ನವದೆಹಲಿ: ಸ್ಯಾಮ್ಸಂಗ್ ಸೋಮವಾರ ತನ್ನ ಗ್ಯಾಲಕ್ಸಿ ಎಂ ಸರಣಿಯ ಅಡಿಯಲ್ಲಿ ಎಂ 55 5 ಜಿ ಮತ್ತು ಎಂ 15 5 ಜಿ (Galaxy M series M55 5G M15 5G) ಎಂಬ ಎರಡು ಹೊಸ ಸ್ಮಾರ್ಟ್ಫೋನ್ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
ಗ್ಯಾಲಕ್ಸಿ ಎಂ 55 5ಜಿ ಅಮೆಜಾನ್ Samsung ಡಾಟ್ com ಮತ್ತು ಆಯ್ದ ಚಿಲ್ಲರೆ ಅಂಗಡಿಗಳಲ್ಲಿ 26,999 ರೂ.ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಿದ್ದರೆ, ಗ್ಯಾಲಕ್ಸಿ ಎಂ 15 5ಜಿ ಅಮೆಜಾನ್ ಮತ್ತು ಆಯ್ದ ಚಿಲ್ಲರೆ ಅಂಗಡಿಗಳಲ್ಲಿ ಏಪ್ರಿಲ್ 8 ರಿಂದ 12,999 ರೂ.ಗಳ ಆರಂಭಿಕ ಬೆಲೆಯಲ್ಲಿ ಸಿಗಲಿದೆ.
"ಸೂಪರ್ ಅಮೋಲೆಡ್ ಪ್ಲಸ್ ಡಿಸ್ ಪ್ಲೇ, ಸ್ಟೈಲಿಶ್ ನಯವಾದ ವಿನ್ಯಾಸ, ಶಕ್ತಿಯುತ ಸ್ನ್ಯಾಪ್ ಡ್ರಾಗನ್ ಪ್ರೊಸೆಸರ್, ನಾಲ್ಕು ಜನರೇಶನ್ವರೆಗೆ ಓಎಸ್ ಅಪ್ಡೇಟ್ಸ್ ಮತ್ತು ಐದು ವರ್ಷಗಳ ಕಾಲ ಭದ್ರತಾ ಅಪ್ಡೇಟ್ಸ್ ಭರವಸೆಯೊಂದಿಗೆ ಸಂಯೋಜಿಸಲ್ಪಟ್ಟ ಅನೇಕ ಸೆಗ್ಮೆಂಟ್-ಪ್ರಮುಖ ವೈಶಿಷ್ಟ್ಯಗಳೊಂದಿಗೆ ನಾವು ಗ್ಯಾಲಕ್ಸಿ ಎಂ 55 5ಜಿ ಮತ್ತು ಗ್ಯಾಲಕ್ಸಿ ಎಂ 15 5ಜಿ ಯೊಂದಿಗೆ ಬಳಕೆದಾರಿಗೆ ಅತ್ಯುತ್ತಮ ಸ್ಮಾರ್ಟ್ಫೋನ್ಗಳನ್ನು ನೀಡುತ್ತಿದ್ದೇವೆ" ಎಂದು ಸ್ಯಾಮ್ಸಂಗ್ ಇಂಡಿಯಾದ ಎಂಎಕ್ಸ್ ವಿಭಾಗದ ಉಪಾಧ್ಯಕ್ಷ ಆದಿತ್ಯ ಬಬ್ಬರ್ ಹೇಳಿದರು.