Babar Azam Trolled: ಫೆ.19ರಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪ್ರಾರಂಭವಾಗಲಿದೆ. ಈ ಬಾರಿಯ ಟೂರ್ನಿಗೆ ಪಾಕಿಸ್ತಾನದ ಆತಿಥ್ಯವಿದೆ. ಎಲ್ಲಾ ತಂಡಗಳು ಭರ್ಜರಿ ತಯಾರಿ ನಡೆಸುತ್ತಿವೆ. ಆತಿಥೇಯ ಪಾಕಿಸ್ತಾನ ಕೂಡ ಅಭ್ಯಾಸದಲ್ಲಿ ನಿರತವಾಗಿದೆ.
ಇದರ ನಡುವೆ ಪಾಕಿಸ್ತಾನದ ಬ್ಯಾಟರ್ ಮತ್ತು ಮಾಜಿ ನಾಯಕ ಬಾಬರ್ ಅಜಮ್ ಎಕ್ಸ್ ಖಾತೆಯಲ್ಲಿ ಪೋಸ್ಟ್ವೊಂದನ್ನು ಶೇರ್ ಮಾಡಿದ್ದಾರೆ. ಇದು ಭಾರೀ ವೈರಲ್ ಆಗಿದ್ದು ಹಿಗ್ಗಾಮುಗ್ಗಾ ಟ್ರೋಲ್ ದಾಳಿಗೂ ಗುರಿಯಾಗಿದೆ.
ಬಾಬರ್ ಅಜಾಮ್ ತಮ್ಮ ಮೊಬೈಲ್ ಫೋನ್ ಕಳೆದುಕೊಂಡಿದ್ದಾರೆ. ಈ ವಿಷಯವನ್ನು ತಿಳಿಸಲು 'X'ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. "ನನ್ನ ಮೊಬೈಲ್ ಫೋನ್ ಕಳೆದು ಹೋಗಿದೆ. ಮೊಬೈಲ್ ಜೊತೆ ಅದರಲ್ಲಿ ಕಾಂಟ್ಯಾಕ್ಟ್ ಲೀಸ್ಟ್ ಕೂಡ ಮಿಸ್ ಆಗಿವೆ. ಆದಷ್ಟು ಬೇಗ ನಿಮ್ಮ ಸಂಪರ್ಕಕ್ಕೆ ಸಿಗುವೆ" ಎಂದು ಬರೆದಿದ್ದಾರೆ.
I have lost my phone and contacts. Will get back to everyone as soon as I find it.
— Babar Azam (@babarazam258) February 6, 2025
ಇದರ ಬೆನ್ನಲ್ಲೇ ಬಾಬರ್ ಅವರನ್ನು ಭಾರೀ ಟ್ರೋಲ್ ಮಾಡಲಾಗುತ್ತಿದೆ. ಇದಕ್ಕೆ ರೀ ಪೋಸ್ಟ್ ಮಾಡಿರುವ ಕೆಲವರು, ಟೆಸ್ಟ್ ಕ್ರಿಕೆಟ್ನಲ್ಲಿ 4ನೇ ಸ್ಥಾನವನ್ನು ಕಳೆದುಕೊಂಡಿದ್ದೀರಿ, ಏಕದಿನದಲ್ಲಿ 3ನೇ ಸ್ಥಾನ ಕಳೆದುಕೊಂಡಿದ್ದೀರಿ, ಟಿ20ಯಲ್ಲಿ ಓಪನರ್ ಸ್ಥಾನ ಕಳೆದುಕೊಂಡಿರುವಿರಿ. ಇದೀಗ ಮೊಬೈಲ್ ಫೋನ್ ಸಹ ಕಳೆದುಕೊಂಡಿದ್ದೀರಿ. ಸ್ಟೇ ಸ್ಟ್ರಾಂಗ್ ಬಾಬರ್ ಎಂದು ಕಾಲೆಳೆದಿದ್ದಾರೆ.
ಮತ್ತೊಬ್ಬರು, ನೆಟ್ಟಗೆ ತಮ್ಮ ವಸ್ತುಗಳನ್ನೇ ಸುರಕ್ಷಿತವಾಗಿ ಇಟ್ಟುಕೊಳ್ಳಲು ಆಗ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಭಾರತೀಯ ಕ್ರಿಕೆಟರ್ಗಳನ್ನು ಪಾಕಿಸ್ತಾನಕ್ಕೆ ಕರೆಯಿಸಲು ಮುಂದಾಗಿದ್ದರು ಎಂದಿದ್ದಾರೆ. ಇನ್ನೊಬ್ಬ ಬಳಕೆದಾರ, ಆದಕ್ಕೆ ಹೇಳೋದು ಫೋನ್ ಡೈರಿ ಬಳಕೆ ಮಾಡಿ ಅಂತ. ಅದು ನಿಮ್ಮ ಸಂಬಳದಂತೆ ಕಡಿಮೆ ಬೆಲೆಯಲ್ಲಿ ಸಿಗುತ್ತದೆ ಎಂದಿದ್ದಾರೆ. ಕೆಲವರು, ಮೊಬೈಲ್ ಫೋನ್ ಕಳೆದುಕೊಂಡರೆ ಹೇಗೆ ಪೋಸ್ಟ್ ಮಾಡಿದ್ರಿ ಎಂದು ಪ್ರಶ್ನಿಸಿದ್ದಾರೆ.
ಮತ್ತೆ ಕೆಲವರು, ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದ ತಂಡದಲ್ಲಿ ಸ್ಥಾನ ಕಳೆದುಕೊಂಡರೆ, ಬಾಬರ್ ಅಜಾಮ್ ಮೊಬೈಲ್ ಕಳೆದುಕೊಂಡಿದ್ದಾರೆ. ಇಬ್ಬರಿಗೂ ಇದು ಅತ್ಯಂತ ಕಠಿಣ ಸಮಯ ಎಂದಿದ್ದಾರೆ.
ಪಾಕಿಸ್ತಾನ ತಂಡ ಚಾಂಪಿಯನ್ಸ್ ಟ್ರೋಫಿಗಾಗಿ ಲಾಹೋರ್‌ನಲ್ಲಿ ಅಭ್ಯಾಸ ಪಂದ್ಯಗಳಲ್ಲಿ ಭಾಗಿಯಾಗಿದೆ.
ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಪಾಕಿಸ್ತಾನ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವೆ ಜೊತೆ ತ್ರಿಕೋನ ಸರಣಿ ಆಡಲಿದೆ. ಈ ಸರಣಿ ಫೆಬ್ರವರಿ 8ರಂದು ಲಾಹೋರ್‌ನಲ್ಲಿ ಆರಂಭವಾಗಲಿದೆ.
ಇದನ್ನೂ ಓದಿ: IND vs ENG: ವಿಶ್ವದಾಖಲೆ ಬರೆದ ಹರ್ಷಿತ್ ರಾಣಾ, ಶ್ರೇಯಸ್ ಅಯ್ಯರ್!