ಮಾಡಲು ಲೈಟ್ನಿಂಗ್ ಕನೆಕ್ಟರ್ ಲಭ್ಯವಿದೆ. ಇದು ಹೊಸ SE 4 ಮಾದರಿಯಲ್ಲಿ ಬದಲಾಗುತ್ತದೆ. ಈಗ iPhone SE 4 ಸೇರಿದಂತೆ ಎಲ್ಲಾ Apple ಸಾಧನಗಳನ್ನು USB-C ಪೋರ್ಟ್‌ನೊಂದಿಗೆ ಪ್ರಾರಂಭಿಸಲಾಗುವುದು. ಯುರೋಪಿಯನ್ ಒಕ್ಕೂಟದ ನಿಯಮಗಳು ಇದರ ಹಿಂದಿನ ಪ್ರಮುಖ ಕಾರಣವೆಂದು ನಂಬಲಾಗಿದೆ. ಇದರ ಹೊರತಾಗಿ ಕಂಪನಿಯು ತನ್ನ ಮೊದಲ ಆಂತರಿಕ 5G ಮೋಡೆಮ್‌ನೊಂದಿಗೆ ಅದನ್ನು ಸಜ್ಜುಗೊಳಿಸುತ್ತದೆ. ಇದು ವೈ-ಫೈ, ಬ್ಲೂಟೂತ್ ಮತ್ತು ಜಿಪಿಎಸ್ ಅನ್ನು ನಿಭಾಯಿಸುತ್ತದೆ.
ಎಷ್ಟಿರಬಹುದು ಐಫೋನ್ SE 4 ಬೆಲೆ? ಕೆಲವು ಇತ್ತೀಚಿನ ವರದಿಗಳು ಮುಂಬರುವ iPhone SE 4 ನ ಬೆಲೆ 500 US ಡಾಲರ್ (ಸುಮಾರು 43,000 ರೂ.) ಆಗಿರಬಹುದು ಎಂದು ಹೇಳುತ್ತಿವೆ. ಇದು 2022 ರಲ್ಲಿ ಬಿಡುಗಡೆಯಾದ ಐಫೋನ್ SE 3 ಗಿಂತ ಸುಮಾರು 6,000 ರೂ.ಗಳಷ್ಟು ದುಬಾರಿಯಾಗಿರುತ್ತದೆ. ಭಾರತದಲ್ಲಿ ಇದರ ಬೆಲೆ ಸುಮಾರು 50,000 ರೂಪಾಯಿಗಳಿಂದ ಪ್ರಾರಂಭವಾಗಬಹುದು.
ಹೆಸರು ಬದಲಾಗಬಹುದೇ? ಕಂಪನಿಯು iPhone SE 4 ನ ಹೆಸರನ್ನು iPhone 16e ಎಂದು ಬದಲಾಯಿಸಬಹುದು ಅಂತಾ ಕೆಲವು ವರದಿಗಳಲ್ಲಿ ಹೇಳಲಾಗುತ್ತಿದೆ. ಈ ರೀತಿಯಾಗಿ, SE ಟ್ಯಾಗ್ ಅನ್ನು ತೆಗೆದುಹಾಕುವ ಮೂಲಕ, ಈ ಫೋನ್ iPhone 16 ಸರಣಿಗೆ ಸೇರುತ್ತದೆ.
ಓದಿ: ಕೋಲ್ಡ್ ಸೆನ್ಸಿಟಿವ್ ಕಲರ್ ಚೇಂಜ್: ದೇಶಿ ಮಾರುಕಟ್ಟೆಗೆ ಬರ್ತಿದೆ ಹಲವು ವಿಶೇಷತೆಗಳ ಸ್ಮಾರ್ಟ್ಫೋನ್