ETV Bharat / technology

ಕಿಯಾ ಸಿರೋಸ್ ಬುಕ್ಕಿಂಗ್​ ಆರಂಭ - KIA SYROS BOOKING OPEN

KIA Syros Booking: ಕಿಯಾ ಅವರ ಹೊಸ SUV ಕಿಯಾ ಸಿರೋಸ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಆದರೆ ಅದರ ಬಿಡುಗಡೆಯ ಮೊದಲು ಕಂಪನಿಯು ಬುಕಿಂಗ್​ ಪ್ರಾರಂಭಿಸಿದೆ.

KIA SYROS LAUNCH DATE  NEW KIA SYROS  KIA SYROS BOOKING  KIA SYROS PRICE AND FEATURES
ಕಿಯಾ ಸಿರೋಸ್ ಬುಕ್ಕಿಂಗ್​ ಆರಂಭ (Photo Credit: Kia India)
author img

By ETV Bharat Tech Team

Published : Jan 3, 2025, 2:17 PM IST

KIA Syros Booking: ಕಿಯಾ ಇಂಡಿಯಾ ಇತ್ತೀಚೆಗೆ ಹೊಸ ಕಾರು ಕಿಯಾ ಸಿರೋಸ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಕಂಪನಿ ಈ SUV ಬೆಲೆಯನ್ನು ಫೆಬ್ರವರಿ 1ರಂದು ಬಹಿರಂಗಪಡಿಸಲಿದೆ. ಪ್ರಸ್ತುತ, ಕಂಪನಿಯು ಈ ಕಾರಿನ ಬುಕಿಂಗ್ ಅನ್ನು ಶುಕ್ರವಾರ, ಜನವರಿ 3 ಅಂದ್ರೆ ಇಂದಿನಿಂದ ಅಧಿಕೃತವಾಗಿ ಪ್ರಾರಂಭಿಸಿದೆ. ನೀವು ಈ ಕಾರನ್ನು ಖರೀದಿಸಲು ಬಯಸಿದರೆ ನೀವು ಬುಕಿಂಗ್ ಮೊತ್ತವಾಗಿ 25,000 ರೂ. ಪಾವತಿಸಬೇಕಾಗುತ್ತದೆ. ಈ SUV ಶುಕ್ರವಾರದಿಂದಲೇ Kia ಡೀಲರ್‌ಶಿಪ್‌ಗಳನ್ನು ತಲುಪಲಿದೆ.

ಬೆಲೆ ಯಾವಾಗ ಬಹಿರಂಗ?: ಕಿಯಾ ಸಿರೋಸ್ ಬಿಡುಗಡೆಯೊಂದಿಗೆ ಅದರ ಬೆಲೆ ಕೂಡ ಬಹಿರಂಗಗೊಳ್ಳುತ್ತದೆ. ಈ ಬಗ್ಗೆ ವಾಹನ ತಯಾರಕರು ಇನ್ನೂ ಯಾವುದೇ ಮಾಹಿತಿಯನ್ನು ನೀಡಿಲ್ಲ. ಈ ಕಿಯಾ ಕಾರನ್ನು ರೂ 10 ಲಕ್ಷದ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಕಿಯಾ ಸೋನೆಟ್‌ಗೆ ಹೋಲಿಸಿದರೆ, ಈ ಕಾರು ಸುಮಾರು 1 ಲಕ್ಷ ರೂಪಾಯಿಗಳಷ್ಟು ದುಬಾರಿಯಾಗಬಹುದು. ಫೆಬ್ರವರಿ ಎರಡನೇ ವಾರದಲ್ಲಿ ಕಂಪನಿಯು ಈ ಕಾರಿನ ವಿತರಣೆಯನ್ನು ಪ್ರಾರಂಭಿಸಬಹುದು. ಕಿಯಾ ಸಿರೋಸ್ ಅನ್ನು ಜನವರಿ 17 ರಂದು ಇಂಡಿಯಾ ಮೊಬಿಲಿಟಿ ಶೋನಲ್ಲಿ ಪ್ರಸ್ತುತಪಡಿಸಬಹುದು.

ಕಿಯಾ ಸಿರೋಸ್ ಪವರ್‌ಟ್ರೇನ್: ಹೊಸ ಕಿಯಾ ಸಿರೋಸ್ ಅನ್ನು ಎರಡು ಎಂಜಿನ್ ಆಯ್ಕೆಗಳಲ್ಲಿ ಮತ್ತು 6 ಟ್ರಿಮ್‌ಗಳಲ್ಲಿ ಪರಿಚಯಿಸಲಾಗಿದೆ. ಈ ವಾಹನವು 1.0-ಲೀಟರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ, ಇದು 120 hp ಪವರ್ ಮತ್ತು 172 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಿಯಾ ಕಾರು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಬರಲಿದೆ. ಎರಡನೆಯ ಆಯ್ಕೆಯು 1.5-ಲೀಟರ್ ಡೀಸೆಲ್ ಎಂಜಿನ್ ಆಗಿರುತ್ತದೆ. ಇದು 116 hp ಪವರ್ ಮತ್ತು 250 Nm ಟಾರ್ಕ್ ಅನ್ನು ಒದಗಿಸುತ್ತದೆ.

ಈ ಎಂಜಿನ್‌ಗಳೊಂದಿಗಿನ ಗೇರ್‌ಬಾಕ್ಸ್ ಆಯ್ಕೆಗಳ ಕುರಿತು ಮಾತನಾಡುವುದಾದ್ರೆ, 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅನ್ನು ಅದರ ಟರ್ಬೊ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳೊಂದಿಗೆ ಪ್ರಮಾಣಿತವಾಗಿ ಒದಗಿಸಲಾಗುತ್ತದೆ. 7-ಸ್ಪೀಡ್ DCT ಆಯ್ಕೆಯನ್ನು ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ನೀಡಲಾಗುವುದು ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್​ ಆಟೋಮೆಟಿಕ್​ ಗೇರ್‌ಬಾಕ್ಸ್‌ನ ಆಯ್ಕೆಯನ್ನು ಡೀಸೆಲ್ ಎಂಜಿನ್‌ನೊಂದಿಗೆ ನೀಡಲಾಗುವುದು.

ಕಿಯಾ ಸಿರೋಸ್‌ನ ವೈಶಿಷ್ಟ್ಯಗಳು: ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದ್ರೆ, ಈ ಕಾರು ಲೆವೆಲ್-2 ADAS, 360-ಡಿಗ್ರಿ ಕ್ಯಾಮೆರಾ ಮತ್ತು ಸುರಕ್ಷತೆಗಾಗಿ 6 ​​ಏರ್‌ಬ್ಯಾಗ್‌ಗಳನ್ನು ಹೊಂದಿದೆ. ಇದರ ಟಾಪ್-ಸ್ಪೆಕ್ ರೂಪಾಂತರವು 17-ಇಂಚಿನ ಅಲಾಯ್​ ವ್ಹೀಲ್​ಗಳು, ಡ್ಯುಯಲ್ ಟೋನ್ ಒಳಭಾಗ, ಲೆಥೆರೆಟ್ ಅಪ್ಹೋಲ್ಸ್ಟರಿ ಮತ್ತು ಆಂಬಿಯೆಂಟ್ ಲೈಟಿಂಗ್ ಹೊಂದಿದೆ. ಈ ಕಾರು 12.3 ಇಂಚಿನ ಡ್ಯುಯಲ್ ಸ್ಕ್ರೀನ್ ಹೊಂದಿದೆ. ಇದು ಇನ್ಫೋಟೈನ್ಮೆಂಟ್ ಮತ್ತು ಇನ್ಸ್ಟ್ರುಮೆಂಟೇಶನ್​ಗಾಗಿ ಒದಗಿಸಲಾಗಿದೆ. ಈ ಕಾರು 8 ಸ್ಪೀಕರ್‌ಗಳೊಂದಿಗೆ ವಾಯ್ಸ್​ ಸಿಸ್ಟಮ್​ ಅನ್ನು ಹೊಂದಿದೆ.

ಇದನ್ನೂ ಓದಿ: ಹ್ಯುಂಡೈ ಕ್ರೆಟಾ EV: ಸಿಂಗಲ್​ ಚಾರ್ಜ್​ನಲ್ಲಿ 473 ಕಿ.ಮೀ ಪ್ರಯಾಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.