ETV Bharat / sports

ಸಿಡ್ನಿ ಟೆಸ್ಟ್‌: ಅದೇ ರಾಗ, ಅದೇ ತಾಳ: ಬ್ಯಾಟಿಂಗ್​ನಲ್ಲಿ ಮತ್ತೆ ವೈಫಲ್ಯ, ಸಂಕಷ್ಟದಲ್ಲಿ ಟೀಂ ಇಂಡಿಯಾ - INDIA VS AUSTRALIA 5TH TEST

ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 5ನೇ ಟೆಸ್ಟ್​ನಲ್ಲಿ ಭಾರತ ಮತ್ತೆ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದೆ.

SYDNEY TEST  PINK TEST  TEAM INDIA TOP ORDER FLOP  VIRAT KOHLI JAISWAL GILL RAHUL
ವಿರಾಟ್​ ಕೊಹ್ಲಿ (IANS)
author img

By ETV Bharat Sports Team

Published : Jan 3, 2025, 10:55 AM IST

Ind vs Aus, 5th Test: ಆಸ್ಟ್ರೇಲಿಯಾ ವಿರುದ್ಧ ಸಿಡ್ನಿ ಮೈದಾನದಲ್ಲಿ ಇಂದಿನಿಂದ ನಡೆಯುತ್ತಿರುವ ಐದನೇ ಮತ್ತು ಅಂತಿಮ ಟೆಸ್ಟ್​ನಲ್ಲೂ ಭಾರತದ ಬ್ಯಾಟಿಂಗ್​ ವೈಫಲ್ಯ ಮುಂದುವರೆದಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್‌ಗಿಳಿದ ಟೀಂ ಇಂಡಿಯಾ, 120 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ವಿರಾಟ್ ಕೊಹ್ಲಿ, ಶುಭಮನ್‌ ಗಿಲ್, ಕೆ.ಎಲ್.ರಾಹುಲ್, ಯಶಸ್ವಿ ಜೈಸ್ವಾಲ್, ಪಂತ್​, ನಿತೀಶ್​ ಕುಮಾರ್​ ರೆಡ್ಡಿ ಅಲ್ಪಮೊತ್ತಕ್ಕೆ ಪೆವಿಲಿಯನ್ ಸೇರಿದ್ದಾರೆ.

ರೋಹಿತ್ ಶರ್ಮಾ ಐದನೇ ಟೆಸ್ಟ್‌ನಿಂದ ಹಿಂದೆ ಸರಿದ ಕಾರಣ ಯಶಸ್ವಿ ಜೈಸ್ವಾಲ್ ಅವರೊಂದಿಗೆ ಕೆ.ಎಲ್.ರಾಹುಲ್ ಇನ್ನಿಂಗ್ಸ್ ಆರಂಭಿಸಿದರು. ಓಪನರ್ ಆಗಿ ಬಂದ ಅವಕಾಶವನ್ನು ರಾಹುಲ್ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಕೇವಲ 4 ರನ್ ಗಳಿಸಿ ಅವರು ಪೆವಿಲಿಯನ್​ ಹಾದಿ ಹಿಡಿದರು.

ಏಳನೇ ಓವರ್‌ನಲ್ಲಿ ಟೀಂ ಇಂಡಿಯಾಗೆ ಮೊತ್ತೊಂದು ದೊಡ್ಡ ಆಘಾತ ಎದುರಾಯಿತು. ನಾಲ್ಕನೇ ಟೆಸ್ಟ್‌ನಲ್ಲಿ ಭರ್ಜರಿ ಬ್ಯಾಟ್​ ಮಾಡಿದ್ದ ಯುವ ಆರಂಭಿಕ ಬ್ಯಾಟರ್​ ಯಶಸ್ವಿ ಜೈಸ್ವಾಲ್ ಅವರು ಬೋಲ್ಯಾಂಡ್ ಬೌಲಿಂಗ್‌ನಲ್ಲಿ ವೆಬ್‌ಸ್ಟರ್‌ಗೆ ಕ್ಯಾಚಿತ್ತರು. ಅಲ್ಲದೇ ರೋಹಿತ್ ಶರ್ಮಾ ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ಶುಭಮನ್ ಗಿಲ್ ಕೂಡ ನಿರಾಸೆ ಮೂಡಿಸಿದರು.

17 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ ವಿರಾಟ್ ಕೊಹ್ಲಿ: ನಾಥನ್ ಲಿಯಾನ್ ಬೌಲಿಂಗ್​ನಲ್ಲಿ ಗಿಲ್, ಸ್ಮಿತ್​ಗೆ ಕ್ಯಾಚಿತ್ತರು. ಇದರೊಂದಿಗೆ ಕೇವಲ 20 ರನ್ ಗಳಿಸಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ವಿರಾಟ್​ ಕೊಹ್ಲಿ ಅವರದ್ದು ಅದೇ ರಾಗ ಅದೇ ತಾಳ ಎಂಬಂತೆ ಮತ್ತೊಮ್ಮೆ ಆಫ್ ಸೈಡ್​ ಬೌಲಿಂಗ್​ಗೆ ವಿಕೆಟ್​ ನೀಡಿದರು. ಈ ಪಂದ್ಯದಲ್ಲಾದರೂ ಭಾರತಕ್ಕೆ ಆಸರೆಯಾಗುತ್ತಾರೆ ಎಂದುಕೊಂಡಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಕೊಹ್ಲಿ ಕೇವಲ 17 ರನ್​ಗೆ ತಮ್ಮ ಇನ್ನಿಂಗ್ಸ್​ ಮುಕ್ತಾಯಗೊಳಿಸಿದರು. ಇದರೊಂದಿಗೆ ಸ್ಕೋರ್​ 72 ರನ್​ ತಲುಪುವಷ್ಟರಲ್ಲೇ ಭಾರತ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡಿತು.

ಇದಾದ ಬಳಿಕ ರಿಷಬ್ ಪಂತ್ ಹಾಗೂ ಜಡೇಜಾ ಸೇರಿ ರನ್​ ಕಲೆಹಾಕಲು ಪ್ರಾರಂಭಿಸಿದರು. ಈ ಇಬ್ಬರ ಬ್ಯಾಟಿಂಗ್​ ನೆರವಿನಿಂದ 52 ಓವರ್​ ಮುಕ್ತಾಯದ ವೇಳೆಗೆ ಭಾರತದ ಸ್ಕೋರ್​ 114/4 ಆಗಿತ್ತು. ಆದರೆ 40 ರನ್​ ಗಳಿಸಿದ್ದ ಪಂತ್​ 56ನೇ ಓವರ್​ನಲ್ಲಿ ಬೊಲ್ಯಾಂಡ್​ ಎಸೆದ 4ನೇ ಎಸೆತದಲ್ಲಿ ಅನವಶ್ಯಕ ಶಾಟ್‌ಗೆ ಕೈ ಹಾಕಿ ಕಮಿನ್ಸ್​ಗೆ ಕ್ಯಾಚ್​ ನೀಡಿದರು.

ಬಳಿಕ ಬಂದ ನಿತೀಶ್​ ರೆಡ್ಡಿ ಕೂಡ ಬೊಲ್ಯಾಂಡ್​ನ 6ನೇ ಎಸೆತದಲ್ಲೇ ಸ್ಮಿತ್​ಗೆ ಕ್ಯಾಚ್​ ನೀಡಿ ಶೂನ್ಯ ವಿಕೆಟ್ ಒಪ್ಪಿಸಿದರು. ಇದರಿಂದಾಗಿ ಭಾರತ 57ನೇ ಓವರ್​ನಲ್ಲಿ 6 ವಿಕೆಟ್ ನಷ್ಟಕ್ಕೆ 120 ರನ್​ ಕಲೆ ಹಾಕಿದೆ. ಸದ್ಯ ಜಡೇಜಾ ಮತ್ತು ವಾಷಿಂಗ್ಟನ್​ ಸುಂದರ್​ ಬ್ಯಾಟಿಂಗ್​ ಮಾಡುತ್ತಿದ್ದಾರೆ. ​

ಈ ಸರಣಿಯಲ್ಲಿ ಆಸೀಸ್ ತಂಡ 2-1 ಅಂತರದ ಮುನ್ನಡೆ ಸಾಧಿಸಿದೆ. ಮತ್ತೊಂದೆಡೆ ಈ ಪಂದ್ಯವನ್ನು ಗೆದ್ದು ಸರಣಿ ಸಮಬಲಗೊಳಿಸುವುದರ ಜೊತೆಗೆ ವಿಶ್ವ ಟೆಸ್ಟ್​ ಚಾಂಪಿಯನ್ಸ್​ ಫೈನಲ್​ ಕನಸನ್ನು ಜೀವಂತವಾಗಿರಿಸಿಕೊಳ್ಳಲು ಭಾರತ ಯೋಜನೆ ರೂಪಿಸಿದೆ.

ಇದನ್ನೂ ಓದಿ: ಆಸ್ಟ್ರೇಲಿಯಾ ಆಟಗಾರರು ಗುಲಾಬಿ ಬಣ್ಣದ ಜೆರ್ಸಿ ಧರಿಸಿ ಆಡುತ್ತಿರುವುದೇಕೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.