ಹೈದರಾಬಾದ್: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಳಪೆ ಫಾರ್ಮ್ನಿಂದ ಕಂಗೆಟ್ಟಿದ್ದಾರೆ. ಇತ್ತೀಚೆಗೆ ನಡೆದಿದ್ದ ಬಾರ್ಡರ್ ಗವಾಸ್ಕರ್ ಸರಣಿಯಲ್ಲೂ ರೋಹಿತ್ ಒಂದೊಂದು ರನ್ ಗಳಿಸಲು ಪರದಾಡಿದ್ದರು. ಬ್ಯಾಟಿಂಗ್ಗೆ ಬಂದ ವೇಳೆ ಭಯದದಿಂದಲೇ ಆಡುತ್ತಿರುವುದು ಕಂಡು ಬಂದಿತ್ತು. ಇದಷ್ಟೇ ಅಲ್ಲದೇ ಅವರ ನಾಯಕತ್ವದಲ್ಲಿ ಬಾರ್ಡರ್ ಗವಾಸ್ಕರ್ ಸರಣಿಯನ್ನೂ ಭಾರತ ಕಳೆದುಕೊಂಡಿದೆ. ಇದರ ಬೆನ್ನಲ್ಲೇ ಅವರ ಕರಿಯರ್ಗೆ ಕಂಟಕವೂ ಎದುರಾಗಿದೆ.
ಇದರಿಂದ ಎಚ್ಚೆತ್ತುಕೊಂಡಿರುವ ನಾಯಕ ಆಸ್ಟ್ರೇಲಿಯಾದಿಂದ ಹಿಂದಿರುಗಿದ ನಂತರ ಸ್ವಲ್ಪ ವಿಶ್ರಾಂತಿ ಪಡೆದು ಈಗ ಮೈದಾನಕ್ಕೆ ಕಾಲಿಟ್ಟಿದ್ದಾರೆ. ಕಳೆದು ಹೋಗಿರುವ ತಮ್ಮ ಫಾರ್ಮ್ ಮರಳಿ ಪಡೆಯಲು ಸಜ್ಜಾಗಿದ್ದಾರೆ. ಇದಕ್ಕಾಗಿ ರೋಹಿತ್ ರಣಜಿ ತಂಡದೊಂದಿಗೆ ಅಭ್ಯಾಸಕ್ಕಿಳಿದಿದ್ದಾರೆ. ಈ ನಿಟ್ಟಿನಲ್ಲಿ ರೋಹಿತ್ ಮುಂಬೈ ರಣಜಿ ತಂಡದೊಂದಿಗೆ ಅಭ್ಯಾಸದಲ್ಲಿ ಪಾಲ್ಗೊಂಡಿದ್ದಾರೆ. ಅಲ್ಲದೇ ಇದೇ ತಿಂಗಳ 23ರಿಂದ ಆರಂಭವಾಗಲಿರುವ ರಣಜಿ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಮುಂಬೈ ತಂಡವನ್ನು ಪ್ರತಿನಿಧಿಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
🚨 ROHIT SHARMA IS BACK. 🚨
— Mufaddal Vohra (@mufaddal_vohra) January 13, 2025
- Rohit has informed the Mumbai team that he'll be coming for the Ranji Trophy practice session scheduled tomorrow at Wankhede. (Express Sports). pic.twitter.com/LHkv48Mmtu
ಮುಂಬೈ ತಂಡ ರಣಜಿ ಮೊದಲ ಪಂದ್ಯದಲ್ಲಿ ಜಮ್ಮು ಕಾಶ್ಮೀರವನ್ನು ಎದುರಿಸಲಿದೆ. ಆದರೆ, ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಆಡುತ್ತಾರೋ ಇಲ್ಲವೋ ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಈ ವಿಷಯದ ಬಗ್ಗೆ ಇಲ್ಲಿಯವರೆಗೆ ಯಾವುದೇ ಅಧಿಕೃತ ಹೇಳಿಕೆಗಳು ಹೊರಬಿದ್ದಿಲ್ಲ.
ಮುಂಬೈ ತಂಡ ರಣಜಿ ಟ್ರೋಫಿಗಾಗಿ ವಾಂಖೆಡೆ ಸ್ಟೇಡಿಯಂ ಮತ್ತು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಸ್ಟೇಡಿಯಂಗಳಲ್ಲಿ ಒಂದು ವಾರ ಅಭ್ಯಾಸ ನಡೆಸಲಿದೆ. ಟೀಂ ಇಂಡಿಯಾದ ಸ್ಟಾರ್ ಆಟಗಾರರಾದ ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್ ಕೂಡ ಈ ಅಭ್ಯಾಸದಲ್ಲಿ ಪಾಲ್ಗೊಂಡಿದ್ದಾರೆ. ಅಭ್ಯಾಸ ವೇಳೆ ರೋಹಿತ್ ಸೆಂಟರ್ ವಿಕೆಟ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಅವರ ಜೊತೆಗೆ ಟೀಮ್ ಇಂಡಿಯಾದ ಮಾಜಿ ಆಟಗಾರ ಅಜಿಂಕ್ಯ ರಹಾನೆ ಕೂಡ ಬ್ಯಾಟಿಂಗ್ ಮಾಡುತ್ತಿರುವುದು ಕಂಡುಬಂದಿತು.
ಇದನ್ನೂ ಓದಿ: 'ಡಿಸೆಂಬರ್‌ನ ಐಸಿಸಿ ಆಟಗಾರ': ಟೀಂ ಇಂಡಿಯಾದ ಸ್ಟಾರ್ ಆಟಗಾರ ಪ್ಯಾಟ್ ಕಮಿನ್ಸ್ ಅವರನ್ನು ಹಿಂದಿಕ್ಕಿ ಪ್ರಶಸ್ತಿ ಗೆದ್ದರು!