ಕರ್ನಾಟಕ

karnataka

ETV Bharat / technology

ಸೆಪ್ಟೆಂಬರ್​ನಲ್ಲಿ NASAದ SpaceX Crew-9 ಉಡಾವಣೆ: ವಿಲ್ಮೋರ್, ಸುನಿತಾ ವಿಲಿಯಮ್ಸ್ ಕರೆತರಲು ಕಾರ್ಯಾಚರಣೆ - NASAs SpaceX Crew 9 - NASAS SPACEX CREW 9

ಕೆಲವು ಬದಲಾವಣೆಗಳೊಂದಿಗೆ ಬಾಹ್ಯಾಕಾಶಕ್ಕೆ ನೆಗೆಯಲಿರುವ ನಾಸಾದ ಸ್ಪೇಸ್​ ಎಕ್ಸ್​ ಕ್ರ್ಯೂ 9 ನೌಕೆ. ಎರಡು ಖಾಲಿ ಚೇರ್​​ಗಳೊಂದಿಗೆ ಇಬ್ಬರು ಸಿಬ್ಬಂದಿಯೊಂದಿಗೆ ಈ ನೌಕೆ ಆಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಜಿಗಿಯಲಿದೆ.

NASA's SpaceX Crew-9 changes ahead of September launch
ಸೆಪ್ಟೆಂಬರ್​ನಲ್ಲಿ NASAದ SpaceX Crew-9 ಉಡಾವಣೆ: ವಿಲ್ಮೋರ್, ಸುನಿತಾ ವಿಲಿಯಮ್ಸ್ ಕರೆತರಲು ಕಾರ್ಯಾಚರಣೆ (AP)

By ANI

Published : Aug 31, 2024, 6:47 AM IST

ವಾಷಿಂಗ್ಟನ್ ಡಿಸಿ, ಅಮೆರಿಕ:NASA ಗಗನಯಾತ್ರಿ ನಿಕ್ ಹೇಗ್ ಮತ್ತು ರೋಸ್ಕೊಸ್ಮೊಸ್ ಗಗನಯಾತ್ರಿ ಅಲೆಕ್ಸಾಂಡರ್ ಗೊರ್ಬುನೊವ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಲಿದ್ದಾರೆ. ಸ್ಪೇಸ್‌ಎಕ್ಸ್ ಕ್ರ್ಯೂ-9 ಮಿಷನ್‌ನಲ್ಲಿ ಸೆಪ್ಟೆಂಬರ್ 24ಕ್ಕೆ ಕ್ಕಿಂತ ಮುಂಚಿತವಾಗಿ ಉಡಾವಣೆಯಾಗಲಿದೆ.

ಇದಕ್ಕೂ ಮುನ್ನ ಬೋಯಿಂಗ್ ಕ್ರ್ಯೂ ಫ್ಲೈಟ್​ನಲ್ಲಿ ಕೆಲ ಬದಲಾವಣೆ ಆಗಲಿದೆ. ಸ್ಪೇಸ್​ ಎಕ್ಸ್​ ಕ್ರ್ಯೂ - 9 ರನೌಕೆಯಲ್ಲಿ ಎರಡು ಖಾಲಿ ಸೀಟುಗಳೊಂದಿಗೆ ಬಾಹ್ಯಾಕಾಶಕ್ಕೆ ತೆರಳಲಿದೆ. ಜೂನ್‌ನಲ್ಲಿ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಿಂದ ಬಾಹ್ಯಾಕಾಶ ಯಾನ ಕೈಗೊಂಡು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲೇ ಸ್ಟ್ರಕ್​ ಆಗಿರುವ ನಾಸಾದ ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನಿತಾ ವಿಲಿಯಮ್ಸ್ ಫೆಬ್ರವರಿ 2025 ರಲ್ಲಿ ಹೇಗ್ ಮತ್ತು ಗೋರ್ಬುನೊವ್ ಅವರೊಂದಿಗೆ ಭೂಮಿಗೆ ವಾಪಸ್​ ಆಗಲಿದ್ದಾರೆ ಎಂದು ನಾಸಾದ ಪ್ರಕಟಣೆ ತಿಳಿಸಿದೆ.

NASA ಗಗನಯಾತ್ರಿಗಳಾದ ಝೆನಾ ಕಾರ್ಡ್‌ಮ್ಯಾನ್ ಮತ್ತು ಸ್ಟೆಫನಿ ವಿಲ್ಸನ್ ಸ್ಪೇಸ್​​​ ಎಕ್ಸ್​ ಕ್ರ್ಯೂ-9ರ ಸಿಬ್ಬಂದಿ ಎಂದು ಈ ಹಿಂದೆಯೇ ಘೋಷಣೆ ಮಾಡಲಾಗಿತ್ತು. ಮತ್ತು ಇವರು ಭವಿಷ್ಯದ ಕಾರ್ಯಾಚರಣೆಯಲ್ಲಿ ಇವರು ಮರುನಿಯೋಜನೆಗೊಳ್ಳಲಿದ್ದಾರೆ, ಹೇಗ್ ಮತ್ತು ಗೋರ್ಬುನೊವ್ ಅವರು ಸ್ಪೇಸ್‌ಎಕ್ಸ್ ಡ್ರ್ಯಾಗನ್‌ನಲ್ಲಿ ಕಮಾಂಡರ್ ಮತ್ತು ಮಿಷನ್ ಸ್ಪೆಷಲಿಸ್ಟ್ ಆಗಿ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಲಿದ್ದಾರೆ.

ವಿವಿಧ ಕಾರಣಗಳಿಗಾಗಿ ಇದೀಗ ಸಿಬ್ಬಂದಿ ಕಡಿತ ಮಾಡಲಾಗಿದೆ. ಈ ಮೊದಲು ನಾಲ್ವರಿಗೆ ತರಬೇತಿ ನೀಡಲಾಗಿತ್ತು. ಇದೀಗ ಅನಿವಾರ್ಯ ಕಾರಣಗಳಿಂದ ಇನ್ನಿಬ್ಬರು ಸಿಬ್ಬಂದಿಯನ್ನ ಕಡಿತಗೊಳಿಸಲಾಗಿದೆ ಎಂದು ಅಕಾಬಾ ತಿಳಿಸಿದ್ದಾರೆ. ನಮ್ಮ ಸಂಪೂರ್ಣ ಸಿಬ್ಬಂದಿಯ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ ಎಂದು ಇದೇ ವೇಳೆ ಕಾರ್ಡ್‌ಮ್ಯಾನ್ ಹೇಳಿದ್ದಾರೆ, " ನಿಕ್ ಮತ್ತು ಅಲೆಕ್ಸ್ ತಮಗೆ ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಲಿದ್ದಾರೆ ಎಂಬ ವಿಶ್ವಾಸ ತಮಗಿದೆ ಎಂದು ಸ್ಟೆಪನಿ ವಿಲ್ಸನ್​ ಹೇಳಿದ್ದಾರೆ.

ಹೇಗ್ ಈ ಮೊದಲು 203 ದಿನಗಳು ಬಾಹ್ಯಾಕಾಶದಲ್ಲಿ ಇದ್ದರು, ಈಗ ಇದು ಅವರ ಎರಡನೇ ಕಾರ್ಯಾಚರಣೆ ಆಗಿದೆ. ಅಕ್ಟೋಬರ್ 2018 ರಲ್ಲಿ ಅವರ ಮೊದಲ ಉಡಾವಣೆ ಸಮಯದಲ್ಲಿ, ಹೇಗ್ ಮತ್ತು ಅವರ ಸಿಬ್ಬಂದಿ, ರೋಸ್ಕೊಸ್ಮೊಸ್ ಅಲೆಕ್ಸಿ ಒವ್ಚಿನಿನ್ ರಾಕೆಟ್ ಬೂಸ್ಟರ್ ವೈಫಲ್ಯವನ್ನು ಅನುಭವಿಸಿದ್ದರು. ಇದರ ಪರಿಣಾಮವಾಗಿ ಉಡಾವಣೆ ಸ್ಥಗಿತಗೊಳಿಸಲಾಗಿತ್ತು. ಬ್ಯಾಲಿಸ್ಟಿಕ್ ಮರು-ಪ್ರವೇಶ ಮತ್ತು ಅವರ ಸೋಯುಜ್ MS-10 ನಲ್ಲಿ ಸುರಕ್ಷಿತವಾಗಿ ಇಳಿಯಲಾಗಿತ್ತು.

ಐದು ತಿಂಗಳ ನಂತರ, ಹೇಗ್ ಸೋಯುಜ್ MS-12 ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲಾಗಿತ್ತು, ಹೇಗ್ ಬಾಹ್ಯಾಕಾಶ ನಿಲ್ದಾಣದ ವಿದ್ಯುತ್ ವ್ಯವಸ್ಥೆಗಳನ್ನು ನವೀಕರಿಸಲು ಮತ್ತು ವಾಣಿಜ್ಯ ಬಾಹ್ಯಾಕಾಶ ನೌಕೆಗಳಿಗೆ ಡಾಕಿಂಗ್ ಅಡಾಪ್ಟರ್ ಅನ್ನು ಸ್ಥಾಪಿಸಲು ಮೂರು ಬಾಹ್ಯಾಕಾಶ ನಡಿಗೆಗಳನ್ನು ನಡೆಸಿದ್ದರು.

ಇದನ್ನು ಓದಿ:ಹೆಚ್​ಎಎಲ್​ ಹೆಲಿಕಾಪ್ಟರ್​ಗೆ ಶಕ್ತಿ ತುಂಬಲು 'ಅರಾವಳಿ' ಎಂಜಿನ್‌ ಅಭಿವೃದ್ಧಿ - HAL Partners With SAFHAL

ABOUT THE AUTHOR

...view details