Oppo Find N5 Launched: ಚೈನೀಸ್ ಒರಿಜಿನಲ್ ಎಕ್ವಿಪ್ಮೆಂಟ್ ತಯಾರಿಕಾ ಸಂಸ್ಥೆಯಿಂದ (OEM) ಇತ್ತೀಚಿನ ಪುಸ್ತಕ ಶೈಲಿಯ ಪೋಲ್ಡಬಲ್ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದೆ. ಕಂಪನಿಯು ಗುರುವಾರ 'ಒಪ್ಪೋ ಫೈಂಡ್ ಎನ್5' ಹೆಸರಿನಲ್ಲಿ ಜಾಗತಿಕವಾಗಿ ಇದನ್ನು ಬಿಡುಗಡೆ ಮಾಡಿತು. ಇದನ್ನು 2023ರಲ್ಲಿ ಬಿಡುಗಡೆಯಾದ 'ಒಪ್ಪೋ ಫೈಂಡ್ N3'ನ ಉತ್ತರಾಧಿಕಾರಿಯಾಗಿ ಬಿಡುಗಡೆ ಮಾಡಲಾಗಿದೆ. ಕಂಪನಿಯು ಇದರಲ್ಲಿ ಪ್ರಮುಖ ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್ ಒದಗಿಸಿದೆ.
ಆನ್-ಡಿವೈಸ್, ಕ್ಲೌಡ್-ಬೇಸ್ಡ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ಕೆಪಾಬಿಲಿಟಿ ಜೊತೆ ಬರುತ್ತದೆ. ಕಂಪನಿಯು ತನ್ನ ಫ್ಲೆಕ್ಸಿಯಾನ್ ಹಿಂಜ್ ವಿನ್ಯಾಸವು ಹಿಂದಿನ ಮಾದರಿಗಿಂತ ಶೇಕಡಾ 36ರಷ್ಟು ಹೆಚ್ಚು ಕಠಿಣವಾಗಿದೆ ಎಂದು ಹೇಳುತ್ತದೆ. ಏಕೆಂದರೆ ಈ ಫೋನಿನ ವಿಂಗ್ ಪ್ಲೇಟ್ ನಿರ್ಮಿಸಲು ಕಂಪನಿಯು ಗ್ರೇಡ್ 5 ಟೈಟಾನಿಯಂ ಮಿಶ್ರಲೋಹವನ್ನು ಬಳಸಿದೆ.
Reasons to get excited about the #OPPOFindN5 👇#SlimYetPowerful
— OPPO (@oppo) February 21, 2025
ಹೊಸ ಒಪ್ಪೋ ಫೈಂಡ್ ಮಾದರಿಯನ್ನು ವಿಶ್ವದ ಅತ್ಯಂತ ಸ್ಲಿಮ್ ಆದ ಫೋಲ್ಡಬಲ್ ಫೋನ್ ಎಂದು ಕರೆಯುತ್ತಿದೆ. ಇದು ಫೋಲ್ಡಬಲ್ ಆದಾಗ ಅದು 8.93 ಮಿ.ಮೀ. ಇದರ ತೂಕ 229 ಗ್ರಾಂ. ಆಗಿದೆ.
ಒಪ್ಪೋ ಫೈಂಡ್ N5 ವಿಶೇಷತೆಗಳು:
ಡಿಸ್ಪ್ಲೇ: 8.12-ಇಂಚಿನ 2K (2,480 x 2,248 ಪಿಕ್ಸೆಲ್‌ಗಳು) LTPO AMOLED ಸ್ಕ್ರೀನ್ ಅನ್ನು 412ppi ಪಿಕ್ಸೆಲ್ ಡೆನ್ಸಿಟಿ ಮತ್ತು 120Hz ಡೈನಾಮಿಕ್ ರಿಫ್ರೆಶ್ ರೇಟ್ದೊಂದಿಗೆ ಹೊಂದಿದೆ. ಇದರ ಒಳಗಿನ ಸ್ಕ್ರೀನ್ 240Hz ವರೆಗಿನ ಟಚ್ ರೆಸ್ಪಾನ್ಸ್ ರೇಟ್ ಅನ್ನು ಹೊಂದಿದೆ. ಇದು 2,100 ನೀಟ್ಸ್ ಪೀಕ್ ಬ್ರೈಟ್ನೆಸ್ ಸಪೋರ್ಟ್ ಹೊಂದಿದೆ.
ಕಂಪನಿಯು TÜV ರೈನ್‌ಲ್ಯಾಂಡ್ ಮಿನಿಮೈಸ್ಡ್ ಕ್ರೀಸ್ ಸರ್ಟಿಫಿಕೇಶನ್ ಸಹ ಪಡೆದಿದೆ ಎಂದು ಹೇಳಿಕೊಂಡಿದೆ. ಈ ಡಿಸ್ಪ್ಲೇ ಅಲ್ಟ್ರಾ-ಥಿನ್ ಗ್ಲಾಸ್ (UTG) ಪ್ರೋಟೆಕ್ಷನ್ನೊಂದಿಗೆ ಬರುತ್ತದೆ. ಮತ್ತೊಂದೆಡೆ ಈ ಫೋಲ್ಡಬಲ್ ಸ್ಮಾರ್ಟ್‌ಫೋನ್ 6.62-ಇಂಚಿನ 2K (2,616 x 1,140 ಪಿಕ್ಸೆಲ್‌ಗಳು) AMOLED ಸ್ಕ್ರೀನ್ ಹೊಂದಿದ್ದು, 120Hz ವರೆಗಿನ ರಿಫ್ರೆಶ್ ರೇಟ್ ಮತ್ತು 431ppi ಪಿಕ್ಸೆಲ್ ಡೆನ್ಸಿಟಿ ಅನ್ನು ಪಡೆದಿದೆ.
ಬ್ಯಾಟರಿ: ಈ ಫೋನ್ 5,600mAh ಡ್ಯುಯಲ್-ಸೆಲ್ ಬ್ಯಾಟರಿಯನ್ನು ಹೊಂದಿದೆ. ಇದು 80W SUPERVOOC (ವೈರ್ಡ್), 50W AIRVOOC (ವೈರ್‌ಲೆಸ್) ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
🤏 4.21mm unfolded
— OPPO (@oppo) February 20, 2025
🦾 Titanium Alloy Flexion Hinge
🔋 5600mAh Big Battery
There's a reason we're calling it #SlimYetPowerful#OPPOFindN5 pic.twitter.com/vnfo9RufMz
ಪ್ರೊಸೆಸರ್: ಒಪ್ಪೋದ ಇತ್ತೀಚಿನ ಬುಕ್ ಸ್ಟೈಲ್ 'ಫೈಂಡ್ N5' ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 16GB LPDDR5X RAM ಮತ್ತು 512GB UFS 4.0 ಆನ್‌ಬೋರ್ಡ್ ಸ್ಟೋರೇಜ್ದೊಂದಿಗೆ ಜೋಡಿಯಾಗಿದೆ. ಸೆಕೆಂಡ್ ಜನರೇಶನ್ 3nm ಆರ್ಕಿಟೆಕ್ಚರ್ ಮತ್ತು ಪೆಕ್ಸಾಗಾನ್ NPU ಹೊಂದಿರುವ ಈ ಚಿಪ್, ಎಐ ಕಾರ್ಯಕ್ಷಮತೆಯಲ್ಲಿ ಶೇಕಡಾ 45 ರಷ್ಟು ಸುಧಾರಣೆಯನ್ನು ನೀಡುತ್ತದೆ ಎಂದು ಕಂಪನಿ ಹೇಳುತ್ತದೆ. ಇದು ಅಡ್ರಿನೊ 830 GPU ನೊಂದಿಗೆ ಬರುತ್ತದೆ.
ಆಪರೇಟಿಂಗ್ ಸಿಸ್ಟಮ್: ಡ್ಯುಯಲ್-ಸಿಮ್ (ನ್ಯಾನೋ) 'Oppo Find N5' ಫೋಲ್ಡಬಲ್ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಆಧಾರಿತ ColorOS 15 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಎಐ ಫೀಚರ್ಸ್: ಈ ಹ್ಯಾಂಡ್‌ಸೆಟ್ ಎಐ ಸರ್ಚ್ನಂತಹ ವಿವಿಧ ಎಐ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ. ಇದು ಬಳಕೆದಾರರಿಗೆ ಹೋಮ್ ಸ್ಕ್ರೀನ್ ಮೇಲೆ ಕೆಳಗೆ ಸ್ವೈಪ್ ಮಾಡಿ ಕ್ವಾರೀಸ್ ಸರ್ಚ್ ಮಾಡಲು ಅನುವು ಮಾಡಿಕೊಡುತ್ತದೆ. ಇದರಲ್ಲಿ ಎಐ ಕಾಲ್ ಸಮ್ಮರಿ ಫೀಚರ್ ಟ್ರಾನ್ಸ್ಕ್ರೈಬ್ಸ್, ಜನರೇಟ್ ಸಮ್ಮರಿಸ್, ಕಾಲ್ಸ್ ಟ್ರಾನ್ಸ್ಕ್ರಿಪ್ಟ್ ಆಧಾರವಾಗಿ ಆ್ಯಕ್ಷನ್ ಪಾಯಿಂಟ್ಸ್ ಕ್ರಿಯೆಟ್ ಮಾಡುವ ಅಂಶಗಳು ರಚಿಸುತ್ತದೆ.
ಇವುಗಳ ಜೊತೆಗೆ ಈ ಫೋನ್ ಡ್ಯುಯಲ್-ಸ್ಕ್ರೀನ್ ಟ್ರಾನ್ಸ್ಲೇಷನ್ ಮತ್ತು ಇಂಟೆಪ್ರೆಟಿಂಗ್ ಸಹ ಹೊಂದಿದೆ ಎಂದು ಕಂಪನಿ ಹೇಳುತ್ತದೆ. ಇದು ಒಪ್ಪೋ ಎಐ ಟೂಲ್‌ಬಾಕ್ಸ್‌ನೊಂದಿಗೆ ಬರುತ್ತದೆ. ಇದರಲ್ಲಿ ಎಐ ಸಮ್ಮರಿ, ಎಐ ಸ್ಪೀಕ್ ಮತ್ತು ಎಐ ರೈಟರ್ ಸೇರಿವೆ. ಇದು ಓದುವ ಮತ್ತು ಬರೆಯುವ ಅನುಭವವನ್ನು ಸುಧಾರಿಸುವ ಮತ್ತು ಎಐ ಬಳಸುವ ಗುರಿಯನ್ನು ಹೊಂದಿರುವ ಎಲ್ಲಾ ಭಾಷಾ ಟೂಲ್ಗಳನ್ನು ಒಳಗೊಂಡಿದೆ. ಇದೆಲ್ಲದರ ಜೊತೆಗೆ ColorOS 15 ನಲ್ಲಿ ಕಾರ್ಯನಿರ್ವಹಿಸುವ ಈ ಫೋನ್, AI Clarity Enhance, AI Erase ಮತ್ತು AI Unblur ನಂತಹ ಫೋಟೋ-ಎಡಿಟಿಂಗ್ ವೈಶಿಷ್ಟ್ಯಗಳ ಸೂಟ್ ಅನ್ನು ಸಹ ಹೊಂದಿದೆ.
ಕ್ಯಾಮೆರಾ ಸೆಟಪ್: ಈ ಹೊಸ 'Oppo Find N5' ಹ್ಯಾಸೆಲ್‌ಬ್ಲಾಡ್-ಬ್ರಾಂಡೆಡ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.
ಪ್ರೈಮೇರಿ ಸೆನ್ಸಾರ್: ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಮತ್ತು ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ (EIS) ಹೊಂದಿರುವ 50-ಮೆಗಾಪಿಕ್ಸೆಲ್ f/1.8 ಪ್ರೈಮೇರಿ ಸೆನ್ಸಾರಿ ಹೊಂದಿದೆ.
Effortless efficiency with the #OPPOFindN5#SlimYetPowerful pic.twitter.com/UsOJ19oL3B
— OPPO (@oppo) February 21, 2025
ಪೆರಿಸ್ಕೋಪ್ ಟೆಲಿಫೋಟೋ ಸೆನ್ಸಾರ್: 3x ಆಪ್ಟಿಕಲ್ ಜೂಮ್, OIS ಜೊತೆ 50-ಮೆಗಾಪಿಕ್ಸೆಲ್ f/2.7 ಪೆರಿಸ್ಕೋಪ್ ಟೆಲಿಫೋಟೋ ಸೆನ್ಸಾರ್ ಹೊಂದಿದೆ.
ಅಲ್ಟ್ರಾ ವೈಡ್-ಆಂಗಲ್ ಲೆನ್ಸ್: 116-ಡಿಗ್ರಿ ಫೀಲ್ಡ್ ಆಫ್ ವ್ಯೂ (FoV) ಜೊತೆಗೆ OIS 50-ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್-ಆಂಗಲ್ ಲೆನ್ಸ್ ಹೊಂದಿದೆ.
ಫ್ರಂಟ್ ಕ್ಯಾಮೆರಾ: ಈ ಫೋಲ್ಡಬಲ್ ಸ್ಮಾರ್ಟ್‌ಫೋನ್‌ನಲ್ಲಿ ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ ಒಳ ಮತ್ತು ಹೊರ ಡಿಸ್ಪ್ಲೇಯಲ್ಲಿ 8-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ.
ಕನೆಕ್ಟ್ ಫೀಚರ್ಸ್: ಈ ಹೊಸ 'Oppo Find N5' 5G, 4G LTE, Wi-Fi 7, ಬ್ಲೂಟೂತ್ 5.3, GPS/ A-GPS, NFC, Beidou, GPS, GLONASS, ಗೆಲಿಲಿಯೋ, QZSS ಮತ್ತು USB ಟೈಪ್-C ಪೋರ್ಟ್ ಅನ್ನು ಹೊಂದಿದೆ. ಇದು ಸ್ಟೀರಿಯೊ ಸ್ಪೀಕರ್‌ಗಳು ಮತ್ತು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಸಹ ಹೊಂದಿದೆ.
ಪ್ರೋಟೆಕ್ಷನ್: ಒಪ್ಪೋ ಈ ಫೋಲ್ಡಬಲ್ ಸ್ಮಾರ್ಟ್‌ಫೋನ್ ಅನ್ನು IP67, IP68, ಮತ್ತು IP69 ವಾಟರ್ ಮತ್ತು ಡಸ್ಟ್ ರೆಸಿಸ್ಟೆನ್ಸಿಯೊಂದಿಗೆ ತಂದಿದೆ.
ಕಲರ್ಸ್ ಆಪ್ಶನ್ಸ್: ಈ ಹ್ಯಾಂಡ್‌ಸೆಟ್ ಮಾರುಕಟ್ಟೆಯಲ್ಲಿ ಮಿಸ್ಟಿ ವೈಟ್ ಮತ್ತು ಕಾಸ್ಮಿಕ್ ಬ್ಲ್ಯಾಕ್ ಎಂಬ ಎರಡು ಕಲರ್ಸ್ ಆಪ್ಶನ್ಗಳಲ್ಲಿ ಲಭ್ಯವಿದೆ.
ವೇರಿಯೆಂಟ್ಸ್: ಕಂಪನಿಯು ಈ ಫೋನ್ ಅನ್ನು 16GB RAM + 512GB ಸ್ಟೋರೇಜ್ ರೂಪಾಂತರದಲ್ಲಿ ಮಾತ್ರ ಬಿಡುಗಡೆ ಮಾಡಿದೆ.
ಒಪ್ಪೋ ಫೈಂಡ್ N5 ಬೆಲೆ: ಕಂಪನಿಯು ಒಪ್ಪೋ ಫೈಂಡ್ N5 ನ 16GB + 512GB ಸ್ಟೋರೇಜ್ ರೂಪಾಂತರದ ಬೆಲೆಯನ್ನು ಸಿಂಗಾಪುರ್ ಡಾಲರ್ 2,499 ಎಂದು ನಿಗದಿಪಡಿಸಿದೆ. ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 1,62,000 ರೂ ಆಗಿರುತ್ತದೆ.
ಮಾರಾಟದ ವಿವರಗಳು: ಒಪ್ಪೋ ಫೈಂಡ್ ಎನ್-ಸೀರಿಸ್ ಫೋಲ್ಡಬಲ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿಲ್ಲ. ಅತ್ಯಂತ ತೆಳುವಾದ ವಿನ್ಯಾಸ ಹೊಂದಿರುವ ಫೋಲ್ಡಬಲ್ ಫೋನ್ ಅನ್ನು ಒಪ್ಪೋ 'ಒನ್‌ಪ್ಲಸ್ ಓಪನ್ 2' ಹೆಸರಿನಲ್ಲಿ ಭಾರತಕ್ಕೆ ತರಬಹುದು. ಆದರೂ ಕಂಪನಿ ಇತ್ತೀಚೆಗೆ ಈ ವರ್ಷ 'ಒನ್‌ಪ್ಲಸ್ ಓಪನ್ 2' ಅನ್ನು ಬಿಡುಗಡೆ ಮಾಡುವುದಿಲ್ಲ ಎಂದು ಬಹಿರಂಗಪಡಿಸಿತು. ಇದರೊಂದಿಗೆ, 'ಒಪ್ಪೋ ಫೈಂಡ್ ಎನ್5' ಹೆಸರಿನಲ್ಲಿ ಭಾರತೀಯ ಮಾರುಕಟ್ಟೆಗೆ ಬರಲಿದೆ ಎಂದು ಎಲ್ಲರೂ ನಿರೀಕ್ಷಿಸುತ್ತಾರೆ. ನಿರ್ದಿಷ್ಟವಾಗಿ ಹೇಳುವುದಾದರೆ, ಫೈಂಡ್ ಎನ್-ಸೀರಿಸ್ ಜಾಗತಿಕ ಆವೃತ್ತಿಯಲ್ಲಿ ಬರುವ ಸಾಧ್ಯತೆಯಿದೆ. ಆದರೂ ಈ ಫೋನ್ ಫೆಬ್ರವರಿ 28ರಿಂದ ಸಿಂಗಾಪುರದಲ್ಲಿ ಖರೀದಿಗೆ ಲಭ್ಯವಿರುತ್ತದೆ.
ಇದನ್ನೂ ಓದಿ: ವಾತಾವರಣದಿಂದ ಕಾರ್ಬನ್ ಡೈಆಕ್ಸೈಡನ್ನು ಶಾಶ್ವತವಾಗಿ ತೆಗೆದುಹಾಕುವ ವಿಧಾನ ಕಂಡುಕೊಂಡ ವಿಜ್ಞಾನಿಗಳು