ETV Bharat / entertainment

ವಾರದ ದಿನಗಳಲ್ಲೂ ಉತ್ತಮ ಕಲೆಕ್ಷನ್​: ಈವರೆಗೆ ಸುದೀಪ್​ 'ಮ್ಯಾಕ್ಸ್​'​, ಉಪೇಂದ್ರ 'ಯುಐ' ಗಳಿಸಿದ್ದೆಷ್ಟು? - BOX OFFICE COLLECTION

ರಿಯಲ್​ ಸ್ಟಾರ್​ ಉಪೇಂದ್ರ ನಟಿಸಿ, ನಿರ್ದೇಶಿಸಿರುವ 'ಯುಐ' ಮತ್ತು ಅಭಿನಯ ಚಕ್ರವರ್ತಿ ಸುದೀಪ್​​ ಮುಖ್ಯಭೂಮಿಕೆಯ 'ಮ್ಯಾಕ್ಸ್' ಚಿತ್ರದ ಈವರೆಗಿನ ಕಲೆಕ್ಷನ್​ ಮಾಹಿತಿ ನಿಮಗಾಗಿ.

Sudeep, Upendra
ಸುದೀಪ್​, ಉಪೇಂದ್ರ (Photo: ETV Bharat/IANS)
author img

By ETV Bharat Entertainment Team

Published : Jan 3, 2025, 2:30 PM IST

ಡಿಸೆಂಬರ್ ಲಕ್ಕಿ ಮಂತ್​​ ಅನ್ನೋ ನಂಬಿಕೆ ಸ್ಯಾಂಡಲ್​ವುಡ್​ನಲ್ಲಿದೆ. ಅದರಂತೆ, ಬಂದ ಸ್ಯಾಂಡಲ್​​ವುಡ್​ ಸೂಪರ್​ ಸ್ಟಾರ್​ಗಳ ಎರಡು ಸಿನಿಮಾಗಳು ಪ್ರೇಕ್ಷಕರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಪ್ರೇಕ್ಷಕರಿಂದ ಬಹುತೇಕ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿರುವ ಈ ಇಬ್ಬರ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲೂ ಕಮಾಲ್​ ಮಾಡಿದೆ. ಎರಡೂ ಚಿತ್ರತಂಡಗಳು ಈಗಾಗಲೇ ತಮ್ಮ ಸಕ್ಸಸ್ ಸೆಲೆಬ್ರೇಟ್​ ಮಾಡಿಕೊಂಡಿದೆ.

ರಿಯಲ್​ ಸ್ಟಾರ್​ ಉಪೇಂದ್ರ ನಟಿಸಿ, ನಿರ್ದೇಶಿಸಿರುವ ಬಹುನಿರೀಕ್ಷಿತ 'ಯುಐ' ಚಿತ್ರ 2024ರ ಡಿಸೆಂಬರ್​​ 20ಕ್ಕೆ ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಿತು. ಆದ್ರೀಗ ಕಿಚ್ಚ ಸುದೀಪ್ ಕೂಡಾ ಅಖಾಡಕ್ಕೆ ಇಳಿದಿದ್ದಾರೆ. ಯುಐ ತೆರೆಗೆ ಬಂದ ಐದೇ ದಿನಗಳ ಅಂತರದಲ್ಲಿ ಅಭಿನಯ ಚಕ್ರವರ್ತಿಯ ಸಿನಿಮಾ ಬಿಡುಗಡೆ ಆಯಿತು. ಕಿಚ್ಚನ 'ಮ್ಯಾಕ್ಸ್' ಡಿಸೆಂಬರ್​ 25ರಂದು ಅದ್ಧೂರಿಯಾಗಿ ತೆರೆಗಪ್ಪಳಿಸಿತು. ಸ್ಯಾಂಡಲ್​ವುಡ್​ ಸೂಪರ್​ ಸ್ಟಾರ್​ಗಳ ಎರಡು ಬಿಗ್ ಬಜೆಟ್​ ಪ್ರಾಜೆಕ್ಟ್​​ಗಳ ನಡುವೆ ಪ್ಯಾನ್ ಇಂಡಿಯಾ ವಾರ್ ಆಗಲಿದೆ ಎಂದು ಪ್ರೇಕ್ಷಕರು ಭಾವಿಸಿದ್ದರು. ಆದ್ರೆ ಎರಡೂ ಚಿತ್ರಗಳು ಗ್ರ್ಯಾಂಡ್​ ವೆಲ್ಕಮ್​ ಪಡೆದುಕೊಂಡಿದ್ದು, ತನ್ನದೇ ಆದ ಪ್ರೇಕ್ಷಕ ಬಳಗವನ್ನು ಸಂಪಾದಿಸಿದೆ.

ಮ್ಯಾಕ್ಸ್​ ಬಾಕ್ಸ್ ಆಫೀಸ್​ ಕಲೆಕ್ಷನ್​​:

ದಿನ ಇಂಡಿಯಾ ನೆಟ್​ ಕಲೆಕ್ಷನ್​​
ಮೊದಲ ದಿನ (ಬುಧವಾರ)8.7 ಕೋಟಿ ರೂಪಾಯಿ.
ಎರಡನೇ ದಿನ (ಗುರುವಾರ)3.85 ಕೋಟಿ ರೂಪಾಯಿ.
ಮೂರನೇ ದಿನ (ಶುಕ್ರವಾರ) 4.7 ಕೋಟಿ ರೂಪಾಯಿ.
ನಾಲ್ಕನೇ ದಿನ (ಶನಿವಾರ)4.75 ಕೋಟಿ ರೂಪಾಯಿ.
ಐದನೇ ದಿನ (ಭಾನುವಾರ)5.65 ಕೋಟಿ ರೂಪಾಯಿ.
ಆರನೇ ದಿನ (ಸೋಮವಾರ) 2.45 ಕೋಟಿ ರೂಪಾಯಿ.
ಏಳನೇ ದಿನ (ಮಂಗಳವಾರ)2.25 ಕೋಟಿ ರೂಪಾಯಿ.
ಎಂಟನೇ ದಿನ (ಬುಧವಾರ)4.25 ಕೋಟಿ ರೂಪಾಯಿ.
ಒಂಭತ್ತನೇ ದಿನ (ಗುರುವಾರ)1.35 ಕೋಟಿ ರೂಪಾಯಿ.
ಒಟ್ಟು 37.95 ಕೋಟಿ ರೂಪಾಯಿ.

(ಡಾಟಾ ಮೂಲ: ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್​ ಸ್ಯಾಕ್ನಿಲ್ಕ್).

ಉಪೇಂದ್ರ ಸಾರಥ್ಯದ 'ಯುಐ' ಬಾಕ್ಸ್​ ಆಫೀಸ್​ ಕಲೆಕ್ಷನ್​​:

ದಿನ ಇಂಡಿಯಾ ನೆಟ್​ ಕಲೆಕ್ಷನ್​​
ಮೊದಲ ದಿನ (ಶುಕ್ರವಾರ) 6.95 ಕೋಟಿ ರೂಪಾಯಿ.
ಎರಡನೇ ದಿನ (ಶನಿವಾರ)5.6 ಕೋಟಿ ರೂಪಾಯಿ.
ಮೂರನೇ ದಿನ (ಭಾನುವಾರ)5.95 ಕೋಟಿ ರೂಪಾಯಿ.
ನಾಲ್ಕನೇ ದಿನ (ಸೋಮವಾರ) 2.3 ಕೋಟಿ ರೂಪಾಯಿ.
ಐದನೇ ದಿನ (ಮಂಗಳವಾರ)2.1 ಕೋಟಿ ರೂಪಾಯಿ.
ಆರನೇ ದಿನ (ಬುಧವಾರ)2.35 ಕೋಟಿ ರೂಪಾಯಿ.
ಏಳನೇ ದಿನ (ಗುರುವಾರ)1.05 ಕೋಟಿ ರೂಪಾಯಿ.
ಎಂಟನೇ ದಿನ (ಶುಕ್ರವಾರ) 0.95 ಕೋಟಿ ರೂಪಾಯಿ.
ಒಂಭತ್ತನೇ ದಿನ (ಶನಿವಾರ)1.05 ಕೋಟಿ ರೂಪಾಯಿ.
ಹತ್ತನೇ ದಿನ (ಭಾನುವಾರ)1.15 ಕೋಟಿ ರೂಪಾಯಿ.
ಹನ್ನೊಂದನೇ ದಿನ (ಸೋಮವಾರ) 0.5 ಕೋಟಿ ರೂಪಾಯಿ.
ಈವರೆಗಿನ ಒಟ್ಟು ಕಲೆಕ್ಷನ್29.95 ಕೋಟಿ ರೂಪಾಯಿ.

ತಮ್ಮ ಸಿನಿಮಾ ಸಕ್ಸಸ್ ಸೆಲೆಬ್ರೇಶನ್​ನಲ್ಲಿ ಮಾತನಾಡಿದ್ದ ಕಿಚ್ಚ ಸುದೀಪ್, ಎರಡೂವರೆ ವರ್ಷಗಳ ನಂತರ ನನ್ನ ಚಿತ್ರ ತೆರೆಕಂಡು ಯಶಸ್ವಿಯಾಗಿದೆ. ನನ್ನ ಅಭಿಮಾನಿಗಳ ಹಾಗೂ ಚಿತ್ರತಂಡದವರ ಮೊಗದಲ್ಲಿ ಗೆಲುವಿನ ನಗುವಿದೆ. ಅದನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ ಎಂದು ಖುಷಿ ಹಂಚಿಕೊಂಡಿದ್ದರು.

ಇದನ್ನೂ ಓದಿ: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾರಿಂದ 'ಕುಲದಲ್ಲಿ ಕೀಳ್ಯಾವುದೋ' ಫಸ್ಟ್ ಲುಕ್ ರಿಲೀಸ್: ಚಿತ್ರದ ಅಪ್ಡೇಟ್ಸ್ ಇಲ್ಲಿದೆ

ಇನ್ನೂ ಉಪೇಂದ್ರ ಮಾತನಾಡಿ, ಹೇಳುವ ಪ್ರಯತ್ನ ನನ್ನದು, ಎಚ್ಚೆತ್ತುಕೊಳ್ಳುವುದು ಜನರಿಗೆ ಬಿಟ್ಟಿದ್ದು. ಇಲ್ಲಿ ಸಮಾಜ ಅನ್ನೋದಕ್ಕಿಂತ ಪ್ರತಿಯೊಬ್ಬರೂ ತಮ್ಮ ಜೀವನವನ್ನು ಸರಿಯಾಗಿ ನಡೆಸಿಕೊ.ಡು ಹೋದ್ರೆ, ಸಮಸ್ಯೆಗಳೇ ಇರುವುದಿಲ್ಲ. ನಮ್ಮನ್ನು ನಾವೇ ವಿಮರ್ಶೆ ಮಾಡಿಕೊಳ್ಳಬೇಕು. ಸಂತೋಷ ಅನ್ನೋದು ನಮ್ಮ ಒಳಗಿದೆ. ಮನಃಶಾಂತಿ ಎನ್ನುವುದೇ ನಿಜವಾದ ಸಂತೋಷ ಎಂದು ಹೇಳಿದ್ದರು.

ಇದನ್ನೂ ಓದಿ: 'ಪಿನಾಕ' ಶೂಟಿಂಗ್​ ಯಾವಾಗ? ಗಣೇಶ್​ ಬಳಿಕ ಶ್ರೀಮುರಳಿ, ಶಿವಣ್ಣ, ಧ್ರುವ ಸರ್ಜಾರತ್ತ ಟಾಲಿವುಡ್​ ಪ್ರೊಡಕ್ಷನ್​ ಹೌಸ್​ ಗಮನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.