Realme 14 Pro Series: 'Realme 14' ಸೀರಿಸ್ನ ಮೊಬೈಲ್‌ಗಳು ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿವೆ. ಮುಂದಿನ ತಿಂಗಳು ಬಿಡುಗಡೆಗೆ ಕಂಪನಿ ತಯಾರಿ ನಡೆಸುತ್ತಿದೆ. ಇವುಗಳ ಬಿಡುಗಡೆ ದಿನಾಂಕವನ್ನು ಇನ್ನೂ ಅಧಿಕೃತವಾಗಿ ದೃಢೀಕರಿಸಲಾಗಿಲ್ಲ. ಆದರೂ ಮಾರಾಟದ ದಿನಾಂಕದ ಮಾಹಿತಿ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ.
'Realme 14 Pro' ಸರಣಿ ಕನಿಷ್ಠ ಎರಡು ರೂಪಾಂತರಗಳಲ್ಲಿ ಬರುತ್ತಿದೆ ಎಂದು ತೋರುತ್ತಿದೆ. ಅವುಗಳೆಂದರೆ, 'Realme 14 Pro' ಮತ್ತು 'Realme 14 Pro Plus'. ಇವುಗಳ ಮಾರಾಟ ಜನವರಿ 13ರಿಂದ ಪ್ರಾರಂಭವಾಗಲಿದೆ ಎಂದು ಟಿಪ್‌ಸ್ಟರ್ ಪಾರಸ್ ಗುಗ್ಲಾನಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಪ್ರಕಾರ, 'ರಿಯಲ್ಮಿ 14 ಪ್ರೊ' ಸೀರಿಸ್ ಜನವರಿ ಎರಡನೇ ವಾರದಲ್ಲಿ ಶುರುವಾಗಬಹುದು. ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಈ ಕುರಿತು ಲೈವ್ ಆಗುತ್ತಿದೆ. ಇದು ತನ್ನ ಆನ್‌ಲೈನ್ ಮಾರಾಟದ ಬಗ್ಗೆ ಮಾಹಿತಿ ಒದಗಿಸುತ್ತದೆ.
ವಿಶೇಷತೆಗಳೇನು?: 'Realme 14 Pro' ಸರಣಿಯು 42-ಡಿಗ್ರಿ ಕ್ವಾಡ್-ಕರ್ವ್ಡ್ ಡಿಸ್‌ಪ್ಲೇ ಜೊತೆಗೆ ಅಲ್ಟ್ರಾ-ಸ್ಲಿಮ್ 1.6mm ಎಡ್ಜ್-ಟು-ಎಡ್ಜ್ ಬೆಜೆಲ್‌ಗಳನ್ನು ಹೊಂದಿದೆ. 1.5K ರೆಸಲ್ಯೂಶನ್ ಡಿಸ್‌ಪ್ಲೇ, ಹೊಸ ಕೋಲ್ಡ್ ಸೆನ್ಸಿಟಿವ್ ಕಲರ್ ಚೇಂಜ್ ಆಗುವ ಬ್ಯಾಕ್ ಪ್ಯಾನೆಲ್ ಒಳಗೊಂಡಿದೆ. ಇವುಗಳ ಹೊರತಾಗಿ ಈ ಸೀರಿಸ್ ಮೊಬೈಲ್‌ಗಳು ಹೀಟ್ ಕಂಟ್ರೋಲ್ ಥರ್ಮೋಕ್ರೋಮಿಕ್ ಪಿಗ್ಮೆಂಟ್‌ಗಳನ್ನು ಹೊಂದಿವೆ. ತಾಪಮಾನ ಹೆಚ್ಚಾದರೆ ಸಿಗ್ನಲ್ ನೀಡುತ್ತದೆ.
ಇಮೇಜಿಂಗ್ಗಾಗಿ 'ಓಷನ್ ಆಕ್ಯುಲಸ್' ಎಂಬ ವೃತ್ತಾಕಾರದ ಟ್ರಿಪಲ್-ಕ್ಯಾಮೆರಾ ಸೆಟಪ್ ಹೊಂದಿದೆ. ರಾತ್ರಿಯಲ್ಲಿ ಉತ್ತಮ ಚಿತ್ರಗಳಿಗಾಗಿ 'MagicGlow' ಟ್ರಿಪಲ್ ಫ್ಲ್ಯಾಷ್‌ನೊಂದಿಗೆ ಬರುತ್ತದೆ. ಸ್ಮಾರ್ಟ್ಫೋನ್ ಸ್ಯೂಡ್ ಲೆದರ್ ಫಿನಿಶ್ನೊಂದಿಗೆ ಬರುತ್ತದೆ. Qualcomm Snapdragon 7s Gen 3 ಪ್ರೊಸೆಸರ್ ಅಳವಡಿಸಲಾಗಿದೆ. ಸದ್ಯಕ್ಕೆ ಬ್ಯಾಟರಿ, ಡಿಸ್‌ಪ್ಲೇ ಗಾತ್ರ, ಕ್ಯಾಮೆರಾ ಸೆನ್ಸಾರ್ ಇತ್ಯಾದಿಗಳ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ: Apple TV+ ಉಚಿತ ಸ್ಟ್ರೀಮಿಂಗ್: ಎಲ್ಲಿಂದ ಎಲ್ಲಿವರೆಗೆ?