Kohli And Rohit Test Last Century: ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನ ತೋರಿರುವ ಭಾರತ ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ಕೈಚೆಲ್ಲಿದೆ. ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ 8 ವಿಕೆಟ್ನಿಂದ ಸೋತಿದ್ದ ಟೀಂ ಇಂಡಿಯಾ, ಪುಣೆ ಟೆಸ್ಟ್‌ನಲ್ಲಿ 113 ರನ್ಗಳಿಗೆ ಪರಾಭವಗೊಂಡಿತು. ಎರಡನೇ ಪಂದ್ಯವನ್ನು ಭಾರತ ಗೆಲ್ಲುತ್ತದೆ ಎಂದೇ ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಬೌಲರ್ಗಳು ಉತ್ತಮ ಪ್ರದರ್ಶನ ನೀಡಿದರೆ, ಬ್ಯಾಟರ್ಗಳು ರನ್ ಗಳಿಸುವಲ್ಲಿ ವಿಫಲರಾದರು.
ಅದರಲ್ಲೂ ತಂಡದ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಎರಡನೇ ಟೆಸ್ಟ್‌ನಲ್ಲಿ ಕಮ್ಬ್ಯಾಕ್ ಮಾಡಿ ರನ್ ಮಳೆ ಹರಿಸುತ್ತಾರೆ, ಪಂದ್ಯ ಗೆಲ್ಲುತ್ತಾರೆ ಎಂದು ಅಭಿಮಾನಿಗಳು ನಂಬಿಕೆ ಇಟ್ಟುಕೊಂಡಿದ್ದರು. ಆದರೆ ಈ ಇಬ್ಬರೂ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಎರಡೂ ಇನ್ನಿಂಗ್ಸ್ಗಳಲ್ಲಿ ಕನಿಷ್ಠ 20 ರನ್ ಗಳಿಸುವಲ್ಲಿಯೂ ರೋಹಿತ್, ಕೊಹ್ಲಿ ವಿಫಲರಾಗಿದ್ದಾರೆ. ಕೇವಲ ನ್ಯೂಜಿಲೆಂಡ್ ಟೆಸ್ಟ್ ಮಾತ್ರವಲ್ಲ, ಬಾಂಗ್ಲಾ ವಿರುದ್ಧದ ಟೆಸ್ಟನಲ್ಲೂ ರನ್ ಗಳಿಸುವಲ್ಲಿ ಪರದಾಡಿದ್ದರು.
ಇದನ್ನೂ ಓದಿ:ಕೇವಲ 10 ಎಸೆತಗಳಲ್ಲಿ ಮುಗಿದ 5 ದಿನದ ಟೆಸ್ಟ್ ಮ್ಯಾಚ್: ಕ್ರಿಕೆಟ್ ಇತಿಹಾಸದಲ್ಲೇ ಅತೀ ಕಡಿಮೆ ಅವಧಿಯ ಪಂದ್ಯವಿದು!
ರೋಹಿತ್, ವಿರಾಟ್ ಕೊನೆಯ ಶತಕ: ಕೊನೆಯ ಹತ್ತು ಇನ್ನಿಂಗ್ಸ್ ಅಂಕಿಅಂಶ ಗಮನಿಸಿದರೆ, ರೋಹಿತ್ ಅವರ ಇತ್ತೀಚಿನ ಟೆಸ್ಟ್ ಫಾರ್ಮ್ ಉತ್ತಮವಾಗಿಲ್ಲ ಎಂದು ತೋರಿಸುತ್ತದೆ. ಅವರು ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧ ನಾಲ್ಕು ಟೆಸ್ಟ್‌ಗಳ ಎಂಟು ಇನ್ನಿಂಗ್ಸ್‌ನಲ್ಲಿ ಕೇವಲ 104 ರನ್ಗಳಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಕೊನೆಯದಾಗಿ ಶತಕ ಸಿಡಿಸಿದ್ದರು. ನಂತರ ನಡೆದ ಪಂದ್ಯಗಳಲ್ಲಿ 0, 6, 5, 23, 8, 2, 52, 0, 8 ರನ್ಗಳು ಮಾತ್ರ ಕಲೆ ಹಾಕಲು ಸಾಧ್ಯವಾಗಿದೆ.
ವಿರಾಟ್ ಕೊಹ್ಲಿ ಕೊನೆಯ ಶತಕ:ಏಕದಿನ ಕ್ರಿಕೆಟ್ನ ಅಗ್ರ ಬ್ಯಾಟರ್ ಆಗಿರುವ ಕೊಹ್ಲಿ ಟೆಸ್ಟ್‌ನಲ್ಲಿ ಮಾತ್ರ ರನ್ ಗಳಿಸಲು ಪರದಾಡುತ್ತಿದ್ದಾರೆ. ಅವರು ಆಡಿರುವ ಕೊನೆಯ 10 ಇನ್ನಿಂಗ್ಸ್‌ನಲ್ಲಿ ಒಂದೇ ಒಂದು ಶತಕವೂ ಬಂದಿಲ್ಲ. ಕೊನೆಯ 10 ಇನ್ನಿಂಗ್ಸ್‌ನಲ್ಲಿ ಕೊಹ್ಲಿ ಬ್ಯಾಟ್ನಿಂದ 38, 12, 46, 17, 6, 29, 47, 70, 0, 1 ರನ್ ಹರಿದು ಬಂದಿವೆ. ಕೊಹ್ಲಿ 2023 ಮಾರ್ಚ್ ತಿಂಗಳಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಕೊನೆಯ ಟೆಸ್ಟ್ ಶತಕ ಬಾರಿಸಿದ್ದರು. ಈ ಪಂದ್ಯದಲ್ಲಿ 186 ರನ್ ಸಿಡಿಸಿದ್ದರು
ಇದನ್ನೂ ಓದಿ:'ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಟೆಸ್ಟ್ಗೆ ನಿವೃತ್ತಿ ಘೋಷಿಸಲಿ': ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳ ಆಕ್ರೋಶ