ಜೈಪುರ, ರಾಜಸ್ಥಾನ: ದಟ್ಟ ಮಂಜಿನಿಂದಾಗಿ ಸುಮಾರು 6 ವಾಹನಗಳ ಸರಣಿ ಅಪಘಾತ ನಡೆದಿದ್ದು, ಹಲವು ಮಂದಿ ಗಾಯಗೊಂಡಿರುವ ಘಟನೆ ರಾಜಸ್ಥಾನದ ಭಿಲ್ವಾರದಲ್ಲಿ ಡೆದಿದೆ.
ಅಜ್ಮೀರ್ ರಾಷ್ಟ್ರೀಯ ಹೆದ್ದಾರಿಯಲ್ಲಿನ ಕೊತಾರಿ ನದಿ ಸೇತುವೆಯಲ್ಲಿ ಈ ವಾಹನಗಳ ಸರಣಿ ಅಪಘಾತ ಸಂಭವಿಸಿದ್ದು , ಅನೇಕ ಮಂದಿ ವಾಹನದೊಳಗೆ ಸಿಲುತ್ತಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ, ತಕ್ಷಣಕ್ಕೆ ತುರ್ತು ಸೇವೆ ನೀಡಲಾಗಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಜ್ಮೀರ್ ರಾಷ್ಟ್ರೀಯ ಹೆದ್ದಾರಿಯಲ್ಲಿನ ಕೊತಾರಿ ನದಿ ಸೇತುವೆ ಬಳಿ ಬೆಳಗ್ಗೆ ದಟ್ಟ ಮಂಜಿನಿಂದಾಗಿ ವೀಕ್ಷಣಾ ಸಾಮರ್ಥ್ಯ ಕುಸಿದಿದೆ. ಇದು ಈ ಸರಣಿ ವಾಹನ ಅಪಘಾತಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸರಣಿ ಅಪಘಾತದಿಂದ ಹೆದ್ದಾರಿಯ ಎರಡೂ ಬದಿಯಲ್ಲಿ 1.5 ಕಿ.ಮೀ ದೂರು ಟ್ರಾಫಿಕ್ ಜಾಮ್ ಉಂಟಾಗಿದ್ದು, ಪರಿಣಾಮ ವಾಹನಗಳ ಸಂಚಾರ ವಿಳಂಬಗೊಂಡು ತೊಂದರೆ ಅನುಭವಿಸುವಂತೆ ಆಗಿದೆ. ಪೋಲಿಸರು ಈ ಟ್ರಾಫಿಕ್ ಸಮಸ್ಯೆ ನಿವಾರಿಸಿ, ವಾಹನ ಸಂಚಾರ ಸುಗಮಗೊಳಿಸಲು ಹರಸಾಹಸ ಪಟ್ಟರು .
ಬೆಳಗ್ಗೆ 9ರ ಸುಮಾರಿಗೆ ವೀಕ್ಷಣಾ ಸಾಮರ್ಥ್ಯ ಗಣನೀಯ ಪ್ರಮಾಣದಲ್ಲಿ ಕುಸಿಯಿತು. ಮೊದಲಿಗೆ ಎರಡು ಟ್ರಕ್ಗಳು ಡಿಕ್ಕಿ ಹೊಡೆದಿದೆ. ಇದಾದ ಬಳಿಕ ಅನೇಕ ವಾಹನಗಳ ಸರಣಿ ಅಪಘಾತ ನಡೆದಿದೆ.
ಲೀಕ್ ಆದ ಸಿಎನ್ಜಿ ಟ್ಯಾಂಕರ್: ಈ ಘಟನೆಯಲ್ಲಿ ಸಿಎನ್ಜಿ ಟ್ಯಾಂಕರ್ ಕೂಡ ಸಿಲುಕಿಕೊಂಡಿದ್ದು, ಅದರಿಂದ ಗ್ಯಾಸ್ ಲೀಕ್ ಆಗಲು ಆರಂಭಿಸಿತು. ಇದರಿಂದ ಇತರ ವಾಹನ ಸವಾರರಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಇಂಧನ ಸೋರಿಕೆ ಘಟನೆ ವರದಿಯಾಗುತ್ತಿದ್ದಂತೆ ಮಂಡಲ್ ಪೊಲೀಸ್ ಸ್ಟೇಷನ್ ಮುಖ್ಯಸ್ಥ ಸಂಜಯ್ ಗುರ್ಜರ್ ತಕ್ಷಣಕ್ಕೆ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ, ರಕ್ಷಣಾ ಕಾರ್ಯ ಆರಂಭಿಸಿದರು. ಇದರಿಂದಾಗಿ ಭಾರಿ ಅನಾಹುತವೊಂದು ತಪ್ಪಿತು.
ಕಳೆದ ಒಂದು ವಾರದಿಂದ ಭಿಲ್ವಾರಾ ಜಿಲ್ಲೆಯಲ್ಲಿ ದಟ್ಟ ಮಂಜಿನ ವಾತಾವರಣದಿಂದ ಮಂಜಾನೆ ವೀಕ್ಷಣಾ ಸಾಮರ್ಥ್ಯ ಕುಸಿದಿದ್ದು, ಅನೇಕ ವಾಹನ ಸಂಚಾರಿಗಳು ಅಪಘಾತದ ಅನಾಹುತವನ್ನು ಎದುರಿಸುವಂತೆ ಆಗಿದೆ. ಈ ವಾತಾವರಣದಲ್ಲಿ ವಾಹನ ಚಾಲನೆ ಮಾಡುವುದು ಕೂಡ ಸವಾಲುದಾಯಕವಾಗಿದೆ.
ಡಿಸೆಂಬರ್ 20ರಂದು ಕೂಡ ಇದೇ ರೀತಿಯಾದ ಘಟನೆ ಜೈಪುರ - ಅಜ್ಮೀರ್ ಹೆದ್ದಾರಿಯಲ್ಲಿ ನಡೆದಿತ್ತು. ಎಲ್ಪಿಜಿ ಟ್ಯಾಂಕರ್ ಅಪಘಾತದಿಂದ ಗ್ಯಾಸ್ ಸೋರಿಕೆಯಾಗಿ ಸ್ಪೋಟಿಸಿದ ಪರಿಣಾಮ 20 ಜನರು ಪ್ರಾಣ ಕಳೆದುಕೊಂಡಿದ್ದರು. ಸ್ಪೋಟ ಸಂಭವಿಸಿದ 300 ಮೀಟರ್ ದೂರದಲ್ಲಿ ಎಲ್ಲವೂ ನಾಶಗೊಂಡಿದ್ದವು. ಈ ಅಪಘಾತದಲ್ಲಿ ಬದುಕುಳಿದ ಗಾಯಾಳುಗಳು ಇನ್ನೂ ಜೈಪುರದ ಎಸ್ಎಂಎಸ್ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ದೆಹಲಿಗೆ ದಟ್ಟ ಮಂಜಿನ ಹೊದಿಕೆ: 100ಕ್ಕೂ ಹೆಚ್ಚು ವಿಮಾನ, ರೈಲು ಹಾರಾಟದಲ್ಲಿ ವ್ಯತ್ಯಯ