Jasprit Bumrah Viral Video: ಬಾರ್ಡರ್ ಗವಾಸ್ಕರ್ ಟ್ರೋಫಿ ಭಾಗವಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಸಿಡ್ನಿ ಮೈದಾನದಲ್ಲಿ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ನಡೆಯುತ್ತಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿರುವ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 185 ರನ್ಗಳಿ ಸರ್ವಪತನ ಕಂಡಿದೆ. ವಿಕೆಟ್ ಕೀಪರ್ ರಿಷಭ್ ಪಂತ್ (40) ಅತೀ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಉಳಿದಂತೆ ಯಾವೊಬ್ಬ ಬ್ಯಾಟರ್ 30ರ ಗಡಿ ತಲುಪಲು ಸಾಧ್ಯವಾಗಲಿಲ್ಲ. ಇದಕ್ಕುತ್ತರವಾಗಿ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ 9 ರನ್ಗೆ ಒಂದು ವಿಕೆಟ್ ಕಳೆದುಕೊಂಡಿದೆ. ಇದರೊಂದಿಗೆ ಮೊದಲ ದಿನದಾಟವೂ ಮುಕ್ತಾಯಗೊಂಡಿದೆ.
ಏತನ್ಮಧ್ಯೆ ಪಂದ್ಯದ ನಡುವೆ ಆಸ್ಟ್ರೇಲಿಯಾದ ಯುವ ಆರಂಭಿಕ ಬ್ಯಾಟರ್ ಸ್ಯಾಮ್ ಕಾನ್ಸ್ಟಾಸ್ ಬುಮ್ರಾರನ್ನು ಕೆಣಕಿದ್ದಾರೆ. ಮೂರನೇ ಓವರ್ನಲ್ಲಿ ಬುಮ್ರಾ ಬೌಲಿಂಗ್ ಮಾಡುತ್ತಿದ್ದ ವೇಳೆ ಸ್ಟ್ರೈಕ್ನಲ್ಲಿದ್ದ ಉಸ್ಮಾನ್ ಖವಾಜಾ ಪದೇ ಪದೆ ಬುಮ್ರಾ ಬೌಲಿಂಗ್ ತಡೆದಿದ್ದಾರೆ. ಇದರಿಂದ ಕೋಪಗೊಂಡ ಬುಮ್ರಾ ಸಮಯ ವ್ಯರ್ಥ ಮಾಡದಂತೆ ಬ್ಯಾಟಿಂಗ್ ಮಾಡು ಎಂದು ಹೇಳಿದ್ದಾರೆ.
ಈ ವೇಳೆ ಮಧ್ಯ ಪ್ರವೇಶಿಸಿದ ಯುವ ಬ್ಯಾಟರ್ ಕಾನ್ಸ್ಟಾಸ್ ಬುಮ್ರಾ ಬಳಿ ತೆರಳ ಸ್ಲೆಡ್ಜಿಂಗ್ ಮಾಡಿದ್ದಾರೆ. ಇದರಿಂದ ಕೋಪಗೊಂಡ ಬುಮ್ರಾ ಆತನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದೇ ಸಿಟ್ಟಿನಲ್ಲಿ ಬೌಲಿಂಗ್ ಮಾಡಿ ಉಸ್ಮಾನ್ ಖವಾಜ ವಿಕೆಟ್ ಉರುಳಿಸಿದ್ದಾರೆ. ಸಧ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
Fiery scenes in the final over at the SCG!
— cricket.com.au (@cricketcomau) January 3, 2025
How's that for a finish to Day One 👀#AUSvIND pic.twitter.com/BAAjrFKvnQ
ಸ್ಯಾಮ್ ಕಾನ್ಸ್ಟಾಸ್ನ ಅತಿರೇಖದ ವರ್ತನೆ
ನಾಲ್ಕನೇ ಟೆಸ್ಟ್ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿರುವ ಕಾನ್ಸ್ಟಾಸ್ ಮೊದಲ ಪಂದ್ಯದಿಂದಲೂ ಅತಿರೇಖದ ವರ್ತನೆ ತೋರಿತ್ತಿದ್ದಾನೆ. ಹಿರಿಯ ಆಟಗಾರಗಳನ್ನು ಕೆಣಕುವ ಕೆಲಸ ಮಾಡುತ್ತಿದ್ದಾನೆ. ಕಳೆದ ಪಂದ್ಯದಲ್ಲೂ ಜೈಸ್ವಾಲ್ ಬ್ಯಾಟಿಂಗ್ ವೇಳೆ ಕೆಣಕಿ ಬೌಲ್ನಿಂದ ಹೊಡೆಸಿಕೊಂಡಿದ್ದ. ಇಷ್ಟಾದರೂ ಬುದ್ಧಿ ಕಲಿಯದ ಈ ಯುವ ಆಟಗಾರ ಹಿರಿಯ ಆಟಗಾರರನ್ನು ಕೆಣಕುತ್ತಿದ್ದು ಟೀಕೆಗೆ ಗುರಿಯಾಗಿದ್ದಾನೆ.
Bumrah vs Konstas. CINEMA 🔥#AUSvIND | #INDvsAUSTest pic.twitter.com/B0Rhsg1hMC
— ᴋᴀʀᴛʜɪ (@SaffronTwitz) January 3, 2025
ಪಂದ್ಯದ ಹೈಲೈಟ್
ಈ ಪಂದ್ಯದಲ್ಲಿ ಟಾಸ್ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 185 ರನ್ಕಲೆಹಾಕಿತು. ಆಸ್ಟ್ರೇಲಿಯಾ ಪರ ಬೋಲ್ಯಾಂಡ್ 4 ವಿಕೆಟ್, ಮಿಚೆಲ್ ಸ್ಟಾರ್ಕ್ 3, ಪ್ಯಾಟ್ ಕಮಿನ್ಸ್ 2, ನಥಾನ ಲಿಯಾನ್ 1 ವಿಕೆಟ್ ಉರುಳಿಸಿದ್ದಾರೆ. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ 9 ರನ್ ಕೆಲಹಾಕಿ 1 ವಿಕೆಟ್ ಕಳೆದುಕೊಂಡಿದೆ. ಭಾರತದ ಪರ ಜಸ್ಪ್ರೀತ್ ಬುಮ್ರಾ 1 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ: ಸಿಡ್ನಿ ಟೆಸ್ಟ್: ಅದೇ ರಾಗ, ಅದೇ ತಾಳ: ಬ್ಯಾಟಿಂಗ್ನಲ್ಲಿ ಮತ್ತೆ ವೈಫಲ್ಯ, ಸಂಕಷ್ಟದಲ್ಲಿ ಟೀಂ ಇಂಡಿಯಾ