ನವದೆಹಲಿ:ಪ್ಲೇ ಆಫ್ಗೇರುವ ಗುರಿ ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್, ಅರುಣ್ ಜೇಟ್ಲಿ ಮೈದಾನದಲ್ಲಿ ಅಬ್ಬರಿಸಿದೆ. ಈ ಐಪಿಎಲ್ನ ಅತಿ ಕಠಿಣ ತಂಡವಾದ ರಾಜಸ್ಥಾನ ರಾಯಲ್ಸ್ ವಿರುದ್ಧ ನಿಗದಿತ ಓವರ್ಗಳಲ್ಲಿ 8 ವಿಕೆಟ್ 221 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ.
ಹಿರಿಯ ಬ್ಯಾಟರ್ ಡೇವಡಿಡ್ ವಾರ್ನರ್ ಅವರನ್ನು ಕೈಬಿಟ್ಟು ಶಾಯ್ ಹೋಪ್ಗೆ ಅವಕಾಶ ನೀಡಲಾಗಿತ್ತು. ಇದರಿಂದ ಆರಂಭಿಕರಾಗಿ ಬಂದ ಯುವ ಸೆನ್ಸೇಷನ್ ಜೇಸ್ ಫ್ರೇಸರ್ ಮೆಕ್ಗರ್ಕ್ ಐಪಿಎಲ್ನಲ್ಲಿ ಅತಿವೇಗದ ಅರ್ಧಶತಕ ಬಾರಿಸಿದರು. ಕೇವಲ 19 ಎಸೆತಗಳಲ್ಲಿ 50 ರನ್ ಗಳಿಸಿದ ಆಟಗಾರ ಮರು ಎಸೆತದಲ್ಲೇ ಅಶ್ವಿನ್ಗ ವಿಕೆಟ್ ನೀಡಿದರು.
ಇನ್ನೊಂದು ತುದಿಯಲ್ಲಿ ಅಭಿಷೇಕ್ ಪೊರೆಲ್ ಉತ್ತಮವಾಗಿ ಬ್ಯಾಟ್ ಮಾಡಿ 36 ಎಸೆತಗಳಲ್ಲಿ 65 ರನ್ ಗಳಿಸಿದರು. ಶಾಯ್ ಹೋಪ್ (1) ಕೈಕೊಟ್ಟರೆ, ಬಡ್ತಿ ಪಡೆದ ಅಕ್ಷರ್ ಪಟೇಲ್ 15, ನಾಯಕ ರಿಷಭ್ ಪಂತ್ 15 ರನ್ ಮಾತ್ರ ಗಳಿಸಿದರು.