BSNL New Prepaid Plans: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಅಂದರೆ ಬಿಎಸ್ಎನ್ಎಲ್ ಎರಡು ಹೊಸ ಪ್ರಿಪೇಯ್ಡ್ ಪ್ಲಾನ್ಗಳನ್ನು ಬಿಡುಗಡೆ ಮಾಡಿದೆ. ಈ ಪ್ರಿಪೇಯ್ಡ್ ಯೋಜನೆಗಳ ಬೆಲೆ ರೂ. 628 ಮತ್ತು ರೂ. 215 ಆಗಿದೆ. ಈ ಯೋಜನೆಗಳಲ್ಲಿ, ಬಳಕೆದಾರರು ಡೇಟಾ ಮತ್ತು ಸಕ್ರಿಯ ಮಾನ್ಯತೆಯೊಂದಿಗೆ ವಾಯ್ಸ್ ಕಾಲ್ ಸೌಲಭ್ಯವನ್ನು ಪಡೆಯುತ್ತಾರೆ. ಬಿಎಸ್ಎನ್ಎಲ್ನ ಈ ಎರಡು ಹೊಸ ಪ್ರಿಪೇಯ್ಡ್ ಯೋಜನೆಗಳ ಕುರಿತ ವಿವರಣೆ ಇಲ್ಲಿದೆ..
ಟೆಲಿಕಾಂ ಟಾಕ್‌ನ ಇತ್ತೀಚಿನ ವರದಿಯ ಪ್ರಕಾರ, ಬಿಎಸ್ಎನ್ಎಲ್ ರೂ. 628 ಮತ್ತು ರೂ.215 ರ ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಪ್ರಾರಂಭಿಸಿದೆ. ಈ ಎರಡೂ ಯೋಜನೆಗಳನ್ನು ಭಾರತದಾದ್ಯಂತ ಬಿಎಸ್ಎಲ್ಎನ್ನ ಎಲ್ಲಾ ವಲಯಗಳಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ.
ಬಿಎಸ್ಎಲ್ಎನ್ನ 628 ರೂ. ಪ್ಲಾನ್: ಬಿಎಸ್ಎಲ್ಎನ್ನ ಹೊಸ ಪ್ರಿಪೇಯ್ಡ್ ಪ್ಲಾನ್ ರೂ. 628 ರಲ್ಲಿ, ಬಳಕೆದಾರರು 84 ದಿನಗಳ ಮಾನ್ಯತೆಯನ್ನು ಪಡೆಯುತ್ತಾರೆ. ಬಳಕೆದಾರರು ಅನಿಯಮಿತ ವಾಯ್ಸ್ ಕಾಲ್, ಡೈಲಿ 100 SMS ಮತ್ತು 3GB ಪ್ರತಿದಿನ ಡೇಟಾವನ್ನು 84 ದಿನಗಳವರೆಗೆ ಪಡೆಯುತ್ತಾರೆ. ಈ ಯೋಜನೆಯೊಂದಿಗೆ, ಬಳಕೆದಾರರು ಹಾರ್ಡಿ ಗೇಮ್ಸ್, ಚಾಲೆಂಜರ್ ಅರೆನಾ ಗೇಮ್ಸ್, ಗೇಮನ್ ಮತ್ತು ಆಸ್ಟ್ರೋಸೆಲ್‌ನ ಪ್ರಯೋಜನಗಳನ್ನು ಸಹ ಪಡೆಯುತ್ತಾರೆ. ಇದಲ್ಲದೇ, ಬಳಕೆದಾರರು Lystn Podcast, Zing Music, Wow Entertainment ಮತ್ತು BSNL ಟ್ಯೂನ್‌ಗಳ ಲಾಭವನ್ನು ಪಡೆಯಬಹುದು.
BSNL ನ 215 ರೂ. ಪ್ಲಾನ್: ಬಿಎಸ್ಎಲ್ಎನ್ನ ಈ ಹೊಸ ರೂ. 215 ಪ್ರಿಪೇಯ್ಡ್ ಯೋಜನೆಯ ಮಾನ್ಯತೆ 30 ದಿನಗಳು. ಈ ಯೋಜನೆಯೊಂದಿಗೆ ಬಳಕೆದಾರರು 2GB ಇಂಟರ್ನೆಟ್ ಡೇಟಾ, ಅನ್ಲಿಮಿಟೆಡ್ ವಾಯ್ಸ್ ಕಾಲ್ ಮತ್ತು ಪ್ರತಿದಿನ 100 SMS ಸೌಲಭ್ಯವನ್ನು ಪಡೆಯುತ್ತಾರೆ. ಇದಲ್ಲದೆ ಈ ಯೋಜನೆಯೊಂದಿಗೆ ಬಳಕೆದಾರರು ಹಾರ್ಡಿ ಗೇಮ್ಸ್, ಚಾಲೆಂಜರ್ ಅರೆನಾ ಗೇಮ್ಸ್, ಗೇಮನ್ ಮತ್ತು ಆಸ್ಟ್ರೋಸೆಲ್‌ನ ಪ್ರಯೋಜನಗಳನ್ನು ಸಹ ಪಡೆಯುತ್ತಾರೆ. ಇದಲ್ಲದೇ ಬಳಕೆದಾರರು Lystn Podcast, Zing Music, Wow Entertainment ಮತ್ತು BSNL ಟ್ಯೂನ್‌ಗಳ ಲಾಭವನ್ನು ಪಡೆಯಬಹುದು.
ಬಿಎಸ್ಎಲ್ಎನ್ ಕಳೆದ ಕೆಲವು ತಿಂಗಳುಗಳಿಂದ ಅನೇಕ ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಪ್ರಾರಂಭಿಸುತ್ತಿದೆ. ಅದರ ಬೆಲೆ Jio, Airtel ಮತ್ತು Vodafone-Idea ಗಿಂತ ಕಡಿಮೆಯಾಗಿದೆ. ಭಾರತದ ಮೂರು ದೊಡ್ಡ ಖಾಸಗಿ ಟೆಲಿಕಾಂ ಕಂಪನಿಗಳಾದ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್-ಐಡಿಯಾ ಜುಲೈ 2024 ರಲ್ಲಿ ತಮ್ಮ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೋಸ್ಟ್ ಪ್ಲಾನ್‌ಗಳ ಬೆಲೆಗಳನ್ನು ಹೆಚ್ಚಿಸಿದ್ದವು. ಅದರ ನಂತರ, ಕೆಲವು ರಾಜ್ಯಗಳ ನೂರಾರು ಬಳಕೆದಾರರು ಈ ಕಂಪನಿಗಳನ್ನು ತೊರೆದು BSNL ಸಿಮ್‌ಗಳನ್ನು ಬಳಸಲು ಪ್ರಾರಂಭಿಸಿದ್ದಾರೆ.
ಬಿಎಸ್ಎಲ್ಎನ್ ಸಹ ಈ ಅವಕಾಶವನ್ನು ತನಗೆ ಒಂದು ಉತ್ತಮ ಅವಕಾಶವೆಂದು ಪರಿಗಣಿಸಿದೆ. ಅಂದಿನಿಂದ ಬಿಎಸ್ಎಲ್ಎನ್ ತನ್ನ ನೆಟ್‌ವರ್ಕ್ ಅನ್ನು ನಿರಂತರವಾಗಿ ಸುಧಾರಿಸುವ ಪ್ರಯತ್ನಗಳನ್ನು ತೀವ್ರಗೊಳಿಸಿದೆ. ಆ ನಿಟ್ಟಿನಲ್ಲಿ ಬಳಕೆದಾರರನ್ನು ಆಕರ್ಷಿಸುವ ಅನೇಕ ಅಗ್ಗದ ರಿಚಾರ್ಜ್ ಯೋಜನೆಗಳನ್ನು ಸರಣಿಯಾಗಿದೆ ಪ್ರಾರಂಭಿಸಿತು.
ಓದಿ: ಆನ್ಬೋರ್ಡಿಂಗ್ ಲಿಮಿಟ್ ತೆಗೆದು ಹಾಕಿದ ಎನ್ಪಿಸಿಐ ; ಇನ್ಮುಂದೆ ವಾಟ್ಸಾಪ್ ಯುಪಿಐ ಸರಳ